ಆಪರೇಷನ್ ಸಿಂಧೂರ್​ಗೆ ಬಳಸಿದ್ದು ಅಂತಿಂಥ ಕ್ಷಿಪಣಿ ಅಲ್ಲವೇ ಅಲ್ಲ.. ಸ್ಕಾಲ್ಪ್​ ಮಿಸೈಲ್ ತಾಕತ್ತು ಏನು..?

author-image
Ganesh
Updated On
ಆಪರೇಷನ್ ಸಿಂಧೂರ್​ಗೆ ಬಳಸಿದ್ದು ಅಂತಿಂಥ ಕ್ಷಿಪಣಿ ಅಲ್ಲವೇ ಅಲ್ಲ.. ಸ್ಕಾಲ್ಪ್​ ಮಿಸೈಲ್ ತಾಕತ್ತು ಏನು..?
Advertisment
  • ರಫೇಲ್ ಫೈಟರ್ ಜೆಟ್​ಗೆ ಸ್ಕಾಲ್ಪ್ ಮಿಸೈಲ್ ಜೋಡಿಸಿ ದಾಳಿ
  • ಸ್ಕಾಲ್ಪ್​ ಮಿಸೈಲ್​ನಿಂದ ಹೆಚ್ಚಿನ ಹಾನಿಯಾಗೋದು ಖಚಿತ
  • ಸ್ಕಾಲ್ಪ್ ಕ್ರೂಸ್​ ಮಿಸೈಲ್ 1,300 ಕೆಜಿ ತೂಕ ಹೊಂದಿರುತ್ತವೆ

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ನಡೆಸಿದೆ. ಪಾಕಿಸ್ತಾನದಲ್ಲಿರುವ ಒಟ್ಟು 9 ಭಯೋತ್ಪಾದಕ ಅಡಗುತಾಣಗಳ ಮೇಲೆ ಅಟ್ಯಾಕ್ ಮಾಡಲಾಗಿದ್ದು, 80ಕ್ಕೂ ಹೆಚ್ಚು ಭಯೋತ್ಪಾದಕರು ಜೀವ ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ಮಾಡಿದೆ. ಭಾರತೀಯ ಸೇನೆ ಹಾಗೂ ಭಾರತೀಯ ವಾಯುಪಡೆ ಜಂಟಿಯಾಗಿ ಆಪರೇಷನ್ ಸಿಂಧೂರ್​ ನಡೆದಿದೆ. ಮುರೀದ್ಕೆ, ಮುಜಾಫರ್​ಬಾದ್, ಬಹಾವಲ್​ಪುರ್, ಕೋಟ್ಲಿ, ಚಾಕ್​ಅಮ್ರು, ಗುಲ್​ಪುರ್, ಭಿಂಬರ್​ ಪ್ರದೇಶಗಳಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿಯಾಗಿದೆ.

ಇದನ್ನೂ ಓದಿ: 26 ಅಮಾಯಕ ಹೆಣ್ಮಕ್ಕಳ ಸಿಂಧೂರ ಅಳಿಸಿದ ಪ್ರತೀಕಾರವೇ ‘ಆಪರೇಷನ್ ಸಿಂಧೂರ..’

publive-image

ಇನ್ನು ಭಾರತೀಯ ವಾಯುಪಡೆಯು ರಫೇಲ್‌ ಜೆಟ್​ ಯುದ್ಧ ವಿಮಾನದ ಮೂಲಕ ಸ್ಕಲ್ಪ್ ಕ್ಷಿಪಣಿಯನ್ನು ಉಡಾಯಿಸಿದೆ. ವಿಶೇಷ ಅಂದರೆ ಹಫೀಜ್ ಸಯೀದ್ ಅಡಗುತಾಣದ ಮೇಲೆ ಅಟ್ಯಾಕ್ ಮಾಡಲಾಗಿದೆ. ಪಾಕಿಸ್ತಾನಕ್ಕೆ ಚೀನಾ ನೀಡಿದ್ದ ಜೆಫ್​-17 ಯುದ್ಧ ವಿಮಾನವನ್ನ ಹೊಡೆದುರುಳಿಸಲಾಗಿದೆ.

ಸ್ಕಾಲ್ಪ್ ಕ್ಷಿಪಣಿ ಎಂದರೇನು?

SCALP ಕ್ಷಿಪಣಿ ಫ್ರಾನ್ಸ್ ಮತ್ತು ಯುಕೆ ತಯಾರಿಸಿದ ಕ್ಷಿಪಣಿ. ಇದು ದೀರ್ಘ-ಶ್ರೇಣಿಯ (Long range) ವಾಯು-ಉಡಾವಣಾ ಕ್ರೂಸ್ ಕ್ಷಿಪಣಿ. ಈ ಕ್ಷಿಪಣಿಯ ಪೂರ್ಣ ಹೆಸರು ಸ್ಟ್ರೈಕ್ ಏರ್-ಲಾಂಚ್ಡ್ ಕ್ರೂಸ್ ಕ್ಷಿಪಣಿ. ಈ ಕ್ಷಿಪಣಿಯನ್ನು ಬ್ರಿಟನ್​​ನಲ್ಲಿ ಸ್ಟಾರ್ಮ್ ಶ್ಯಾಡೋ ಮತ್ತು ಫ್ರಾನ್ಸ್‌ನಲ್ಲಿ SCALP-EG ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಏರ್​ಸ್ಟ್ರೈಕ್ ಮಾಡಿದ್ದು ಎಷ್ಟು ಗಂಟೆಗೆ..? ಆ 23 ನಿಮಿಷದಲ್ಲಿ ಏನೆಲ್ಲ ಆಯ್ತು.. ಕಂಪ್ಲೀಟ್ ಟೈಮ್​ಲೈನ್ ಇಲ್ಲಿದೆ..!

ವಾಸ್ತವವಾಗಿ ಇವೆರಡೂ ಒಂದೇ ರೀತಿಯ ಕ್ಷಿಪಣಿಗಳು. ಇದರ ಸಾಫ್ಟ್‌ವೇರ್ ಮತ್ತು ಇಂಟರ್ಫೇಸ್‌ನಲ್ಲಿ ಕೊಂಚ ವ್ಯತ್ಯಾಸ ಇದೆ. ಈ ಕ್ಷಿಪಣಿಯನ್ನು ಸುರಕ್ಷಿತ ದೂರದಿಂದ ವಾಯುನೆಲೆಗಳು ಮತ್ತು ಬಂಕರ್‌ಗಳಂತಹ ಟಾರ್ಗೆಟ್​ ಮೇಲೆ ದಾಳಿ ಮಾಡಲು ವಿನ್ಯಾಸಗೊಳಿಸಲಾಗಿದೆ.

ಸ್ಕಾಲ್ಪ್ ಮಿಸೈಲ್ ನ ವಿಶೇಷತೆಗಳೇನು ?

  • ಸ್ಕಾಲ್ಪ್ ಮಿಸೈಲ್​ 550 ಕಿಮೀವರೆಗೂ ದಾಳಿ ನಡೆಸುವ ಸಾಮರ್ಥ್ಯ
  •  ರಫೇಲ್ ಫೈಟರ್ ಜೆಟ್​ಗೆ ಸ್ಕಾಲ್ಪ್ ಮಿಸೈಲ್ ಜೋಡಿಸಿ ದಾಳಿ
  •  ಪ್ರಾನ್ಸ್​ನಿಂದ ಖರೀದಿಸಿರುವ ಸ್ಕಾಲ್ಪ್ ಮಿಸೈಲ್ ಅಟ್ಯಾಕ್
  •  ಸ್ಕಾಲ್ಪ್​ ಮಿಸೈಲ್​ನಿಂದ ಹೆಚ್ಚಿನ ಹಾನಿಯಾಗೋದು ಖಚಿತ
  •  ಸ್ಕಾಲ್ಪ್ ಕ್ರೂಸ್​ ಮಿಸೈಲ್ 1,300 ಕೆಜಿ ತೂಕ ಹೊಂದಿರುತ್ತವೆ

ಇದನ್ನೂ ಓದಿ: ಸಿಂಧೂರ ಅಳಿಸಿ ಮೋದಿಗೆ ಹೇಳು ಎಂದಿದ್ದ ಉಗ್ರ.. ‘ಆಪರೇಷನ್ ಸಿಂಧೂರ’ ಮೂಲಕ ಭಾರತ ಉತ್ತರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment