/newsfirstlive-kannada/media/post_attachments/wp-content/uploads/2025/01/IND-vs-PAK-News.jpg)
ಕೋಲ್ಕತ್ತಾ: ಪಾಕಿಸ್ತಾನ ಜೊತೆಗಿನ ಎಲ್ಲ ಕ್ರಿಕೆಟ್ ಸಂಬಂಧಗಳನ್ನು ಮುರಿದುಕೊಳ್ಳಬೇಕು. ಜೊತೆಗೆ ಐಸಿಸಿ ಟೂರ್ನಿ ಹಾಗೂ ಏಷ್ಯಾನ್ ಟೂರ್ನ್ಮೆಂಟ್ಗಳನ್ನೂ ಆಡಬಾರದು ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ಸೌರವ್ ಗಂಗೂಲಿ ಅವರು ಖಾರವಾಗಿಯೇ ಹೇಳಿದ್ದಾರೆ.
ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿ ಸಂಬಂಧ ಪ್ರತಿಕ್ರಿಯಿಸಿದ ಬಿಸಿಸಿಐನ ಮಾಜಿ ಅಧ್ಯಕ್ಷ ಹಾಗೂ ಭಾರತದ ಮಾಜಿ ಆಟಗಾರ ಸೌರವ್ ಗಂಗೂಲಿ ಅವರು, ಪಾಪಿ ಪಾಕ್ಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಪ್ರತಿ ವರ್ಷ ಭಾರತದ ಮೇಲೆ ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳಿಂದ ಈ ರೀತಿಯಾದ ದಾಳಿಗಳು ನಡೆಯುತ್ತಲೇ ಇವೆ. ಇಂತಹವುಗಳನ್ನು ಸಹಿಸಬಾರದು. ಈ ಬಗ್ಗೆ ತೋರಬೇಕು ಎಂದು ಹೇಳಿದ್ದಾರೆ.
ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಸಹಿಸಿಕೊಳ್ಳುವಂತಹದ್ದಲ್ಲ. ಪಾಕಿಸ್ತಾನದ ಜೊತೆಗಿನ ಎಲ್ಲಾ ಕ್ರಿಕೆಟ್ ಸಂಬಂಧಗಳನ್ನು ಭಾರತ ಮುರಿದುಕೊಳ್ಳಬೇಕು. ಇಷ್ಟೇ ಅಲ್ಲದೇ ಐಸಿಸಿ ಹಾಗೂ ಏಷ್ಯನ್ ಟೂರ್ನಿಗಳಲ್ಲೂ ಪಾಕಿಸ್ತಾನದ ಜೊತೆ ಟೀಮ್ ಇಂಡಿಯಾ ಆಡಲೇಬಾರದು. ಇಂತಹ ಕಠಿಣವಾದದ್ದನ್ನ ನೂರಕ್ಕೆ 100 ರಷ್ಟು ಪಾಲಿಸಬೇಕು. ಇಂತಹ ಘಟನೆಗಳಿಂದ ಎಚ್ಚೆತ್ತುಕೊಂಡು ಉಗ್ರರ ವಿರುದ್ಧ ಕಠಿಣ ಕ್ರಮ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಪಹಲ್ಗಾಮ್ನಂತಹ ಭಯೋತ್ಪಾದನೆಯನ್ನು ಸಹಿಸಬಾರದು. ದೃಢವಾಗಿ ಎದುರಿಸಬೇಕು. ಪ್ರಸ್ತುತ ಸ್ಥಿತಿಗತಿಯಲ್ಲಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಸಂಬಂಧಗಳನ್ನು ಸಂಪೂರ್ಣವಾಗಿ ಮುರಿಯುವ ನಿಲುವು ತೆಗೆದುಕೊಳ್ಳಬೇಕಿದೆ. ಇಂತಹ ವಿಷಯಗಳು ಪ್ರತಿ ವರ್ಷ ನಡೆಯುವುದು ತಮಾಷೆಯಲ್ಲ. ಉಗ್ರತ್ವ, ಭಯೋತ್ಪಾದನೆಯನ್ನು ಪೋಷಿಸುವ ದೇಶಕ್ಕೆ ಪ್ರಬಲ ಸಂದೇಶ ರವಾನಿಸಬೇಕು ಎಂದು ಸೌರವ್ ಗಂಗೂಲಿ ಕಿಡಿ ಕಾರಿದ್ದಾರೆ.
ಇದನ್ನೂ ಓದಿ:ಈ IPLನಲ್ಲಿ 100ಕ್ಕೂ ಅಧಿಕ ಕ್ಯಾಚ್ ಡ್ರಾಪ್ಗಳು.. ಆರ್ಸಿಬಿ ಪ್ಲೇಯರ್ಸ್ ಮಿಸ್ ಮಾಡಿದ್ದು ಎಷ್ಟು?
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಇಡೀ ವಿಶ್ವವೇ ಖಂಡಿಸುತ್ತಿದೆ. ಉಗ್ರರ ಪೈಶಾಚಿಕ ಕೃತ್ಯಕ್ಕೆ ಜನರು ಇಡೀ ಶಾಪ ಹಾಕುತ್ತಿದ್ದಾರೆ. ಇದರ ಜೊತೆಗೆ ಕೇಂದ್ರ ಸರ್ಕಾರ ಕೂಡ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಅದರಂತೆ ಕ್ರಿಕೆಟ್ನಲ್ಲೂ ಬಲವಾದ ನಿಲುವು ತೆಗೆದುಕೊಳ್ಳಬೇಕು ಎನ್ನುವುದು ಮಾಜಿ ಆಟಗಾರ್ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ