/newsfirstlive-kannada/media/post_attachments/wp-content/uploads/2025/03/IND-vs-AUS-1.jpg)
ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಆಟವಾಡ್ತಿರುವ ಟೀಮ್ ಇಂಡಿಯಾಕ್ಕೆ ಇಂದು ಬಲಿಷ್ಟ ಅಸ್ಟ್ರೇಲಿಯಾ ಎದುರಾಳಿ. ಐಸಿಸಿ ಟೂರ್ನಿಗಳಲ್ಲಿ ನಾವೇ ಶ್ರೇಷ್ಠರು ಅಂತ ಬೀಗುತ್ತಿರುವ ಆಸಿಸ್ಗೆ, ಟೀಮ್ ಇಂಡಿಯಾ ತಕ್ಕ ಪಾಠ ಕಲಿಸಲು ಮುಂದಾಗಿದೆ. ಮತ್ತೊಂದೆಡೆ ಪ್ರಮುಖ ಆಟಗಾರರಿಲ್ಲದೇ ಫೈನಲ್ ಕನಸು ಕಾಣ್ತಿರುವ ಸ್ಮಿತ್ ಪಡೆ, ದುಬೈನಲ್ಲಿ ದರ್ಬಾರ್ ನಡೆಸೋಕೆ ಮುಂದಾಗಿದೆ. ಆದ್ರೆ ಅದು ಸುಲಭವಲ್ಲ ಅನ್ನೋದು ಕಾಂಗರೂಗಳಿಗೆ ಅರ್ಥವಾಗಿದೆ..
ಪಂದ್ಯ- 04
ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾಕ್ಕೆ ಆಸ್ಟ್ರೇಲಿಯಾ 4 ಬಾರಿ ಎದುರಾಳಿಯಾಗಿದೆ. 2 ಪಂದ್ಯಗಳನ್ನ ಟೀಮ್ ಇಂಡಿಯಾ ಗೆದ್ದಿದ್ರೆ, ಒಂದು ಪಂದ್ಯವನ್ನ ಆಸಿಸ್ ಗೆದ್ದಿದೆ. ಸೆಂಚೂರಿಯನ್ನಲ್ಲಿ ನಡೆದ ಪಂದ್ಯ, ಮಳೆಯಿಂದ ಫಲಿತಾಂಶವಿಲ್ಲದೇ ಅಂತ್ಯಕಂಡಿದೆ. ಇದು ಒಟ್ಟಾರೆ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಜರ್ನಿಯಾದ್ರೆ, ಅದೇ ಟೂರ್ನಿಯ ಸೆಮೀಸ್ನಲ್ಲಿ ಮೆನ್ ಇನ್ ಬ್ಲೂ ಪಡೆಯ ಸಾಧನೆ ಹೀಗಿದೆ.
ಇದನ್ನೂ ಓದಿ: Semifinals: ದುಬೈ ಪಿಚ್ನಲ್ಲಿ ಭಾರೀ ಬದಲಾವಣೆ.. ಟೀಂ ಇಂಡಿಯಾಗೆ ಸಮಸ್ಯೆ ಹೆಚ್ಚಾಗಲಿದೆ..!
ಪಂದ್ಯ- 05
ಸೆಮಿಫೈನಲ್ಸ್ನಲ್ಲಿ ಎದುರಾಳಿಗಳನ್ನ ಸಿಂಗಂನಂತೆ ಬೇಟೆಯಾಡಿರೋ ಟೀಮ್ ಇಂಡಿಯಾ ಆಟಗಾರರು, 5 ಪಂದ್ಯಗಳಲ್ಲಿ 4ರಲ್ಲಿ ಗೆಲುವು ದಾಖಲಿಸಿದ್ದಾರೆ. 1998 ಢಾಕಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಒಂದು ಪಂದ್ಯದಲ್ಲಿ ಮಾತ್ರ ಸೋಲು ಕಂಡಿದೆ. ಮತ್ತೊಂದೆಡೆ ಆಸಿಸ್ ಏಕದಿನ ವಿಶ್ವಕಪ್ಗಳಲ್ಲಿ ಪಂಟರ್ಸ್ ಥರ ಆಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಸೆಮೀಸ್ನಲ್ಲಿ ಆಸಿಸ್ ಸ್ವಲ್ಪ ಡಲ್ಲೇ..!
ಚಾಂಪಿಯನ್ಸ್ ಟ್ರೋಫಿ ಸೆಮೀಸ್ನಲ್ಲಿ ಆಸ್ಟ್ರೇಲಿಯಾ
ಆಡಿರೋ 4 ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ 2 ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿದ್ದಾರೆ. ಉಳಿದೆರಡು ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಅನುಭವಿಸಿದೆ. ಈ ದಾಖಲೆಗಳನ್ನ ನೋಡ್ತಿದ್ರೆ, ಸೆಮೀಸ್ ಗೆಲ್ಲೋ ಫೇವರಿಟ್ ಟೀಮ್ ಇಂಡಿಯಾನೇ ಅನಿಸ್ತಿದೆ.
ಇದನ್ನೂ ಓದಿ : INDvsAUS: ಭಾರತದ ವಿರುದ್ಧ ಟ್ರಾವಿಸ್ ಹೆಡ್ ಆಟ ನಡೆಯಲ್ಲ.. ಇಷ್ಟೇ ರನ್‌ಗೆ ಔಟ್! ಹೀಗೆ ಹೇಳಿದ್ದು ಯಾರು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್