newsfirstkannada.com

U19 World Cup: ಆಸಿಸ್​ ವಿರುದ್ಧ ಗೆದ್ದು 6ನೇ ಟ್ರೋಫಿಗೆ ಮುತ್ತಿಕ್ಕುತ್ತಾ ಭಾರತ.. ಸೋಲೇ ಇಲ್ಲದವರಲ್ಲಿ ಗೆಲ್ಲೋದ್ಯಾರು?

Share :

Published February 11, 2024 at 11:41am

    ವರ್ಲ್ಡ್​​ಕಪ್​ ಫೈನಲ್ಸ್​ನಲ್ಲಿ ಆಸಿಸ್​​ ಎದುರು ಭಾರತ ತಂಡದ್ದೇ ಪಾರುಪತ್ಯ

    ಟ್ರೋಫಿ ಗೆಲ್ಲೋ ಹಾಟ್​ ಫೇವರಿಟ್ಸ್​ ಆಗಿ ಕಣಕ್ಕೆ ಇಳಿಯಲಿದೆ ಭಾರತ!

    ಫೈನಲ್ಸ್​ನಲ್ಲಿ ಆಸ್ಟ್ರೇಲಿಯನ್ಸ್​ ಎದುರು ಭಾರತ ತಂಡ ಸೋತ ಮಾತೇ ಇಲ್ಲ

ಎರಡೂ ಸೋಲಿಲ್ಲದ ಸರದಾರರು, ಈ ಇಬ್ಬರ ಟಾರ್ಗೆಟ್ ಒಂದೇ. ಅದೇ ಚಾಂಪಿಯನ್ ಪಟ್ಟ. ಫೈನಲ್​ ತನಕ ಸೋಲನ್ನೇ ಅರಿದ ಇವರಿಬ್ಬರ ಮುಖಾಮುಖಿ, ಕ್ರಿಕೆಟ್ ಅಭಿಮಾನಿಗಳ ತುಡಿತ ಹೆಚ್ಚಾಗುವಂತೆ ಮಾಡಿದೆ. ಇದಕ್ಕೆ ಕಾರಣ 3 ತಿಂಗಳ ಹಿಂದಿನ ನೆನಪು ಮರುಕಳಿಸಿರೋದು. ಅದೇನು?.

ಅದೇ ಹೈವೋಲ್ಟೇಜ್ ಫೀವರ್, ಅದೇ ಮದಗಜಗಳ ಕಾದಾಟ, ಅದೇ ಎನರ್ಜಿ. ಈ ಸಲ ಯಾರಿಗೆ ವಿಶ್ವಕಪ್​ ಗರಿ? ಪ್ರತಿ ಕ್ರಿಕೆಟ್ ಪ್ರೇಮಿಯ ಮನದ ಮಾತು. ಇದಕ್ಕೆ ಕಾರಣ ನವೆಂಬರ್ 19ರಲ್ಲಿ ನಡೆದ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಕಾದಾಟ.

ಈ ಫೈನಲ್​ ಫೈಟ್​ ಮುಗಿದು 3 ತಿಂಗಳು ಕಳೆದಿವೆ. ಆದ್ರೀಗ ಅಂಥದ್ದೇ ಹೈವೋಲ್ಟೇಜ್​ ಕದನಕ್ಕೆ ಇದೇ ಮದಗಜಗಳು ಸಾಕ್ಷಿಯಾಗ್ತಿವೆ. ಆದ್ರೆ, ಈ ಸಲ ಇವರ ಕಾಳಗ ನಡೀತಿರೋದು ಕಿರಿಯರ ವಿಶ್ವ ಕಿರೀಟಕ್ಕಾಗಿ.

ಯಾರಿಗೆ ಅಂಡರ್​-19 ವಿಶ್ವಕಪ್ ಕಿರೀಟ​..?

ಕಿರಿಯರ ವಿಶ್ವಕಪ್​ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗ್ತಿದ್ದು, ಉಭಯ ತಂಡಗಳ ಮುಖಾಮುಖಿಗೆ ವಿಲೋಮೂರ್ ಪಾರ್ಕ್ ವೇದಿಕೆಯಾಗಿದೆ. ಲೀಗ್​ನಿಂದ ಫೈನಲ್​​ ತನಕ ಸೋಲನ್ನೇ ಅರಿಯದ ಉಭಯ ತಂಡಗಳಲ್ಲಿ ಯಾರು ಅಜೇಯ ಓಟ ಮುಂದುವರಿಸ್ತಾರೆ ಎಂಬ ಕುತೂಹಲ ಗರಿಗೆದರಿದೆ.

ಯೆಲ್ಲೋ ಆರ್ಮಿಯನ್ನ ಕಡೆಗಣಿಸುವಂತಿಲ್ಲ ಭಾರತ..!

ಹಿರಿಯರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಪಾರುಪತ್ಯ ಮೆರೆದ್ರೆ. ಕಿರಿಯರ ವಿಶ್ವಕಪ್​​​​ ಇತಿಹಾಸದಲ್ಲಿ ಟೀಮ್ ಇಂಡಿಯಾ, 5 ಬಾರಿ ಚಾಂಪಿಯನ್​ ಆಗಿ ಮೆರೆದಾಡಿದೆ. 3 ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆ ಮೂಲಕ ಕಿರಿಯರ ವಿಶ್ವಕಪ್​ನಲ್ಲಿ ಪಾರುಪತ್ಯ ಮೆರೆಯುತ್ತಾ ಬಂದಿದೆ. ಇದೀಗ 6ನೇ ಬಾರಿಗೆ ಟ್ರೋಫಿ ಗೆಲ್ಲೋ ಉತ್ಸಾಹದಲ್ಲಿರುವ ಉದಯ್ ಸಹರಾನ್ ನಾಯಕತ್ವದ ಭಾರತ ಕೂಡ ಟ್ರೋಫಿ ಗೆಲ್ಲೋ ಹಾಟ್​ ಫೇವರೇಟ್ ಆಗಿದೆ. ಆದ್ರೆ, ಎದುರಾಳಿ ಆಸ್ಟ್ರೇಲಿಯನ್ನರನ್ನ ಯಾವುದೇ ಕಾರಣಕ್ಕೆ ಲೈಟ್​ ಆಗಿ ತೆಗೆದುಕೊಳ್ಳುವಂತೆಯೇ ಇಲ್ಲ.

ಯಾಕಂದ್ರೆ, ಕಿರಿಯರ ವಿಶ್ವಕಪ್​ನಲ್ಲಿ ಭಾರತ ಬಳಿಕ ಮೋಸ್ಟ್​ ಸಕ್ಸಸ್​ಫುಲ್ ಟೀಮ್ ಆಸ್ಟ್ರೇಲಿಯಾ ಆಗಿದೆ. ಅಷ್ಟೇ ಅಲ್ಲ, ಪ್ರಸಕ್ತ ಟೂರ್ನಿಯಲ್ಲಿ ಭಾರತದಂತೆ ಆಸ್ಟ್ರೇಲಿಯಾ ಸೋಲಿಲ್ಲದ ಸರದಾರ. ಇದಕ್ಕಿಂತ ಮಿಗಿಲಾಗಿ ಸೌತ್ ಆಫ್ರಿಕನ್ ಕಂಡೀಷನ್ಸ್​ ಆಸ್ಟ್ರೇಲಿಯನ್ಸ್​ಗೆ ಫೇವರ್ ಆಗಿದೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.

3ನೇ ಬಾರಿ ಭಾರತ-ಆಸಿಸ್ ಫೈನಲ್ಸ್​ನಲ್ಲಿ ಮುಖಾಮುಖಿ..!

ಸೌತ್​ ಆಫ್ರಿಕನ್ ಕಂಡೀಷನ್ಸ್​ ಆಸ್ಟ್ರೇಲಿಯನ್ಸ್​ಗೆ ವರದಾನವಾಗಿದ್ರು ಫೈನಲ್ಸ್​ನಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯನ್ಸ್​ ಎದುರು ಸೋತ ಮಾತೇ ಇಲ್ಲ. 2012, 2018ರ ವಿಶ್ವಕಪ್​ ಫೈನಲ್​​ಗಳಲ್ಲಿ ಆಸ್ಟ್ರೇಲಿಯಾವನ್ನ ಬಗ್ಗು ಬಡಿದಿದ್ದ ಭಾರತ, ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದೆ. ಆದ್ರೆ, ಅತ್ತ ಪಾಕ್ ಎದುರು ಫೈನಲ್​​ಗೇರಿದ ಆಸ್ಟ್ರೇಲಿಯಾ, ಈ ಹಿಂದಿನ ಸೋಲುಗಳ ಸೇಡಿಗೆ ಕಾಯ್ತಿದೆ. ಆ ಮೂಲಕ 14 ವರ್ಷಗಳ ಟ್ರೋಫಿ ಬರ ನೀಗಿಸಿಕೊಳ್ಳುವ ಲೆಕ್ಕಚಾರದಲ್ಲಿದೆ.

ಆಸ್ಟ್ರೇಲಿಯಾ ಎದುರು ತೀರಿಸಿಕೊಳ್ಳುತ್ತಾ ರಿವೆಂಜ್..?

ಕಿರಿಯರ ವಿಶ್ವಕಪ್​ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ, ಪುರುಷರ ಒನ್ಡೆ ವಿಶ್ವಕಪ್​ ಫೈನಲ್​ ಪಂದ್ಯದ ನೆನಪು ಮರುಕಳಿಸುವಂತೆ ಮಾಡಿದೆ. ಅಜೇಯವಾಗಿ ಫೈನಲ್​​​ಗೇರಿದ್ದ ರೋಹಿತ್ ನಾಯಕತ್ವದ ಟೀಮ್ ಇಂಡಿಯಾ, ಆಸಿಸ್ ಎದುರು ಮುಗ್ಗರಿಸಿತ್ತು. ಇದೀಗ ಕಾತಕಾಳೀಯ ಎಂಬಂತೆ ಅಜೇಯವಾಗಿಯೇ ಕಿರಿಯರ ತಂಡ ಪ್ರವೇಶಿಸಿದೆ. ಹೀಗಾಗಿ 3 ತಿಂಗಳ ಹಿಂದಿನ ಸೇಡು ತೀರಿಸಿಕೊಳ್ಳುವ ಸುವರ್ಣಾವಕಾಶವೀಗ ಯುವ ಭಾರತದ ಮುಂದಿದೆ.

ಈ ಯುವ ಆಟಗಾರರ ಮೇಲೆಯೇ ನಿರೀಕ್ಷೆಯ ಭಾರ!

ಈ ಟೂರ್ನಿಯಲ್ಲಿ ಆಸಿಸ್ ಪ್ರದರ್ಶನಕ್ಕೆ ಹೋಲಿಸಿದ್ರೆ, ಟೀಮ್ ಇಂಡಿಯಾ ಆಟಗಾರರ ಪರ್ಫಾಮೆನ್ಸ್​ ನಿಜಕ್ಕೂ ಟಾಪ್ ಕ್ಲಾಸ್. ಅಷ್ಟೇ ಅಲ್ಲ, ವೈಯಕ್ತಿಕವಾಗಿಯೂ ರನ್​ ಹೊಳೆಯನ್ನೇ ಭಾರತೀಯ ಆಟಗಾರರು ಹರಿಸಿದ್ದಾರೆ. ಟಾಪ್-3 ರನ್ ಸ್ಕೋರರ್​​ಗಳಾಗಿ ನಾಯಕ ಉದಯ್ ಸಹರಾನ್, ಮುಶೀರ್ ಖಾನ್, ಸಚಿನ್ ದಾಸ್ ಹೊರಹೊಮ್ಮಿದ್ದಾರೆ. ವಿಕೆಟ್ ಟೇಕರ್ ಲಿಸ್ಟ್​ನಲ್ಲೂ ಸೌಮ್ಯ ಕುಮಾರ್ ಪಾಂಡೆ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಇವರಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಿದ್ರೆ, 6ನೇ ಬಾರಿಗೆ ವಿಶ್ವಕಪ್ ಕಿರೀಟಕ್ಕೆ ಮುತ್ತಿಡುವಲ್ಲಿ ಅನುಮಾನವೇ ಇಲ್ಲ.

2023ರ ಪುರುಷರ ಏಕದಿನ ವಿಶ್ವಕಪ್‌ನ ನೆನಪು ಮತ್ತೆ ಮರುಕಳಿಸಿದ್ದು. ಆ ಸೋಲಿನ ಸೇಡು ತೀರಿಸಿಕೊಳ್ಳಲಿ ಅನ್ನೋದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಶಯ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

U19 World Cup: ಆಸಿಸ್​ ವಿರುದ್ಧ ಗೆದ್ದು 6ನೇ ಟ್ರೋಫಿಗೆ ಮುತ್ತಿಕ್ಕುತ್ತಾ ಭಾರತ.. ಸೋಲೇ ಇಲ್ಲದವರಲ್ಲಿ ಗೆಲ್ಲೋದ್ಯಾರು?

https://newsfirstlive.com/wp-content/uploads/2024/02/UNDER_19_WORLD_CUP.jpg

Load More