/newsfirstlive-kannada/media/post_attachments/wp-content/uploads/2024/02/Australia.jpg)
ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ನಲ್ಲಿ ಇವತ್ತು ಆಸ್ಟ್ರೇಲಿಯಾ ಟಾರ್ಗೆಟ್ ಒಬ್ಬನೇ. ಟೀಮ್ ಇಂಡಿಯಾ ಪರ 11 ರಣಕಲಿಗಳು ಕಣಕ್ಕಿಳೀತಿದ್ರೂ, ಕಾಂಗರೂಗಳ ಟಾರ್ಗೆಟ್ ಕಿಂಗ್ ಕೊಹ್ಲಿ ಮಾತ್ರ. ಕೊಹ್ಲಿ ಆ ರೇಂಜಿಗೆ ಆಸಿಸ್ ಪಡೆಯನ್ನ ಸಿಂಹಸ್ವಪ್ನದಂತೆ ಕಾಡಿದ್ದಾರೆ.
ಆಸಿಸ್ VS ಕೊಹ್ಲಿ ಸಮರ!
ಇವತ್ತಿನ ಸೆಮಿಫೈನಲ್ ಬ್ಯಾಟಲ್ನಲ್ಲಿ ಆಸ್ಟ್ರೇಲಿಯಾದ ಒನ್ ಆ್ಯಂಡ್ ಒನ್ಲಿ ಟಾರ್ಗೆಟ್ ಕಿಂಗ್ ಕೊಹ್ಲಿ. ಆಸ್ಟ್ರೇಲಿಯಾಗೆ ಕ್ರೂಶಿಯಲ್ ಮ್ಯಾಚ್ಗಳಲ್ಲಿ ಕಾಟ ನೀಡಿರುವುದೇ ವಿರಾಟ್ ಕೊಹ್ಲಿ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ 2023ರ ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಮ್ಯಾಚ್ ಹಾಗೂ ಫೈನಲ್ ಮ್ಯಾಚ್. 2023ರ ಏಕದಿನ ವಿಶ್ವಕಪ್ನ ಲೀಗ್ ಮ್ಯಾಚ್ನಲ್ಲಿ 85 ರನ್ ಸಿಡಿಸಿ ಗೆಲುವಿನ ದಡ ಸೇರಿಸಿದ್ದ ವಿರಾಟ್, ಫೈನಲ್ ಪಂದ್ಯದಲ್ಲೂ 54 ರನ್ ಸಿಡಿಸಿ ಆಸ್ಟ್ರೇಲಿಯಾವನ್ನು ಕಾಡಿದ್ದರು. 2016ರ ಟಿ20 ವಿಶ್ವಕಪ್ನಲ್ಲೂ ಆಸ್ಟ್ರೇಲಿಯಾವನ್ನು ಚೆಂಡಾಡಿದ್ದ ಕೊಹ್ಲಿ, ಆಸ್ಟ್ರೇಲಿಯಾ ಕನಸು ಭಗ್ನಗೊಳಿಸಿದ್ದರು.
ಇದನ್ನೂ ಓದಿ: INDvsAUS: ಭಾರತದ ವಿರುದ್ಧ ಟ್ರಾವಿಸ್ ಹೆಡ್ ಆಟ ನಡೆಯಲ್ಲ.. ಇಷ್ಟೇ ರನ್‌ಗೆ ಔಟ್! ಹೀಗೆ ಹೇಳಿದ್ದು ಯಾರು?
ಕೊಹ್ಲಿಯ ಫೇವರಿಟ್ ಎದುರಾಳಿ
ಬಿಗ್ ಸ್ಟೇಜ್ನಲ್ಲಿ ಬಿಗ್ ಟೀಮ್ ಎದುರು ಹೈಪ್ರೆಶರ್ನಲ್ಲಿ ಆಡೋದ್ರಲ್ಲಿ ಕೊಹ್ಲಿ ಪಂಟರ್. ಅದ್ರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಅಂದ್ರೆ ಕೊಹ್ಲಿ, ತೊಡೆ ತಟ್ಟಲು ತಯಾರಾಗಿರ್ತಾರೆ. ಇದಕ್ಕೆ ಈ ಹಿಂದಿನ ಟ್ರ್ಯಾಕ್ ರೆಕಾರ್ಡ್ ಸಾಕ್ಷಿಯಾಗಿದೆ. ಆಸ್ಟ್ರೇಲಿಯಾ ಎದುರು ಇದುವರೆಗೆ 49 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್, 2367 ರನ್ ಗಳಿಸಿದ್ದಾರೆ. 53.79ರ ಬ್ಯಾಟಿಂಗ್ ಅವರೇಜ್ನಲ್ಲಿ ರನ್ ಗಳಿಸಿರುವ ಕೊಹ್ಲಿ, 14 ಅರ್ಧಶತಕ, 8 ಶತಕ ಕಾಂಗರೂಗಳ ಎದುರು ಸಿಡಿಸಿದ್ದಾರೆ.
ಒಡಿಐ ಮ್ಯಾಚ್ಗಳಲ್ಲೇ ಅಲ್ಲ. ಏಕದಿನ ಐಸಿಸಿ ಈವೆಂಟ್ಸ್ಗಳಲ್ಲೂ ಆಸ್ಟ್ರೇಲಿಯಾ ಎದುರು ವಿರಾಟ್, ಅದ್ಬುತ ಪ್ರದರ್ಶನವನ್ನ ನೀಡಿದ್ದಾರೆ. ಆಸ್ಟ್ರೇಲಿಯಾ ಎದುರು ಏಕದಿನ ವಿಶ್ವಕಪ್ಗಳಲ್ಲಿ 5 ಪಂದ್ಯಗಳನ್ನಾಡಿರುವ ಕೊಹ್ಲಿ, 246 ರನ್ ಸಿಡಿಸಿದ್ದಾರೆ. 49.20 ಬ್ಯಾಟಿಂಗ್ ಅವರೇಜ್ನಲ್ಲಿ 3 ಅರ್ಧಶತಕ ಸಿಡಿಸಿದ್ದಾರೆ. ಆಸ್ಟ್ರೇಲಿಯಾ ಅಂದ್ರೆ ನಿದ್ದೆಯಲ್ಲೂ ಎದ್ದು ಆಡೋ ವಿರಾಟ್, ನಾಕೌಟ್ಸ್ ಗೇಮ್ಸ್ನಲ್ಲಿ , ಮೋಸ್ಟ್ ಫೇವರಿಟ್ ಅಪೊನಿಯಂಟ್ ಅಂದ್ರೆ, ಸುಮ್ಮನಿರ್ತಾರಾ.? ದಡಂದಶಗುಣಂ ಫಿಕ್ಸ್.!
ODI ನಾಕೌಟ್ ಪಂದ್ಯಗಳಲ್ಲಿ ಕೊಹ್ಲಿ
ಐಸಿಸಿ ಈವೆಂಟ್ಸ್ಗಳಲ್ಲಿ 12 ನಾಕೌಟ್ಸ್ ಪಂದ್ಯಗಳನ್ನಾಡಿರುವ ವಿರಾಟ್, 446 ರನ್ ಸಿಡಿಸಿದ್ದಾರೆ. ಈ ಪೈಕಿ 3 ಅರ್ಧಶತಕ, 1 ಶತಕ ಸಿಡಿಸಿದ್ದಾರೆ. ಏಕದಿನ, ಟಿ20, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸಹಿತ 20 ನಾಕೌಟ್ಸ್ ಪಂದ್ಯಗಳನ್ನಾಡಿರುವ ವಿರಾಟ್, 52.16ರ ಬ್ಯಾಟಿಂಗ್ ಅವರೇಜ್ನಲ್ಲಿ 939 ರನ್ ಕೊಳ್ಳೆ ಹೊಡೆದಿದ್ದಾರೆ. ಈ ಪೈಕಿ 8 ಅರ್ಧಶಕ, 1 ಶತಕ ಸಿಡಿಸಿರುವ ವಿರಾಟ್, ಇವತ್ತಿನ ಬಿಗ್ ಗೇಮ್ನಲ್ಲಿ ವಿರಾಟ್ ರೂಪ ತೋರಿಸುವ ಲೆಕ್ಕಾಚಾರದಲ್ಲಿದ್ದಾರೆ.
ಇದನ್ನೂ ಓದಿ: ಕರಾಳ ಇತಿಹಾಸಕ್ಕೆ 1 ವರ್ಷ, 3 ತಿಂಗಳು 13 ದಿನಗಳು! ಕಮಿನ್ಸ್ ಆಡಿದ್ದ ಆ ಮಾತು ಇವತ್ತು ನೆನಪಿಸಬೇಕಿದೆ..
ಆಸಿಸ್ ವ್ಯೂಹ
ವಿರಾಟ್ ಬ್ಯಾಟಿಂಗ್ ವೈಭವ ನೋಡಿ ಆಸ್ಟ್ರೇಲಿಯಾ ಕೂಡ ಸುಮ್ಮನೆ ಕುಳಿತಿಲ್ಲ. ಈಗಾಗಲೇ ಕೊಹ್ಲಿ ಕಟ್ಟಿ ಹಾಕಲು ಬ್ರಹ್ಮಾಸ್ತ್ರವನ್ನು ತಂಡದಲ್ಲಿರಿಸಿಕೊಂಡಿದೆ. ಅದೇ ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ. ಪಾಕ್ ಎದುರು ವಿರಾಟ್ ಶತಕ ಸಿಡಿಸಿದ್ರು. ಆದರೂ ಸ್ಪಿನ್ನರ್ ಎದುರು ಪರದಾಡಿದ್ರು. ಹೀಗಾಗಿ ಆಸ್ಟ್ರೇಲಿಯಾ ಸ್ಪಿನ್ ಪ್ರಯೋಗಿಸಲು ಮುಂದಾಗಿದೆ. 2017ರಿಂದ ಇದುವರೆಗ 5 ಬಾರಿ ಏಕದಿನ ಮಾದರಿಯಲ್ಲಿ ಕೊಹ್ಲಿಗೆ ಪಂಚ್ ಕೊಟ್ಟಿರುವ ಆ್ಯಡಂ ಜಂಪಾ, ದುಬೈನ ಸ್ಲೋ ಟ್ರ್ಯಾಕ್ನಲ್ಲೂ ಮೇಲುಗೈ ಸಾಧಿಸುವ ಕನಸಿನಲ್ಲಿದ್ದಾರೆ. ಹೀಗಾಗಿ ಇವರಿಬ್ಬರ ಬ್ಯಾಟಲ್ ಇವತ್ತಿನ ಸೆಂಟರ್ ಆಫ್ ಅಟ್ರಾಕ್ಷನ್.
ಆಸಿಸ್ ವಿರುದ್ಧ ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿರೋ ಕೊಹ್ಲಿ, ಕಾಂಗರೂಗಳ ಪಾಲಿಗೆ ವಿಲನ್ ಆಗಿದ್ರೆ, ಅಸಂಖ್ಯಾತ ಭಾರತೀಯರ ಪಾಲಿನ ಭರವಸೆಯಾಗಿದ್ದಾರೆ. ಹೀಗಾಗಿ ಇವತ್ತಿನ ಸೆಮಿಫೈನಲ್ಸ್ನಲ್ಲಿ ವಿರಾಟ್ ವೀರಾವೇಶ ಪ್ರದರ್ಶಿಸಲಿ, ಟೀಮ್ ಇಂಡಿಯಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಲಿ ಅನ್ನೋದೇ ಕೋಟ್ಯಾಂತರ ಫ್ಯಾನ್ಸ್ ಆಶಯ.
ಇದನ್ನೂ ಓದಿ: ಪಂದ್ಯಕ್ಕೂ ಮುನ್ನವೇ ಆಸಿಸ್ ಡ್ರೆಸ್ಸಿಂಗ್ ರೂಮ್ನಲ್ಲಿ ರೋಹಿತ್ ಭಯ; ಟೆನ್ಶನ್ ಹೆಚ್ಚಿಸಿದ ಕ್ಯಾಪ್ಟನ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್