ಪಾಕ್​​ಗೆ ಅರಗಿಸಿಕೊಳ್ಳಲಾಗದ ಸಂದಿಗ್ಧತೆ - ಭಾರತ ಸರ್ಕಾರ ತೆಗೆದುಕೊಂಡ 10 ದಿಟ್ಟ ಹೆಜ್ಜೆಗಳು..!

author-image
Veena Gangani
Updated On
ಪಾಕ್​​ಗೆ ಅರಗಿಸಿಕೊಳ್ಳಲಾಗದ ಸಂದಿಗ್ಧತೆ - ಭಾರತ ಸರ್ಕಾರ ತೆಗೆದುಕೊಂಡ 10 ದಿಟ್ಟ ಹೆಜ್ಜೆಗಳು..!
Advertisment
  • ಇರಲಾರದೇ ಇರುವೆ ಬಿಟ್ಕೊಂಡ ಸ್ಥಿತಿಯಲ್ಲಿ ಪಾಕಿಸ್ತಾನ
  • ಪೆಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕ್​ಗೆ ಬಿತ್ತು ಪೆಟ್ಟು
  • ಉಗ್ರ ಪೋಷಕ ಪಾಕ್ ವಿರುದ್ಧ ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ..?

ಏಪ್ರಿಲ್ 22.. ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಇಡೀ ದೇಶವೇ ಖಂಡನೆ ವ್ಯಕ್ತಪಡಿಸುತ್ತಿದೆ. ಪಹಲ್ಗಾಮ್​​ನಲ್ಲಿ ನಡೆದ ದಾಳಿಯಲ್ಲಿ ಒಂದಲ್ಲಾ ಎರಡಲ್ಲ ಬರೋಬ್ಬರಿ 26 ಅಮಾಯಕರ ಜೀವ ಬಲಿಯಾಗಿದೆ. ಅದರಲ್ಲೂ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆ ದಿಟ್ಟ ಹೆಜ್ಜೆಯನ್ನಿಟ್ಟಿದೆ.

publive-image

ಇದನ್ನೂ ಓದಿ:ಪಾಕ್ ಪ್ರಜೆಗಳಿಗೆ ಭಾರತ ತೊರೆಯಲು ನಾಳೆಯೇ ಡೆಡ್​ಲೈನ್​; ಕರ್ನಾಟಕದಲ್ಲಿ ಎಷ್ಟು ಮಂದಿ ಇದ್ದಾರೆ..?

ಕೇವಲ ಹಿಂದೂಗಳನ್ನೇ ಟಾರ್ಗೆಟ್​ ಪ್ರವಾಸಿಗರನ್ನು ಕ್ರೂರವಾಗಿ ಹತ್ಯೆಗೈದ್ದರು ಪಾಕಿಸ್ತಾನಿ ಉಗ್ರರ ದಾಳಿಯ ಬಳಿಕ ಭಾರತ ಸರ್ಕಾರ 10 ಪ್ರಮುಖ ತೀರ್ಮಾನ ಕೈಗೊಂಡಿದೆ. ತನ್ನ 10 ತೀರ್ಮಾನಗಳಿಂದ ಭಾರತ ಸರ್ಕಾರ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದೆ.

ಹಾಗಾದರೇ, ಭಾರತ ಕೈಗೊಂಡ ಆ 10 ತೀರ್ಮಾನಗಳೇನು ಗೊತ್ತಾ?

1- ಇಂಡಸ್ ನದಿ ನೀರು ಹಂಚಿಕೆ ಒಪ್ಪಂದ ಸಸ್ಪೆಂಡ್
2- ಪಾಕ್ ರಾಯಭಾರಿಗಳಿಗೆ ನೀಡಿದ್ದ ಕಾನೂನಿನ ರಕ್ಷಣೆಯ ವಿನಾಯಿತಿ ರದ್ದು, ರಾಯಭಾರ ಕಚೇರಿ ಸಿಬ್ಬಂದಿಯ ಕಡಿತ
3-ಪಾಕ್ ನಾಗರಿಕರಿಗೆ ನೀಡಿದ್ದ ಎಲ್ಲ ವೀಸಾ ರದ್ದು. ಏಪ್ರಿಲ್ 27ರೊಳಗೆ ಪಾಕ್​ಗೆ ವಾಪಸ್ ಹೋಗಲು ಸೂಚನೆ, ಮೆಡಿಕಲ್ ವೀಸಾದಲ್ಲಿ ಬಂದವರಿಗೆ ಏಪ್ರಿಲ್ 29ರೊಳಗೆ ವಾಪಸ್ ಹೋಗಲು ಸೂಚನೆ
4-ಅಟ್ಟಾರಿ ಚೆಕ್ ಪೋಸ್ಟ್ ಬಂದ್ ಮಾಡಿ, ಸರಕು ಸಾಗಣೆ ಬಂದ್ ಮಾಡಿದ ಭಾರತ ಸರ್ಕಾರ
5-ಭಾರತದ ನೌಕಾಪಡೆಯಿಂದ ಮಿಸೈಲ್ ಪರೀಕ್ಷೆ, ವಾಯುಪಡೆಯಿಂದ ಆಕ್ರಮಣ್ ಸಮರಾಭ್ಯಾಸ
6-ಸೇನೆಗೆ ಧ್ರುವ ಹೆಲಿಕಾಪ್ಟರ್ ಅನ್ನು ಭಯೋತ್ಪಾದನಾ ವಿರುದ್ಧದ ಕಾರ್ಯಾಚರಣೆಗೆ ಬಳಕೆಗೆ ಅನುಮತಿ
7-ಅಟ್ಟಾರಿ - ವಾಘಾ ಬಾರ್ಡರ್​ನಲ್ಲಿ ಬೀಟಿಂಗ್ ರೀಟ್ರೀಟ್ ಕಡಿತ, ಪಾಕ್ ಸೈನಿಕರ ಜೊತೆ ಕೈ ಕುಲುಕದ ಭಾರತದ ಸೈನಿಕರು
8-ಭಾರತ- ಪಾಕ್ ಗಡಿಯಲ್ಲಿ ನಾಗರಿಕರ ಓಡಾಟಕ್ಕೆ ನಿರ್ಬಂಧ
9--ದೆಹಲಿಯಲ್ಲಿ ಸರ್ವಪಕ್ಷ ಸಭೆ ನಡೆಸಿ, ಎಲ್ಲ ಪಕ್ಷಗಳ ಬೆಂಬಲ ಪಡೆದ ಕೇಂದ್ರ ಸರ್ಕಾರ
10--ಎಲ್ಲ ರಾಜ್ಯಗಳ ಸಿಎಂಗಳ ಜೊತೆಗೆ ಮಾತನಾಡಿ ಪಾಕ್ ನಾಗರಿಕರನ್ನು ವಾಪಸ್ ಕಳಿಸಲು ಸೂಚಿಸಿದ ಅಮಿತ್ ಶಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment