/newsfirstlive-kannada/media/post_attachments/wp-content/uploads/2025/05/sarfaraz_khan.jpg)
ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕು ಎಂದರೆ ಫಿಟ್ನೆಸ್ ಮೇನ್ ಟಾರ್ಗೆಟ್. ಆಟಗಾರ ಎಷ್ಟು ಫಿಟ್ ಆಗಿರುತ್ತನೋ ಅಷ್ಟು ವರ್ಷ ತಂಡದಲ್ಲಿ ಸ್ಥಾನ ಇರುತ್ತದೆ. ಪ್ರತಿ ಆಟಗಾರ ಆಡುವುದರ ಜೊತೆಗೆ ಅವರ ಆಹಾರ ಸೇವನೆ ಕೂಡ ಫಿಟ್ನೆಸ್ಗೆ ಮುಖ್ಯವಾಗಿರುತ್ತದೆ. ಸದ್ಯ ಇದೀಗ ಯುವ ಕ್ರಿಕೆಟರ್ರೊಬ್ಬರು ಕೇವಲ 6 ವಾರಗಳಲ್ಲಿ 10 ಕೆ.ಜಿ ದೇಹದ ತೂಕವನ್ನು ಇಳಿಸಿ ಅಚ್ಚರಿ ಮೂಡಿಸಿದ್ದಾರೆ.
ಟೀಮ್ ಇಂಡಿಯಾದ ಬ್ಯಾಟರ್ ಸರ್ಫರಾಜ್ ಖಾನ್ ಯಾವಾಗಲೂ ತನ್ನ ದಪ್ಪ ದೇಹದಿಂದಲೇ ಸುದ್ದಿಯಾಗುತ್ತಿದ್ದರು. ಇದರಿಂದಲೇ ಎಷ್ಟೋ ಬಾರಿ ಭಾರತ ತಂಡದ ಉತ್ತಮ ಅವಕಾಶಗಳನ್ನು ಕಳೆದುಕೊಂಡಿದ್ದರು. ಆದರೆ ಇದೀಗ ಸರ್ಫರಾಜ್ ಖಾನ್ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಕಠಿಣವಾದ ಡಯಟ್ ಮಾಡಿದ್ದಾರೆ. 2024ರಲ್ಲಿ ಟೆಸ್ಟ್ಗೆ ಡೆಬ್ಯೂ ಮಾಡಿದ್ದ ಸರ್ಫರಾಜ್, ಇದುವರೆಗೂ ವಿದೇಶದಲ್ಲಿ ಒಂದು ಪಂದ್ಯ ಕೂಡ ಆಡಿಲ್ಲ. ಆದರೂ ಈ ಬಾರಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: ಪಾಕ್ಗೆ ಶಾಕ್ ಮೇಲೆ ಶಾಕ್; ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾ ಗುಡ್ಬೈ ಹೇಳುತ್ತಾ?
ಭಾರತ- ಎ ತಂಡದಲ್ಲಿ 18 ಆಟಗಾರರಲ್ಲಿ ಸರ್ಫರಾಜ್ ಖಾನ್ ಸ್ಥಾನ ಪಡೆದಿದ್ದು ಮೇ 30 ರಿಂದ ನಡೆಯುವ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ಗೆ ಆಯ್ಕೆ ಆಗಿದ್ದಾರೆ. ಇಲ್ಲಿ ಚೆನ್ನಾಗಿ ಆಡಿದವರು ಇಂಗ್ಲೆಂಡ್ ವಿರುದ್ಧದ ಮುಂದಿನ ಟೆಸ್ಟ್ಗೆ ಆಯ್ಕೆ ಆಗುತ್ತಾರೆ. ಹೀಗಾಗಿಯೇ ಸಿಕ್ಕ ಅವಕಾಶವನ್ನು ಸದುಉಪಯೋಗ ಮಾಡಿಕೊಳ್ಳಬೇಕಂತ ಸರ್ಫರಾಜ್ ಡಯಟ್ ಪ್ಲಾನ್ ರೂಪಿಸಿ ಅದರಲ್ಲಿ ಜಯ ಸಾಧಿಸಿದ್ದಾರೆ.
ಸರ್ಫರಾಜ್ ಖಾನ್ ಬೇಯಿಸಿದ ತರಕಾರಿಗಳು ಹಾಗೂ ಚಿಕನ್ ಮಾತ್ರ ತಿಂದು ದೇಹದ ತೂಕ ಇಳಿಸಿದ್ದಾರೆ. ಇಷ್ಟೇ ಅಲ್ಲದೇ ಜಿಮ್, ವ್ಯಾಯಾಮ, ರನ್ನಿಂಗ್ ಸೇರಿದಂತೆ ಇತರೆ ವರ್ಕೌಟ್ ಮಾಡಿ ದೇಹದ ತೂಕ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಲ್ಲದ ಟೆಸ್ಟ್ ತಂಡದಲ್ಲಿ ಯುವ ಆಟಗಾರರಿಗೆ ಹೆಚ್ಚು ಅವಕಾಶ ಇದ್ದು ಅವುಗಳನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ