Advertisment

ಸೋತು ಸುಣ್ಣವಾದ ವಿಶ್ವಚಾಂಪಿಯನ್.. ಬಾಂಗ್ಲಾದೇಶದ ಕೈಯಲ್ಲಿ ಆಸ್ಟ್ರೇಲಿಯಾ ಭವಿಷ್ಯ​..!

author-image
Ganesh
Updated On
ಡೆಡ್ಲಿ ಸ್ಪೆಲ್​ಗೆ ಆಸಿಸ್ ಕಕ್ಕಾಬಿಕ್ಕಿ.. ಆಸ್ಟ್ರೇಲಿಯಾ​ ಕನಸಿಗೆ ರೋಹಿತ್ ಕೊಳ್ಳಿ ಇಟ್ಟಿದ್ದು ಹೀಗೆ..!
Advertisment
  • ಆಸ್ಟ್ರೇಲಿಯಾ ವಿರುದ್ಧ 24 ರನ್​​ಗಳ ಭಾರತಕ್ಕೆ ಗೆಲುವು
  • ಅಜೇಯ ತಂಡವಾಗಿ ಸೆಮಿಫೈನಲ್​​ಗೆ ಭಾರತ ಎಂಟ್ರಿ
  • ಜೂನ್ 27 ರಂದು ಇಂಗ್ಲೆಂಡ್ ವಿರುದ್ಧ ಭಾರತ ಫೈಟ್

ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನಲ್ಲಿರುವ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸೂಪರ್ ಸುತ್ತಿನ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಅಮೋಘ ಗೆಲುವು ದಾಖಲಿಸಿದೆ.

Advertisment

ಇದರೊಂದಿಗೆ ಅಜೇಯ ತಂಡವಾಗಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಇದೀಗ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್​ ತಂಡವನ್ನು ಎದುರಿಸಲಿದೆ. ಜೂನ್ 27 ರಂದು ಸೆಮಿಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ:ರಕ್ತ ಚರಿತ್ರೆಯ ಪಟ್ಟಣಗೆರೆ ಶೆಡ್​​​​​​​​​ನಲ್ಲಿ ಮತ್ತೊಂದು ಅನುಮಾನ.. RTO ಅಸ್ತ್ರ ಪ್ರಯೋಗಿಸಿದ ಪೊಲೀಸರು..!

publive-image

ಇತ್ತ ಸೋತು ಸುಣ್ಣವಾಗಿರುವ ಆಸ್ಟ್ರೇಲಿಯಾ ಬಹುತೇಕ ಟೂರ್ನಿಯಿಂದ ಹೊರ ಬಿದ್ದಂತೆ. ಎ ಗ್ರೂಪ್​​ನಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ವಿಶ್ವಕಪ್ ಭವಿಷ್ಯ, ಬಾಂಗ್ಲದೇಶ ಹಾಗೂ ಅಫ್ಘಾನಿಸ್ತಾನದ ನಡುವಿನ ಪಂದ್ಯದ ಮೇಲೆ ನಿಂತಿದೆ. ಈ ಪಂದ್ಯದಲ್ಲಿ ಬಾಂಗ್ಲಾ ಗೆದ್ದರೆ ಆಸ್ಟ್ರೇಲಿಯಾ ಸೆಮಿಫೈನಲ್​​ಗೆ ಹೋಗಲಿದೆ. ಒಂದು ವೇಳೆ ಬಾಂಗ್ಲಾದೇಶ ಸೋತರೆ ಅಫ್ಘಾನಿಸ್ತಾನ ಸೆಮಿಫೈನಲ್​​ಗೆ ಹೋಗಲಿದೆ.

Advertisment

ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ, 206ರನ್​​ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡು 181 ರನ್​ಗಳಿಸಿ ಸೋಲಿಗೆ ಶರಣಾಯ್ತು. ಭಾರತದ ಪರ ಅರ್ಷ್​ದೀಪ್ ಸಿಂಗ್ 3, ಕುಲ್ದೀಪ್ ಯಾದವ್ 2 ಹಾಗೂ ಬೂಮ್ರಾ ಹಾಗೂ ಅಕ್ಸರ್ ಪಟೇಲ್ ತಲಾ ಒಂದೊಂದು ವಿಕೆಟ್​ ಪಡೆದುಕೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment