ಜಸ್​ಪ್ರಿತ್​​ ಬೂಮ್ರಾ ಮೊದಲ ಪಂದ್ಯದಲ್ಲಿ ಆಡಲೇಬಾರದು.. ಕ್ರಿಕೆಟರ್​ ಹೀಗೆ ಹೇಳಿದ್ದು ಯಾಕೆ?

author-image
Bheemappa
Updated On
ಜಸ್​ಪ್ರಿತ್​​ ಬೂಮ್ರಾ ಮೊದಲ ಪಂದ್ಯದಲ್ಲಿ ಆಡಲೇಬಾರದು.. ಕ್ರಿಕೆಟರ್​ ಹೀಗೆ ಹೇಳಿದ್ದು ಯಾಕೆ?
Advertisment
  • ಮೊದಲ ಪಂದ್ಯದಿಂದ ಯಾರ್ಕರ್ ಸ್ಪೆಷಲಿಸ್ಟ್​ ಬೂಮ್ರಾ ಔಟ್?​
  • ಬೂಮ್ರಾ ಅವರನ್ನ ಹೆಚ್ಚಿನ ಪಂದ್ಯಗಳಲ್ಲಿ ಏಕೆ ಆಡಿಸುವುದಿಲ್ಲ?
  • ಈಗಾಗಲೇ ಈ ಕುರಿತು ಸ್ಪಷ್ಟನೆ ನೀಡಿರುವ ಚೀಫ್ ಸೆಲೆಕ್ಟರ್

ಯುವ ಆಟಗಾರರೊಂದಿಗೆ ಟೀಮ್ ಇಂಡಿಯಾ, ಇಂಗ್ಲೆಂಡ್​ ವಿರುದ್ಧ ಜೂನ್​ 20 ರಿಂದ ಟೆಸ್ಟ್​ ಪಂದ್ಯಗಳನ್ನು ಆಡಲಿದೆ. ಈಗಾಗಲೇ ಆಂಗ್ಲರ ನಾಡಿನಲ್ಲಿ ಭರ್ಜರಿ ಅಭ್ಯಾಸ ನಡೆಸಿರುವ ಶುಭ್​ಮನ್ ಗಿಲ್​ ನೇತೃತ್ವದ ತಂಡ ಒಳ್ಳೆಯ ಪ್ರದರ್ಶನ ನೀಡಿದೆ. ಇದರ ಬೆನಲ್ಲೇ ತಂಡದ ಯಾರ್ಕರ್ ಸ್ಪೆಷಲಿಸ್ಟ್​ ಜಸ್​ಪ್ರಿತ್​​ ಬೂಮ್ರಾ ಅವರನ್ನು ಈ ಸರಣಿಯಲ್ಲಿ ಹೇಗೆ ಆಡಿಸಬೇಕು ಎಂದು ಸಾಕಷ್ಟು ಚರ್ಚೆ ನಡೆಯುತ್ತಿದೆ.

ಭಾರತ ತಂಡದ ಚೀಫ್ ಸೆಲೆಕ್ಟರ್ ಆಗಿರುವ ಅಜಿತ್ ಅಗರ್ಕರ್ ಅವರು, ಬೂಮ್ರಾ ಅವರನ್ನು ಎಲ್ಲ ಟೆಸ್ಟ್​ ಪಂದ್ಯಗಳಲ್ಲಿ ಆಡಿಸಲು ಆಗುವುದಿಲ್ಲ ಎಂದು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಬೂಮ್ರಾಗೆ ಎಲ್ಲ ಪಂದ್ಯಗಳಲ್ಲಿ ಆಡಿಸಿದರೆ ವರ್ಕ್​​ಲೋಡ್​ ಆಗಿ ಮುಂದಿನ ದಿನಗಳಲ್ಲಿ ತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಟೆಸ್ಟ್​ನಲ್ಲಿ ಬೂಮ್ರಾ ಬೌಲಿಂಗ್​ ಅನ್ನು ಬಿಸಿಸಿಐ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

publive-image

ಈ ಚರ್ಚೆ ನಡೆಯುತ್ತಿರುವಾಗಲೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಬ್ರಾಡ್ ಹಾಗ್ ಅವರು ಬೂಮ್ರಾ ಬಗ್ಗೆ ಮಾತನಾಡಿದ್ದಾರೆ. ಜೂನ್ 20 ರಿಂದ ಇಂಗ್ಲೆಂಡ್​ ವಿರುದ್ಧ ಆರಂಭವಾಗುವ ಮೊದಲ ಟೆಸ್ಟ್​ನಿಂದ ಬೂಮ್ರಾಗೆ ವಿಶ್ರಾಂತಿ ನೀಡಬೇಕು. ಇದಾದ ಮೇಲೆ ಮುಂದಿನ ಎರಡು ಟೆಸ್ಟ್​ಗಳಲ್ಲಿ ಬೂಮ್ರಾಗೆ ಅವಕಾಶ ನೀಡಿದರೆ ಭಾರತ ತಂಡಕ್ಕೆ ಹೆಚ್ಚಿನ ಫಲ ಸಿಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಇದೆ ಈತನ ಭಯ.. ತವರಲ್ಲಿ 21 ಶತಕ, 32 ಅರ್ಧಶತಕ ಸಿಡಿಸಿರುವ ಬ್ಯಾಟರ್​!

publive-image

ಮೂರು ಪಂದ್ಯಗಳಲ್ಲಿ ತುಂಬಾ ಕಾರ್ಯತಂತ್ರ ಮಾಡಬೇಕು. ಬೂಮ್ರಾ ಇಂದ ಎಲ್ಲಿ ಹೆಚ್ಚು ಲಾಭವಿದೆ ಎಂದು ತಿಳಿದುಕೊಳ್ಳಬೇಕು. ಏಕೆಂದರೆ ಯಾವುದೇ ಸಮಯದಲ್ಲಾದರೂ ಪಂದ್ಯದ ದಿಕ್ಕನ್ನೇ ಬದಲಿಸುವ ಬೆಸ್ಟ್ ಬೌಲರ್ ಆಗಿದ್ದಾರೆ. ಹೀಗಾಗಿ ಲಾರ್ಡ್ಸ್​ನಲ್ಲಿ ಬೂಮ್ರಾರನ್ನ ಆಡಿಸಬೇಕಾ, ಬೇಡ್ವಾ ಎನ್ನುವುದನ್ನು ತಂಡದವರು ಖಚಿತ ಪಡಿಸಿಕೊಳ್ಳಬೇಕು. ನಾನು ಆಗಿದ್ರೆ ಅವರನ್ನು ಮೊದಲ ಟೆಸ್ಟ್​ ಪಂದ್ಯದಿಂದ ವಿಶ್ರಾಂತಿ ನೀಡುತ್ತಿದ್ದೆ ಎಂದು ಟೀಮ್ ಇಂಡಿಯಾಕ್ಕೆ ಬ್ರಾಡ್ ಹಾಗ್ ಸಲಹೆ ನೀಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment