/newsfirstlive-kannada/media/post_attachments/wp-content/uploads/2024/12/JASPRIT.jpg)
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಗಬ್ಬಾ ಟೆಸ್ಟ್​ನಲ್ಲಿ ಟೀಂ ಇಂಡಿಯಾ ವೇಗಿ ಜಸ್​ಪ್ರಿತ್ ಬುಮ್ರಾ 6 ವಿಕೆಟ್ ಕಿತ್ತು ಗಮನ ಸೆಳೆದಿದ್ದಾರೆ. ಆದರೆ ಎದುರಾಳಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲೇ ಬೃಹತ್ ರನ್​ಗಳನ್ನು ಕಲೆ ಹಾಕಿದ್ದು, ಭಾರತಕ್ಕೆ ದೊಡ್ಡ ಚಾಲೆಂಜ್ ಆಗಿದೆ.
ಮೂರನೇ ದಿನವಾದ ಇವತ್ತು ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ಮುಕ್ತಾಯವಾಗಿದೆ. ಆಸಿಸ್​ ಬ್ಯಾಟರ್​​ಗಳನ್ನು ಔಟ್ ಮಾಡಲು ಟೀಂ ಇಂಡಿಯಾ ಪರದಾಟ ನಡೆಸಿತು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 445 ರನ್​ಗಳಿಸಿದೆ. ಮೂರನೇ ದಿನವಾದ ಇವತ್ತು ಕೂಡ ಆಸ್ಟ್ರೇಲಿಯಾಗೆ ಅಲೆಕ್ಸ್ ಕ್ಯಾರಿ ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಸ್ಮಿತ್ ಅವರ 101, ಹೆಡ್​ 152 ರನ್​ಗಳ ಕಾಣಿಕೆಯ ಜೊತೆಗೆ ಕ್ಯಾರಿ 70 ರನ್​ಗಳಿಸಿ ಇಂದು ಆಕಾಶ್ ದೀಪ್​ಗೆ ವಿಕೆಟ್ ಒಪ್ಪಿಸಿದರು.
ಟೀಂ ಇಂಡಿಯಾ ಪರ ಬುಮ್ರಾ ಒಬ್ಬರೆ 6 ವಿಕೆಟ್​ ಕಿತ್ತಿದ್ದಾರೆ. ಸಿರಾಜ್ ಎರಡು ವಿಕೆಟ್ ಪಡೆದರೆ, ಆಕಾಶ್ ದೀಪ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ತಲಾ ಒಂದು ವಿಕೆಟ್ ಪಡೆದುಕೊಂಡರು. ಇನ್ನು ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ಆರಂಭಿಸಿದ್ದು, ಯಶಸ್ವಿ ಜೈಸ್ವಾಲ್ ಹಾಗೂ ಗಿಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us