newsfirstkannada.com

‘ನಂಗೂ ಸಿಟ್ಟು ಬರುತ್ತೆ..’ ಬೂಮ್ರಾ ಎಚ್ಚರಿಕೆ; ಕದನಕ್ಕೂ ಮುನ್ನ ‘ವಾರ್ನಿಂಗ್’ ಬ್ಯಾಟಲ್..!

Share :

Published January 25, 2024 at 9:10am

Update January 25, 2024 at 9:14am

    ಬೂಮ್ರಾ ಖಡಕ್​ ಎಚ್ಚರಿಕೆಗೆ ಇಂಗ್ಲೆಂಡ್​​​​​​ ಢರ್​​ ಗಯಾ

    ಆಂಗ್ಲರಿಗೆ ಬೂಮ್ರಾ ಕೊಟ್ಟ ವಾರ್ನಿಂಗ್ ಏನು..?

    ಇಂಗ್ಲೆಂಡ್​​ಗೆ ಡೆಡ್ಲಿ ಬೌಲರ್ ಗುನ್ನಾ, ಬೂಮ್ರಾ ಮಿಸೆಲ್​​ ಗನ್

ಭಾರತ-ಇಂಗ್ಲೆಂಡ್​ ಟೆಸ್ಟ್​​ ಸರಣಿಗೂ ಮುನ್ನ ಆಟಗಾರರ ವಾಗ್ಯುದ್ಧ ಜೋರಾಗಿದೆ. ಓಲಿ ರಾಬಿನ್ಸನ್​ ಕಿಂಗ್ ಕೊಹ್ಲಿಗೆ ವಾರ್ನಿಂಗ್ ಕೊಟ್ಟು ಸಾಕಷ್ಟು ಸುದ್ದಿಯಾಗಿದ್ರು. ಇದೀಗ ಇಂಡಿಯನ್​​ ಸ್ಟಾರ್ ವೇಗಿ ಜಸ್​ಪ್ರೀತ್ ಬೂಮ್ರಾ, ಇಡೀ ಇಂಗ್ಲೆಂಡ್​​ಗೆ ಸಖತ್ ಕೌಂಟರ್ ಕೊಟ್ಟಿದ್ದಾರೆ. ಬೂಮ್ರಾ ಬೆಂಕಿ ಮಾತು ಕೇಳಿ ಕ್ರಿಕೆಟ್​ ಜನಕರು ಥಂಡಾ ಹೊಡೆದಿದ್ದಾರೆ.

ಮೋಸ್ಟ್ ಎಕ್ಸೈಟಿಂಗ್​ ಇಂಡೋ-ಇಂಗ್ಲೆಂಡ್​​ ಟೆಸ್ಟ್​ ಸರಣಿ​​​​ ಕಳೆದ ಎಲ್ಲಾ ಸರಣಿಗಿಂತ ಹೆಚ್ಚು ಚರ್ಚೆಯಲ್ಲಿದೆ. ಅದಕ್ಕೆ ಕಾರಣ ಟಾಕ್ ವಾರ್​​​​. ಟೆಸ್ಟ್​ ಸರಣಿಗೆ ಚಾಲನೆ ಸಿಗಲಿದ್ದು, ಅದಕ್ಕೂ ಮುನ್ನ ಉಭಯ ದೇಶಗಳ ಆಟಗಾರರ ಮಧ್ಯೆ ಮಾತಿನ ಸಮರ ಏರ್ಪಟ್ಟಿದೆ. ಅಖಾಡಕ್ಕೆ ಧಮುಕುವ ಮುನ್ನವೇ ಟೀಮ್ ಇಂಡಿಯಾ ಸ್ಟಾರ್ ವೇಗಿ ಜಸ್​ಪ್ರೀತ್ ಬೂಮ್ರಾ, ಇಂಗ್ಲೆಂಡ್​​​​​​​​​ ಶೇಕ್​ ಆಗುವ ರೀತಿಯಲ್ಲಿ ವಾರ್ನಿಂಗ್ ಕೊಟ್ಟಿದ್ದಾರೆ.

‘ನಮ್ಮನ್ನ ಕೆಣಕಬೇಡಿ’
ಜಸ್​ಪ್ರೀತ್​​ ಬೂಮ್ರಾ ಬೌಲಿಂಗ್ ಬೆಂಕಿ ನಿಜ. ಅವರ ಬೆಂಕಿ-ಬಿರುಗಾಳಿ ಬೌಲಿಂಗ್​​​​​ಗೆ ಎದುರಾಳಿ ಪಡೆ ಪತರುಗುಟ್ಟುತ್ತೆ. ಆ ಮಟ್ಟಿಗೆ ಟೆರರ್​​ ಬೌಲಿಂಗ್​​. ಇಂತಹ ಮಿಸೆಲ್​ ಗನ್​​ ಇಂಗ್ಲೆಂಡ್​​​​​​​ ಎದುರಿನ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನರಸಿಂಹನ ಉಗ್ರರೂಪ ತಾಳಿದ್ದು, ಹರಿತ ಮಾತುಗಳಿಂದ ಆಂಗ್ಲರಿಗೆ ಇರಿದಿದ್ದಾರೆ. ನಮ್ಮನ್ನ ಕೆಣಕಬೇಡಿ, ಕೆಣಕಿದ್ರೆ ನಿಮಗೆ ಉಳಿಗಾಲವಿಲ್ಲ ಅಂತ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ.
ಒತ್ತಡಕ್ಕೆ ಸಿಲುಕಿಸೋದೆ ನನ್ನ ಗುರಿ

ನನಗೂ ಸಿಟ್ಟು ಬರುತ್ತೆ. ಯಾಕಂದ್ರೆ ನಾನು ಒಬ್ಬ ಬೌಲರ್​​. ಹೀಗಾಗಿ ನಾನು ಸಿಟ್ಟು ಮಾಡಿಕೊಳ್ಳುತ್ತೇನೆ. ಆದರೆ ಇದು ನನಗೆ ಇಷ್ಟವಿಲ್ಲ. ಇಲ್ಲಿ ನಾನು ಯಾರನ್ನೂ ರಂಜಿಸಲಲ್ಲ. ವಿಕೆಟ್ ಪಡೆಯೋದು ನನ್ನ ಉದ್ದೇಶ, ಆ ಮೂಲಕ ನಿಮ್ಮನ್ನ ಒತ್ತಡಕ್ಕೆ ಸಿಲುಕಿಸಲು ಪ್ರಯತ್ನಿಸುವೆ. ಹಾಗಂತ ನಾನು ತಾಳ್ಮೆ ಕಳೆದುಕೊಳ್ಳಲು ಬಯಸಲ್ಲಜಸ್​ಪ್ರೀತ್ ಬೂಮ್ರಾ, ಟೀಮ್ ಇಂಡಿಯಾ ಕ್ರಿಕೆಟಿಗ

ಭಾರತದಲ್ಲಿ ಬೂಮ್ರಾ ಮಿಸೆಲ್​​ ಗನ್
ಭಾರತದಲ್ಲಿ ಸರಣಿ ನಡೆಯುತ್ತಿರೋದ್ರಿಂದ ಮಿಸೆಲ್​ ಗನ್ ಬೂಮ್ರಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ತವರಿನಲ್ಲಿ ಆಡಿದ್ದು ಕೆಲವೇ ಪಂದ್ಯವಾದ್ರು ಧೂಳೆಬ್ಬಿಸಿದ್ದಾರೆ. 4 ಪಂದ್ಯವಾಡಿ 14 ವಿಕೆಟ್ ಕಬಳಿಸಿದ್ದು, ಇದೇ ಇಂಗ್ಲೆಂಡ್ ನಿದ್ದೆಗೆಡಿಸಿದೆ. ಹೇಳಿ ಕೇಳಿ ಬೂಮ್ರಾ ಸದ್ಯ ಸಾಲಿಡ್ ಫಾರ್ಮ್​ನಲ್ಲಿದ್ದಾರೆ. ಜೊತೆಗೆ ಹೋಮ್ ಅಡ್ವಾಂಟೇಜ್ ಬೇರೆ. ಹೀಗಾಗಿ ಪವರ್​​ಫುಲ್ ಮಿಸೆನ್​ ಗನ್ ದಾಳಿಗೆ ಇಂಗ್ಲೆಂಡ್​ ಉಡೀಸ್ ಆಗೋದು ಗ್ಯಾರಂಟಿ.

ಇಂಗ್ಲೆಂಡ್​​ಗೆ ಡೆಡ್ಲಿ ಬೌಲರ್ ಗುನ್ನಾ..!
ಇಡೀ ಇಂಗ್ಲೆಂಡ್​​​ ಟೀಮ್​​ ಫೋಕಸ್​ ಜಸ್​ಪ್ರೀತ್​​ ಬೂಮ್ರಾ ಮೇಲೆ ನೆಟ್ಟಿದೆ. ಯಾಕಂದ್ರೆ, ಪ್ರತಿ ಸರಣಿಯಲ್ಲೂ ಆಂಗ್ಲರಿಗೆ ಬೂಮ್ರಾನೇ ವಿಲನ್​​​. ವಿಧ್ವಂಸಕ ದಾಳಿ ನಡೆಸಿ ನಿದ್ರೆಗಣ್ಣಲ್ಲು ಕನವರಿಸುವಂತೆ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ಬೂಮ್ರಾ
ಜಸ್​​ಪ್ರೀತ್ ಬೂಮ್ರಾ ಇಂಗ್ಲೆಂಡ್​ ವಿರುದ್ಧ 18 ಟೆಸ್ಟ್​ ಇನ್ನಿಂಗ್ಸ್​​​ ಆಡಿದ್ದು, 41 ವಿಕೆಟ್​ ಪಡೆದಿದ್ದಾರೆ. 64 ರನ್​ಗೆ 5 ವಿಕೆಟ್​ ಪಡೆದಿರೋದು ಬೆಸ್ಟ್​ ಬೌಲಿಂಗ್ ಸಾಧನೆ ಆಗಿದೆ.

ಸೈಲೆಂಟಾಗಿದ್ರೆ ಓಕೆ, ಇಲ್ಲದಿದ್ರೆ ಮಾರಿಹಬ್ಬ
ಕಳೆದ ಪ್ರವಾಸದಲ್ಲಿ ಬೂಮ್ರಾ-ಜೇಮ್ಸ್ ಆಂಡರ್ಸನ್​ ನಡ್ವೆ ಟಾಕ್​​ ವಾರ್​ ಏರ್ಪಟ್ಟಿತ್ತು. ಸದ್ಯ ಬೂಮ್ರಾ ಅದನ್ನ ಮೆಲುಕು ಹಾಕುವ ಮೂಲಕ ಇಂಗ್ಲೆಂಡ್​​ಗೆ ಸೈಲೆಂಟಾಗಿರಿ, ಇಲ್ಲದಿದ್ರೆ ನಿಮಗೆ ಮಾರಿಹಬ್ಬ ಕಾದಿದೆ ಅಂತ ಎಚ್ಚರಿಕೆ ನೀಡಿದ್ದಾರೆ.

‘ಆ ಘಟನೆ ಇಡೀ ತಂಡವನ್ನ ಪ್ರಚೋದಿಸಿತು’
ನಾನು ದಣಿನಿದ್ದೆ, ಅದು ಕೊನೆ ವಿಕೆಟ್ ಎಂದು ಭಾವಿಸಿದ್ದೆ, ಬಾಲ್​​​​ ಅನ್ನ ತಳ್ಳಲು ಪ್ರಯತ್ನಿಸಿದೆ. ಅವನ ಬಳಿ ಹೋಗಿ, ನೀನು ಚೆನ್ನಾಗಿದ್ದೀಯಾ? ಎಂದು ಕೇಳಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಇದರಿಂದ ಹಳೆಯ ನೆನಪಿಗೆ ಹೋದೆ. ನಾನು ಉತ್ತಮ ವ್ಯಕ್ತಿಯಾಗಲು ಪ್ರಯತ್ನಿಸುತ್ತಿದ್ದೇನೆ. ಆದರೆ ಇದನ್ನ ಸರಿಯಾಗಿ ತೆಗೆದುಕೊಳ್ಳಲಿಲ್ಲ. ಆ ಘಟನೆ ಇಡೀ ತಂಡವನ್ನ ಪ್ರಚೋದಿಸಿತುಜಸ್​ಪ್ರೀತ್ ಬೂಮ್ರಾ, ಟೀಮ್ ಇಂಡಿಯಾ ಕ್ರಿಕೆಟಿಗ

ಒಟ್ಟಿನಲ್ಲಿ, ಜಸ್​ಪ್ರೀತ್ ಬೂಮ್ರಾ ಇಂಗ್ಲೆಂಡ್​ಗೆ ​ ವಾರ್ನಿಂಗ್ ನೀಡುವ ಮೂಲಕ ಆಪ್​ ಫೀಲ್ಡ್​ನಲ್ಲಿ ಟೆಸ್ಟ್​ ವಾರ್​ನ ಕಿಚ್ಚು ಹಚ್ಚಿದ್ದಾರೆ. ಆನ್​​ಫೀಲ್ಡ್​​​​ನಲ್ಲೂ ಬೂಮ್ರಾ ಬೆಂಕಿ-ಬಿರುಗಾಳಿಯ ಅವತಾರ ಎತ್ತಿದ್ರೆ ಇಂಗ್ಲೆಂಡ್​ ಮಕಾಡೆ ಮಲಗೋದು ಪಕ್ಕಾ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ನಂಗೂ ಸಿಟ್ಟು ಬರುತ್ತೆ..’ ಬೂಮ್ರಾ ಎಚ್ಚರಿಕೆ; ಕದನಕ್ಕೂ ಮುನ್ನ ‘ವಾರ್ನಿಂಗ್’ ಬ್ಯಾಟಲ್..!

https://newsfirstlive.com/wp-content/uploads/2024/01/BHUMRAH-1.jpg

Load More