newsfirstkannada.com

ಅಫ್ಘಾನ್ ವಿರುದ್ಧದ ಅಖಾಡದಲ್ಲಿ ಕೊಹ್ಲಿ ಆಡೋದು ಕನ್ಫರ್ಮ್.. ಈ ಮೂವರಲ್ಲಿ ಹೊರಗೆ ಹೋಗೋದ್ಯಾರು?

Share :

Published January 13, 2024 at 11:38am

    ಟಿ20 ತಂಡದಿಂದ ಹೊರಬಿದ್ದಿದ್ದ ವಿರಾಟ್​ ಕೊಹ್ಲಿ ಈಗ ಕಮ್​ಬ್ಯಾಕ್​

    ವಿರಾಟ್​ಗಾಗಿ ಸ್ಥಾನ ತ್ಯಜಿಸೋದು ಯಾರು ಅನ್ನೋದೇ ದೊಡ್ಡ ಪ್ರಶ್ನೆ

    ಶುಭ್​ಮನ್​ ಗಿಲ್​ ಸೇರಿ ಈ ಇಬ್ಬರಿಗೂ ಸ್ಟಾರ್ಟ್ ಆಯಿತು ಸಂಕಷ್ಟ?

ಇಂಡೋ-ಅಫ್ಘಾನ್​​ 2ನೇ ಟಿ20 ಫೈಟ್​ಗೆ ವೇದಿಕೆ ಸಜ್ಜಾಗಿದೆ. ಮೊಹಾಲಿಯಲ್ಲಿ ಅಬ್ಬರದ ಜಯ ಸಾಧಿಸಿದ ಟೀಮ್​ ಇಂಡಿಯಾ, ಇಂದೋರ್​ನಲ್ಲೂ ಆರ್ಭಟಿಸೋ ಇರಾದೆಯಲ್ಲಿದೆ. ಕಿಂಗ್​ ಕೊಹ್ಲಿಯ ಕಮ್​ಬ್ಯಾಕ್​ ತಂಡದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಇದೇ ಕೊಹ್ಲಿಯ ಎಂಟ್ರಿ ಮತ್ತೆ ಸೆಲೆಕ್ಷನ್​ ಡಿಬೇಟ್​ಗೆ ಕಾರಣವಾಗಿದೆ.

14 ತಿಂಗಳುಗಳ ವನವಾಸಕ್ಕೆ ಬ್ರೇಕ್​ ಹಾಕಲು ಕಿಂಗ್​ ಕೊಹ್ಲಿ ತುದಿಗಾಲಲ್ಲಿ ನಿಂತಿದ್ದಾರೆ. 2022ರ ಟಿ20 ವಿಶ್ವಕಪ್​ ಬಳಿಕ ಟೂರ್ನಿಯ ಬಳಿಕ ಟಿ20 ತಂಡದಿಂದಲೇ ಹೊರಬಿದ್ದಿದ್ದ ವಿರಾಟ್​ ಕೊಹ್ಲಿಯ ಕಮ್​ಬ್ಯಾಕ್​ಗೆ ಸಜ್ಜಾಗಿದ್ದಾರೆ. ಅಫ್ಘಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ವಿರಾಟ್​ ಕಣಕ್ಕಿಳಿಯಲು ದಿಗ್ಗಜ ಕ್ರಿಕೆಟರ್​ ಸಜ್ಜಾಗಿದ್ದು, ಕೊಹ್ಲಿಯ ಕಮ್​​ಬ್ಯಾಕ್​ ಯುವ ಆಟಗಾರರಿಗೆ ಟೆನ್ಶನ್​ ತಂದಿಟ್ಟಿದೆ.

ಒಬ್ಬ ಕೊಹ್ಲಿ, ಮೂವರ ಸ್ಥಾನಕ್ಕೆ ಎದುರಾಯ್ತು ಕುತ್ತು.!

ಅಫ್ಘಾನಿಸ್ತಾನ ಎದುರಿನ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಟೀಮ್​ ಇಂಡಿಯಾ ಮುಂದೆ ಇದೀಗ ದೊಡ್ಡ ಪ್ರಶ್ನೆ ಎದುರಾಗಿದೆ. ವೈಯಕ್ತಿಕ ಕಾರಣದಿಂದ ಮೊದಲ ಟಿ20 ಕದನದಿಂದ ಹೊರಗುಳಿದಿದ್ದ ವಿರಾಟ್​ ಕೊಹ್ಲಿ, 2ನೇ ಟಿ20 ಪಂದ್ಯಕ್ಕೆ ಕಮ್​​ಬ್ಯಾಕ್​ ಸಜ್ಜಾಗಿದ್ದಾರೆ. ಇಂದೋರ್​ನಲ್ಲಿ ಚುಟುಕು ಸಮರದಲ್ಲಿ ವಿರಾಟ್​ ಕೊಹ್ಲಿ ಕಣಕ್ಕಿಳಿಯೋದು ಕನ್​ಫರ್ಮ್​. ಆದ್ರೆ, ವಿರಾಟ್​ಗಾಗಿ ಸ್ಥಾನ ತ್ಯಜಿಸೋದು ಯಾರು ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ.

ವಿರಾಟ್​ ಕೊಹ್ಲಿ ಎಂಟ್ರಿ, ತಿಲಕ್​ ವರ್ಮಾಗೆ ಕೊಕ್​.?

ವಿರಾಟ್​ ಕೊಹ್ಲಿ ಪ್ಲೇಯಿಂಗ್​ ಇಲೆವೆನ್​ನಲ್ಲಿ ಕಾಣಿಸಿಕೊಳ್ಳೋದ್ರಲ್ಲಿ ಯಾವುದೇ ಅನುಮಾನವಿಲ್ಲ. ತಮ್ಮ ಖಾಯಂ ಸ್ಲಾಟ್​ 3ನೇ ಕ್ರಮಾಂಕದಲ್ಲಿ ವಿರಾಟ್​ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ ಇಂಪ್ಲೆಸ್ಸಿವ್​ ಪರ್ಫಾಮೆನ್ಸ್​ ನೀಡುವಲ್ಲಿ ವಿಫಲರಾದ ತಿಲಕ್​ ವರ್ಮಾ ಹೊರ ಬಿಳೋದು ಪಕ್ಕಾ.

ಮೊದಲ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ತಿಲಕ್​ ವರ್ಮಾ 22 ಎಸೆತಗಳಲ್ಲಿ 26 ರನ್​ಗಳಿಸಿದ್ರು. ಆದ್ರೆ, 4ನೇ ಕ್ರಮಾಂಕದಲ್ಲಿ ಆಡಿದ ಶಿವಂ ದುಬೆ ಅಬ್ಬರದ 60 ರನ್​ ಸಿಡಿಸಿದ್ರು. ಹೀಗಾಗಿ ಪರ್ಫಾಮೆನ್ಸ್​ ಆಧಾರದಲ್ಲೂ ತಿಲಕ್​ ವರ್ಮಾಗೆ ಸ್ಥಾನ ಸಿಗೋದು ಅನುಮಾನವೇ ಆಗಿದೆ.

ಆರಂಭಿಕನಾಗಿ ಕಣಕ್ಕಿಳೀತಾರಾ ವಿರಾಟ್ ಕೊಹ್ಲಿ.?

ವಿಶ್ವಕಪ್​ ಟೂರ್ನಿಗೆ ಸಿದ್ಧತೆ ಆರಂಭಿಸಿರುವ ಟೀಮ್​ ಇಂಡಿಯಾ ವಿರಾಟ್​ ಕೊಹ್ಲಿಯನ್ನ ಆರಂಭಿಕನ ಸ್ಲಾಟ್​ನಲ್ಲಿ ಪ್ರಯೋಗಿಸೋ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಓಪನರ್​ ಆಗಿ ವಿರಾಟ್​ ಸಕ್ಸಸ್​ ಕಂಡಿದ್ದಾರೆ. ಹೀಗಾಗಿ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿಯನ್ನ ಆರಂಭಿಕರನ್ನಾಗಿ ಕಣಕ್ಕಿಳಿಸಲು ಟೀಮ್​ ಮ್ಯಾನೇಜ್​ಮೆಂಟ್​ ಮುಂದಾದರೂ ಆಗಬಹುದು. ಕೊಹ್ಲಿ ಒಪನರ್​ ಆಗಿ ಕಣಕ್ಕಿಳಿದ್ರೆ, ಶುಭಮನ್​ ಗಿಲ್​ ಅಥವಾ ಯಶಸ್ವಿ ಜೈಸ್ವಾಲ್​ ಸ್ಥಾನ ತ್ಯಜಿಸಬೇಕಾಗುತ್ತೆ.

ಯುವ ಆಟಗಾರರ ವಿಶ್ವಕಪ್​ ಕನಸಿಗೂ ಕೊಹ್ಲಿ ಅಡ್ಡಿ.!

ಯಶಸ್ವಿ ಜೈಸ್ವಾಲ್​, ಶುಭ್​ಮನ್​ ಗಿಲ್​, ತಿಲಕ್​ ವರ್ಮಾ ಕಳೆದೊಂದು ವರ್ಷದಿಂದ ಟಿ20 ತಂಡದ ಖಾಯಂ ಸ್ಥಾನಿಗಳಾಗಿದ್ದಾರೆ. ಇವ್ರ ಜೊತೆಗೆ ಋತುರಾಜ್​ ಗಾಯಕ್ವಾಡ್​ ಕೂಡ ತಂಡದ ಭಾಗವಾಗಿದ್ದಾರೆ. ಇವರೆಲ್ಲರೂ ಟಿ20 ವಿಶ್ವಕಪ್​ ಟೂರ್ನಿಯನ್ನಾಡೋ ಕನಸು ಕಂಡಿದ್ರು. ಆದ್ರೆ, ಇದೀಗ ವಿರಾಟ್​ ಕೊಹ್ಲಿಯ ಎಂಟ್ರಿ ಇವರ ವಿಶ್ವಕಪ್​ ಕನಸಿಗೂ ಅಡ್ಡಿಯಾಗಿದೆ. ಕೊಹ್ಲಿ, ವಿಶ್ವಕಪ್​ ಆಡೋದು ಕನ್​ಫರ್ಮ್​, ಕೊಹ್ಲಿಗಾಗಿ ಸ್ಥಾನ ತ್ಯಜಿಸೋದ್ಯಾರು ಅನ್ನೋದೆ ಪ್ರಶ್ನೆಯಾಗಿದೆ.

ವಿರಾಟ್​ ಕೊಹ್ಲಿಯ ಎಂಟ್ರಿ ಟೀಮ್​ ಇಂಡಿಯಾಗೆ ಬಲ ತುಂಬಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ, ಕೊಹ್ಲಿಗಾಗಿ ಟ್ಯಾಲೆಂಟೆಡ್ ಯುವ ಆಟಗಾರರೊಬ್ಬರ ಸ್ಥಾನ ಕಳೆದುಕೊಳ್ಳಬೇಕಿದೆ. ಆ ಯುವ ಆಟಗಾರ ಯಾರು.? ಆತನ ಭವಿಷ್ಯ ಏನಾಗುತ್ತೆ.? ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಫ್ಘಾನ್ ವಿರುದ್ಧದ ಅಖಾಡದಲ್ಲಿ ಕೊಹ್ಲಿ ಆಡೋದು ಕನ್ಫರ್ಮ್.. ಈ ಮೂವರಲ್ಲಿ ಹೊರಗೆ ಹೋಗೋದ್ಯಾರು?

https://newsfirstlive.com/wp-content/uploads/2024/01/VIRAT_KOHLI-12.jpg

Load More