/newsfirstlive-kannada/media/post_attachments/wp-content/uploads/2024/10/INDIA-CANEDA.jpg)
ಖಲಿಸ್ತಾನಿ ಉಗ್ರ ನಿಜ್ಜಾರ್ ಹತ್ಯೆಯಲ್ಲಿ ಭಾರತೀಯ ರಾಯಭಾರಿ ಸಂಜಯ್‌ಕುಮಾರ್ ವರ್ಮಾ ಹೆಸರನ್ನ ಕೆನಡಾ ಉಲ್ಲೇಖಿಸಿದೆ. ಇದ್ರಿಂದ ಕೆರಳಿದ ಭಾರತ ತೀಕ್ಷ್ಣ ತಿರುಗೇಟು ನೀಡಿದೆ. ರಾಯಭಾರಿಗಳನ್ನ ಹಿಂದಕ್ಕೆ ಕರೆಸಿಕೊಂಡಿದೆ. ಬಿಕ್ಕಟ್ಟಿನಲ್ಲಿದ್ದ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಬಿಗಡಾಯಿಸಿದೆ.
ಕೆನಡಾ ಏನು ಸೆಕೆಂಡ್ ಪಾಕಿಸ್ತಾನ ಆಗ್ತಿದ್ಯಾ? ತನ್ನ ಒಡಲಿನಲ್ಲಿ ಸೃಷ್ಟಿ ಆಗ್ತಿರುವ ಖಲಿಸ್ತಾನಿ ಉಗ್ರರನ್ನ ಮಟ್ಟ ಹಾಕೋದು ಬಿಟ್ಟು ಭಾರತದ ದೂಷಣೆಗೆ ನಿಂತಿದೆ. ಖಲಿಸ್ತಾನ ಉಗ್ರ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಪಿತೂರಿಯಿದೆ ಅನ್ನೋ ಕೆನಡಾ ಆರೋಪ, ಎರಡೂ ದೇಶಗಳ ನಡುವಿನ ಸಂಬಂಧ ಮತ್ತೆ ಹದಗೆಡಿಸಿದೆ. ಟ್ರುಡೋ ಹುಚ್ಚಾಟಕ್ಕೆ ಮೋದಿ ಸರ್ಕಾರ ತಕ್ಕ ಉತ್ತರ ನೀಡಿದೆ.
ಇದನ್ನೂ ಓದಿ:‘ಭಾರತದಲ್ಲಿ ಲಕ್ಷಾಂತರ ಜನರಿಗೆ ಸಂಕಷ್ಟ’- ಮೋದಿ ಸರ್ಕಾರದ ಮೇಲೆ ಕೆನಡಾ ಪ್ರಧಾನಿ ಗಂಭೀರ ಆರೋಪ; ಏನಾಗುತ್ತೆ?
ಭಾರತದ ತಲೆಗೆ ನಿಜ್ಜಾರ್ ಕೇಸ್ ಕಟ್ಟಲು ಕೆನಡಾ ಹೊಂಚು
ಕೆನಡಾದಿಂದ ರಾಜತಾಂತ್ರಿಕ ಅಧಿಕಾರಿಗಳನ್ನ ಕರೆಸಿಕೊಂಡ ಭಾರತ, ಇಲ್ಲಿನ ಕೆನಡಿಯನ್ನರನ್ನ ಹೊರ ಹಾಕಲು ನಿರ್ಧರಿಸಿದೆ. ಭಾರತದಲ್ಲಿರುವ ಆರು ಕೆನಡಾ ರಾಜತಾಂತ್ರಿಕ ಅಧಿಕಾರಿಗಳನ್ನ ದೇಶದಿಂದ ಹೊರಹೋಗಲು ಗಡುವು ನೀಡಿದೆ. ಅಕ್ಟೋಬರ್ 19 ಶನಿವಾರ ರಾತ್ರಿ 11:59ರೊಳಗೆ ಅಥವಾ ಅದಕ್ಕೂ ಮೊದಲು ಭಾರತವನ್ನು ತೊರೆಯಲು ಸೂಚಿಸಲಾಗಿದೆ.
ಏನಿದು ಕೆನಡಾ ನಾಟಕ?
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸುರ್ರೆ ನಗರದ ಗುರುದ್ವಾರದ ಬಳಿ ಖಲಿಸ್ತಾನಿ ಉಗ್ರ ನಿಜ್ಜಾರ್ ಆಗುಂತಕರ ಗುಂಡೇಟಿಗೆ ಬಲಿಯಾಗಿದ್ದ. ಕೃತ್ಯದಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಆರೋಪ ಮಾಡಿದ ಬಳಿಕ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿತ್ತು.
ಸರಿಯಾಗಿ ಒಂದು ವರ್ಷದ ಬಳಿಕ ಪ್ರಕರಣಕ್ಕೆ ಮತ್ತೆ ಜೀವ ನೀಡಿರುವ ಕೆನಡಾ ಸರ್ಕಾರ, ಹತ್ಯೆಯ ಹಿಂದೆ ಭಾರತೀಯ ರಾಯಭಾರಿ ಸಂಜಯ್‌ಕುಮಾರ್ ವರ್ಮಾ ಅವರ ಪಾತ್ರವಿದ್ದು, ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಹೇಳುವ ಮೂಲಕ ಹೊಸ ತಗಾದೆ ತೆಗೆದಿದೆ.
ಒಟ್ಟಾರೆ, ಭಾರತೀಯ ರಾಜತಾಂತ್ರಿಕರನ್ನ ತನಿಖಾ ವ್ಯಾಪ್ತಿಗೆ ತರಬೇಕು ಎಂಬ ಕೆನಡಾ ಮನವಿಯನ್ನ ತಿರಸ್ಕರಿಸಿದೆ. ಮತಬ್ಯಾಂಕ್‌ಗಾಗಿ ಸೃಷ್ಟಿಸಿದ ಸುಳ್ಳಿನ ಕಂತೆ ಅಂತ ಟೀಕಿಸಿದ ಭಾರತ, ಚುನಾವಣೆ ಹೊಸ್ತಿಲಲ್ಲಿ ಟ್ರುಡೊ ಸರ್ಕಾರ, ರಾಜಕೀಯ ಅಜೆಂಡಾಕ್ಕಾಗಿ ಭಾರತವನ್ನ ದೂಷಿಸ್ತಿದೆ.
ಇದನ್ನೂ ಓದಿ:ಅಂಬಾನಿ ಸಂಪತ್ತು.. ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಾಭ ಭಾರೀ ಹೆಚ್ಚಳ! ಆದಾಯ ಎಷ್ಟು ಲಕ್ಷ ಕೋಟಿ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ