ಸೇಮ್ ಟು ಸೇಮ್ ಆಟ.. ಟೀಂ ಇಂಡಿಯಾ ಹಿನ್ನಡೆಗೆ ಅಸಲಿ ಕಾರಣ ಇಲ್ಲಿದೆ..

author-image
Ganesh
Updated On
ಸೇಮ್ ಟು ಸೇಮ್ ಆಟ.. ಟೀಂ ಇಂಡಿಯಾ ಹಿನ್ನಡೆಗೆ ಅಸಲಿ ಕಾರಣ ಇಲ್ಲಿದೆ..
Advertisment
  • ರನ್ ಗಳಿಸುತ್ತಿಲ್ಲ.. ಉತ್ತಮ ಜೊತೆಯಾಟ ಆಡ್ತಿಲ್ಲ
  • ಟಾಪ್ 5 ಬ್ಯಾಟರ್ಸ್​​ನಿಂದ 100 ರನ್​​ ಕಾಣಿಕೆ ಬಂದಿಲ್ಲ
  • ಏನಾಗಿದೆ ಟೀಂ ಇಂಡಿಯಾಗೆ? ಯಾಕೆ ಹೀಗೆ ಆಡ್ತಾರೆ?

ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು. ಬ್ರಿಸ್ಬೇನ್ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಭಾರೀ ಹಿನ್ನಡೆ. ಟೀಮ್ ಇಂಡಿಯಾದ ಸ್ಥಿತಿ ನೋಡಿದ್ರೆ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಆಗದೇ ಇರೋದಿಲ್ಲ. ಯಾಕಪ್ಪಾ ಇವರು ಈ ರೀತಿ ಆಡ್ತಿದ್ದಾರೆ? ಏನಾಗಿದೆ ಇವರಿಗೆ ಅಂತ, ತಮ್ಮಲ್ಲಿ ತಾವೇ ಪ್ರಶ್ನೆ ಮಾಡಿಕೊಳ್ತಿದ್ದಾರೆ. ಅದಕ್ಕೆಲ್ಲಾ ಕಾರಣ ಟೀಮ್ ಇಂಡಿಯಾ ಟಾಪ್ ಆರ್ಡರ್ ವೈಫಲ್ಯ.

ಮೊದಲ ಇನ್ನಿಂಗ್ಸ್​ನಲ್ಲಿ​ ಟಾಪ್ ಆರ್ಡರ್

ಪರ್ತ್​​​ ಟೆಸ್ಟ್ ಪಂದ್ಯವನ್ನ ಟೀಮ್ ಇಂಡಿಯಾ ಗೆದ್ದಿರಬಹುದು. ಮೊದಲ ಇನ್ನಿಂಗ್ಸ್​ನಲ್ಲಿ ಜೈಸ್ವಾಲ್, ರಾಹುಲ್, ಪಡಿಕ್ಕಲ್, ಕೊಹ್ಲಿ, ಪಂತ್ ಆಟವನ್ನ, ಯಾರೂ ಮರೆಯೋಕೆ ಆಗೊಲ್ಲ ಬಿಡಿ. ಟೀಮ್ ಇಂಡಿಯಾ ಅಲ್ಪ ಮೊತ್ತಕ್ಕೆ ಕುಸಿಯೋಕೆ, ಈ ಟಾಪ್ ಆರ್ಡರ್ ಬ್ಯಾಟರ್​ಗಳೇ ಕಾರಣವಾದ್ರು. ಒಂದೇ ಒಂದು ಉತ್ತಮ ಜೊತೆಯಾಟ ಕಾಣಲಿಲ್ಲ. ಈ ಐವರು ಬ್ಯಾಟ್ಸ್​ಮನ್​ಗಳ ಒಟ್ಟು ಕಾಣಿಕೆ, ಕೇವಲ 68 ರನ್ ಅಷ್ಟೇ.

ಮೊದಲ ಇನ್ನಿಂಗ್ಸ್​​ನಲ್ಲಿ​ ಟಾಪ್ ಆರ್ಡರ್

ಅಡಿಲೇಡ್​ನಲ್ಲಿ ಟೀಮ್ ಇಂಡಿಯಾ ಕಥೆನೇ ಬೇರೆಯಾಗಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಜೈಸ್ವಾಲ್, ರಾಹುಲ್, ಗಿಲ್, ಕೊಹ್ಲಿ ಮತ್ತು ಪಂತ್ ಸೇರಿ, ಕಲೆಹಾಕಿದ್ದು 96 ರನ್ ಮಾತ್ರ. ರಾಹುಲ್-ಗಿಲ್ 2ನೇ ವಿಕೆಟ್​​ಗೆ 69 ರನ್​ ಜೊತೆಯಾಟ ಆಡಿದ್ದು ಬಿಟ್ರೆ, ಉಳಿದವರೆಲ್ಲಾ ಪೆವಿಲಿಯನ್ ಪರೇಡ್ ನಡೆಸೋದ್ರಲ್ಲೇ ಬ್ಯುಸಿಯಾಗಿದ್ರು.

ಇದನ್ನೂ ಓದಿ:IND vs AUS; ಅರ್ಧಶತಕ ಸಿಡಿಸಿ ಟೀಮ್ ಇಂಡಿಯಾಗೆ ನೆರವಾದ ಕನ್ನಡಿಗ KL ರಾಹುಲ್​, ಜಡೇಜಾ

2ನೇ ಇನ್ನಿಂಗ್ಸ್​ನಲ್ಲಿ​ ಟಾಪ್ ಆರ್ಡರ್

ಎರಡನೇ ಇನ್ನಿಂಗ್ಸ್​ನಲ್ಲೂ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳದ್ದು, ಸೇಮ್ ಟು ಸೇಮ್ ಆಟ. ಏನು ಡಿಫರೆನ್ಸೇ ಇರಲಿಲ್ಲ. ತಂಡದ ಟಾಫ್ ಫೈವ್ ಬ್ಯಾಟ್ಸ್​ಮನ್​​ಗಳು 98 ರನ್​​ ದಾಖಲಿಸಿದ್ದು ಬಿಟ್ರೆ ಇವ್ರ ಆಟದ ಬಗ್ಗೆ ಏನೂ ಹೇಳೋಕೆ ಇಲ್ಲ. ಸೂಪರ್​​ಸ್ಟಾರ್ಸ್ ಪಟ್ಟ ಕಟ್ಟಿಕೊಂಡಿರೋ ಇವ್ರು, ಡೇ ನೈಟ್ ಟೆಸ್ಟ್​ನಲ್ಲಿ ಮಂಗಳಾರತಿ ಮಾಡಿಸಿಕೊಂಡ್ರು.

ಬ್ರಿಸ್ಬೇನ್ ಟೆಸ್ಟ್​

ಅಡಿಲೇಡ್​ನಲ್ಲಿ ಮುಖಭಂಗ ಅನುಭವಿಸಿದ ರೋಹಿತ್ ಶರ್ಮಾ ಪಡೆ, ಬ್ರಿಸ್ಬೇನ್​ನಲ್ಲಿ ಕಾಂಗರೂಗಳಿಗೆ ಬಿಸ್ಕೆಟ್ ಹಾಕುತ್ತೆ ಅಂದುಕೊಳ್ಳಲಾಗಿತ್ತು. ಟೆಸ್ಟ್ ಪಂದ್ಯದ ಮೊದಲ ಇನ್ಜಿಂಗ್ಸ್​ನಲ್ಲಿ, ಜೈಸ್ವಾಲ್, ಗಿಲ್, ಕೊಹ್ಲಿ ಮತ್ತು ಪಂತ್, ಆಸಿಸ್ ಬೌಲರ್​ಗಳು ಹಾಕಿದ ಬಿಸ್ಕೆಟ್ ತಿಂದು ಪೆವಿಲಿಯನ್ ಸೇರಿಕೊಂಡರು. ಈ ನಾಲ್ವರ ಕಾಣಿಕೆ, ಕೇವಲ ಕೇವಲ 17 ರನ್ ಮಾತ್ರ.

ಇದನ್ನೂ ಓದಿ:RCB ಕ್ಯಾಪ್ಟನ್ಸಿ ರೇಸ್​ನಲ್ಲಿ ನಾಲ್ವರ ಹೆಸರು.. ಯಾರಿಗೆ ಇದೆ ಆ ಅದೃಷ್ಟ..?

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಸೋಲು ಮತ್ತು ಹಿನ್ನಡೆಗೆ, ತಂಡದ ಟಾಪ್ ಫೈವ್ ಬ್ಯಾಟ್ಸ್​ಮನ್​ಗಳೇ ಕಾರಣ. ವೈಯಕ್ತಿವಾಗಿ ರನ್​ಗಳಿಸದ ಈ ಬ್ಯಾಟರ್ಸ್, ಜೊತೆಯಾಟವನ್ನೂ ಆಡದೇ ತಂಡವನ್ನ ಒತ್ತಡಕ್ಕೆ ಸಿಲುಕಿಸಿ, ಸೋಲಿಗೂ ಕಾರಣರಾಗಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment