ಪಾಕ್​ಗೆ ಹೋದವರು ಮೇ 1ರೊಳಗೆ ಬರ್ಬೇಕು; ಭಾರತದಲ್ಲಿರೋ ಪಾಕಿಸ್ತಾನಿಯರಿಗೆ ತೊಲಗಲು ಡೆಡ್​ಲೈನ್​..!

author-image
Ganesh
Updated On
ಪಾಕ್​ಗೆ ಹೋದವರು ಮೇ 1ರೊಳಗೆ ಬರ್ಬೇಕು; ಭಾರತದಲ್ಲಿರೋ ಪಾಕಿಸ್ತಾನಿಯರಿಗೆ ತೊಲಗಲು ಡೆಡ್​ಲೈನ್​..!
Advertisment
  • ಪಹಲ್ಗಾಮ್ ಅಟ್ಯಾಕ್.. ಪಾಕಿಸ್ತಾನಕ್ಕೆ ಭಾರತ ಬಿಗ್‌ ಶಾಕ್!
  • ರಾಜತಾಂತ್ರಿಕ ಸಮರ.. ಕೇಂದ್ರ ಸರ್ಕಾರದಿಂದ 5 ನಿರ್ಣಯ
  • ಪಾಕ್ ನಾಗರಿಕರಿಗೆ ನೀಡಲಾಗಿರುವ ವಿಶೇಷ ವೀಸಾಗಳೂ ರದ್ದು

ಪ್ರವಾಸಿಗರ ಸ್ವರ್ಗ.. ಪ್ರೇಮ ಪಕ್ಷಿಗಳಿಗೆ ಪ್ರೇಮ ಕಾಶ್ಮೀರ.. ಭಾರತದ ಕಿರೀಟದಂತಿದ್ದ ಕಾಶ್ಮೀರ ಸದ್ಯ ರಕ್ತಪಿಪಾಸುಗಳ ಅಟ್ಟಹಾಸಕ್ಕೆ ನಲುಗಿದೆ. ಪಹಲ್ಗಾಮ್​ನಲ್ಲಿ ಅಟ್ಟಹಾಸ ಮೆರೆದ ನರರಾಕ್ಷಸರು 26 ಪ್ರವಾಸಿಗರ ಜೀವ ತೆಗೆದಿದ್ದಾರೆ. ಪ್ರವಾಸಿಗರ ರೋಧನ ಕಂಡು ಇಡೀ ದೇಶವೇ ಮರುಕ ಪಡುತ್ತಿದೆ. ಪಾಪಿ ಉಗ್ರರನ್ನ ಛೂ ಬಿಟ್ಟ ಪಾಕಿಸ್ತಾನದ ವಿರುದ್ಧ ಭಾರತ ಕಠಿಣ ನಿರ್ಣಯಗಳನ್ನ ತೆಗೆದುಕೊಂಡಿದೆ.

ಕೇಂದ್ರ ಸರ್ಕಾರದಿಂದ 5 ನಿರ್ಣಯ

ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್ ಮೇರುಪರ್ವತಗಳ ತಪ್ಪಲು ಭೂಮಿ.. ನದಿಗಳು, ಸರೋವರಗಳು, ಸುಂದರ ಪ್ರಕೃತಿಯ ತಾಣ.. ಬರೋಬ್ಬರಿ 35 ವರ್ಷಗಳ ಬಳಿಕ ಪಹಲ್ಗಾಮ್​​ನಲ್ಲಿ ನೆತ್ತರು ಹರಿದಿದೆ. ಇಡೀ ಮನುಕುಲ ಬೆಚ್ಚುವಂತೆ ಹೇಯ ಕೃತ್ಯ ಎಸಗಿರುವ ಉಗ್ರರು ದೇಶದ ಭದ್ರತೆಗೆ ಬೆದರಿಕೆಯೊಡ್ಡಿದ್ದಾರೆ. ಪಹಲ್ಗಾಮ್​ನಲ್ಲಿ 26 ಜನರನ್ನು ಹತ್ಯೆ ಮಾಡಿದ ಕೃತ್ಯ ಸೇನೆಯನ್ನು ಬಡಿದೆಬ್ಬಿಸಿದೆ.. ಉಗ್ರರ ರಣಬೇಟೆಗಾಗಿ ಹಾತೊರೆಯುತ್ತಿದೆ. ಇದೇ ವೇಳೆಯಲ್ಲಿ ಭಾರತ ಪಾಕ್‌ ವಿರುದ್ಧ ರಾಜತಾಂತ್ರಿಕ ಸಮರ ಸಾರಿದೆ. ನಿನ್ನೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನದ ವಿರುದ್ಧ 5 ಪ್ರಮುಖ ನಿರ್ಣಯಗಳನ್ನ ಕೈಗೊಂಡಿದೆ.

ಇದನ್ನೂ ಓದಿ: BREAKING; ಪಾಕ್​​ಗೆ ಸಿಂಧೂ ನದಿ ನೀರು ಹಂಚಿಕೆ ರದ್ದು.. PM ಮೋದಿ ನೇತೃತ್ವದ ಸಭೆಯಲ್ಲಿ ಮಹತ್ವದ 5 ನಿರ್ಧಾರ

publive-image1

‘ಪಾಪಿಸ್ತಾನ’ಕ್ಕೆ ಭಾರತ ‘ಪಂಚ್​’

  • ನಿರ್ಣಯ-01: ಸಿಂಧೂ ನದಿ ನೀರು ಒಪ್ಪಂದ ಈ ಕ್ಷಣದಿಂದಲೇ ಅಮಾನತಿನಲ್ಲಿ ಇಡಲಾಗುತ್ತೆ

ನಿರ್ಣಯ-02:

  • ಭಾರತ ಪಾಕಿಸ್ತಾನ ಗಡಿಯ ಅಠಾರಿ ಚೆಕ್‌ಪೋಸ್ಟ್‌ ಈ ಕ್ಷಣದಿಂದಲೇ ಕ್ಲೋಸ್‌
  •  ಪಾಕಿಸ್ತಾನಕ್ಕೆ ಹೋಗಿರುವವರು ಮೇ.1ರ ಒಳಗಾಗಿ ಭಾರತಕ್ಕೆ ಮರಳಬೇಕು

ನಿರ್ಣಯ-3:

  • SAARC ವೀಸಾ ಅಡಿ ಪಾಕಿಸ್ತಾನದ ನಾಗರಿಕರಿಗೆ ಭಾರತಕ್ಕೆ ಪ್ರವೇಶವಿಲ್ಲ
  •  ಈ ಹಿಂದೆ ಪಾಕ್ ನಾಗರಿಕರಿಗೆ ನೀಡಲಾಗಿರುವ ವಿಶೇಷ ವೀಸಾಗಳೂ ರದ್ದು
  • ಭಾರತದಲ್ಲಿರೋ ಪಾಕ್ ಪ್ರಜೆಗಳಿಗೆ ಇಲ್ಲಿಂದ ತೆರಳಲು 48 ಗಂಟೆಗಳ ಗಡುವು

ನಿರ್ಣಯ-4:

  • ಪಾಕ್‌ನ ರಾಯಭಾರ ಕಚೇರಿ ಅಧಿಕಾರಿಗಳಿಗೆ ಭಾರತ ಬಿಡಲು ವಾರದ ಗಡುವು
  • ಪಾಕ್‌ನ 3 ಸೇನೆಯ ಅಡ್ವೈಸರ್‌ಗಳಿಗೆ ಭಾರತ ಬಿಡೋದಕ್ಕೆ ಕಡ್ಡಾಯ ಆದೇಶ
  • ಇಸ್ಲಾಮಾಬಾದ್‌ನ ಭಾರತೀಯ ಹೈಕಮಿಷನ್‌ನಲ್ಲಿರೋ ಅಧಿಕಾರಿಗಳೂ ವಾಪಸ್‌
  • ಭಾರತದ ಮೂರು ಸೇನೆಯ ಅಡ್ವೈಸರ್‌ಗಳಿಗೆ ಭಾರತಕ್ಕೆ ಮರಳೋಕೆ ಸೂಚನೆ

ನಿರ್ಣಯ-5

  • ಭಾರತದಲ್ಲಿರೋ ಪಾಕ್‌ ರಾಯಭಾರ ಕಚೇರಿಯ ಸಿಬ್ಬಂದಿ ಸಂಖ್ಯೆ 30ಕ್ಕೆ ಇಳಿಕೆ
  • ಭೂ ಸೇನೆ, ವಾಯು, ನೌಕಾ ಸೇನೆಗಳಿಗೆ ಹದ್ದಿನ ಕಣ್ಗಾವಲಿಡೋಕೆ ಸೂಚನೆ

1960ರಲ್ಲಿ ಪಾಕ್-ಭಾರತ ಮಾಡಿಕೊಂಡಿದ್ದ ಸಿಂಧೂ ನದಿ ನೀರು ಒಪ್ಪಂದವನ್ನ ತಕ್ಷಣ ಅಮಾನತು ಮಾಡಲಾಗಿದೆ. ಈ ಮೂಲಕ ಪಾಕಿಸ್ತಾನಕ್ಕೆ ಭಾರತ ಜಲಶಾಕ್ ಕೊಟ್ಟಿದೆ. ಈ ಒಪ್ಪಂದ ಸ್ಥಗಿತದಿಂದ ಪಾಕಿಸ್ತಾನಕ್ಕೆ ದೊಡ್ಡ ಆಘಾತ ಎದುರಾಗಲಿದೆ.

ಇದನ್ನೂ ಓದಿ: ತಾಯ್ನಾಡಿಗೆ ಬಂದ ಮಂಜುನಾಥ್, ಭರತ್ ಮೃತದೇಹ.. ಅಗಲಿದ ಪುತ್ರನ ನೋಡಿ ತಂದೆ-ತಾಯಿ ಕಣ್ಣೀರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment