/newsfirstlive-kannada/media/post_attachments/wp-content/uploads/2024/10/SANJU_SAMSON-1.jpg)
ಫೋರ್​​.. ಫೋರ್​.. ಫೋರ್​.. ಸಿಕ್ಸ್.. ಸಿಕ್ಸ್​.. ಹೈದ್ರಾಬಾದ್​ ಸ್ಟೇಡಿಯಂನಲ್ಲಿ ರನ್​ ಹೊಳೆ ಹರಿಯಿತು. ಭಾರತೀಯ ಬ್ಯಾಟರ್​ಗಳ ಘರ್ಜನೆಯ ಮುಂದೆ ಮುಂಬೈ ಬಾಂಗ್ಲಾ ಟೈಗರ್ಸ್​ ಕಂಗಾಲಾಗಿ ಹೋದ್ರು. ಸ್ಫೋಟಕ ಆಟಕ್ಕೆ ಬೆಚ್ಚಿ ಬಿದ್ದು ಬಿಲ ಸೇರಿದ್ರು. ಟೀಮ್​ ಇಂಡಿಯಾ ಬ್ಯಾಟಿಂಗ್​ ಆರ್ಭಟ ಹೇಗಿತ್ತು.?
ಹೈದ್ರಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಫೀಲ್ಡಿಂಗಿಳಿದ್ರೂ, ಬಾಂಗ್ಲಾ ತಂಡದ ಆರಂಭದಲ್ಲೇ ಸಕ್ಸಸ್​ ಕಂಡಿತ್ತು. ಡೇಂಜರಸ್​ ಅಭಿಷೇಕ್​ ಶರ್ಮಾನ 4 ರನ್​ಗಳಿಗೆ ಕಟ್ಟಿ ಹಾಕಿತ್ತು. ಮೊದಲ ಸಕ್ಸಸ್​ ಕಂಡ ಬೆನ್ನಲ್ಲೇ ಬಾಂಗ್ಲಾ ಪಾಳಯದಲ್ಲಿ ಗೆಲುವಿನ ಕನಸು ಹುಟ್ಟಿತ್ತು.
ಇದನ್ನೂ ಓದಿ: T20 ಇತಿಹಾಸದಲ್ಲೇ ದಾಖಲೆ ಬರೆದ ಟೀಮ್ ಇಂಡಿಯಾ.. ಅಫ್ಘಾನ್ ದಾಖಲೆ ಉಡೀಸ್
/newsfirstlive-kannada/media/post_attachments/wp-content/uploads/2024/10/PANDYA.jpg)
ಸೂರ್ಯ-ಸಂಜು ಸ್ಪೋಟ.. ಬೆಚ್ಚಿ ಬಿದ್ದ ಬಾಂಗ್ಲಾ.!
ಬಾಂಗ್ಲಾದೇಶದ ಗೆಲ್ಲೋ ಕನಸು ಕೆಲವೇ ಕ್ಷಣಗಳಲ್ಲಿ ನುಚ್ಚುನೂರಾಯ್ತು. ಕ್ರಿಸ್​ನಲ್ಲಿ ಜೊತೆಯಾದ ಸೂರ್ಯಕುಮಾರ್​ ಯಾದವ್- ಸಂಜು ಸ್ಯಾಮ್ಸನ್​, ಹೈದ್ರಾಬಾದ್​ನಲ್ಲಿ ರನ್​ ಸುನಾಮಿ ಸೃಷ್ಟಿಸಿದ್ರು.
ಹೈದ್ರಾಬಾದ್​ನಲ್ಲಿ ಹಿಗ್ಗಾಮುಗ್ಗಾ ಬಾರಿಸಿದ ಸಂಜು​.!
ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಅಲ್ಪ ಮೊತ್ತಕ್ಕೆ ಔಟಾಗಿದ್ದ, ಸಂಜು ಸ್ಯಾಮ್ಸನ್​ ಹೈದ್ರಾಬಾದ್​​ನಲ್ಲಿ ಸ್ಫೋಟಕ ಆಟವಾಡಿದರು. ಬೌಂಡರಿ-ಸಿಕ್ಸರ್​​ಗಳಲ್ಲೇ ರನ್​ ಡೀಲ್​ ಮಾಡಿ ಫ್ಯಾನ್ಸ್​ಗೆ ಭರ್ಜರಿ ಟ್ರೀಟ್​ ನೀಡಿದರು. ಸಂಜುವಿನ ಆರ್ಭಟ ಹೇಗಿತ್ತು ಅನ್ನೋದಕ್ಕೆ ರಿಷಾದ್​ ಹೂಸೈನ್​ ಹಾಕಿದ 10ನೇ ಓವರ್​ ಬೆಸ್ಟ್​ ಎಕ್ಸಾಂಪಲ್​. ಈ ಒಂದು ಓವರ್​ನಲ್ಲಿ ಸಂಜು ಸಿಡಿಸಿದ್ದು ಬರೋಬ್ಬರಿ 5 ಸಿಕ್ಸರ್​. ರನ್​ಗಳಿಕೆಗೆ ಪರದಾಡ್ತಿದ್ದ ಸಂಜು ಸ್ಯಾಮ್ಸನ್​, ಹೈದ್ರಾಬಾದ್​ ಪಿಚ್​ನಲ್ಲಿ ನೀರು ಕುಡಿದಷ್ಟು ಸುಲಭಕ್ಕೆ ರನ್​ಗಳಿಸಿದ್ರು. ಸ್ಫೋಟಕ ಆಟವಾಡಿ ಕೇವಲ 40 ಎಸೆತಕ್ಕೆ ಸೆಂಚುರಿ ಚಚ್ಚಿದ್ರು.
ಒಂದೆಡೆ ಸಂಜು, ಮತ್ತೊಂದೆಡೆ ಸೂರ್ಯ, ಬಾಂಗ್ಲಾ ಕಂಗಾಲ್​.!
ಸಂಜು ಸ್ಯಾಮ್ಸನ್​ ಮಾತ್ರವಲ್ಲ.. ಇನ್ನೊಂದು ತುದಿಯಲ್ಲಿದ್ದ ಕ್ಯಾಪ್ಟನ್​ ಸೂರ್ಯ ಕೂಡ ರೌದ್ರಾವತಾರ ತಾಳಿದರು. ಬಾಂಗ್ಲಾ ಬೌಲರ್​​ಗಳನ್ನ ಚಿಂದಿ-ಉಡಾಯಿಸಿದ ಸೂರ್ಯಕುಮಾರ್​, ಬೌಂಡರಿ -ಸಿಕ್ಸರ್​ಗಳ ಸುನಾಮಿಯನ್ನೇ ಸೃಷ್ಟಿಸಿದರು. ಬರೋಬ್ಬರಿ 214.29ರ ಸ್ಟ್ರೈಕ್​ರೇಟ್​ನಲ್ಲಿ ಘರ್ಜಿಸಿದ ಸೂರ್ಯ 5 ಬೌಂಡರಿ, 5 ಸಿಕ್ಸರ್​ ಸಿಡಿಸಿದರು. 35 ಎಸೆತಗಳಲ್ಲಿ 75 ರನ್​ಗಳಿಸಿದರು.
ಇದನ್ನೂ ಓದಿ: ಬಿಗ್​ಬಾಸ್ ಮನೆಯಲ್ಲಿ ಜಗದೀಶ್- ಹಂಸಾ ಡುಯೇಟ್ ಮಾಡಿದ್ರಾ.. ಹೇಗಿರುತ್ತೆ ಇಂದಿನ ಕಿಚ್ಚನ ಪಂಚಾಯತಿ?
/newsfirstlive-kannada/media/post_attachments/wp-content/uploads/2024/10/PANDYA_TEAM.jpg)
111 ರನ್​ಗಳಿಸಿ ಸಂಜು ಔಟಾಗೋದ್ರೊಂದಿಗೆ 173 ರನ್​ಗಳ ಪಾರ್ಟ್​ನರ್​ಶಿಪ್​ ಅಂತ್ಯವಾಯ್ತು. ಸಂಜುವಿನ ಬೆನ್ನಲ್ಲೇ ಸೂರ್ಯ ಕೂಡ ಔಟಾದರು. ಆದ್ರೆ, ಬಾಂಗ್ಲಾಗೆ ಕಾಟ ತಪ್ಪಲಿಲ್ಲ.. ಬಳಿಕ ಜೊತೆಯಾದ ರಿಯಾನ್​ ಪರಾಗ್​, ಹಾರ್ದಿಕ್​ ಪಾಂಡ್ಯ ಮತ್ತಷ್ಟು ಸ್ಫೋಟಕ ಬ್ಯಾಟಿಂಗ್​ ನಡೆಸಿದರು.
ಹಾರ್ದಿಕ್​ 47 ರನ್​ ಚಚ್ಚಿದ್ರೆ, ಪರಾಗ್​ 34 ರನ್​ಗಳಿಸಿದರು. ಕೊನೆ ಎಸೆತದಲ್ಲಿ ರಿಂಕು ಸಿಂಗ್​ ಕೂಡ ಸಿಕ್ಸರ್​ ಸಿಡಿಸಿದರು. ಅಂತಿಮವಾಗಿ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ ಬರೋಬ್ಬರಿ 297 ರನ್​ಗಳಿಸಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us