/newsfirstlive-kannada/media/post_attachments/wp-content/uploads/2025/02/INDIAN-ARMY-1.jpg)
ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವೆ ಘರ್ಷಣೆ ತೀವ್ರವಾದ ಬೆನ್ನಲ್ಲೇ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಇನ್ಮುಂದೆ ಭಯೋತ್ಪಾದನೆ ಚಟುವಟಿಕೆಗಳನ್ನು ಯುದ್ಧದ ಕಾಯ್ದೆ (Act of War) ಎಂದು ಪರಿಗಣಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಭಾರತವು ಭವಿಷ್ಯದ ಯಾವುದೇ ಭಯೋತ್ಪಾದಕ ದಾಳಿಗಳನ್ನು ಯುದ್ಧದ ಕೃತ್ಯವೆಂದು ಪರಿಗಣಿಸುತ್ತದೆ. ಅಲ್ಲದೇ ಈ ಕೃತ್ಯಗಳಿಗೆ ತಕ್ಕಂತೆ ಭಾರತ ಪ್ರತಿಕ್ರಿಯಿಸುತ್ತದೆ. ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು 26 ಜನರ ಜೀವ ತೆಗೆದು ಅಟ್ಟಹಾಸ ಮೆರೆದಿದ್ದರು. ಇದಕ್ಕೆ ಭಾರತ ಸೇರಿದಂತೆ ಇಡೀ ವಿಶ್ವವೇ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಈ ರೀತಿಯ ಕೃತ್ಯಗಳು ಭಾರತದ ಗಡಿಯಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ. ಸದ್ಯ ಇಂತಹ ಘಟನೆಗಳು ನಡೆಯದಂತೆ ಭಾರತ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಇದನ್ನೂ ಓದಿ:ರೋಹಿತ್ ಬಳಿಕ ಬೂಮ್ರಾಗೆ ಟೆಸ್ಟ್ ಕ್ಯಾಪ್ಟನ್ಸಿ..? ವರ್ಲ್ಡ್ಕಪ್ ವಿಜೇತ ತಂಡದ ಆಟಗಾರ ಹೇಳಿದ್ದು ಏನು?
ಇನ್ಮುಂದೆ ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆಗಳು ನಡೆದರೆ ಅದನ್ನು ಆ್ಯಕ್ಟ್ ಆಫ್ ವಾರ್ ಎಂದು ಪರಿಗಣಿಸಲಾಗುತ್ತದೆ. ಭವಿಷ್ಯದಲ್ಲಿ ನಡೆಯುವ ಉಗ್ರಗಾಮಿ ಚಟುವಟಿಕೆಯನ್ನು ಯುದ್ಧದ ಚಟುವಟಿಕೆ ಆಗಿರುತ್ತದೆ. ಇಂತವುಗಳಿಗೆ ಭಾರತದ ಭದ್ರತಾ ಪಡೆಗಳು ಸರಿಯಾದ ಉತ್ತರ ನೀಡುತ್ತವೆ. ಎರಡು ರಾಷ್ಟ್ರಗಳ ನಡುವೆ ತೀವ್ರ ಘರ್ಷಣೆ ನಡೆದ ಬೆನ್ನಲ್ಲೇ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತದ ಸೇನೆ ಆಪರೇಷನ್ ಸಿಂಧೂರ್ ನಡೆಸುತ್ತಿದೆ. ಪಾಕಿಸ್ತಾನ ಡ್ರೋಣ್ ದಾಳಿಗೆ ಯತ್ನಿಸಿದ ಪ್ರತಿಕ್ರಿಯೆಯಾಗಿ, ಭಾರತೀಯ ಸೇನೆಯು ಭಯೋತ್ಪಾದಕರು ಇರುವ ನೆಲೆಗಳ ಮೇಲೆ ದಾಳಿ ನಡೆಸಿದೆ.
ಉಗ್ರರ ಚಟುವಟಿಕೆಗಳನ್ನ ಯುದ್ಧದ ಚಟುವಟಿಕೆ ಎಂದು ಪರಿಗಣಿಸುವುದೇಕೆ?
- ಭಾರತ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಬಹುದು
- ಭಾರತವು ಜಾಗತಿಕ ವೇದಿಕೆಗಳಲ್ಲಿ ಉಗ್ರತ್ವ ವಿಷಯ ಪ್ರಸ್ತಾಪಿಸಬಹುದು
- ಭಾರತವು ಟೆರರಿಸಂಗೆ ಮಿಲಿಟರಿ ಪ್ರತ್ಯುತ್ತರ ನೀಡಬಹುದು
- ಉಗ್ರತ್ವ ನಿರಂತರವಾಗಿ ಮುಂದುವರಿದ್ರೆ, ಮಿಲಿಟರಿ ಆಪರೇಷನ್ ಘೋಷಣೆ
- ಭಾರತ, ರಾಜತಾಂತ್ರಿಕ ನಿರ್ಬಂಧ ವಿಧಿಸಬಹುದು
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ