ಪರ್ತ್​​ ಟೆಸ್ಟ್​ಗೂ ಮುನ್ನವೇ ಬಿಗ್ ಶಾಕ್; ಮೂವರು ದಿಗ್ಗಜರಿಗೆ ಗಾಯ.. ಆಡೋದೇ ಡೌಟ್..!

author-image
Ganesh
Updated On
ಪರ್ತ್​​ ಟೆಸ್ಟ್​ಗೂ ಮುನ್ನವೇ ಬಿಗ್ ಶಾಕ್; ಮೂವರು ದಿಗ್ಗಜರಿಗೆ ಗಾಯ.. ಆಡೋದೇ ಡೌಟ್..!
Advertisment
  • ಪರ್ತ್​ನಲ್ಲಿ ಶಾಟ್ ಪಿಚ್​​ ಬಾಲ್​ಗೆ ಬ್ಯಾಟರ್ಸ್​ ಡ್ಯಾನ್ಸ್
  • ಗಿಲ್ 2 ಗಂಟೆ ಬ್ಯಾಟಿಂಗ್, ಗಳಿಸಿದ್ದು ಕೇವಲ 29 ರನ್..!
  • ನವೆಂಬರ್ 22 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭ

ಹೈವೋಲ್ಟೇಜ್ ಪರ್ತ್​​ ಟೆಸ್ಟ್​ ಪಂದ್ಯಕ್ಕೆ ಬೆರಳೆಣಿಕೆಯಷ್ಟು ದಿನಗಳು ಬಾಕಿ ಉಳಿದಿದೆ. ಆಗಲೇ ಟೀಮ್ ಇಂಡಿಯಾಕ್ಕೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಎದುರಾಗಿವೆ. ಒಂದೆರಡು ಸಮಸ್ಯೆ ಅಂದ್ರೆ ಓಕೆ. ಆದ್ರೆ ಸಾಲು ಸಾಲು ಸಮಸ್ಯೆಗಳು, ಟೀಮ್ ಮ್ಯಾನೇಜ್​ಮೆಂಟ್ ನಿದ್ದೆಗೆಡಿಸಿದೆ.

ಎದುರಾಳಿಗಳ ಮುಖಾಮುಖಿ, ಅಗ್ರೆಶನ್, ಸ್ಲೆಡ್ಜಿಂಗ್, ಕಿರಿಕ್. ಇದೆಲ್ಲಾ ಗೆಲುವಿಗಾಗಿ ಆನ್​ಫೀಲ್ಡ್​ನಲ್ಲಿ ನಡೆಯೋ ಫೈಟ್. MOTHER OF ALL BATTLES ಅಂತ ಕರೆಯೋ ಇಂಡೋ-ಆಸಿಸ್ ಟೆಸ್ಟ್ ಸರಣಿಗೆ ಕೌಂಟ್​ಡೌನ್ ಶುರುವಾಗಿದೆ. ಪ್ರತಿಷ್ಟೆಗಾಗಿ ನಡೆಯೋ ಈ ಮಹಾಯುದ್ಧ ನಡೆಯೋದು ಪರ್ತ್​ನ, ವಾಕಾ ಕ್ರೀಡಾಂಗಣದಲ್ಲಿ. ಪರ್ತ್​ ಯುದ್ಧ ಗೆಲ್ಲಬೇಕಾದ್ರೆ ಎದುರಾಳಿಗಳು ಮಾನಸಿಕ ಹಾಗೂ ದೈಹಿಕವಾಗಿ ಬಲಿಷ್ಟರಾಗಿರಬೇಕು. ಯುದ್ಧಕ್ಕೂ ಮುನ್ನ, ಟೀಮ್ ಇಂಡಿಯಾ ಆಟಗಾರರು ಇವೆರಡನ್ನೂ ಕಳೆದುಕೊಂಡಂತೆ ಕಾಣ್ತಿದ್ದಾರೆ. ಯುದ್ಧ ಗೆಲ್ಲೊಕೆ ವೇಗವಾಗಿ ಹೊರಟ ಭಾರತೀಯರು, ಯುದ್ಧಕ್ಕೂ ಮುನ್ನ ಕುಂಟೋಕೆ ಶುರುಮಾಡಿದ್ದಾರೆ.

ಇದನ್ನೂ ಓದಿ:ಚಹಾಲ್ ಮತ್ತೆ ಆರ್​​ಸಿಬಿಗೆ ಎಂಟ್ರಿ.. ಮ್ಯಾನೇಜ್ಮೆಂಟ್​ನಲ್ಲಿ ಭಾರೀ ಲೆಕ್ಕಾಚಾರ..!

ಕೊಹ್ಲಿಗೆ ಗಾಯ, ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್
ಪರ್ತ್​ನಲ್ಲಿ ಅಭ್ಯಾಸ ಮಾಡ್ತಿದ್ದ ವಿರಾಟ್ ಕೊಹ್ಲಿ, ಇದ್ದಕ್ಕಿದಂತೆ ಎಲ್ಲರಿಗೂ ಶಾಕ್ ನೀಡಿದ್ರು. ನಿಗೂಢ ಗಾಯಕ್ಕೆ ಒಳಗಾದ ವಿರಾಟ್, ಸ್ಥಳಿಯ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ರು. ಗಾಯದ ಬಗ್ಗೆ ನಿಖರ ಮಾಹಿತಿ ಇಲ್ಲ. ಆದ್ರೂ ಕೊಹ್ಲಿ ಸ್ಕ್ಯಾನಿಂಗ್ ವಿಚಾರ, ಟೀಮ್ ಮ್ಯಾನೇಜ್​ಮೆಂಟ್ ಮತ್ತು ಕ್ರಿಕೆಟ್ ಅಭಿಮಾನಿಗಳ ನಿದ್ದೆಗೆಡಿಸಿರೋದಂತೂ ಸುಳ್ಳಲ್ಲ.

​ ಕೆ.ಎಲ್.ರಾಹುಲ್ ಇಂಜುರಿ
ಕರ್ನಾಟಕ ವೇಗಿ ಪ್ರಸಿದ್ಧ್ ಕೃಷ್ಣ ಬೌಲಿಂಗ್​ನಲ್ಲಿ ಬ್ಯಾಟ್ಸ್​ಮನ್​​ ಕೆ.ಎಲ್.ರಾಹುಲ್​ ಗಾಯಗೊಂಡಿದ್ದಾರೆ. ಇಂಟರ್ ಸ್ಕ್ವ್ಯಾಡ್ (SQUAD)​​​​​​​​​​​​​​​​​​​​​​​​​​​​​ ಅಭ್ಯಾಸದ ವೇಳೆ ವೇಗಿ ಪ್ರಸಿದ್ಧ್ ಎಸೆದ ಬೌನ್ಸರ್​ಗೆ, ರಾಹುಲ್ ಗಾಯಗೊಂಡ್ರು. ರಾಹುಲ್ ಎಲ್ಬೋ ಇಂಜುರಿಗೆ ತುತ್ತಾಗಿದ್ದಾರೆ. ಪ್ರಾಕ್ಟೀಸ್ ಮ್ಯಾಚ್ ಆಡದೆ, ಹೊರ ನಡೆದಿದ್ದಾರೆ. ರಾಹುಲ್ ಇಂಜುರಿ, ತಂಡದಲ್ಲಿ ಆತಂಕ ಹೆಚ್ಚಿಸಿದೆ. ​

ಸರ್ಫರಾಜ್​ ಮೊಣಕೈಗೆ ಗಾಯ​
ವಾಕಾ ನೆಟ್ಸ್​ನಲ್ಲಿ ಅಭ್ಯಾಸ ಮಾಡ್ತಿದ್ದಾಗ ಸರ್ಫರಾಜ್ ಖಾನ್, ಗಾಯಗೊಂಡ್ರು. ಇಂಜುರಿಯಿಂದ UN-COMFORTABLE ಆಗಿ ಕಂಡು ಬಂದ ಸರ್ಫರಾಜ್, ನಂತರ ನೆಟ್ ಪ್ರಾಕ್ಟೀಸ್​​​​ ನಿಲ್ಲಿಸಿ ಹೊರನಡೆದ್ರು. ಈಗಾಗಲೇ ಸರ್ಫರಾಜ್​ಗೆ ಸ್ಕ್ಯಾನಿಂಗ್ ಮಾಡಿಸಲಾಗಿದೆ. ರಿಪೋರ್ಟ್​​​ಗಾಗಿ ಕಾಯ್ತಿರುವ ಟೀಮ್ ಮ್ಯಾನೇಜ್​ಮೆಂಟ್, ವರದಿ ಬಂದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಿದೆ.

ಇದನ್ನೂ ಓದಿ:ಎರಡನೇ ಮಗುವಿಗೆ ವೆಲ್​​ಕಮ್ ಹೇಳಿದ ರೋಹಿತ್ ಶರ್ಮಾ ಮತ್ತು ರಿತಿಕಾ

ಶಾರ್ಟ್​ ಪಿಚ್​​ ಬಾಲ್​ಗೆ ಬ್ಯಾಟರ್ಸ್​ ಡ್ಯಾನ್ಸ್
ಒಂದೆಡೆ ಪ್ರಮುಖ ಆಟಗಾರರ ಇಂಜುರಿ. ಮತ್ತೊಂದೆಡೆ ಪ್ರಾಕ್ಟೀಸ್ ಮ್ಯಾಚ್​ನಲ್ಲಿ ಬ್ಯಾಟ್ಸ್​ಮನ್​​ಗಳ ಕಳಪೆ ಪ್ರದರ್ಶನ, ಕೋಚ್ ಗಂಭೀರ್ ತಲೆಕೆಡಿಸಿದೆ. ಪರ್ತ್​​​​​​​​​​​​​​​​​​​​​​​​​​​​ನ ಸೆಂಟರ್​ ಪಿಚ್​ನಲ್ಲಿ ಅಭ್ಯಾಸ ಪಂದ್ಯವಾಡ್ತಿರುವ ಟೀಮ್ ಇಂಡಿಯಾ ಆಟಗಾರರು, ವೇಗಿಗಳ ದಾಳಿಗೆ ತತ್ತರಿಸಿದ್ದಾರೆ. ರಿಷಭ್ ಪಂತ್, ಜೈಸ್ವಾಲ್ ಸೇರಿದಂತೆ ಇತರೆ ಬ್ಯಾಟರ್ಸ್, ಶಾರ್ಟ್​​ ಪಿಚ್ ಎಸೆತಗಳಿಗೆ ಪರಡಾಡ್ತಿದ್ದಾರೆ.

ಗಿಲ್ 2 ಗಂಟೆ ಬ್ಯಾಟಿಂಗ್!
ರೈಸಿಂಗ್ ಸ್ಟಾರ್ ಶುಭ್ಮನ್ ಗಿಲ್​​​​​​, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪರ್ತ್​​​ ಪಿಚ್​ನಲ್ಲಿ ಗಂಟೆಗಟ್ಟಲೇ ಅಭ್ಯಾಸ ನಡೆಸಿದ ಗಿಲ್, ಬ್ಯಾಟಿಂಗ್​ನಲ್ಲಿ ರಿದಮ್ ಕಂಡುಕೊಂಡಂತೆ ಕಂಡರು. ಸುಮಾರು 2 ಗಂಟೆಗಳ ಕಾಲ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್​ ನಡೆಸಿದ ಗಿಲ್, ಡಿಫೆನ್ಸೀವ್ ಮೂಡ್​​ನಲ್ಲಿ ಇರುವಂತೆ ಕಂಡುಬಂದ್ರು. ಸಿಂಗಲ್ಸ್, ಡಬಲ್ಸ್​ ರನ್ ಕಲೆಹಾಕ್ತಿದ್ದ ಗಿಲ್ ಕಾನ್ಫಿಡೆನ್ಸ್ ಸ್ವಲ್ಪ ಹೈ-ಆಗಿತ್ತು. ಟೀಮ್ ಇಂಡಿಯಾ ಆಟಗಾರರಿಗೆ ಪರ್ತ್​​​​​​ ಟೆಸ್ಟ್, ಪ್ರತಿಷ್ಟೆಯಾಗಿದೆ. ಫೈರಿ ಪೇಸ್ ಮತ್ತು ಬೌನ್ಸ್​ ಇರುವ ಈ ಪಿಚ್​ನಲ್ಲಿ, ಆಟಗಾರರ ತಾಳ್ಮೆಯೂ ಪರೀಕ್ಷೆಯಾಗಲಿದೆ.

ಇದನ್ನೂ ಓದಿ:ಮತ್ತೆ ಪಂತ್ ಹಿಂದೆ ಬಿದ್ದ ಬ್ಯೂಟಿ.. ಕ್ರಿಕೆಟ್ ಅಂಗಳದಲ್ಲಿ ನಟಿಯ ಗಾಸಿಪ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment