/newsfirstlive-kannada/media/post_attachments/wp-content/uploads/2025/02/Kohli-Team-India.jpg)
2023ರ ಏಕದಿನ ವಿಶ್ವಕಪ್​ ಫೈನಲ್ ಸೋಲು, ಯಾರ್ ತಾನೇ ಮರೆಯೋಕೆ ಸಾಧ್ಯ ಹೇಳಿ? ತವರಿನಲ್ಲೇ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ತೀವ್ರ ಮುಖಭಂಗ ಅನುಭವಿಸಿತು. ಅಂದು ಕೋಟ್ಯಾಂತರ ಭಾರತೀಯರ ಹೃದಯ, ಛಿದ್ರ ಛಿದ್ರಗೊಂಡಿತು. ಆದ್ರೀಗ ಆ ಸೇಡನ್ನ ತೀರಿಸಿಕೊಳ್ಳುವ ಸಮಯ ಬಂದಿದೆ. ಚಾಂಪಿಯನ್ಸ್​ ಟ್ರೋಫಿ ಸೆಮಿಫೈನಲ್​ನಲ್ಲಿ ಟೀಮ್ ಇಂಡಿಯಾ, ಆಸಿಸ್​​ ಉಡೀಸ್ ಮಾಡೋಕೆ ರೆಡಿಯಾಗಿ ನಿಂತಿದೆ.
ಟೀಮ್ ಇಂಡಿಯಾಗೆ ಸ್ಟ್ರೆಂಥ್
ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಈ ಮೂರೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು, ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡಿಲ್ಲ. ಒಮ್ಮೆ ಟಾಪ್ ಆರ್ಡರ್ ಬ್ಯಾಟರ್ಸ್ ಮಿಂಚಿದ್ರೆ, ಇನ್ನೊಮ್ಮೆ ಮಿಡಲ್ ಆರ್ಡರ್ ಬ್ಯಾಟರ್ಸ್​ ರನ್​​​​ ಸ್ಕೋರ್ ಮಾಡಿದ್ದಾರೆ. ಹಾಗಾಗಿ ರೋಹಿತ್ ಪಡೆಯ ಸ್ಟ್ರೆಂಥೇ ಬ್ಯಾಟಿಂಗ್. ವೀಕ್ನೆಸ್ ಕೂಡ ಬ್ಯಾಟಿಂಗ್ ಆಗಿದೆ. ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡಿದ್ರೆ, ಟೀಮ್ ಇಂಡಿಯಾ ಬಲ ಮತ್ತಷ್ಟು ಹೆಚ್ಚಲಿದೆ.
/newsfirstlive-kannada/media/post_attachments/wp-content/uploads/2025/03/TEAM-INDIA-5.jpg)
ದುಬೈ ಪಿಚ್​ ಸ್ಪಿನ್ನರ್ಸ್​ ಪ್ಯಾರಡೈಸ್
ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಡಿರೋ ಎಲ್ಲಾ ಪಂದ್ಯಗಳು ದುಬೈ ಪಿಚ್​ನಲ್ಲೇ. ಈ ಪಿಚ್​​ ಬಗ್ಗೆ ರೋಹಿತ್ ಪಡೆಗೆ ಚೆನ್ನಾಗೇ ಗೊತ್ತು. ಸ್ಲೋ, ಲೋ ಮತ್ತು ಸ್ಲಗ್ಗಿಷ್​​​​​​​​ ಪಿಚ್​​​​​, ಸ್ಪಿನ್ನರ್ಸ್​ ಪಾಲಿಗೆ ಸ್ವರ್ಗ. ಹಾಗಾಗಿ ಈ ಪಿಚ್​ನಲ್ಲಿ ಮತ್ತೆ ನಾಲ್ಕು ಮಂದಿ ಸ್ಪಿನ್ನರ್ಸ್​ಗಳನ್ನ ದಾಳಿಗಿಳಿಸಲಿದೆ. ಆಸಿಸ್ ಮೇಲೆ ಹೆವಿ ಸ್ಪಿನ್ ಅಟ್ಯಾಕ್​​ ಮೂಲಕ ಗೆಲ್ಲೋಕೆ ಹೊರಟಿದೆ.
ಆಸಿಸ್​​​ ತಂಡಕ್ಕೆ ಬ್ಯಾಟರ್ಸ್​​ ಮ್ಯಾಚ್ ವಿನ್ನರ್ಸ್
ಸ್ಟೀವ್ ಸ್ಮಿತ್ ಸಾರಥ್ಯದ ಆಸ್ಟ್ರೇಲಿಯಾ, ಬ್ಯಾಟಿಂಗ್​ನಲ್ಲಿ ಬಲಿಷ್ಟವಾಗಿ ಕಾಣ್ತಿದೆ. ಇಂಗ್ಲೆಂಡ್ ವಿರುದ್ಧ 351 ರನ್​​​ ಸಕ್ಸಸ್​​ಫುಲ್ ಚೇಸ್ ಮಾಡಿರುವ ಆಸಿಸ್, ಮಹತ್ವದ ಪಂದ್ಯದಲ್ಲೂ ಬ್ಯಾಟಿಂಗ್​ ಶಕ್ತಿ ತೋರೀಸೋಕೆ ಮುಂದಾಗಿದೆ. ಟೀಮ್ ಇಂಡಿಯಾಕ್ಕೆ ಟಫ್ ಫೈಟ್​ ನೀಡಬೇಕಂದ್ರೆ ಅದು ಆಸಿಸ್ ಬ್ಯಾಟಿಂಗ್​​ನಿಂದ ಮಾತ್ರ ಸಾಧ್ಯ.
/newsfirstlive-kannada/media/post_attachments/wp-content/uploads/2025/02/Team-India_News12.jpg)
ಅನುಭವಿ ಆಟಗಾರರು ಅಲಭ್ಯ
ಪ್ಯಾಟ್ ಕಮ್ಮಿನ್ಸ್, ಮಿಚ್ಚೆಲ್ ಸ್ಟಾರ್ಕ್, ಜೋಷ್ ಹೇಝಲ್​​ವುಡ್, ಮಿಚ್ಚೆಲ್ ಮಾರ್ಷ್, ಮಾರ್ಕಸ್ ಸ್ಟಾಯ್ನಿಸ್ ಇದೀಗ ಮ್ಯಾಥ್ಯೂ ಶಾರ್ಟ್​​ ಸಹ ಗಾಯಗೊಂಡು, ಟೂರ್ನಿಯಿಂದಲೇ ಔಟ್ ಆಗಿದ್ದಾರೆ. ಪ್ರಮುಖ ಆಟಗಾರರ ಅಲಭ್ಯತೆ, ಆಸಿಸ್ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ರೋಹಿತ್ V/S ಸ್ಮಿತ್​​​​​​​​​​​​​​​​​​..!
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಆಸಿಸ್ ನಾಯಕ ಸ್ಟೀವ್ ಸ್ಮಿತ್, ಇಬ್ಬರೂ ಸ್ಮಾರ್ಟ್ ಌಂಡ್ ಸ್ಕಿಲ್​ಫುಲ್ ಕ್ಯಾಪ್ಟನ್ಸ್​. ಇಬ್ಬರ ಟ್ಯಾಕ್ಟಿಕ್ಸ್ ಎಕ್ಸಲೆಂಟ್. ಎಲ್ಲದಕ್ಕಿಂತ ಮುಖ್ಯವಾಗಿ ಇಬ್ಬರೂ ಅನುಭವಿ ನಾಯಕರು. ಇಂದು ನಡೆಯೋ ಮೆಗಾ ಸೆಮೀಸ್​ ಫೈಟ್​ನಲ್ಲಿ, ಯಾರ ಪ್ಲಾನ್ ವರ್ಕ್​ಔಟ್ ಆಗುತ್ತೆ ಅನ್ನೋದು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಭಾರತೀಯ ಕ್ರಿಕೆಟ್​​ಗೆ ಕೆಟ್ಟ ಸುದ್ದಿ; 550 ವಿಕೆಟ್ ಪಡೆದಿದ್ದ ಮಾಜಿ ಕ್ರಿಕೆಟಿಗ ನಿಧನ..
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us