ದಿಗ್ಗಜರ ನಡುವೆ ಶಿಷ್ಯರ ಮೇಲೆ ಗಂಭೀರ್​ಗೆ ಪ್ರೀತಿ; ಪ್ಲೇಯಿಂಗ್ 11 ವಿಚಾರದಲ್ಲಿ ಭಾರೀ ಗೊಂದಲ..!

author-image
Ganesh
Updated On
ದಿಗ್ಗಜರ ನಡುವೆ ಶಿಷ್ಯರ ಮೇಲೆ ಗಂಭೀರ್​ಗೆ ಪ್ರೀತಿ; ಪ್ಲೇಯಿಂಗ್ 11 ವಿಚಾರದಲ್ಲಿ ಭಾರೀ ಗೊಂದಲ..!
Advertisment
  • ಇಂದಿನಿಂದ ಟೀಮ್ ಇಂಡಿಯಾ ಅಭಿಯಾನ ಶುರು
  • ಟೀಮ್ ಇಂಡಿಯಾಗೆ ಬಾಂಗ್ಲಾ ಟೈಗರ್ಸ್​ ಸವಾಲು
  • ದುಬೈನ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಪಂದ್ಯ

ಬಹುನಿರೀಕ್ಷಿತ ಚಾಂಫಿಯನ್ಸ್​ ಟ್ರೋಫಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಇವತ್ತಿನಿಂದ ಟೀಮ್ ಇಂಡಿಯಾದ ಮಿನಿ ವಿಶ್ವಕಪ್ ದಂಗಲ್​ ಕಿಕ್ ಸ್ಟಾರ್ಟ್​ ಆಗಲಿದ್ದು, ಮೊದಲ ಪಂದ್ಯದಲ್ಲಿ ಬಾಂಗ್ಲಾ ಟೈಗರ್ಸ್​ ಎದುರು ಸೆಣಸಾಡಲು ಸನ್ನದ್ಧವಾಗಿದೆ. ಬಾಂಗ್ಲಾ ಟೈಗರ್ಸ್ ಚೊಚ್ಚಲ ಟ್ರೋಫಿ ಕನಸಿನಲ್ಲಿ ಕಣಕ್ಕಿಳಿಯುತ್ತಿದ್ರೆ, ಟಿ20 ಚಾಂಪಿಯನ್ ಟೀಮ್ ಇಂಡಿಯಾ 12 ವರ್ಷದ ಬಳಿಕ ಚಾಂಪಿಯನ್ಸ್​ ಟ್ರೋಫಿಯ ಚಾಂಪಿಯನ್ ಆಗೋ ಉತ್ಸಾಹದಲ್ಲಿ ಬ್ಯಾಟಲ್​ ಫೀಲ್ಡ್​ಗೆ ಇಳಿಯುತ್ತಿದೆ.

ರೋಹಿತ್​​​, ವಿರಾಟ್ ​ಇಂಪಾರ್ಟೆಂಟ್

ರೋಹಿತ್, ವಿರಾಟ್​ ಕೊಹ್ಲಿ ಟ್ರೋಫಿಯ ಸೆಂಟರ್​ ಆಫ್ ಅಟ್ರಾಕ್ಷನ್. ಕೊನೆ ಚಾಂಪಿಯನ್ಸ್​ ಟ್ರೋಫಿಯನ್ನಾಡ್ತಿರುವ ಇವರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಇಂಗ್ಲೆಂಡ್ ಎದುರು ಫಾರ್ಮ್​ಗೆ ಮರಳಿದ್ದ ರೋಹಿತ್, ವಿರಾಟ್​​​ ಕೊಹ್ಲಿ, ಟೂರ್ನಿಯುದ್ದಕ್ಕೂ ಅದೇ ಫಾರ್ಮ್​ ಮುಂದುವರಿಸಬೇಕಿದೆ. ಮುಖ್ಯವಾಗಿ ಯುವ ಆಟಗಾರರನ್ನ ಜೊತೆಯಾಗಿ ಕರೆದೊಯ್ದುವ ಜವಾಬ್ದಾರಿಯೂ ಇದೆ.

ಇದನ್ನೂ ಓದಿ: ಸಂಜು ಸ್ಯಾಮ್ಸನ್​ಗೆ ಬಿಸಿಸಿಐನಿಂದ ಬುಲಾವ್​​; ಸ್ಟಾರ್​ ಕ್ರಿಕೆಟರ್​ಗೆ ಸುವರ್ಣಾವಕಾಶ​​
publive-image

5ನೇ ಸ್ಲಾಟ್​​ನಲ್ಲಿ ಯಾರು?

ಟೀಮ್ ಇಂಡಿಯಾ ಆರಂಭಿಕರಾಗಿ ರೋಹಿತ್ ಶರ್ಮಾ, ಶುಭ್​ಮನ್ ಗಿಲ್ ಕಣಕ್ಕಿಳಿದ್ರೆ, 3ನೇ ಕ್ರಮಾಂಕದಲ್ಲಿ ವಿರಾಟ್, 4ನೇ ಕ್ರಮಾಂಕದಲ್ಲಿ ಶ್ರೇಯಸ್​ ಅಯ್ಯರ್ ಬ್ಯಾಟ್​ ಬೀಸುವುದು ಕನ್ಫರ್ಮ್. ಟೀಮ್ ಇಂಡಿಯಾಗೆ ಈಗ ಕಾಡ್ತಿರುವ ಪ್ರಶ್ನೆ 5ನೇ ಸ್ಲಾಟ್. ಟಾಪ್​-5ನಲ್ಲಿ ಲೆಫ್ಟಿ ಬ್ಯಾಟರ್ ಇಲ್ಲ ಎಂಬ ಕಾರಣಕ್ಕೆ ಇಂಗ್ಲೆಂಡ್​ ಸರಣಿಯಲ್ಲಿ ಅಕ್ಷರ್ ಪಟೇಲ್​​​​ನ ಮ್ಯಾನೇಜ್​ಮೆಂಟ್ ಪ್ರಯೋಗಿಸಿದ್ರು. ಅಕ್ಷರ್​ ಒಳ್ಳೆ ಪರ್ಫಾಮೆನ್ಸ್​ ನೀಡಿರೋದ್ರಿಂದ ಚಾಂಪಿಯನ್ಸ್​ ಟ್ರೋಫಿಯಲ್ಲಿ ಕೆ.ಎಲ್.ರಾಹುಲ್​ನ ಪ್ರಮೋಟ್ ಮಾಡಬೇಕಾ? 6ನೇ ಸ್ಲಾಟ್​ನಲ್ಲಿ ಆಡಿಸಬೇಕಾ ಅನ್ನೋ ಪ್ರಶ್ನೆ ಕಾಡ್ತಿದೆ.

ಕುಲ್​​ದೀಪ್ vs ವರುಣ್?

ಫಾಸ್ಟ್​ ಬೌಲಿಂಗ್ ಆಲ್​ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಫಿಕ್ಸ್​. ಸ್ಪಿನ್ ಆಲ್​ರೌಂಡರ್​ಗಳಾಗಿ ರವೀಂದ್ರ ಜಡೇಜಾ, ಆಕ್ಷರ್ ಪಟೇಲ್ ಆಡೇ ಆಡ್ತಾರೆ. ಸ್ಪೆಷಲಿಸ್ಟ್ ಸ್ಪಿನ್ನರ್​ ಕೋಟಾದಲ್ಲಿ ಸ್ಥಾನಕ್ಕೆ ಕುಲ್​ದೀಪ್​​​​​​​​​​​​​​, ವರುಣ್ ಚಕ್ರವರ್ತಿ ನಡುವೆ ಫೈಟ್​ ಇದೆ. ಈ ಸ್ಥಾನಕ್ಕೆ ಕುಲ್​ದೀಪ್ ಪ್ರಬಲ ಸ್ಪರ್ಧಿಯೇ ಆಗಿದ್ರೂ, ಗುರು ಗಂಭೀರ್ ಕೃಪಾಕಟಾಕ್ಷ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಮೇಲಿದೆ. ಅಂತಿಮ ಕ್ಷಣದಲ್ಲಿ ಯಾರಿಗೆ ಸ್ಥಾನ ನೀಡ್ತಾರೆ ಅನ್ನೋದು ಕಾದು ನೋಡಬೇಕಿದೆ.

ಪೇಸ್ ಬೌಲಿಂಗ್ ಕಾಂಬಿನೇಷನ್​!

ಬೂಮ್ರಾ ಇಲ್ಲದ ಬೌಲಿಂಗ್ ಅಟ್ಯಾಕ್ ಬಡವಾಗಿ ಕಾಣ್ತಿದೆ. ಪೇಸ್ ಅಟ್ಯಾಕ್ ಲೀಡ್ ಮಾಡೋ ಜವಾಬ್ದಾರಿ ಅನುಭವಿ ಶಮಿ ಮೇಲಿದೆ. ಶಮಿ ಜೊತೆಗೆ ಅರ್ಷ್​ದೀಪ್ ಸಿಂಗ್ ಚೆಂಡು ಹಂಚಿಕೊಳ್ಳೋದು ಕನ್ಫರ್ಮ್. ದುಬೈ ಕಂಡೀಷನ್ಸ್​ನಲ್ಲಿ ಆಡಿರೋ ಅನುಭವ ಆರ್ಷ್​​ದೀಪ್​ಗಿದೆ. ಜೊತೆಗೆ ಲೆಫ್ಟ್​ ರೈಟ್​ ಕಾಂಬಿನೇಷನ್ ತಂಡಕ್ಕೆ ಸಹಕಾರಿಯೂ ಆಗುತ್ತೆ. ಗಂಭಿರ್ ಒಲವು ಪ್ರೀತಿಯ ಶಿಷ್ಯ ಹರ್ಷಿತ್ ರಾಣಾ ಮೇಲಿದೆ. ಈ ಕಾರಣಕ್ಕೆ ​ಯಾರ್ ಆಡ್ತಾರೆ ಅನ್ನೋ ಕುತೂಹಲ ಫ್ಯಾನ್ಸ್​ಗೆ ಇದೆ.

ಇದನ್ನೂ ಓದಿ: ಫೋನ್​ ಕಳೆದು ಹೋದರೆ ಯಾವುದೇ ಚಿಂತೆ ಬೇಡ! ಕಳ್ಳನನ್ನು ಹುಡುಕೋದು ಬಹಳ ಸುಲಭ

publive-image

ಪಿಚ್​​ ಲಾಭ ಪಡೆಯಬೇಕು

ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಅಂಡರ್-19 ವಿಶ್ವಕಪ್, International League T20ಯ 15 ಪಂದ್ಯಗಳು ನಡೆದಿದೆ. ಐಸಿಸಿ ಈವೆಂಟ್​ಗಾಗಿಯೇ ಎರಡು ಪಿಚ್​ಗಳನ್ನು ಫ್ರೆಷ್ ಆಗಿಯೇ ಉಳಿಸಿದೆ. ಇದೇ ಫ್ರೆಷ್​ ಪಿಚ್​​​​​​​​​​​​​​​​​​​​​​​​​​​​​​​​​​​​​​​ಗಳಲ್ಲೇ ಟೀಮ್ ಇಂಡಿಯಾ ಆಡಲಿದೆ ಎನ್ನಲಾಗ್ತಿದೆ. ಬ್ಯಾಟಿಂಗ್ ಜೊತೆಗೆ ಬೌಲಿಂಗ್​​ಗೂ ಈ ಪಿಚ್ ಸಹಕಾರಿಯಾಗಲಿದ್ದು, ಲಾಭವನ್ನು ಟೀಮ್ ಇಂಡಿಯಾ ಎನ್​ಕ್ಯಾಶ್ ಮಾಡಿಕೊಳ್ಳಬೇಕಿದೆ.

ಗಂಭೀರ್-ರೋಹಿತ್​ ಸಾಮರ್ಥ್ಯಕ್ಕೆ ಅಗ್ನಿ ಪರೀಕ್ಷೆ

ಹೆಡ್ ಕೋಚ್ ಗಂಭೀರ್, ಕ್ಯಾಪ್ಟನ್ ರೋಹಿತ್​​ಗೆ ಚಾಂಪಿಯನ್ಸ್​ ಟ್ರೋಫಿ ನಿಜಕ್ಕೂ ಅಗ್ನಿಪರೀಕ್ಷೆಯ ಕಣವಾಗಿದೆ. ದ್ರಾವಿಡ್ ನೇತೃತ್ವದಲ್ಲಿ ಏಕದಿನ ವಿಶ್ವಕಪ್ ರನ್ನರ್ಸ್ ಆಗಿದ್ದ ಟೀಮ್ ಇಂಡಿಯಾ, ಟಿ20 ವಿಶ್ವಕಪ್ ಗೆದ್ದು ಬೀಗಿತ್ತು. ಇದೀಗ ​ಚಾಂಪಿಯನ್ಸ್​ ಟ್ರೋಫಿ ಕಣಕ್ಕಿಳಿತಿರೋ ಟೀಮ್​ ಇಂಡಿಯಾ ಗೆಲುವಿನ ದಾರಿಯಲ್ಲಿ ಮುನ್ನಡೆಸಬೇಕಾದ ಬಿಗ್ ಚಾಲೆಂಜ್​​​​ ಕ್ಯಾಪ್ಟನ್ ರೋಹಿತ್, ಕೋಚ್ ಗಂಭೀರ್ ಮುಂದಿದೆ.
ಟಿ20 ಚಾಂಪಿಯನ್ಸ್​ ಆಗಿ ಚಾಂಪಿಯನ್ಸ್​ ಟ್ರೋಫಿ ಟೂರ್ನಿಗೆ ಟೀಮ್ ಇಂಡಿಯಾ ಕಣಕ್ಕಿಳಿಯಲಿ ಸಜ್ಜಾಗಿದೆ. ಮತ್ತೊಂದು ಐಸಿಸಿ ಟ್ರೋಫಿ ಕಿರೀಟದೊಂದಿಗೆ ರೋಹಿತ್​ ಪಡೆ ತಾಯ್ನಾಡಿಗೆ ಮರಳಲಿ ಅನ್ನೋದೇ ಭಾರತೀಯರ ಆಶಯ.

ಇದನ್ನೂ ಓದಿ: ಹುಂಜಾ ವಿರುದ್ಧ ರೊಚ್ಚಿಗೆದ್ದ ವೃದ್ಧ; ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು.. ಮುಂದೆ ಆಗಿದ್ದೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment