newsfirstkannada.com

×

ವಿರಾಟ್​ ಕೊಹ್ಲಿ, ಪಂತ್ ಬೋಲ್ಡ್​, ಗಿಲ್, ಅಶ್ವಿನ್ LBW; ಸಂಕಷ್ಟದಲ್ಲಿ ಟೀಮ್ ಇಂಡಿಯಾ

Share :

Published October 25, 2024 at 11:43am

Update October 25, 2024 at 11:46am

    ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ ಭಾರತದ ಪ್ಲೇಯರ್ಸ್

    ವಿರಾಟ್​ ಕೊಹ್ಲಿರನ್ನ ಬೋಲ್ಡ್ ಮಾಡಿದ ನ್ಯೂಜಿಲೆಂಡ್​ನ ಸ್ಯಾಂಟ್ನರ್

    ಕಿವೀಸ್ ಬೌಲರ್ಸ್​ ಮುಂದೆ ಟೀಮ್ ಇಂಡಿಯಾ ಆಟ ನಡೆಯಲಿಲ್ಲ

ಪುಣೆಯಲ್ಲಿ ನಡೆಯುತ್ತಿರುವ 2ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ಕೇವಲ 103 ರನ್​ಗೆ ರೋಹಿತ್, ಗಿಲ್, ವಿರಾಟ್​ ಕೊಹ್ಲಿ ಸೇರಿದಂತೆ 7 ವಿಕೆಟ್​ಗಳನ್ನ ಕಳೆದುಕೊಂಡಿದೆ.

ಇದನ್ನೂ ಓದಿ: IND vs NZ; ವಾಷಿಂಗ್ಟನ್ ಸ್ಪಿನ್​ ಮ್ಯಾಜಿಕ್​ಗೆ ಮಕಾಡೆ ಮಲಗಿದ ಕಿವೀಸ್.. 7 ವಿಕೆಟ್ ಉರುಳಿಸಿದ ಸುಂದರ್

ಇಂದು 16 ರನ್​ಗಳಿಂದ ಬ್ಯಾಟಿಂಗ್ ಮುಂದುವರೆಸಿದ್ದ ಟೀಮ್ ಇಂಡಿಯಾ ತಂಡದ ಮೊತ್ತ 80 ಆಗುವಷ್ಟರಲ್ಲಿ 5 ವಿಕೆಟ್​ಗಳನ್ನು ಕಳೆದುಕೊಂಡಿದೆ. ಮೊದಲ ದಿನದ ಕೊನೆಯಲ್ಲಿ ರೋಹಿತ್ ಶರ್ಮಾ ಅವರೊಬ್ಬರೇ ಔಟ್ ಆಗಿದ್ದರು. ಆದರೆ ಇಂದು ಬೆಳಗ್ಗೆಯೇ ಭಾರತದ 6 ವಿಕೆಟ್ ಕಳೆದುಕೊಂಡಿದೆ. ಇವತ್ತಿಗೆ ಕ್ರೀಸ್​ ಕಾಯ್ದುಕೊಂಡಿದ್ದ ಯಶಸ್ವಿ ಜೈಸ್ವಾಲ್ 30, ಶುಭ್​ಮನ್ ಗಿಲ್ 30 ರನ್​ ಗಳಿಸಿ ಔಟ್ ಆದರು.

ಇದನ್ನೂ ಓದಿ: ನಾಮಪತ್ರಕ್ಕೆ ಕೊನೇ ದಿನ; ನಿಖಿಲ್ ಸೇರಿ ಇಂದು ಯಾರು ಯಾರು ಉಮೇದುವಾರಿಕೆ ಸಲ್ಲಿಸ್ತಾರೆ?

ಶುಭ್​ಮನ್ ಗಿಲ್ ಔಟ್ ಆದ ಮೇಲೆ ಬ್ಯಾಟಿಂಗ್ ಮಾಡಲು ಬಂದ ವಿರಾಟ್ ಕೊಹ್ಲಿ ಬಹಳ ಹೊತ್ತು ನಿಲ್ಲಲಿಲ್ಲ. ಒಂದೇ ಒಂದು ರನ್​ ಗಳಿಸಿ ವಿರಾಟ್​ ಆಡುವಾಗ ಸ್ಯಾಂಟ್ನರ್ ಬೌಲಿಂಗ್​​ನಲ್ಲಿ ಕ್ಲೀನ್ ಬೋಲ್ಡ್​ ಆದರು. ಈ ವೇಳೆ ಸ್ಯಾಂಟ್ನರ್ ವಿಕೆಟ್ ಪಡೆದು ಸಂಭ್ರಮಿಸಿದರು. ಕೊಹ್ಲಿ ಪುಣೆಯಲ್ಲಿ ಆಡುತ್ತಾರೆಂದು ನಿರೀಕ್ಷೆ ಇಟ್ಟುಕೊಂಡಿದ್ದ ಫ್ಯಾನ್ಸ್​ಗೆ ಇದರಿಂದ ಸಾಕಷ್ಟು ನಿರಾಸೆ ಆಯಿತು. ಇನ್ನು ವಿಕೇಟ್ ಕೀಪರ್ ರಿಷಬ್ ಪಂತ್ ಕಳೆದ ಮ್ಯಾಚ್​ನಲ್ಲಿ ಆಡಿದಂತೆ ಈ ಬಾರಿಯು ಬ್ಯಾಟಿಂಗ್ ಮಾಡುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಪಂತ್ ಕೇವಲ 18 ರನ್​ಗೆ ಕ್ಲೀನ್ ಬೋಲ್ಡ್ ಆದರು.

ಸರ್ಫರಾಜ್ ಖಾನ್ ಏನಾದರೂ ಮ್ಯಾಜಿಕ್ ಮಾಡುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಸರ್ಫರಾಜ್ ಕೇವಲ 11 ರನ್​ಗೆ ಕ್ಯಾಚ್ ನೀಡಿ, ಪೆವಿಲಿಯನ್​ಗೆ ನಡೆದರು. ಇವರ ಬೆನ್ನಲ್ಲೇ ಆರ್​.ಆಶ್ವಿನ್​ ಕೂಡ ಎಲ್​ಬಿಗೆ ಬಲಿಯಾದರು. ಸದ್ಯ ಭಾರತ ಮೊದಲ ಇನ್ನಿಂಗ್ಸ್​ನ ಲಂಚ್ ಬ್ರೇಕ್​ ವೇಳೆಗೆ 107 ರನ್​ಗೆ 7 ವಿಕೆಟ್​ಗಳನ್ನ ಕಳೆದುಕೊಂಡಿದೆ. ಮಹಾರಾಷ್ಟ್ರ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತದ ಜೊತೆ ನ್ಯೂಜಿಲೆಂಡ್ ಮತ್ತೆ ಮೇಲುಗೈ ಸಾಧಿಸುವ ಲಕ್ಷಣಗಳು ಕಾಣುತ್ತಿವೆ. ಕಿವೀಸ್  100ಕ್ಕೂ ಹೆಚ್ಚು ರನ್​ಗಳನ್ನ ಲೀಡ್ ಪಡೆಯಬಹುದು. ಕಿವೀಸ್ ಪರ ಮಿಚೆಲ್ ಸ್ಯಾಂಟ್ನರ್ 4 ವಿಕೆಟ್ ಪಡೆದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿರಾಟ್​ ಕೊಹ್ಲಿ, ಪಂತ್ ಬೋಲ್ಡ್​, ಗಿಲ್, ಅಶ್ವಿನ್ LBW; ಸಂಕಷ್ಟದಲ್ಲಿ ಟೀಮ್ ಇಂಡಿಯಾ

https://newsfirstlive.com/wp-content/uploads/2024/10/KOHLI-1-1.jpg

Load More