/newsfirstlive-kannada/media/post_attachments/wp-content/uploads/2025/05/PAK-PLAN.jpg)
ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಿಂದ ಭಾರತ-ಪಾಕ್ ನಡುವೆ ಯುದ್ಧದ ಕಾರ್ಮೋಡ ಆವರಿಸಿದೆ. ಆಪರೇಷನ್ ಆಕ್ರಮಣ್ ತೀವ್ರಗೊಳಸಿಲು ಪ್ರಧಾನಿ ಮೋದಿ ಭಾರತೀಯ ಸೇನೆಗೆ ಫ್ರೀ ಹ್ಯಾಂಡ್ ಕೊಟ್ಟಿದ್ದಾರೆ. ಇದಕ್ಕೆ ಬೆದರಿದ ಪಾಕ್ ನೋ ಫ್ಲೈ ಝೋನ್ ಘೋಷಣೆ ಮಾಡಿತ್ತು. ಇದಕ್ಕೆ ಭಾರತ ಟಕ್ಕರ್ ಕೊಟ್ಟಿದೆ.
ಇದನ್ನೂ ಓದಿ: ಏರ್ಸ್ಪೇಸ್ ಬ್ಯಾನ್ ಮಾಡಿ ಕೈಸುಟ್ಟುಕೊಂಡ ಪಾಕ್.. ಎಷ್ಟು ಲಕ್ಷ ಕೋಟಿ ನಷ್ಟ ಆಗಿದೆ ಗೊತ್ತಾ..?
‘ಪಾಪಿ’ಸ್ತಾನಕ್ಕೆ ಮತ್ತೊಂದು ಭಾರೀ ಆಘಾತ
ಈ ಹಿಂದೆ ಒಂದು ಬಾರಿ ಭಾರತದ ಏರ್ಸ್ಟ್ರೈಕ್ಗೆ ಬೆದರಿರುವ ಪಾಕಿಸ್ತಾನ ಮತ್ತೊಂದು ವಾಯು ದಾಳಿಯ ಭೀತಿಗೆ ನೋ ಫ್ಲೈ ಝೋನ್ ಘೋಷಣೆ ಮಾಡಿದೆ. ನೋ ಫ್ಲೈ ಝೋನ್ ಘೋಷಣೆಯಿಂದ ಪಾಕ್ನ ನಿರ್ಬಂಧಿತ ವಾಯು ಪ್ರದೇಶದಲ್ಲಿ ಬೇರೆ ದೇಶಗಳ ವಿಮಾನಗಳು ಹಾರಾಡುವಂತಿಲ್ಲ. ಒಂದ್ವೇಳೆ ಪ್ರವೇಶಿಸಿದರೆ ಕ್ರಮ ಕೈಗೊಳ್ಳಲು ಅವಕಾಶ ಇದೆ. ಈ ಮೂಲಕ ಭಾರತದ ವೈಮಾನಿಕ ದಾಳಿಯಿಂದ ಸುರಕ್ಷಿತವಾಗಿರಬಹುದು ಅನ್ನೋದು ಪಾಕ್ ಲೆಕ್ಕಾಚಾರ. ಆದ್ರೆ ಇದಕ್ಕೆ ಭಾರತ ಕೂಡ ಟಕ್ಕರ್ ಕೊಟ್ಟಿದೆ. ಮುಯ್ಯಿಗೆ ಮುಯ್ಯಿ ಎನ್ನುವಂತೆ ಪಾಕ್ ವಿಮಾನಗಳಿಗೆ ಭಾರತೀಯ ವಾಯುಪ್ರದೇಶ ಬಂದ್ ಆಗಿದೆ. ಮೇ 23ರವರೆಗೆ ಪಾಕಿಸ್ತಾನ ವಿಮಾನಗಳಿಗೆ ಭಾರತ ನಿರ್ಬಂಧ ಹೇರಿದೆ.
ಇದನ್ನೂ ಓದಿ: POK ಅಂದರೆ ಏನು..? ಕಾಶ್ಮೀರದ ಎಷ್ಟು ಭಾಗವನ್ನು ಪಾಕಿಸ್ತಾನ ಹೊಂದಿದೆ..?
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ವಾಣಿಜ್ಯ ವಿಮಾನಯಾನ ಸಂಸ್ಥೆಗಳು, ಮಿಲಿಟರಿ ವಿಮಾನಗಳು ಸೇರಿದಂತೆ ಪಾಕಿಸ್ತಾನದಿಂದ ನೋಂದಾಯಿಸಲ್ಪಟ್ಟ ನಿರ್ವಹಿಸಲ್ಪಡುವ ಅಥವಾ ಗುತ್ತಿಗೆ ಪಡೆದ ಎಲ್ಲಾ ವಿಮಾನಗಳಿಗೆ ವಾಯುಪ್ರದೇಶವನ್ನು ನಿರ್ಬಂಧಿಸಲಾಗಿದೆ.
ಪಾಕಿಸ್ತಾನಕ್ಕೆ ಏರ್ಸ್ಟ್ರೈಕ್!
- ಭಾರತದ ವಾಯುಪ್ರದೇಶ ನಿರ್ಬಂಧ, ಪಾಕಿಸ್ತಾನಕ್ಕೆ ಭಾರೀ ಹೊಡೆತ
- ಪಾಕ್ ವಿಮಾನಗಳು ಕೌಲಾಲಂಪುರ ಸೇರಿ ವಿವಿಧೆಡೆಗೆ ಸುತ್ತಿ ಹೋಗಬೇಕು
- ಚೀನಾ ಅಥವಾ ಶ್ರೀಲಂಕಾ ಮೂಲಕ ಪಾಕ್ ವಿಮಾನಗಳು ಹೋಗಬೇಕು
- ಇದು ದೀರ್ಘ ಪ್ರಯಾಣವಾಗಿದ್ದು ಪಾಕಿಸ್ತಾನಕ್ಕೆ ಮತ್ತಷ್ಟು ಹೊರೆ
- ಈಗಾಗಲೇ ಆರ್ಥಿಕ ಸಂಕಷ್ಟ, ಬೆಲೆ ಏರಿಕೆಯಿಂದ ತತ್ತರಿಸಿರುವ ಪಾಕ್
ಒಟ್ಟಾರೆ ಪಾಕಿಸ್ತಾನ ವಿರುದ್ಧ ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಎಂಬ ನಿರ್ಧಾರಕ್ಕೆ ಭಾರತ ಬಂದಿದೆ. ಪಾಕಿಸ್ತಾನ ಭಾರತದ ವಿಮಾನಗಳಿಗೆ ವಾಯುಪ್ರದೇಶ ಬಂದ್ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ವಿಮಾನಗಳಿಗೆ ಭಾರತದ ವಾಯುಪ್ರದೇಶ ಬಂದ್ ಮಾಡಲಾಗಿದೆ. ಇದಷ್ಟೇ ಅಲ್ಲ, ಪಾಕ್ನ ಬೋಟ್, ಹಡಗುಗಳಿಗೆ ಭಾರತದ ಬಂದರುಗಳಲ್ಲಿ ಅವಕಾಶ ನೀಡದಿರುವ ಬಗ್ಗೆ ಭಾರತದಿಂದ ಗಂಭೀರ ಪರಿಶೀಲನೆ ನಡೆಸಿದೆ. ಈ ನಿರ್ಧಾರದಿಂದ ಪಾಕಿಸ್ತಾನ ಮತ್ತಷ್ಟು ಬಿಕಾರಿಸ್ತಾನ ಆಗೋದ್ರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಸಂಸದ, ಭಾರತದಲ್ಲಿ ಕುಲ್ಫಿ ಐಸ್ ಕ್ರೀಮ್ ಮಾರಾಟ ಮಾಡ್ತಾರೆ.. ಈಗ ಎಲ್ಲಿದ್ದಾರೆ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್