/newsfirstlive-kannada/media/post_attachments/wp-content/uploads/2024/08/ROHIT_SHARMA.jpg)
ಭಾರತ ಮತ್ತು ಶ್ರೀಲಂಕಾ ಮಧ್ಯೆ ಏಕದಿನ ಸರಣಿಯ ಮೊದಲ ಪಂದ್ಯ ಡ್ರಾ ಆಗಿದ್ದು ಎಲ್ಲರನ್ನು ಅಚ್ಚರಿಗೊಳಸಿದೆ. ಕೇವಲ ಒಂದೇ ಒಂದು ರನ್ ಅನ್ನು ಭಾರತದ ಆಟಗಾರರು ಕೊನೆಗೆ ಗಳಿಸಲಾಗದೇ ಟೈ ಮಾಡಿಕೊಂಡಿದ್ದಾರೆ. ಮ್ಯಾಚ್ ಡ್ರಾ ಆದರು ಸೂಪರ್ ಓವರ್​ ಯಾಕೆ ಆಡಿಸಲಿಲ್ಲ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಸದ್ಯ ಇದಕ್ಕೆ ಉತ್ತರ ಇಲ್ಲಿದೆ.
ಇದನ್ನೂ ಓದಿ:ಕೇರಳದಲ್ಲಿ 100 ಮನೆ ನಿರ್ಮಾಣ.. ಸಿಎಂ ಸಿದ್ದು ಘೋಷಣೆಗೆ ರಾಹುಲ್, ಪ್ರಿಯಾಂಕಾ ಗಾಂಧಿ ಹೇಳಿದ್ದೇನು?
ಟಾಸ್​​ ಗೆದ್ದುಕೊಂಡು ಶ್ರೀಲಂಕಾ ಬ್ಯಾಟಿಂಗ್​​ಗೆ ಆಗಮಿಸಿತು. ಶ್ರೀಲಂಕಾ ಪರ ಪಾಥುಮ್​ ನಿಸ್ಸಾಂಕ್ 56 ರನ್​​, ದುನಿತ್ ವಳ್ಳಾಲಾಗೆ 67 ರನ್​ ಬಾರಿಸಿ ತಂಡಕ್ಕೆ ನೆರವಾದರು. ಹೀಗಾಗಿ ಶ್ರೀಲಂಕಾ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 230 ರನ್​ಗಳನ್ನು ಗಳಿಸಿತು. ಈ ಟಾರ್ಗೆಟ್​ ಬೆನ್ನಟ್ಟಿದ್ದ ರೋಹಿತ್ ಶರ್ಮಾ ಪಡೆ ಸುಲಭವಾಗೇ ಗೆಲ್ಲುತ್ತಾರೆ ಎಂದುಕೊಳ್ಳಲಾಗಿತ್ತು. ಓಪನರ್​ ರೋಹಿತ್ 58 ರನ್ ಚಚ್ಚಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಇದನ್ನೂ ಓದಿ: ಬೆಟ್ಟದ ತುತ್ತತುದಿಯಲ್ಲಿದ್ದ ಕುಟುಂಬ.. ದಟ್ಟ ಮಂಜು, ಜಾರುವ ಬಂಡೆಗಳ ಮಧ್ಯೆ ಜೀವ ಉಳಿಸಿಕೊಂಡಿದ್ದೇ ಸಾಹಸ!
ಆದರೆ ​ ಗಿಲ್ 16, ಕೊಹ್ಲಿ 24, ಅಯ್ಯರ್ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದು ತಂಡಕ್ಕೆ ಭಾರೀ ಹಿನ್ನಡೆಯಾಯಿತು. ಇವರ ಬಳಿಕ ಕ್ರೀಸ್​ಗೆ ಆಗಮಿಸಿದ ಕನ್ನಡಿಗ ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು. ಇವರು ಔಟ್​ ಆಗ್ತಿದ್ದಂತೆ ಭಾರತ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿತು. ದುಬೆ ತಂಡ ಗೆಲ್ಲಿಸುವ ಹಂತದಲ್ಲಿದ್ದರು. 48ನೇ ಓವರ್​ನಲ್ಲಿ ಭಾರತ ಗೆಲುವಿಗೆ ಕೇವಲ 1 ರನ್ ಬೇಕಿತ್ತು. ಅಸಲಂಕಾ 2 ಎಸೆತದಲ್ಲಿ 2 ವಿಕೆಟ್ ಪಡೆದು ಲಂಕಾಗೆ ತಿರುವು ಕೊಟ್ಟರು. ಇದರಿಂದ ಭಾರತ 230 ರನ್‌ಗೆ ಆಲ್​ ಔಟ್ ಆಗಿ ಡ್ರಾ ಮಾಡಿಕೊಂಡಿತು.
ಸೂಪರ್ ಓವರ್ ಯಾಕೆ ಆಡಿಸಲಿಲ್ಲ?
ಭಾರತ ಮತ್ತು ಶ್ರೀಲಂಕಾ ನಡುವಿನ 3ನೇ ಟಿ20 ಡ್ರಾ ಆಗಿದ್ದಾಗ ಸೂಪರ್​ ಓವರ್​ ಆಡಿಸಲಾಗಿತ್ತು. ಟಿ20 ಮ್ಯಾಚ್​ನಲ್ಲಿ ಅಂತಿಮ ಫಲಿತಾಂಶಕ್ಕಾಗಿ ಸೂಪರ್ ಓವರ್​ ನಿಯಮ ಇರುತ್ತದೆ. ಆದರೆ ಏಕದಿನ ಪಂದ್ಯ ಟೈ ಆದರೂ ಯಾಕೆ ಸೂಪರ್ ಓವರ್​ ಆಡಿಸಲಿಲ್ಲ ಎಂಬುದು ಈಗಿನ ಪ್ರಶ್ನೆಯಾಗಿದೆ. ಐಸಿಸಿ ನಿಯಮದ ಪ್ರಕಾರ ದ್ವಿಪಕ್ಷೀಯ ಸರಣಿಯಲ್ಲಿ (2 ತಂಡಗಳ ನಡುವಿನ ಪಂದ್ಯಗಳು) ಪಂದ್ಯ ಸಮಬಲ ಸಾಧಿಸಿದರೆ ಸೂಪರ್​ ಓವರ್ ಆಡಿಸಲ್ಲ. ಇದು ಐಸಿಸಿ ನಿಯಮದಲ್ಲಿಲ್ಲ. ಐಸಿಸಿ ಟೂರ್ನಿಗಳಾದ ಏಷ್ಯಾಕಪ್, ವರ್ಲ್ಡ್​ಕಪ್​, ಟಿ20 ವಿಶ್ವಕಪ್​ನಲ್ಲಿ ಹಾಗೂ ತ್ರಿಕೋನ ಸರಣಿಗಳಲ್ಲಿ ಸೂಪರ್ ಓವರ್ ಆಡಿಸಿ ಅಂತಿಮ ಫಲಿತಾಂಶ ಪಡೆಯಲಾಗುತ್ತದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ