Advertisment

ಕೊಹ್ಲಿ, ರೋಹಿತ್ ಸ್ಥಾನ ತುಂಬುವ ಯಂಗ್ ಪ್ಲೇಯರ್ಸ್ ಇವರೇ​.. ಈ ಯುವ ಬ್ಯಾಟ್ಸ್​​ಮನ್ಸ್​ಗೆ ಇದೆ ಆ ಖದರ್

author-image
Bheemappa
Updated On
ರೋಹಿತ್ ಗುಡ್​ಬೈ.. T20 ಕ್ಯಾಪ್ಟನ್ಸಿಗಾಗಿ ಇಬ್ಬರು ಆಟಗಾರರ ಮಧ್ಯೆ ಬಿಗ್ ಫೈಟ್​
Advertisment
  • ಟೀಮ್​ ಇಂಡಿಯಾದ ಫ್ಯೂಚರ್​ ಸ್ಟಾರ್ಸ್​ ಯಾರ್ ಆಗ್ತಾರೆ?
  • ಅಭಿಷೇಕ್ ಶರ್ಮಾ, ಪರಾಗ್​​ಗೆ ಹಣೆ ಬರಹ ಬದಲಿಸೋ ಸರಣಿ
  • ಮುಂದಿನ T20 ವಿಶ್ವಕಪ್ ನಡೆಸಿ ಕೊಡುವ ದೇಶ ಯಾವುದು..?

ಜಿಂಬಾಬ್ವೆ ಎದುರಿನ ಟಿ20 ಸರಣಿಯೇನೋ ಆರಂಭವಾಗ್ತಿದೆ. ಆಟಗಾರರು ಕಣಕ್ಕಿಳಿಯಲು ಉತ್ಸಾಹರಾಗಿದ್ದಾರೆ. ಇದೇ ಸರಣಿಯ ಕೆಲ ಆಟಗಾರರ ಪಾಲಿಗೆ ಅಗ್ನಿ ಪರೀಕ್ಷೆಯ ಕಣ. ಕೆಲ ಆಟಗಾರರ ನಿರ್ಗಮನದೊಂದಿಗೆ ಒಂದು ಯುಗ ಅಂತ್ಯಗೊಂಡಿದೆ. ಇದೀಗ ಜಿಂಬಾಬ್ವೆ ಎದುರಿನ ಸರಣಿಯೊಂದಿಗೆ ಹೊಸ ಶಕೆ ಶುರುವಾಗ್ತಿದೆ.

Advertisment

ಇದನ್ನೂ ಓದಿ: ವರುಣಾರ್ಭಟಕ್ಕೆ ಬೆಚ್ಚಿಬಿದ್ದ ಕರಾವಳಿ, ಮಲೆನಾಡು! ರೆಡ್​ ಅಲರ್ಟ್.. ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ

ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ಒಂದು ಯುಗ ಅಂತ್ಯ ಕಂಡಿದೆ. ಚುಟುಕು ಕ್ರಿಕೆಟ್​ನಿಂದ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ ಹಾಗೂ ಆಲ್​​ರೌಂಡರ್​ ರವೀಂದ್ರ ಜಡೇಜಾ ತೆರೆಮರೆಗೆ ಸರಿದಿದ್ದಾರೆ. ಅನುಭವಿಗಳೇ ಇಲ್ಲದ ಈ ಪ್ರವಾಸದಲ್ಲಿ ಪ್ರತಿ ಯುವ ಆಟಗಾರನಿಗೂ ಬಿಗ್ ಚಾಲೆಂಜ್​ ಆಗಿದೆ. ಜಿಂಬಾಬ್ವೆಯ ಅಗ್ನಿಪರೀಕ್ಷೆಯ ಮೇಲೆ ಬಹುತೇಕ ಆಟಗಾರರ ಭವಿಷ್ಯ ನಿಂತಿದೆ.

ಇದನ್ನೂ ಓದಿ: ಚಾರ್ಮಾಡಿ ಘಾಟ್​ನಲ್ಲಿ ಧುಮ್ಮಿಕ್ಕುತ್ತಿರುವ ಜಲಪಾತಗಳು.. ಕಾಫಿನಾಡಿನತ್ತ ಪ್ರವಾಸಿಗರ ಪಯಾಣ

Advertisment

publive-image

ಟೀಮ್ ಇಂಡಿಯಾದ ಹೊಸ ಶಕೆ ಆರಂಭ..!

ಟಿ20 ಕ್ರಿಕೆಟ್‌ ವಿಶ್ವಕಪ್‌ ಗೆಲುವಿನ ಬಳಿಕ ಅನುಭವಿಗಳಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ರವೀಂದ್ರ ಜಡೇಜಾ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾದ ಟಿ20 ತಂಡದಲ್ಲಿ ಯುವ ಆಟಗಾರರ ಪರ್ವ ಶುರುವಾಗಲಿದೆ. ಇಂದಿನಿಂದ ಆರಂಭವಾಗಲಿರೋ ಜಿಂಬಾಬ್ವೆ ಎದುರಿನ ಟಿ20 ಸರಣಿಯೊಂದಿಗೆ ಟಿ20 ಚಾಂಪಿಯನ್ನರ ಹೊಸ ಶಕೆ ಶುರುವಾಗಲಿದೆ.. ​

ಜಿಂಬಾಬ್ವೆ ಟೂರ್​ನಿಂದಲೇ ಚಾಂಪಿಯನ್ಸ್​ಗೆ ಟೆಸ್ಟಿಂಗ್ ಟೈಮ್..!

ಟಿ20 ಸರಣಿಗಾಗಿ ಶುಭ್​ಮನ್ ಗಿಲ್​ ನೇತೃತ್ವದ ಟೀಮ್ ಇಂಡಿಯಾ, ಚಾಂಪಿಯನ್ಸ್ ಎಂಬ ಹಣೆಪಟ್ಟಿಯೊಂದಿಗೆ ಸರಣಿಗೆ ಸನ್ನದ್ಧವಾಗಿದೆ. ಚಾಂಪಿಯನ್ಸ್​ ತಂಡಕ್ಕೆ ಇದೇ ಟೂರ್​​ ಅಗ್ನಿ ಪರೀಕ್ಷೆ ಕಣವಾಗಿದೆ. ತಂಡ ಸಂಪೂರ್ಣ ಯುವ ಆಟಗಾರರಿಂದಲೇ ಕೂಡಿದ್ದು, ಅನುಭವಿಗಳ ಅಲಭ್ಯತೆಯಲ್ಲಿ ಯಂಗ್ ಸ್ಟರ್ಸ್ ಯಾವ ರೀತಿಯ ಪರ್ಫಾಮೆನ್ಸ್ ನೀಡ್ತಾರೆ ಅನ್ನೋದೇ ಪ್ರಶ್ನೆಯಾಗಿದೆ.

ಕ್ಯಾಪ್ಟನ್​​ ಗಿಲ್​​​​ಗೆ ಡಬಲ್ ಟಾಸ್ಕ್​..!

ಇದೇ ಮೊದಲ ಬಾರಿಗೆ ಶುಭ್​ಮನ್, ಟೀಮ್ ಇಂಡಿಯಾವನ್ನ ಮುನ್ನಡೆಸ್ತಿದ್ದಾರೆ. ಈ ಸರಣಿ ಶುಭ್​ಮನ್ ಪಾಲಿಗೆ ಅಷ್ಟು ಸುಲಭದ್ದಾಗಿಲ್ಲ. ಯಾಕಂದ್ರೆ, ಟಿ20 ಫಾರ್ಮೆಟ್​ನಲ್ಲಿ ಅಷ್ಟಾಗಿ ಸಕ್ಸಸ್​ ಕಾಣದ ಶುಭ್​ಮನ್, ಫ್ಯೂಚರ್ ವಿರಾಟ್​ ಎಂಬ ಫ್ಯಾನ್ಸ್​ ನಿರೀಕ್ಷೆ ಉಳಿಸಿಕೊಳ್ಳಬೇಕಿದೆ. ಐಪಿಎಲ್​ನಲ್ಲಿ ನಾಯಕನಾಗಿ ಇಂಪ್ರೆಸ್ ಮಾಡಿರೋ ಗಿಲ್​, ಈಗ ಅಂತಾರಾಷ್ಟ್ರೀಯ ಟಿ20 ನಾಯಕತ್ವದ ಒತ್ತಡ ನಿಭಾಯಿಸಬೇಕಿದೆ. ಫ್ಯೂಚರ್ ಕ್ಯಾಪ್ಟನ್ ರೇಸ್​ನಲ್ಲಿ ನಾನಿದ್ದೇನೆ ಎಂಬ ಸಂದೇಶ ರವಾನಿಸಬೇಕಿದೆ. ಜೊತೆಗೆ ಜಿಂಬಾಬ್ವೆಯಲ್ಲಿ ಟಿ20 ಸರಣಿ ಕಳೆದುಕೊಳ್ಳದ ಇತಿಹಾಸ ಮುಂದುವರಿಸಬೇಕಾದ ಚಾಲೆಂಜ್ ಇದೆ.

Advertisment

ನಿರೀಕ್ಷೆ ಉಳಿಸಿಕೊಳ್ತಾರಾ ಫ್ಯೂಚರ್ ಸ್ಟಾರ್ಸ್​..?

ಗಿಲ್, ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ರಿಂಕು ಸಿಂಗ್​​, ಈಗಾಗಲೇ ಟೀಮ್ ಇಂಡಿಯಾದ ಫ್ಯೂಚರ್​ ಆಗಿ ಗುರುತಿಸಿಕೊಂಡಿದ್ದಾರೆ. ತಂಡದಲ್ಲಿನ ಎಕ್ಸ್​ಪೀರಿಯನ್ಸ್ ಪ್ಲೇಯರ್​ಗಳೂ ಇವರೇ ಆಗಿದ್ದಾರೆ. ವಿರಾಟ್​​​​​​​​​​​​ ಕೊಹ್ಲಿ, ರೋಹಿತ್ ಶರ್ಮಾ ಸ್ಥಾನ ತುಂಬಬಲ್ಲ ಭರವಸೆಯನ್ನು ಶುಭ್​ಮನ್​ ಗಿಲ್​​​​​, ರುತುರಾಜ್ ಹುಟ್ಟು ಹಾಕಿದ್ದಾರೆ. ಆದ್ರೀಗ ಅನುಭವಿಗಳ ಅಲಭ್ಯತೆಯಲ್ಲಿ ಮೊಟ್ಟ ಮೊದಲ ಸರಣಿಯನ್ನಾಡ್ತಿರುವ ಇವರು, ತಮ್ಮ ಸಾಮರ್ಥ್ಯ ಫ್ರೂವ್ ಮಾಡಿ ನಂಬಿಕೆ ಉಳಿಸಿಕೊಳ್ಳಬೆಕಿದೆ.

ಯುವ ಆಟಗಾರರ ಪಾಲಿಗೆ ಉತ್ತಮ ವೇದಿಕೆ

ಅನುಭವಿಗಳ ನಿವೃತ್ತಿಯಿಂದ ತೆರವಾದ ಸ್ಥಾನ ತಮ್ಮದಾಗಿಸಿಕೊಳ್ಳಲು ಜಿಂಬಾಬ್ವೆ ಸರಣಿ ಉತ್ತಮ ವೇದಿಕೆ ಆಗಿದೆ. ಅದರಲ್ಲೂ ಚೊಚ್ಚಲ ಕರೆ ಪಡೆದಿರುವ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್​​ಗೆ ಈ ಸಿರೀಸ್ ಹಣೆ ಬರಹವನ್ನೇ ಬದಲಿಸುವ ಸರಣಿಯಾಗಿದೆ. ಹೀಗಾಗಿ ಸಿಕ್ಕ ಒಂದೊಂದು ಅವಕಾಶವನ್ನೂ ಯಶಸ್ಸಿನ ಮೆಟ್ಟಿಲನ್ನಾಗಿಸಿಕೊಳ್ಳಬೇಕಿದೆ. ಈ ಸರಣಿ ಬಳಿಕ ಕಾಣೆಯಾಗೋದು ಗ್ಯಾರಂಟಿ. ಕಮ್​​ಬ್ಯಾಕ್ ಮಾಡಿರೋ ವಾಷಿಂಗ್ಟನ್ ಸುಂದರ್​​ ಪಾಲಿಗೂ ಈ ಸರಣಿ ಕ್ರೂಶಿಯಲ್ ಆಗಿದೆ.

ಇದನ್ನೂ ಓದಿ: ಕೆಲವ್ರಿಗೆ ನನ್ನ ನೆನಪಿಸಿಕೊಳ್ಳದಿದ್ರೆ ನಿದ್ದೆಯೂ ಬರಲ್ಲ, ತಲೆಯೂ ಓಡಲ್ಲ -ಕುಮಾರಸ್ವಾಮಿ-ಡಿಕೆಶಿ ಮಧ್ಯೆ ವಾಗ್ಯುದ್ಧ ಹೆಂಗಿದೆ ಗೊತ್ತಾ?

Advertisment

publive-image

2 ವರ್ಷ.. 34 ಪಂದ್ಯ.. ಕಟ್ಟಬೇಕಿದೆ ಬಲಿಷ್ಠ ಭಾರತ..!

ಟೀಮ್ ಇಂಡಿಯಾ ಚಾಂಪಿಯನ್ ಆಗಿ ಮೆರೆದಾಡ್ತಿದೆ. ಇದೇ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಬೇಕಾದ್ರೆ, ಮುಂದಿನ 2 ವರ್ಷದಲ್ಲಿ ಬಲಿಷ್ಠ ತಂಡವನ್ನು ಕಟ್ಟಬೇಕಿದೆ. ತವರಿನಲ್ಲಿ ನಡೆಯೋ ಮುಂದಿನ ಟಿ20 ವಿಶ್ವಕಪ್ ವೇಳೆಗೆ ಟೀಮ್ ಇಂಡಿಯಾ​ 34 ಟಿ20 ಪಂದ್ಯಗಳನ್ನಾಡಲಿದೆ. ಮುಂದಿನ 2 ವರ್ಷದಲ್ಲಿ ಆಡುವ ಪ್ರತಿ ಮ್ಯಾಚ್, ಪ್ರತಿ ಸಿರೀಸ್ ಕ್ರೂಶಿಯಲ್ ಆಗಿರಲಿದೆ. ಈ ಟಿ20 ಸರಣಿಗಳಿಂದ ಬಲಿಷ್ಠ ಭಾರತ ಕಟ್ಟಬೇಕಿದೆ.

ಇದನ್ನೂ ಓದಿ:ಸಿಲಿಕಾನ್​ ಸಿಟಿಯಲ್ಲಿ ಡೆಂಘೀಗೆ ಮೊದಲ ಬಲಿ.. 11 ವರ್ಷದ ಬಾಲಕ ಸಾವು

ಹೊಸ ಇಂಡಿಯಾದ ಉಗಮಕ್ಕೆ ಕೌಂಟ್​ಡೌನ್ ಶುರುವಾಗಿದೆ. ಜಿಂಬಾಬ್ವೆ ಸರಣಿಯಿಂದ ಬದಲಾವಣೆ ಶುರುವಾಗಲಿದೆ. ಟೀಮ್ ಇಂಡಿಯಾ ಹೊಸ ಅಧ್ಯಾಯದಲ್ಲಿ ಏನೆಲ್ಲ ಚರಿತ್ರೆ ಸೃಷ್ಟಿಸುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment