/newsfirstlive-kannada/media/post_attachments/wp-content/uploads/2024/10/Sanju-Samson-Century-2.jpg)
ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ದಾಖಲೆಗಳ ಸುರಿಮಳೆಗೈದಿದೆ. ಅತಿ ಕಡಿಮೆ ಬೌಲ್​ಗೆ ಶತಕ ಸಿಡಿಸಿದ ಸಂಜು ಸ್ಯಾಮ್ಸನ್ ದಾಖಲೆ ಒಂದು ಕಡೆಯಾದ್ರೆ. ಭಾರತ ಟಿ20 ಪಂದ್ಯದಲ್ಲಿ ಗರಿಷ್ಠ ರನ್ ಹೊಡೆದ ದಾಖಲೆಯೂ ಕೂಡ ಇದೆ ಪಂದ್ಯದಲ್ಲಾಗಿದೆ. ಅದರ ಜೊತೆ ಮತ್ತೊಂದು ದಾಖಲೆ ಅಂದ್ರೆ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಹೊಡೆಯುವುದರಲ್ಲಿಯೂ ಟೀಂ ಇಂಡಿಯಾ ದಾಖಲೆ ಬರೆದಿದೆ.
ಟಿ20 ಇತಿಹಾಸದಲ್ಲಿಯೇ ಅತಿ ಹೆಚ್ಚು ಬೌಂಡರಿ ಕಲೆ ಹಾಕಿದ ಟೀಂ ಎಂಬ ದಾಖಲೆಯನ್ನು ಟೀಂ ಇಂಡಿಯಾ ಬರೆದಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಒಟ್ಟು 47 ಬೌಂಡರಿಗಳನ್ನು ಟೀಂ ಇಂಡಿಯಾ ಹೊಡೆದಿದ್ದು ಇದು ಟಿ20 ಇತಿಹಾಸದಲ್ಲಿಯೇ ಅತಿ ಹೆಚ್ಚು ಬೌಂಡರಿ ಹೊಡೆದ ದೇಶ ಎಂದು ಭಾರತ ಗುರುತಿಸಿಕೊಂಡಿದೆ.
ಇದನ್ನೂ ಓದಿ: ಸಂಜು ಸ್ಯಾಮ್ಸನ್ ಸೆಂಚುರಿ, ಸೂರ್ಯ ಕುಮಾರ್ ಅಬ್ಬರ.. ಬಾಂಗ್ಲಾಗೆ ಟೀಂ ಇಂಡಿಯಾ ಬಿಗ್ ಟಾರ್ಗೆಟ್!
ಈ ಹಿಂದೆ ಕ್ರೆಜ್ ರಿಪಬ್ಲಿಕ್ ಟರ್ಕಿ ನಡೆವಿನ ಪಂದ್ಯದಲ್ಲಿ 43 ಬೌಂಡರಿಗಳು ಹರಿದು ಬಂದಿದ್ದವು, ಸದ್ಯ ಟೀಂ ಇಂಡಿಯಾ ಈ ದಾಖಲೆಯನ್ನು ಮುರಿದಿದ್ದು ಒಟ್ಟು 47 ಬೌಂಡರಿಗಳನ್ನು ಬಾಂಗ್ಲಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಸಿಡಿಸಿದೆ. ಇದು ಟಿ20 ಇನ್ನಿಂಗ್ಸೊಂದರಲ್ಲಿ ಹರಿದು ಬಂದ ಅತಿಹೆಚ್ಚು ಬೌಂಡರಿ ಎಂದು ಗುರುತಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us