/newsfirstlive-kannada/media/post_attachments/wp-content/uploads/2025/04/RAFEL_MARINE.jpg)
ಭಾರತೀಯ ಸೇನೆಗೆ ಮತ್ತಷ್ಟು ಆನೆ ಬಲ ಬರ್ತಿದೆ. ಶತ್ರುಗಳ ಹುಟ್ಟಡಗಿಸೋ ಮತ್ತಷ್ಟು ವೆಪನ್ ಸೇನೆಯ ಬತ್ತಳಿಕೆ ಸೇರುವ ಕಾಲ ಸನ್ನಿಹಿತವಾಗಿದೆ. ಎದುರಾಳಿಗಳ ಎದೆ ನಡುಗಿಸುವ ಮತ್ತಷ್ಟು ಫೈಟರ್ ಜೆಟ್‌ಗಳನ್ನ ಸರ್ಕಾರ ಖರೀದಿಸಲು ಮುಂದಾಗಿದೆ. ಫ್ರಾನ್ಸ್‌ನ ಪ್ರಳಯಾಂತಕ ರಫೇಲ್ ಮರೀನ್ ಸೇನೆಗೆ ಎಂಟ್ರಿ ಕೊಡಲಿವೆ.
ತಲೆ ಎತ್ತರ ಬೆಚ್ಚುವುದು ಬಾನು, ಮಿಸೈಲ್ ಚಿಮ್ಮಿದರೆ ಬಿರಿಯುವುದು ಭೂಮಿ, ನುಗ್ಗಿ ಹೊಡೆದರೆ ನಡುಗುವುದು ಸೃಷ್ಠಿ, ಅದುವೇ ರಫೇಲ್. ಶತ್ರುರಾಷ್ಟ್ರಗಳ ಎದೆಯಲ್ಲಿ ನಡುಕ ಹುಟ್ಟಿಸಿರೋ ಫೈಟರ್ ಜೆಟ್. ಕ್ಷಣ ಮಾತ್ರದಲ್ಲಿ ಎದುರಾಳಿಯ ಕೋಟೆಗೆ ನುಗ್ಗಿ ಧ್ವಂಸ ಮಾಡುವ ಚಾಕಚಕ್ಯತೆ. ತೀಕ್ಷ್ಣತೆ ಇರೋ ಯುದ್ಧ ವಿಮಾನ. ಇದೀಗ ಮತ್ತಷ್ಟು ರಫೇಲ್ ಯುದ್ಧ ವಿಮಾನಗಳು ಸೇನೆ ಸೇರುವುದು ಪಕ್ಕಾ ಆಗಿದೆ.
26 ರಫೇಲ್ ಮರೀನ್ ಫೈಟರ್ ಜೆಟ್ ಖರೀದಿಗೆ ನಿರ್ಧಾರ
ಭಾರತೀಯ ವಾಯುಸೇನೆಯಲ್ಲಿ ರಫೇಲ್ ಯುದ್ಧ ವಿಮಾನಗಳು ತಮ್ಮದೇ ಆದ ಚಾಪು ಮೂಡಿಸಿವೆ. ಈಗಾಗಲೇ 36 ರಫೇಲ್ ಫೈಟರ್ ಜೆಟ್‌ಗಳು ವಾಯು ಸೇನೆ ಸೇರ್ಪಡೆ ಆಗಿವೆ. ಇದೀಗ ಫ್ರಾನ್ಸ್ ಪ್ರಳಯಾಂತಕ ಫೈಟರ್ ಜೆಟ್‌ಗಳ ಖರೀದಿಗೆ ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ. ಸಾವಿರಾರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಫೈಟರ್ ಜೆಟ್‌ಗಳ ಖರೀದಿಗೆ ಭಾರತ ನಿರ್ಧಾರ ಮಾಡಿದೆ. ಆದರೆ ಈ ಬಾರಿ ರಫೇಲ್ ಖರೀದಿ ಮಾಡುತ್ತಿರುವುದು ನೌಕಾಪಡೆಗಾಗಿ.
ಸೇನೆಗೆ ಮತ್ತಷ್ಟು ‘ರಫೇಲ್’ ಬಲ!
- 26 ರಫೇಲ್-ಎಂ ಯುದ್ಧ ವಿಮಾನಗಳ ಖರೀದಿಗೆ ಒಪ್ಪಂದ
- ರಫೇಲ್ ಮರೀನ್ ಖರೀದಿಗೆ ಕೇಂದ್ರ ಸರ್ಕಾರದ ಒಪ್ಪಿಗೆ
- ಶೀಘ್ರದಲ್ಲೇ ಭಾರತ ಮತ್ತು ಫ್ರಾನ್ಸ್ ಸರ್ಕಾರ ಒಪ್ಪಂದಕ್ಕೆ ಸಹಿ
- 63 ಸಾವಿರ ಕೋಟಿ ರೂಪಾಯಿ ವೆಚ್ಚದ ಡೀಲ್ ಅಂಗೀಕಾರ
- 2023, ಜುಲೈನಲ್ಲಿ ರಕ್ಷಣಾ ಸಚಿವಾಲಯದ ಅನುಮೋದನೆ
- ಭಾರತೀಯ ನೌಕಾಪಡೆಗಾಗಿ 26 ಯುದ್ಧ ವಿಮಾನ ಖರೀದಿ
- 22 ಸಿಂಗಲ್-ಸೀಟರ್, 4 ಟ್ವಿನ್-ಸೀಟರ್ ಜೆಟ್‌ಗಳ ಖರೀದಿ
- ಒಪ್ಪಂದಕ್ಕೆ ಸಹಿ ಹಾಕಿದ 37-65 ತಿಂಗಳಲ್ಲಿ ಜೆಟ್‌ಗಳ ವಿತರಣೆ
- ಐಎನ್‌ಎಸ್ ವಿಕ್ರಾಂತ್‌ನಲ್ಲಿ 26 ರಫೇಲ್-ಎಂ ನಿಯೋಜನೆ
ಇದನ್ನೂ ಓದಿ: ಸುಂಕದ ಸೇಡಿಗೆ ಸೆಡ್ಡು ಹೊಡೆದ ಚೀನಾ.. ಡ್ರ್ಯಾಗನ್ ರಾಷ್ಟ್ರಕ್ಕೆ ಡೊನಾಲ್ಡ್ ಟ್ರಂಪ್ ಈಗ ಏನ್ ಮಾಡ್ತಾರೆ?
ನೌಕಾಪಡೆಯಲ್ಲೂ ಯುದ್ದ ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ. ಭಾರತದ ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ವಿಕ್ರಮಾಧಿತ್ಯ ಏರ್‌ಕ್ರಾಫ್ಟ್ ಕ್ಯಾರಿಟರ್‌ಗಳಲ್ಲಿ ಸದ್ಯ ಹೊಸದಾಗಿ ಖರೀದಿಸಲಾಗ್ತಿರುವ ರಫೇಲ್ ಯುದ್ಧ ವಿಮಾನಗಳನ್ನು ನಿಯೋಜನೆಗೊಳಿಸಲಾಗುತ್ತೆ. ಈ ಹಿಂದೆ 36 ರಫೇಲ್ ಯುದ್ಧ ವಿಮಾನಗಳನ್ನ ಕೇಂದ್ರ ಸರ್ಕಾರ ಖರೀದಿ ಮಾಡಿತ್ತು.
ಆದ್ರೆ, ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಭಾರೀ ವಿವಾದ ಏರ್ಪಟ್ಟಿತ್ತು. ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಹಗರಣದ ಆರೋಪ ಮಾಡಿದ್ದರು. ಸದ್ಯಕ್ಕೆ ರಫೇಲ್ ವಿವಾದ ತಣ್ಣಗಾಗಿದೆ. ಅದೇನೆ ಇರ್ಲಿ, ರಫೇಲ್ ಫೈಟರ್ ಜೆಟ್ ನೌಕಾಪಡೆಗೆ ಎಂಟ್ರಿ ಕೊಟ್ರೆ ಅಕ್ಕ ಪಕ್ಕದ ಶತ್ರುಗಳ ಎದೆಯಲ್ಲಿ ನಡುಕ ಹುಟ್ಟೋದಂತೂ ಪಕ್ಕಾ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ