newsfirstkannada.com

ಎರಡೆರಡು ಸೂಪರ್ ಓವರ್ ಮ್ಯಾಚ್​.. ಅಫ್ಘಾನ್ ವಿರುದ್ಧ ರೋಚಕವಾಗಿ ಗೆದ್ದ ಭಾರತ..!

Share :

Published January 18, 2024 at 11:03am

  ಜೈಸ್ವಾಲ್​ 4 ​​​​​​​​​​​​​​​, ​ಶಿವಂ ದುಬೆ 1 ರನ್​ಗೆ ಔಟ್​

  ವಿರಾಟ್​ ಕೊಹ್ಲಿ, ಸಂಜು ಸ್ಯಾಮ್ಸನ್​​ ಡಕೌಟ್​

  22 ರನ್​​ಗೆ 4 ವಿಕೆಟ್ ಇನ್ನಿಂಗ್ಸ್​ ಅಂತ್ಯಕ್ಕೆ 212/4

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎಕ್ಸಪೆಕ್ಟೇಷನ್​ನಲ್ಲಿ ಇನ್ನಿಂಗ್ಸ್​ ಆರಂಭಿಸಿದ ಟೀಮ್ ಇಂಡಿಯಾ 22 ರನ್​ಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಫ್ಯಾನ್ಸ್​ಗೆ ಭಾರೀ ನಿರಾಸೆ ಮೂಡಿಸಿತ್ತು. ಬ್ಯಾಟರ್​ಗಳ ಪೆವಿಲಿಯನ್ ಪರೇಡ್​ಗೆ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಾಗಿತ್ತು. ಈ ವೇಳೆ ತಂಡಕ್ಕೆ ಆಸರೆಯಾಗಿ ನಿಂತಿದ್ದು ರೋಹಿತ್ ಶರ್ಮಾ ಆ್ಯಂಡ್ ರಿಂಕು ಸಿಂಗ್.

ರೋಹಿತ್, ರಿಂಕು ರೋರಿಂಗ್.. ಅಫ್ಘನ್​ಗೆ ಅಫಾತ

5ನೇ ವಿಕೆಟ್​​ಗೆ ಜೊತೆಯಾದ ರೋಹಿತ್​ ಹಾಗೂ ರಿಂಕು ಸಿಂಗ್, ಜವಾಬ್ದಾರಿಯುತ ಇನ್ನಿಂಗ್ಸ್​ ಕಟ್ಟಿದರು. ಆರಂಭದಲ್ಲಿ ಸ್ಲೋ ಆ್ಯಂಡ್ ಸ್ಟಡಿ ಇನ್ನಿಂಗ್ಸ್​ ಕಟ್ಟಿದ ಇವರಿಬ್ಬರು, ನೋಡ ನೋಡುತ್ತಿದ್ದಂತೆ ಅಫ್ಘನ್ ಬೌಲರ್​ಗಳ ಮೇಲೆ ಮುಗಿಬಿದ್ದರು. ಅಷ್ಟ ದಿಕ್ಕುಗಳಿಗೂ ಸಿಕ್ಸರ್​, ಬೌಂಡರಿಗಳ ದರ್ಶನ ಮಾಡಿಸಿದ್ರು. 51 ಎಸೆತಗಳಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ರೋಹಿತ್, ಅಂತಿಮವಾಗಿ​ 69 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್​ ಒಳಗೊಂಡ ಅಜೇಯ 121 ರನ್ ಸಿಡಿಸಿದರು.

ಮತ್ತೊಂದು ತುದಿಯಲ್ಲಿ ರೋಹಿತ್​ಗೆ ಉತ್ತಮ ಸಾಥ್ ನೀಡಿದ ರಿಂಕು ಸಿಂಗ್, 39 ಎಸೆತಗಳಲ್ಲಿ 2 ಬೌಂಡರಿ, 6 ಸಿಕ್ಸರ್​ ಒಳಗೊಂಡ 69 ರನ್ ಚಚ್ಚಿದ್ರು. ಮುರಿಯದ 5ನೇ ವಿಕೆಟ್​ಗೆ ದಾಖಲೆಯ 190 ರನ್​​ಗಳ ಜೊತೆಯಾಟವಾಡಿದರು. ಇದರೊಂದಿಗೆ ಟೀಮ್ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್ ಪೇರಿಸಿತು.

ಅಫ್ಘನ್ ಕೆಚ್ಚೆದೆಯ ಹೋರಾಟ.. ಪಂದ್ಯ ರೋಚಕ ಟೈ

213 ರನ್​​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಅಫ್ಘನ್ ತಂಡಕ್ಕೆ ಆರಂಭಿಕರಾದ ಗುರ್ಬಾಜ್, ಇಬ್ರಾಹಿಂ ಜದ್ರಾನ್ ಉತ್ತಮ ಅಡಿಪಾಯ ಹಾಕಿದ್ರು. ತಲಾ ಅರ್ಧಶತಕ ಸಿಡಿಸಿದ ಈ ಜೋಡಿ, ಗೆಲುವಿನ ಆಸೆ ಚಿಗುರಿಸಿದರು. ಈ ವೇಳೆ ಸ್ಪಿನ್ ಟ್ರ್ಯಾಪ್​ಗೆ ಬಿದ್ದ ಗುರ್ಬಾಜ್, 50 ರನ್​ ಗಳಿಸಿದ ಬೆನ್ನಲ್ಲೇ ವಿಕೆಟ್ ಒಪ್ಪಿಸಿ ಹೊರ ನಡೆದ್ರೆ, ಸಂಜು ಸ್ಯಾಮ್ಸನ್​ರ ಅದ್ಭುತ ಸ್ಟಂಪಿಂಗ್​ಗೆ ಇಬ್ರಾಹಿಂ ಪೆವಿಲಿಯನ್ ಸೇರಿದರು.

ಈ ಬೆನ್ನಲ್ಲೇ ಬಂದ ಅಜ್ಮಾತ್ತುಲ್ಲಗೆ ಸುಂದರ್ ಪೆವಿಲಿಯ್​​ಗೆ ದಾರಿ ತೋರಿದ್ರೆ. ಮೊಹಮ್ಮದ್ ನಬಿ ಸ್ಪೋಟಕ 34 ರನ್ ಸಿಡಿಸಿದ್ರು. ಒಂದ್ಕಡೆ ವಿಕೆಟ್ ಉರುಳುತ್ತಿದ್ದರು ಕೆಚ್ಚೆದೆಯ ಹೋರಾಟ ನಡೆಸಿದ ಗುಲ್ಬದ್ದೀನ್, 23 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್​ ಒಳಗೊಂಡ 55 ರನ್ ಚಚ್ಚಿದರು. ಅದರಲ್ಲೂ ಕೊನೆ 6 ಎಸೆತದಲ್ಲಿ 19 ರನ್​ ಬೇಕಿದ್ದಾಗ 18 ರನ್ ಸಿಡಿಸಿದ ಗುಲ್ಬದ್ದೀನ್, ಪಂದ್ಯ ಟೈ ಆಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದರಿಂದ ಪಂದ್ಯದ ಫಲಿತಾಂಶದ ನಿರ್ಣಯಕ್ಕಾಗಿ ಸೂಪರ್ ಓವರ್ ಮೊರೆ ಹೋಗಬೇಕಾಯ್ತು.

ಸೂಪರ್ ಓವರ್​ನಲ್ಲಿ ಭಾರತಕ್ಕೆ 17 ರನ್ ಟಾರ್ಗೆಟ್

ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನ್​ ತಂಡವನ್ನು ಟೀಮ್ ಇಂಡಿಯಾ, 16 ರನ್​ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯ್ತು. ಇದರೊಂದಿಗೆ ರೋಹಿತ್ ಪಡೆಗೆ 17 ರನ್​​ಗಳ ಟಾರ್ಗೆಟ್ ಮುಂದಿಡ್ತು.

ಹೈಡ್ರಾಮ.. ಸೂಪರ್​​​ ಓವರ್​ ಟೈನಲ್ಲಿ ಅಂತ್ಯ..!

17 ರನ್​ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಗೆಲ್ಲೋ ವಿಶ್ವಾಸದಲ್ಲಿತ್ತು. ಸತತ ಎರಡು ಸಿಕ್ಸರ್​ ಸಿಡಿಸಿದ ರೋಹಿತ್​​​​​, ಗೆಲುವಿನ ವಿಶ್ವಾಸ ಮೂಡಿಸಿದ್ರು. ಕೊನೆ ಎಸೆತದಲ್ಲಿ 2 ರನ್​ ಗಳಿಸಬೇಕಿತ್ತು. ಕ್ರೀಸ್​ನಲ್ಲಿದ್ದ ಯಶಸ್ವಿ ಜೈಸ್ವಾಲ್, ಒಂದು ರನ್​ ಕದಿಯಲಷ್ಟೇ ಶಕ್ತರಾದರು. ಪರಿಣಾಮ ಸೂಪರ್ ಓವರ್ ಕೂಡ ಟೈನಲ್ಲೇ ಮುಕ್ತಾಯವಾಯ್ತು.

ರೋಹಿತ್ 11 ರನ್.. ಅಫ್ಘನ್​ಗೆ 12 ರನ್ ಟಾರ್ಗೆಟ್

2ನೇ ಸೂಪರ್​​ ಓವರ್​ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಪರ ರೋಹಿತ್ ಹಾಗೂ ರಿಂಕು ಆರಂಭಿಕರಾಗಿ ಕಣಕ್ಕಿಳಿದರು. ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ರೋಹಿತ್, ಮರು ಎಸೆತದಲ್ಲಿ ಬೌಂಡರಿ ಸಿಡಿಸಿದರು. 3ನೇ ಎಸೆತ ಒಂದು ರನ್ ತೆಗೆದುಕೊಂಡ ರೋಹಿತ್, ಮೊದಲ 3 ಎಸೆತಗಳಿಂದ 11 ರನ್ ಕಲೆಹಾಕಿದರು. ಆದ್ರೆ ರಿಂಕು ಕ್ಯಾಚ್ ಔಟ್​, ರೋಹಿತ್ ರನೌಟ್​​ಗೆ ಬೆಲೆ ತ್ತೆತ್ತ ಟೀಮ್ ಇಂಡಿಯಾ 11 ರನ್ ಗಳಿಸಲಷ್ಟೇ ಶಕ್ತವಾಯ್ತು.

ಬಿಷ್ನೋಯಿ ಮ್ಯಾಜಿಕ್​​ಗೆ ಅಫ್ಘನ್ ಪಲ್ಟಿ

12 ರನ್​​ಗೆ ಟಾರ್ಗೆಟ್ ಬೆನ್ನಟ್ಟಿದ್ದ ಅಫ್ಘನ್ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. ರವಿ ಬಿಷ್ನೋಯಿಯ ಮೊದಲ ಎಸೆತದಲ್ಲೇ ಮೊಹಮ್ಮದ್ ನಬಿ ಕ್ಯಾಚ್ ನೀಡಿ ಹೊರ ನಡೆದ್ರೆ. 3ನೇ ಎಸೆತದಲ್ಲಿ ​ ಗುರ್ಬಾಜ್ ಔಟಾದರು. ಇದರೊಂದಿಗೆ ಅಫ್ಘನ್ ಗೆಲುವಿನ ಕನಸು ನುಚ್ಚುನೂರಾಯ್ತು. ಟೀಮ್ ಇಂಡಿಯಾ ಸರಣಿ ಕ್ಲೀನ್​ ಸ್ಪೀಪ್ ಸಾಧನೆ ಮಾಡ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಎರಡೆರಡು ಸೂಪರ್ ಓವರ್ ಮ್ಯಾಚ್​.. ಅಫ್ಘಾನ್ ವಿರುದ್ಧ ರೋಚಕವಾಗಿ ಗೆದ್ದ ಭಾರತ..!

https://newsfirstlive.com/wp-content/uploads/2024/01/TEAM-INDIA-16.jpg

Load More