Advertisment

ಕರಾಳ ಇತಿಹಾಸಕ್ಕೆ 1 ವರ್ಷ, 3 ತಿಂಗಳು 13 ದಿನಗಳು! ಕಮಿನ್ಸ್ ಆಡಿದ್ದ ಆ​ ಮಾತು ಇವತ್ತು ನೆನಪಿಸಬೇಕಿದೆ..

author-image
Ganesh
Updated On
ಪಂದ್ಯಕ್ಕೂ ಮುನ್ನವೇ ಆಸಿಸ್​ ಡ್ರೆಸ್ಸಿಂಗ್​ ರೂಮ್​ನಲ್ಲಿ ರೋಹಿತ್ ಭಯ; ಟೆನ್ಶನ್​ ಹೆಚ್ಚಿಸಿದ ಕ್ಯಾಪ್ಟನ್..!
Advertisment
  • ಟೀಮ್ ಇಂಡಿಯಾಗೆ ದುಬೈನಲ್ಲಿ ಇವತ್ತು ಸೇಡಿನ ಸಮರ
  • ಏಕದಿನ ವಿಶ್ವಕಪ್ ಪ್ರತೀಕಾರಕ್ಕೆ ಟೀಮ್ ಇಂಡಿಯಾ ಸನ್ನದ್ಧ
  • 140 ಕೋಟಿ ಭಾರತೀಯರ ಕನಸು ನನಸಾಗಿಸಲು ಪಣ

ಒಂದೇ ಹೆಜ್ಜೆ.. ಒಂದೇ ಗುರಿ.. ಅದೇ ಚಾಂಪಿಯನ್ಸ್ ಟ್ರೋಫಿಯ ಫೈನಲ್.. ಇಡೀ ಜಗತ್ತಿಗೆ ಇಂದು ನಡೆಯೋ ಪಂದ್ಯ ಸೇಮಿಸ್​ ಸಮರ. ಆದ್ರೆ ಟೀಮ್ ಇಂಡಿಯಾ ಹಾಗೂ ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಪಾಲಿಗಿದು ಸೇಡಿನ ಸಮರ. ಅವತ್ತಿನ ಕರಾಳ ದಿನದ ನೋವನ್ನ ಬಡ್ಡಿ ಸಮೇತ ಲೆಕ್ಕ ಚುಕ್ತಾ ಮಾಡೋ ಪಂದ್ಯ!

Advertisment

19, ನವೆಂಬರ್ 2023

ಈ ಕಹಿ ದಿನ ಯಾರ್​ ತಾನೇ ಮರೀತಾರೆ. ಇಡೀ ಭಾರತೀಯ ಕ್ರಿಕೆಟ್​ ಲೋಕ ಅಂದು ಮರುಗಿತ್ತು. ಏಕದಿನ ವಿಶ್ವಕಪ್​​ ಫೈನಲ್​​ನಲ್ಲಿ ಸೋಲಿನ ಹತಾಶೆ ಭಾರತವನ್ನು ಆವರಿಸಿತ್ತು. ಅದು ದುಖಃದ ಭಾವದಲ್ಲಿ ಅಭಿಮಾನಿಗಳ ಹೃದಯ ಭಾರವಾಗಿದ್ದ ದಿನ. 140 ಕೋಟಿ ಕೊಟ್ಯಂತರ ಜನರ ಕನಸು ಛಿದ್ರವಾಗಿದ್ದ ದಿನ.. ಟೂರ್ನಿಯಲ್ಲಿ ಅಜೇಯ ಓಟ ನಡೆಸಿ ಫೈನಲ್​​ನಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಎದುರು ಮುಗ್ಗರಿಸಿದ್ದ ದಿನ.

ಇದನ್ನೂ ಓದಿ:ಅಭಿಮಾನಿಗಳಿಗೆ ಒಳ್ಳೆ ಸಿಹಿ ಸುದ್ದಿ.. ಸೆಮೀಸ್ ಗೆಲ್ಲೋ ಫೇವರಿಟ್ ತಂಡ ಯಾವುದು?

publive-image

ಭಾರತದ ಅಭಿಮಾನಿಗಳ ಮುಂದೆ ಆಸ್ಟ್ರೇಲಿಯನ್ನರು ಸಂಭ್ರಮದಲ್ಲಿ ತೇಲಾಡುತ್ತಿದ್ದರೆ. ಟೀಮ್ ಇಂಡಿಯಾ ಆಟಗಾರರು ಕಣ್ಣೀರಾಕಿದ್ರು. 140 ಕೋಟಿ ಭಾರತೀಯರ ಮನಸ್ಸು ಗೆಲ್ಲಲಾಗಲಿಲ್ಲವೆಂಬ ಕೊರಗಿನಲ್ಲಿ ತಲೆ ತಗ್ಗಿಸಿ ಡ್ರೆಸ್ಸಿಂಗ್ ರೂಮ್​ ಸೇರಿದ್ರು. ಅಂದು ಟೀಮ್ ಇಂಡಿಯಾ ಆಟಗಾರರ ಮುಖದಲ್ಲಿದ್ದ ಹತಾಶೆ, ನೋವು ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ.

Advertisment

ಈ ಕರಾಳ ಅಧ್ಯಾಯ ಇತಿಹಾಸದ ಪುಟ ಸೇರಿದೆ. ಈ ಕರಾಳ ಇತಿಹಾಸಕ್ಕೆ 1 ವರ್ಷ, 3 ತಿಂಗಳು 13 ದಿನಗಳು ಕಳೆದಿವೆ. ಇದೀಗ ಸೋಲಿನ ಸೇಡು ತೀರಿಸಿಕೊಳ್ಳುವ ಟೈಮ್​​​​​​​​​​​​ ಟೀಮ್ ಇಂಡಿಯಾಗೆ ಬಂದಿದೆ.

ಇವತ್ತು ಸೇಡಿನ ಸಮರ..!

ಚಾಂಪಿಯನ್ಸ್​ ಟ್ರೋಫಿಯ ಸೆಮಿಫೈನಲ್​ನಲ್ಲಿ ಟೀಮ್ ಇಂಡಿಯಾ-ಆಸ್ಟ್ರೇಲಿಯಾ ಮುಖಾಮುಖಿಯಾಗ್ತಿವೆ. ಒಂದೂವರೆ ವರ್ಷಗಳ ನಂತರ 2023ರ ODI ವಿಶ್ವಕಪ್ ಫೈನಲ್‌ ಸೋಲಿನ ಸೇಡು ತೀರಿಸಿಕೊಳ್ಳುವ ಸುವರ್ಣಾವಕಾಶ ಟೀಮ್ ಇಂಡಿಯಾಗೆ ಸಿಕ್ಕಿದೆ. ಪ್ರತೀಕಾರ ತೀರಿಸಿಕೊಳ್ಳಲು ಸನ್ನದ್ಧರಾಗಿರುವ ಆಟಗಾರರು, ದುಬೈನಲ್ಲಿ ಕಾಂಗರೂಗಳನ್ನು ಖಲ್ಲಾಸ್ ಮಾಡೋಕೆ ರೆಡಿಯಾಗಿದ್ದಾರೆ. ಈ ಮೂಲಕ 140 ಕೋಟಿ ಭಾರತೀಯರ ಕನಸು ನನಸಾಗಿಸಲು ಪಣತೊಟ್ಟಿದ್ದಾರೆ. ಈ ನಿಟ್ಟಿನಲ್ಲೇ ಟೀಮ್ ಇಂಡಿಯಾ ರಣತಂತ್ರ ರೂಪಿಸಿದೆ.

ಕಮಿನ್ಸ್​ ಮಾತು ಇವತ್ತು ನೆನಪಿಸಬೇಕಿದೆ..
130 ಕೋಟಿ ಮಂದಿ ಟೀಮ್ ಇಂಡಿಯಾನ ಬೆಂಬಲಿಸುತ್ತಾರೆ. ಟೂರ್ನಿಯಲ್ಲಿ ಉತ್ತಮ ಆಟವಾಡಿರುವ ಟೀಮ್ ಇಂಡಿಯಾ, ಅಜೇಯವಾಗಿ ಫೈನಲ್‌ ತಲುಪಿದೆ. ಕ್ರೀಡೆಯಲ್ಲಿ ಎದುರಾಳಿ ತಂಡದ ಅಭಿಮಾನಿಗಳ​ ಬಾಯಿ ಮುಚ್ಚಿಸುವುದಕ್ಕಿಂತಲೂ ತೃಪ್ತಿಕರ ವಿಚಾರ ಮತ್ತೊಂದು ಇಲ್ಲ. ಅದು ನಮ್ಮ ಗುರಿ-ಪ್ಯಾಟ್ ಕಮಿನ್ಸ್

Advertisment

ಆಸ್ಟ್ರೇಲಿಯನ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್​, ಏಕದಿನ ವಿಶ್ವಕಪ್​ನ ಫೈನಲ್ ಪಂದ್ಯಕ್ಕೂ ಮುನ್ನ ಪ್ರೆಸ್​ ಕಾನ್ಪರೆನ್ಸ್​ನಲ್ಲಿ ಹೇಳಿದ ಮಾತಿದು. ಪ್ರೆಸ್​ಮೀಟ್​ನಲ್ಲಿ ಆಡಿದ್ದ ಇದೇ ಮಾತನ್ನು ಆಸ್ಟ್ರೇಲಿಯನ್ಸ್​ ಆನ್​​ಫೀಲ್ಡ್​ನಲ್ಲಿ ಮಾಡಿ ತೋರಿಸಿದರು. ಇದೀಗ ಈ ಮಾತನ್ನ ಆಸ್ಟ್ರೇಲಿಯನ್ಸ್​ಗೆ ಟೀಮ್​ ಇಂಡಿಯನ್ಸ್​ ನೆನಪಿಸಬೇಕಿದೆ. 140 ಕೋಟಿ ಮಂದಿಯ ಮೌನಕ್ಕೆ ತೃಪ್ತಿಯ ಪ್ರತೀಕಾರ ಹೇಗಿರುತ್ತೆ ಅನ್ನೋದನ್ನ ತೋರಿಸಬೇಕಿದೆ.

ಇದನ್ನೂ ಓದಿ: Semifinals: ದುಬೈ ಪಿಚ್​ನಲ್ಲಿ ಭಾರೀ ಬದಲಾವಣೆ.. ಟೀಂ ಇಂಡಿಯಾಗೆ ಸಮಸ್ಯೆ ಹೆಚ್ಚಾಗಲಿದೆ..!

publive-image

ಕಾಂಗರೂ ಕನಸು ಭಗ್ನಗೊಳಿಸುವುದೇ ಗುರಿ

ಅಂದು ಭಾರತೀಯ ಅಭಿಮಾನಿಗಳನ್ನು ಸೈಲೆಂಟ್ ಮಾಡೋದೇ ಗುರಿ ಎಂದಿದ್ದ ಆಸ್ಟ್ರೇಲಿಯನ್ ಕ್ಯಾಪ್ಟನ್​​​​​​​, ನಂತರ ಮೆರೆದಾಡಿದ್ದರು. ಇದೀಗ ಆ ಆಸ್ಟ್ರೇಲಿಯಾ ಪಡೆ​ 17 ವರ್ಷದ ಬಳಿಕ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಫೈನಲ್​ಗೇರೋ ಕನಸು ಕಾಣ್ತಿದೆ. ಈ ಕನಸು ಭಗ್ನಗೊಳಿಸುವುದೇ ಟೀಮ್ ಇಂಡಿಯಾದ ಗುರಿಯಾಗಿದೆ.

Advertisment

ಇಂಡಿಯಾನೇ ಗೆಲ್ಲೋ ಫೇವರಿಟ್

ಇವತ್ತು 143 ಕೋಟಿ ಭಾರತೀಯರ ಕನಸು ಈಡೇರಲಿದೆ. ಲೀಗ್​ ಸ್ಟೇಜ್​ನಲ್ಲಿ ಅನ್​ಸ್ಟಾಪಬಲ್ ಆಗಿ ಮುನ್ನುಗ್ಗಿರೋ​ ಟೀಮ್ ಇಂಡಿಯಾನೇ, ಗೆಲ್ಲೋ ಹಾಟ್ ಫೇವರಿಟ್ಸ್​. ದುಬೈ ಸ್ಟೇಡಿಯಂನ ಅಡ್ವಾಂಟೇಜ್ ಹಾಗೂ ಟೀಮ್ ಇಂಡಿಯಾಗಿರೋ ಸ್ಪಿನ್ ಬಲ. ಈ ಎರಡು ಸಾಕು ಆಸಿಸ್​ನ ಉಡೀಸ್​ ಮಾಡೋಕೆ. ದುಬೈ ಪ್ಲೇಯಿಂಗ್​ ಕಂಡಿಷನ್ಸ್​ಗೆ ಒಗ್ಗಿಕೊಂಡಿರೋದು ಟೀಮ್​ ಇಂಡಿಯಾಗೆ ಬಿಗ್​ ಅಡ್ವಾಂಟೇಜ್​. ಜೊತೆಗೆ ಆಸ್ಟ್ರೇಲಿಯಾಗೆ ಸ್ಪಿನ್ ವಿಕ್ನೇಸ್ ಇದೆ. ಹೀಗಾಗಿ ರೋಹಿತ್​ ಪಡೆ ಗೆಲ್ಲೋ ಹಾಟ್​ ಫೇವರಿಟ್​ ಎನಿಸಿಕೊಂಡಿದೆ. ಸೇಮಿಸ್​ ಸಮರದಲ್ಲಿ ಏಕದಿನ ವಿಶ್ವಕಪ್​ನ ಫೈನಲ್​​ ಸೋಲಿಗೆ ಪ್ರತೀಕಾರದೊಂದಿಗೆ 143 ಕೋಟಿ ಭಾರತೀಯರ ಕನಸು ಈಡೇರಿಸೋಕೆ ಇದಕ್ಕಿಂದ ಬೆಸ್ಟ್​ ಟೈಮ್​ ಇಲ್ಲ.

ಇದನ್ನೂ ಓದಿ: IND vs AUS ಸೆಮಿ ಫೈನಲ್; ಪಿಚ್ ರಿಪೋರ್ಟ್​ ಹೇಗಿದೆ..? ಯಾರಿಗೆ ಹೆಚ್ಚು ಲಾಭ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment