Advertisment

‘ನನ್ನ ನಿರ್ಧಾರ ಏನೆಂದರೆ..’ ಕೊನೆಗೂ ಉತ್ತರ ಕೊಟ್ಟ ಕ್ಯಾಪ್ಟನ್ ರೋಹಿತ್ ಶರ್ಮಾ

author-image
Ganesh
Updated On
‘ನನ್ನ ನಿರ್ಧಾರ ಏನೆಂದರೆ..’ ಕೊನೆಗೂ ಉತ್ತರ ಕೊಟ್ಟ ಕ್ಯಾಪ್ಟನ್ ರೋಹಿತ್ ಶರ್ಮಾ
Advertisment
  • ಸಿಡ್ನಿಯಲ್ಲಿ BGT ಕೊನೆಯ ಟೆಸ್ಟ್ ಪಂದ್ಯದ 2ನೇ ದಿನ
  • ಅನುಮಾನಗಳಿಗೆ ತೆರೆ ಎಳೆದ ನಾಯಕ ರೋಹಿತ್
  • ಟೆಸ್ಟ್ ಕ್ರಿಕೆಟ್​​ಗೆ ಗುಡ್​ಬೈ ಹೇಳಿರೋರು ನಿಜಾನಾ?

ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ಕೊನೆಯ ಟೆಸ್ಟ್ ಪಂದ್ಯ ಸಿಡ್ನಿ ಇಂಟರ್​ ನ್ಯಾಷನಲ್​​ ಕ್ರಿಕೆಟ್ ಸ್ಟೇಡಿಯಮ್​​ನಲ್ಲಿ ನಡೆಯುತ್ತಿದೆ. ಕೊನೆ ಟೆಸ್ಟ್​ ಪಂದ್ಯದಿಂದ ಟೀಮ್​ ಇಂಡಿಯಾ ಕ್ಯಾಪ್ಟನ್​​ ರೋಹಿತ್​ ಶರ್ಮಾ ಅವರಿಗೆ ಕೊಕ್​ ನೀಡಲಾಗಿದೆ. ಆ ಮೂಲಕ ರೋಹಿತ್ ಶರ್ಮಾ ಟೆಸ್ಟ್​ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಳ್ತಿದ್ದಾರೆ ಎಂಬ ವದಂತಿಗಳಿವೆ.

Advertisment

ಈ ಎಲ್ಲಾ ಗೊಂದಲಗಳಿಗೆ ಇಂದು ರೋಹಿತ್ ಶರ್ಮಾ ತೆರೆ ಎಳೆದಿದ್ದಾರೆ. ಮಾಧ್ಯಮಗಳಿಗೆ ಮಾತನಾಡಿರುವ ಕ್ಯಾಪ್ಟನ್, ನಾನು ತಂಡದ ಪರವಾಗಿ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ತಂಡದ ಒಳಿತಿಗೆ. ಬುಮ್ರಾ ಅವರು ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ರೀತಿ ನನ್ನನ್ನು ಇಂಪ್ರೆಸ್ ಮಾಡಿದೆ.

ಇದನ್ನೂ ಓದಿ:ವಿಶ್ವದಲ್ಲೇ ಅತಿ ಹೆಚ್ಚು ಸ್ನಾನ ಮಾಡುವವರ ದೇಶ ಯಾವುದು? ದಿನಕ್ಕೆ ಎಷ್ಟು ಬಾರಿ ಗೊತ್ತಾ?

ನಾನು ತುಂಬಾ ಕಷ್ಟಪಟ್ಟೆ. ಆದರೂ ನನ್ನ ಬ್ಯಾಟ್​ನಿಂದ ರನ್​ ಬಂದಿರಲಿಲ್ಲ. ಹೀಗಾಗಿ ನಾನು ತಂಡಕ್ಕಾಗಿ ನಿರ್ಧಾರ ಮಾಡಿದೆ. ಅದು ಕಠಿಣ ನಿರ್ಧಾರ. ಕೋಚ್​ ಜೊತೆ ಚರ್ಚಿಸಿ 5ನೇ ಟೆಸ್ಟ್​ನಿಂದ ಹೊರಗುಳಿಯುವ ನಿರ್ಧಾರ ಮಾಡಿದೆ. ನಾನು ಟೆಸ್ಟ್​​ಗೆ ನಿವೃತ್ತಿ ಪಡೆದುಕೊಂಡಿಲ್ಲ. ಕೇವಲ ಐದನೇ ಟೆಸ್ಟ್ ಪಂದ್ಯದಿಂದ ಮಾತ್ರ ಹೊರಗೆ ಉಳಿದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

Advertisment

ಇದನ್ನೂ ಓದಿ:ಜಪಾನ್, ಹಾಂಕಾಂಗ್​ಗೂ HMPV ಸೋಂಕು ಹಬ್ಬಿಸಿದ ಚೀನಾ.. ಭಯ ಹುಟ್ಟಿಸಿದ ಚೈನಾ ವೈರಸ್​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment