/newsfirstlive-kannada/media/post_attachments/wp-content/uploads/2025/03/IND-vs-AUS-3.jpg)
ಸೆಮಿಸ್​​ ಸಮರಕ್ಕೂ ಮುನ್ನ ಆಸ್ಟ್ರೇಲಿಯಾ ಡ್ರೆಸ್ಸಿಂಗ್​ ರೂಮ್​ನಲ್ಲಿ ರೋಹಿತ್​ ಶರ್ಮಾ ಭಯ ಆವರಿಸಿದೆ. ಚಾಣಾಕ್ಷ ರೋಹಿತ್​ ಶರ್ಮಾ ಚಕ್ರವ್ಯೂಹದಿಂದ ತಪ್ಪಿಸಿಕೊಳ್ಳೋದು ಹೇಗಪ್ಪಾ? ಅಂತಾ ಆಸಿಸ್​ ಕ್ಯಾಂಪ್​ ತಲೆ ಮೇಲೆ ಕೈ ಹೊತ್ತು ಕೂತಿದೆ. ಐಸಿಸಿ ಟೂರ್ನಿಗಳಲ್ಲಿ ನಾಯಕನ ನಾಯಕ ರೋಹಿತ್​ ಶರ್ಮಾ ಮಾಡಿರೋ ಸಾಧನೆ ಕಾಂಗರೂಗಳನ್ನ ಕಂಗಾಲ್​ ಆಗಿಸಿದೆ.
‘ಚಾಂಪಿಯನ್’​​ ನಾಯಕ..!
ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್​​ನ ಹಾಲಿ ಚಾಂಪಿಯನ್​ ಆಗಿರಬಹುದು ಆದ್ರೆ, ಟೀಮ್​ ಇಂಡಿಯಾನೇ ವಿಶ್ವದ ನಂಬರ್​ 1 ಒಡಿಐ ಟೀಮ್​​. ಏಕದಿನ ಮಾದರಿಗೆ ಟೀಮ್​ ಇಂಡಿಯಾನೇ ಅಧಿಪತಿ. ಚಾಣಾಕ್ಷ ರೋಹಿತ್​ ಶರ್ಮಾ ಈ ಸಾಮ್ರಾಜ್ಯದ ಸಾರಥಿ. ಸದ್ಯ ಸೆಮಿಫೈನಲ್​ ಸಮರಕ್ಕೆ ಸಜ್ಜಾಗಿರೋ ಆಸ್ಟ್ರೇಲಿಯಾ ಪಾಳಯದಲ್ಲಿ ಕ್ಯಾಪ್ಟನ್​​ ರೋಹಿತ್​ ಶರ್ಮಾ ಚರ್ಚೆಯೇ ಜೋರಾಗಿ ನಡೀತಿದೆ. ಚಾಣಾಕ್ಯ ನಾಯಕನ ಚಕ್ರವ್ಯೂಹದಿಂದ ತಪ್ಪಿಸಿಕೊಳ್ಳೋದು ಹೇಗೆ ಅನ್ನೋ ಪಶ್ನೆಗೆ ಉತ್ತರದ ಹುಡುಕಾಟ ನಡೀತಿದೆ.
ಇದನ್ನೂ ಓದಿ:ಅಭಿಮಾನಿಗಳಿಗೆ ಒಳ್ಳೆ ಸಿಹಿ ಸುದ್ದಿ.. ಸೆಮೀಸ್ ಗೆಲ್ಲೋ ಫೇವರಿಟ್ ತಂಡ ಯಾವುದು?
/newsfirstlive-kannada/media/post_attachments/wp-content/uploads/2025/03/IND-vs-AUS-2.jpg)
ICC ಟೂರ್ನಿಯ ದಿ ಬೆಸ್ಟ್​ ಕ್ಯಾಪ್ಟನ್
ಆಸ್ಟ್ರೇಲಿಯಾ ಕ್ಯಾಂಪ್​ನಲ್ಲಿ ನಡುಕ ಹುಟ್ಟಿರೋದು ಇದೇ ವಿಚಾರಕ್ಕೆ.. ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಮುಂದೆ ಕ್ರಿಕೆಟ್​ ಲೋಕ ಕಂಡ ದಿಗ್ಗಜರು ಏನಿಲ್ಲ.. ಏನೇನಿಲ್ಲ.. ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್​ 3 ಏಕದಿನ ವಿಶ್ವಕಪ್​ ಗೆದ್ದಿರಬಹುದು. ರೋಹಿತ್​ ಶರ್ಮಾ ಮುಂದೆ ಪಾಂಟಿಂಗ್​ ಕೂಡ ಏನಿಲ್ಲ.. ಐಸಿಸಿ ಟೂರ್ನಿಗಳು ಅಂತಾ ಬಂದ್ರೆ, ದಿಗ್ಗಜರನ್ನೆಲ್ಲಾ ರೋಹಿತ್​ ಶರ್ಮಾ ಮೀರಿಸಿ ನಿಂತಿದ್ದಾರೆ.
ICC ಟೂರ್ನಿಯ ಯಶಸ್ವಿ ನಾಯಕ
ಐಸಿಸಿ ಟೂರ್ನಮೆಂಟ್​ಗಳಲ್ಲಿ ನಾಯಕನಾಗಿ ರೋಹಿತ್​ ಶರ್ಮಾ 92.8ರ ಗೆಲುವಿನ ಸರಾಸರಿ ಹೊಂದಿದ್ದು, ಯಶಸ್ವಿ ನಾಯಕನ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿರೋ ರಿಕಿಪಾಂಟಿಂಗ್​ 88.3 ಗೆಲುವಿನ ಸರಾಸರಿ ಹೊಂದಿದ್ರೆ, ಧೋನಿ 83.03ರ ವಿನ್ನಿಂಗ್​ ಪರ್ಸಂಟೇಜ್​ನೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. 83.02ರ ಗೆಲುವಿನ ಸರಾಸರಿಯನ್ನ ಹೊಂದಿರೋ ವಿಂಡೀಸ್​ ದಿಗ್ಗಜ ಕ್ಲೈವ್​ ಲಾಯ್ಡ್​ 4ನೇ ಸ್ಥಾನಿಯಾಗಿದ್ದಾರೆ.
ಏಕದಿನ ಮಾದರಿಯಲ್ಲಿ ರೋಹಿತ್​​ ದರ್ಬಾರ್
ನಾಯಕನ ಪಟ್ಟವೇರಿದ ಬಳಿಕ ಈವರೆಗೆ 4 ಐಸಿಸಿ ಟೂರ್ನಿಯ 25 ಪಂದ್ಯಗಳಲ್ಲಿ ರೋಹಿತ್​ ಟೀಮ್​ ಇಂಡಿಯಾವನ್ನ ಮುನ್ನಡೆಸಿದ್ದು 22 ಪಂದ್ಯಗಳಲ್ಲಿ ಗೆಲುವಿನ ಗಿಫ್ಟ್​ ನೀಡಿದ್ದಾರೆ. ಟಿ20 ಫಾರ್ಮೆಟ್​ನಲ್ಲಿ ತಂಡವನ್ನ ಚಾಂಪಿಯನ್​ ಪಟ್ಟಕ್ಕೇರಿಸಿರೋ ರೋಹಿತ್​ ಶರ್ಮಾ, ಏಕದಿನ ಮಾದರಿಯಲ್ಲಿ ದರ್ಬಾರ್​ ನಡೆಸಿದ್ದಾರೆ. ಮೊದಲ ಏಕದಿನ ವಿಶ್ವಕಪ್​ ಚಾಲೆಂಜ್​ನಲ್ಲೇ ತಂಡವನ್ನ ಅಜೇಯವಾಗಿ ಫೈನಲ್​ಗೇರಿಸಿದ ಹೆಗ್ಗಳಿಕೆ ರೋಹಿತ್​ ಅವರದ್ದಾಗಿದೆ.
ಇದನ್ನೂ ಓದಿ:ಮಾಣಿಕ್ಯ, ಪಟಾಕಿ ಸಿನಿಮಾ ನಟಿ ರನ್ಯಾ ರಾವ್ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ DRI ವಶಕ್ಕೆ; ಕಾರಣವೇನು?
/newsfirstlive-kannada/media/post_attachments/wp-content/uploads/2025/03/India-Travis-Head.jpg)
ರೋಹಿತ್​ ಏಕದಿನ ವಿಶ್ವಕಪ್​ ಸಾಧನೆ
ಏಕದಿನ ವಿಶ್ವಕಪ್​​ನಲ್ಲಿ 11 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ರೋಹಿತ್​ ಶರ್ಮಾ 10 ಪಂದ್ಯಗಳಲ್ಲಿ ಗೆಲುವಿನ ಗಿಫ್ಟ್​​​ ನೀಡಿದ್ದಾರೆ. 1 ಪಂದ್ಯ ಸೋತಿದ್ದು 90.90ಯ ಗೆಲುವಿನ ಸರಾಸರಿ ಹೊಂದಿದ್ದಾರೆ. ಏಕದಿನ ವಿಶ್ವಕಪ್​ ಮಾತ್ರವಲ್ಲ, ಒನ್​ ಡೇ ಫಾರ್ಮೆಟ್​ನಲ್ಲೂ ರೋಹಿತ್​ ಶರ್ಮಾ ನಾಯಕತ್ವದ ದಾಖಲೆ ಅದ್ಭುತವಾಗಿದೆ. ನಾಯಕನಾಗಿ ತಂಡವನ್ನ ಮುನ್ನಡೆಸಿದ 54 ಪಂದ್ಯಗಳ ಪೈಕಿ 40 ಪಂದ್ಯಗಳಲ್ಲಿ ತಂಡವನ್ನ ಗೆಲುವಿನ ದಡ ಸೇರಿಸಿದ್ದಾರೆ. 74.07ರ ಗೆಲುವಿನ ಸರಾಸರಿಯನ್ನ ಕ್ಯಾಪ್ಟನ್​ ರೋಹಿತ್​ ಹೊಂದಿದ್ದಾರೆ.
ಮಾದರಿ ಹಿಟ್​​ಮ್ಯಾನ್​
ನಾಯಕನಾಗಿ ತಂಡವನ್ನ ಸಕ್ಸಸ್​ ಕಡೆಗೆ ಮುನ್ನಡೆಸ್ತಿರೋದು ಮಾತ್ರವಲ್ಲ.. ರನ್​ಭೂಮಿಯಲ್ಲಿ ತಂಡವನ್ನ ಮುಂದೆ ನಿಂತು ಲೀಡ್​ ಮಾಡ್ತಿದ್ದಾರೆ. ನಾಯಕನಾದ ಬಳಿಕ ಅಗ್ರೆಸ್ಸಿವ್​ ಅವತಾರ ಎತ್ತಿರೋ ಹಿಟ್​ಮ್ಯಾನ್​​ ಕ್ರಿಸ್​ನಲ್ಲಿದ್ದಷ್ಟು ಹೊತ್ತು ಘರ್ಜಿಸ್ತಾರೆ. ಈ ಮೂಲಕ ತಂಡಕ್ಕೆ ಗುಡ್ ಸ್ಟಾರ್ಟ್​ ಕೊಡ್ತಿರೋ ರೋಹಿತ್​, ಉಳಿದ ಆಟಗಾರರಿಗೆ ಎಕ್ಸಾಂಪಲ್​ ಕೂಡ ಸೆಟ್​ ಮಾಡ್ತಿದ್ದಾರೆ.
ಒಟ್ಟಿನಲ್ಲಿ, ನಾಯಕನಾಗಿ, ಆಟಗಾರನಾಗಿ ರೋಹಿತ್​ ಶರ್ಮಾ ಸದ್ಯ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ರೋಹಿತರ್​ ಶರ್ಮಾ ಫಿಯರ್​ಲೆಸ್​ ಬ್ಯಾಟಿಂಗ್​, ಚಾಣಾಕ್ಷ ನಾಯಕತ್ವ ಆಸ್ಟ್ರೇಲಿಯಾ ಕ್ಯಾಂಪ್​ನಲ್ಲಿ ಟೆನ್ಶನ್​ ಹೆಚ್ಚಿಸಿದ್ರೆ, ಟೀಮ್​ ಇಂಡಿಯಾ ಆತ್ಮವಿಶ್ವಾಸಕ್ಕೆ ಕಾರಣವಾಗಿದೆ. ಇದೇ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿದು, ಹಿಟ್​ಮ್ಯಾನ್​ ಪಡೆ ಆಸಿಸ್​​ನ ಸೊಕ್ಕಡಗಿಸಲಿ.
ಇದನ್ನೂ ಓದಿ: ಕರಾಳ ಇತಿಹಾಸಕ್ಕೆ 1 ವರ್ಷ, 3 ತಿಂಗಳು 13 ದಿನಗಳು! ಕಮಿನ್ಸ್ ಆಡಿದ್ದ ಆ​ ಮಾತು ಇವತ್ತು ನೆನಪಿಸಬೇಕಿದೆ..
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us