IND vs AUS ಸೆಮಿ ಫೈನಲ್; ಪಿಚ್ ರಿಪೋರ್ಟ್​ ಹೇಗಿದೆ..? ಯಾರಿಗೆ ಹೆಚ್ಚು ಲಾಭ..?

author-image
Ganesh
Updated On
ನಾಳೆ ರೋಚಕ ಸೆಮಿಫೈನಲ್​​​; ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತ ಮಾಸ್ಟರ್​ ಪ್ಲಾನ್!
Advertisment
  • ಎರಡೂ ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಹೋರಾಟ
  • ದುಬೈನಲ್ಲಿ ಇಂದು ಮೊದಲ ಸೆಮಿ ಫೈನಲ್ ಪಂದ್ಯ ನಡೆಯಲಿದೆ
  • ಮಧ್ಯಾಹ್ನ 2.30 ರಿಂದ ಸೆಮಿ ಫೈನಲ್ ಪಂದ್ಯ ಆರಂಭ ಆಗಲಿದೆ

ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿ ಆಗುತ್ತಿವೆ. ಸೆಮಿಫೈನಲ್​​ ಹೋರಾಟದಲ್ಲಿ ಎರಡು ಬಲಿಷ್ಠ ತಂಡಗಳು ಸೆಣಸಾಡಲಿವೆ. ಇಲ್ಲಿ ಗೆದ್ದವರು ಫೈನಲ್​ಗೆ ಪ್ರವೇಶ ಪಡೆಯಲಿದ್ದು, ಹೀಗಾಗಿ ಟೀಂ ಇಂಡಿಯಾಗೆ ಇಂದು ಗೆಲುವು ಅನಿವಾರ್ಯವಾಗಿದೆ.

ಈಗಾಗಲೇ ಗ್ರೂಪ್ ಹಂತದಲ್ಲಿ ಮೂರು ಪಂದ್ಯಗಳನ್ನು ಗೆದ್ದು ಹುಮ್ಮಸ್ಸಿನಲ್ಲಿರುವ ಟೀಂ ಇಂಡಿಯಾ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಮಧ್ಯಾಹ್ನ 2.30 ರಿಂದ ಪಂದ್ಯ ಆರಂಭವಾಗಲಿದೆ. 2 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದ್ದು, ಜಿಯೋ ಹಾಟ್​ಸ್ಟಾರ್ ಮತ್ತು ಸ್ಟಾರ್​ ಸ್ಪೋರ್ಟ್ಸ್​ನಲ್ಲಿ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು.

ಇದನ್ನೂ ಓದಿ: ಕೆ.ಎಲ್​ ರಾಹುಲ್​ಗೆ ಬಿಗ್​ ಶಾಕ್​​; ಸ್ಟಾರ್​ ಬ್ಯಾಟರ್​​ ರಿಷಬ್​ ಪಂತ್​ಗೆ ಭರ್ಜರಿ ಗುಡ್​ನ್ಯೂಸ್​​

ಹೇಗಿದೆ ಪಿಚ್​ ರಿಪೋರ್ಟ್​..?

ಪಾಕಿಸ್ತಾನದಲ್ಲಿನ ಪಿಚ್​ಗಳಂತೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ​​ ಬ್ಯಾಟಿಂಗ್​​ಗೆ ಅಷ್ಟು ಸುಲಭ ಇಲ್ಲ. ಮೈದಾನದಲ್ಲಿ ಬಾಲ್ ಚೆನ್ನಾಗಿ ಪುಟಿಯಲ್ಲ. ಇದರಿಂದ ಬ್ಯಾಟರ್​​ಗಳಿಗೆ ದೊಡ್ಡ ಚಾಲೆಂಜ್ ಆಗಿರಲಿದೆ. ಹೊಸ ಬಾಲ್ ನಿರ್ಣಾಯಕ ಪಾತ್ರವಹಿಸಿದರೂ, ಸ್ಪಿನ್ನರ್ಸ್​ಗೆ ಆಡೋದು ಈ ಪಿಚ್​ನಲ್ಲಿ ತುಂಬಾನೇ ಕಷ್ಟ. ಟಾಸ್ ಗೆದ್ದು ಚೇಸಿಂಗ್ ಆಯ್ಕೆ ಮಾಡಿಕೊಂಡ ತಂಡಕ್ಕೆ ಹೆಚ್ಚು ಅನುಕೂಲ ಇದೆ.

ಮಳೆ ಬರುತ್ತಾ..?

ದುಬೈನ ಕೆಲವು ಭಾಗದಲ್ಲಿ ಅಲ್ಲಲ್ಲಿ ಚದುರಿದ ತುಂತುರು ಮಳೆ ಇದೆ. ಆದರೆ, ಸೆಮಿ ಫೈನಲ್ ಪಂದ್ಯಕ್ಕೆ ಮಳೆಯ ಆತಂಕ ಇಲ್ಲ. ವಾತಾವರಣ ಶುಭ್ರವಾಗಿದೆ. ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್​​ನಿಂದ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್​​ವರೆಗೆ ಇರಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಇದುವರೆಗೆ ಒಟ್ಟು 151 ಪಂದ್ಯಗಳು ನಡೆದಿವೆ. ಗೆಲುವಿನಲ್ಲಿ ಆಸ್ಟ್ರೇಲಿಯಾ ಮುಂದಿದ್ದು, 84 ಪಂದ್ಯಗಳನ್ನು ಗೆದ್ದುಕೊಂಡಿದೆ. ಭಾರತ 57 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 10 ಪಂದ್ಯಗಳ ರಿಸಲ್ಟ್ ಬಂದಿಲ್ಲ.

ಇದನ್ನೂ ಓದಿ: ಸೆಮಿಫೈನಲ್​ಗೆ ಟೀಮ್​ ಇಂಡಿಯಾದಲ್ಲಿ ಮೇಜರ್​ ಸರ್ಜರಿ; ಆಸ್ಟ್ರೇಲಿಯಾ ವಿರುದ್ಧ ಬಲಿಷ್ಠ ತಂಡ ಕಣಕ್ಕೆ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment