ಗಡಿಯಲ್ಲಿ ಉಗ್ರರ ಹುಡುಕಿ ಹುಡುಕಿ ಬೇಟೆ.. ಭಾರತ ಸಿಂಧೂ ನೀರು ಬಿಡದಿದ್ರೆ ಪಾಕ್ ಗತಿ ಏನು?

author-image
Ganesh
Updated On
ಗಡಿಯಲ್ಲಿ ಉಗ್ರರ ಹುಡುಕಿ ಹುಡುಕಿ ಬೇಟೆ.. ಭಾರತ ಸಿಂಧೂ ನೀರು ಬಿಡದಿದ್ರೆ ಪಾಕ್ ಗತಿ ಏನು?
Advertisment
  • ಪಾಕಿಸ್ತಾನದ ಕೃಷಿ, ಇಂಧನ ಮತ್ತು ಆರ್ಥಿಕತೆಗೆ ದೊಡ್ಡ ಹೊಡೆತ
  • ಸಿಂಧೂ ನದಿ ನೀರನ್ನ ಭಾರತ ಭಾಗಕ್ಕೆ ಮಾತ್ರ ಬಳಸಲು ನಿರ್ಧಾರ!
  • ಗಡಿಯಲ್ಲಿ ಅಪಾರ ಪ್ರಮಾಣದ ಆರ್‌ಡಿಎಕ್ಸ್‌ ಮತ್ತು ಶಸ್ತ್ರಾಸ್ತ್ರ ವಶಕ್ಕೆ

ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂ ಅಂತಾ ಶೋಕಿ ಮಾಡೋ ಪಾಕಿಸ್ತಾನದ ಮೇಲೆ ಈಗಾಗ್ಲೇ ಭಾರತ ಯುದ್ಧ ಸಾರಿ ಆಗಿದೆ. ಮೊದಲು ಸಿಂಧೂ ನದಿ ನೀರಿನಲ್ಲಿ ಸ್ಟಾರ್ಟ್​ ಆಗಿರೋ ಯುದ್ಧ ಬಲು ಭೀಕರತೆಯನ್ನ ಪಡೆದಿದೆ. ಭಾರತದ ಒಂದೇ ಒಂದು ಮೀಟಿಂಗ್​.. ಪಾಕ್​ ಬುಡಕ್ಕೆ ಬೆಂಕಿ ಬಿದ್ದಿದೆ.

ಸಿಂಧೂ ನದಿ ನೀರನ್ನ ಭಾರತ ಭಾಗಕ್ಕೆ ಮಾತ್ರ ಬಳಸಲು ನಿರ್ಧಾರ!

ಸಿಂಧೂ ನದಿ ಮತ್ತು ಜೀಲಂ, ಮತ್ತು ಚಿನಾಬ್ ನದಿಗಳಿಗೆ ಅಡ್ಡಲಾಗಿ ಕಟ್ಟಿರೋ ಡ್ಯಾಂಗಳ ಎತ್ತರ ಹೆಚ್ಚಿಸಲು ಅಮಿತ್​ ಶಾ ನೇತೃತ್ವದಲ್ಲಿ ನಡೆದ ಮೀಟಿಂಗ್​ನಲ್ಲಿ ನಿರ್ಧಾರಿಸಲಾಗಿದೆ. ಜೊತೆಗೆ ಆ ನೀರಿನ ಸಂಪೂರ್ಣ ಬಳಕೆಯನ್ನ ನಮ್ಮ ದೇಶಕ್ಕಾಗಿ ಮಾಡಲು ತೀರ್ಮಾನಿಸಲಾಗಿದೆ. ಇನ್ನು ನದಿ ನೀರು ಹಂಚಿಕೆಯನ್ನ ತಡೆದು ಭಾರತದ ಇತರ ಭಾಗಕ್ಕೆ ನೀರು ಸರಬರಾಜು ಮಾಡಿ ಪ್ಲಾನ್ ಇದ್ದು, ಇದರ ಜೊತೆಗೆ ಅದರಿಂದ ವಿದ್ಯುತ್ ಉತ್ಪಾದನೆ ಮಾಡೋ ಐಡಿಯಾ ಇದೆ.

ಭಾರತ ಸರ್ಕಾರದ ನಿರ್ಧಾರಗಳ ಬಗ್ಗೆ ವಿಶ್ವಬ್ಯಾಂಕ್​ಗೂ ಮನವರಿಗೆ ಮಾಡಲು ತೀರ್ಮಾನ ಮಾಡಲಾಗಿದೆ. ಇದಕ್ಕೆ ಸಭೆಯಲ್ಲಿದ್ದ ಎಲ್ಲಾ ನಾಯಕರು ಓಕೆ ಎಂದಿದ್ದಾರೆ. ಈ ಜಲಯುದ್ಧದಿಂದ ಪಾಕ್​ ಎದುರಿಸಬೇಕಾದ ಸವಾಲುಗಳ ಪಟ್ಟಿ ಇಲ್ಲಿದೆ.

ನೀರು ಬಿಡದಿದ್ರೆ ಪಾಕ್ ಗತಿ ಏನು?

  • ಸಿಂಧೂ & ಉಪನದಿಗಳ ಮೇಲೆ ಸಂಪೂರ್ಣ ನಿಯಂತ್ರಣ
  •  ಪಾಕಿಸ್ತಾನದ ಕೃಷಿ, ಇಂಧನ, & ಆರ್ಥಿಕತೆಗೆ ದೊಡ್ಡ ತೊಂದರೆ
  •  ಪಾಕ್ 80% ಕೃಷಿ ಭೂಮಿ ಸಿಂಧೂ ನದಿ ಮೇಲೆ ಅವಲಂಬನೆ
  •  ತಾರ್ಬೆಲಾ, ಮಂಗ್ಲಾ ಅಣೆಕಟ್ಟುಗಳಿಗೆ ಈ ನೀರಿನಿಂದ ವಿದ್ಯುತ್
  • ಪಾಕ್ ಆರ್ಥಿಕತೆಯ 25% ಕೃಷಿಯಿಂದ ಬರುತ್ತೆ, ದೊಡ್ಡ ಹೊಡೆತ
  • ಕರಾಚಿ, ಲಾಹೋರ್‌, ದೊಡ್ಡ ನಗರಗಳಿಗೆ ಕುಡಿಯೋ ನೀರು ಕಟ್

ಸಿಂಧೂ ನದಿ ಒಪ್ಪಂದದ ನಿಯಮಗಳಿಲ್ಲದಿದ್ದರೆ.. ಭಾರತಕ್ಕೆ ಸಿಂಧೂ, ಜೀಲಂ, ಮತ್ತು ಚಿನಾಬ್ ನದಿಗಳ ಮೇಲೆ ಸಂಪೂರ್ಣ ನಿಯಂತ್ರಣ ಸಿಗುತ್ತದೆ. ಈ ಬದಲಾವಣೆಗಳಿಂದ ಪಾಕಿಸ್ತಾನದ ಕೃಷಿ, ಇಂಧನ, ಮತ್ತು ಆರ್ಥಿಕತೆಗೆ ದೊಡ್ಡ ತೊಂದರೆಯಾಗಬಹುದು. ಪಾಕಿಸ್ತಾನದ 80% ಕೃಷಿ ಭೂಮಿ ಸಿಂಧೂ ನದಿಯ ನೀರಿನ ಮೇಲೆ ಅವಲಂಬಿತವಾಗಿದೆ. ಪಾಕಿಸ್ತಾನದ ತಾರ್ಬೆಲಾ ಮತ್ತು ಮಂಗ್ಲಾ ಅಣೆಕಟ್ಟುಗಳು ಸಿಂಧೂ ನದಿಯ ನೀರಿನಿಂದ ವಿದ್ಯುತ್ ಉತ್ಪಾದಿಸುತ್ತವೆ. ಪಾಕಿಸ್ತಾನದ ಆರ್ಥಿಕತೆಯ ಶೇಕಡ 25% ಕೃಷಿಯಿಂದ ಬರುತ್ತೆ, ನೀರು ನಿಲ್ಲಿಸೋದ್ರಿಂದ ಕೃಷಿ ಕುಸಿದು ಆರ್ಥಿಕತೆಗೆ ದೊಡ್ಡ ಹೊಡೆತವಾಗುತ್ತೆ. ಈಗಾಗಲೇ ಪಾಕಿಸ್ತಾನದಲ್ಲಿ ಭೂಗತ ನೀರು ಕಡಿಮೆಯಾಗಿದ್ದು, ಕರಾಚಿ, ಲಾಹೋರ್‌ನಂತಹ ದೊಡ್ಡ ನಗರಗಳು ಸಿಂಧೂ ನದಿಯ ನೀರನ್ನು ಕುಡಿಯಲು ಬಳಸುತ್ತವೆ.

ಅಡಗಿರುವ ಉಗ್ರರನ್ನ ಹುಡುಕಿ ಹುಡುಕಿ ಬೇಟೆ ಆಡ್ತಿದೆ ಸೇನೆ

ಪಹಲ್ಗಾಮ್​​ ದಾಳಿಗೆ ಪ್ರತೀಕಾರವಾಗಿ ಉಗ್ರ ಸಂಹಾರ ಒಂದ್ಕಡೆ ನಡೀತಿದೆ. ಕಣಿವೆ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸೇನೆಯಿಂದ 26 ಅಮಾಯಕರ ಬಲಿ ಪಡೆದ ರಕ್ಕಸರು ಉಗ್ರ ಆಸಿಫ್​​ ಶೇಖ್​, ಉಗ್ರ ಆದಿಲ್​​ ಮನೆಗಳನ್ನ ಉಡೀಸ್ ಮಾಡಲಾಗಿತ್ತು. ಇದರ ಬಳಿಕ ಮತ್ತೊಬ್ಬ ಉಗ್ರನ ಮನೆ ದ್ವಂಸ ಮಾಡಲಾಗಿದೆ.

ಮನೆ ಧ್ವಂಸ ಆಗಿರೋ ಉಗ್ರನಿಗೆ ಪಾಕ್ ಐಎಸ್‌ಐ ಜೊತೆ ನಂಟಿದೆ ಎಂಬ ಶಂಕೆ ವ್ಯಕ್ತಪಡಿದೆ ಭಾರತ ಸೇನೆ. ಈ ಬಗ್ಗೆ ನಿವೃತ್ತ ಸೇನಾ ಮುಖ್ಯಸ್ಥ ಶಂಕರ್ ಚೌಧರಿ ಮಾಹಿತಿ ನೀಡಿದ್ದಾರೆ. ಈ ಬೆನ್ನಲ್ಲೇ ಇತ್ತ ಪಂಜಾಬ್‌ ಗಡಿಯಲ್ಲಿ ಅಪಾರ ಪ್ರಮಾಣದ ಆರ್‌ಡಿಎಕ್ಸ್‌ ಮತ್ತು ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment