/newsfirstlive-kannada/media/post_attachments/wp-content/uploads/2025/04/Pakistan-Army-Chief.jpg)
ಪಾಕಿಸ್ತಾನವು ಭಾರತದ ಹಲವು ನಗರಗಳನ್ನು ಗುರಿಯಾಗಿಸಿ ದಾಳಿ ಮಾಡ್ತಿದೆ. ಅದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಕರಾಚಿ, ಸಿಯಾಲ್‌ಕೋಟ್, ಲಾಹೋರ್‌ನಲ್ಲಿ ಅಟ್ಯಾಕ್ ಮಾಡಿದೆ. ಪರಿಣಾಮ ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯು ಛಿದ್ರಛಿದ್ರಗೊಂಡಿದೆ.
ಇದಕ್ಕೂ ಮೊದಲು ಭಾರತ ಲಾಹೋರ್‌ನಲ್ಲಿರುವ ಏರ್​ ಡಿಫೆನ್ಸ್ ಸಿಸ್ಟಮ್ HQ-9 ಅನ್ನು ನಾಶಪಡಿಸಿತ್ತು. ಇದೀಗ ಭಾರತದ ಸೇನೆ ಪಾಕಿಸ್ತಾನದ ಮತ್ತೊಂದು ವಾಯು ರಕ್ಷಣಾ ನೆಲೆ AWACS ಅನ್ನು ನಾಶಪಡಿಸಿದೆ. HQ-9 ದಾಳಿಯ ನಂತರ AWACS ನಾಶ ಮಾಡಿ ದೊಡ್ಡ ಪೆಟ್ಟು ಕೊಟ್ಟಿದೆ.
AWACS ಎಂದರೇನು?
ಪಾಕಿಸ್ತಾನ AWACS ಎಂಬ ಏರ್​ ಡಿಫೆನ್ಸ್ ಸಿಸ್ಟಮ್ ಹೊಂದಿತ್ತು. ಇದರ ಪೂರ್ಣ ಹೆಸರು ಏರ್‌ಬೋರ್ನ್ ವಾರ್ನಿಂಗ್ ಅಂಡ್ ಕಂಟ್ರೋಲ್ ಸಿಸ್ಟಮ್. ಇದು ಒಂದು ರೀತಿಯ ವಿಮಾನ. ಶತ್ರುಗಳ ಯುದ್ಧ ವಿಮಾನಗಳು, ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ದೂರದಲ್ಲೇ ಗುರುತಿಸಿ ಹೊಡೆಯುವ ತಾಕತ್ತಿದೆ.
ಇದನ್ನೂ ಓದಿ: 3 ಯುದ್ಧ ವಿಮಾನ, 50 ಮಿಸೈಲ್​ ಢಮಾರ್​.. ಪಾಕಿಸ್ತಾನ ನಿನ್ನೆ ಏನೆಲ್ಲ ಕಳೆದುಕೊಂಡಿತು..?
/newsfirstlive-kannada/media/post_attachments/wp-content/uploads/2025/05/awacs.jpg)
ಈ ವ್ಯವಸ್ಥೆಯು ನೆಲದ ಮೇಲೆ ನಡೆಯುವ ಚಟುವಟಿಕೆಗಳನ್ನೂ ತಡೆಹಿಡಿಯುವ ಸಾಮರ್ಥ್ಯ ಹೊಂದಿತ್ತು. ಅದರ ದೊಡ್ಡ ಶಕ್ತಿ ಅಂದರೆ ಅದರಲ್ಲಿದ್ದ ರಾಡಾರ್ ವ್ಯವಸ್ಥೆ ಆಗಿತ್ತು. ಇದು ನೂರಾರು ಕಿಲೋಮೀಟರ್‌ಗಳವರೆಗೆ ಶತ್ರುಗಳ ಚಟುವಟಿಕೆಗಳ ಮೇಲೆ ಕಣ್ಣಿಡುತ್ತಿತ್ತು. ಯುದ್ಧ ವಿಮಾನಗಳಿಗೆ ಅವುಗಳ ದಿಕ್ಕು ಮತ್ತು ಸ್ಥಾನದ ಬಗ್ಗೆ ನಿಖರ ಮಾಹಿತಿ ನೀಡುತ್ತಿತ್ತು. ಯಾವುದೇ ದೇಶಕ್ಕೆ ಯುದ್ಧದ ಸಂದರ್ಭದಲ್ಲಿ AWACS ಬಹಳ ಮುಖ್ಯ. ಈ ವಿಮಾನಗಳು ಗಾಳಿಯಲ್ಲಿ ಹಾರುವಾಗ ಶತ್ರುಗಳು ಎಲ್ಲಿದ್ದಾರೆ ಅಂತಾ ಗುರುತಿಸುತ್ತದೆ. ಆಮೂಲಕ ಶತ್ರುಗಳನ್ನು ದೂರದಿಂದಲೇ ಮುಗಿಸಬಹುದಾಗಿತ್ತು. ಇದೀಗ ಪಾಕಿಸ್ತಾನದ ಅದನ್ನು ಕಳೆದುಕೊಂಡಿದೆ.
AWACS ಹೇಗೆ ನಾಶವಾಯ್ತು?
AWACS ವ್ಯವಸ್ಥೆಯ ಅತಿದೊಡ್ಡ ನೆಗೆಟೀವ್ ಅಂದರೆ ಅದರ ಗಾತ್ರ. ಅದು ತುಂಬಾನೇ ದೊಡ್ಡದು. ಯುದ್ಧ ವಿಮಾನಗಳಷ್ಟು ಚುರುಕಾಗಿಲ್ಲ. ಕಡಿಮೆ ವೇಗ. ಈ ವ್ಯವಸ್ಥೆಯನ್ನು ದೀರ್ಘ-ಶ್ರೇಣಿಯ ಕ್ಷಿಪಣಿಗಳಿಂದ ನಾಶಪಡಿಸಬಹುದು. ಭಾರತದ S-400 ವಾಯು ರಕ್ಷಣಾ ವ್ಯವಸ್ಥೆಯು ಈ ಕೆಲಸದಲ್ಲಿ ಪರಿಣಿತವಾಗಿದೆ. ಭಾರತವು S-400 ಮೂಲಕ ಪಾಕಿಸ್ತಾನದ AWACS ಉಡೀಸ್ ಮಾಡಿದೆ. ಈ ವ್ಯವಸ್ಥೆಯ ಧ್ವಂಸದಿಂದಾಗಿ ಪಾಕಿಸ್ತಾನಿ ವಾಯುಪಡೆಯ ದಾಳಿ ಸಾಮರ್ಥ್ಯ ಕಡಿಮೆ ಆಗಿದೆ.
ಇದನ್ನೂ ಓದಿ: ಐಪಿಎಲ್ ಟೂರ್ನಿ ಸ್ಥಗಿತ ಸಾಧ್ಯತೆ.. ಸುಳಿವು ಕೊಟ್ಟ IPL ಮುಖ್ಯಸ್ಥ ಅರುಣ್ ಧಮಾಲ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us