ಸೂರ್ಯಗೆ ಕಾಡ್ತಿದೆ ಒಂದೇ ಒಂದು ಚಿಂತೆ.. ಸರಿ ಹೊದ್ರೆ ಟೀಂ ಇಂಡಿಯಾ ನೆಕ್ಸ್ಟ್​ ಲೇವೆಲ್​..!

author-image
Ganesh
Updated On
31ರನ್​ ಅಂತರದಲ್ಲಿ 7 ವಿಕೆಟ್ ಬೇಟೆ.. ಅದ್ಭುತ ಆರಂಭ ಕಂಡರೂ ಲಂಕನ್ನರ ಕಟ್ಟಿಹಾಕಿದ್ದು ಈ ಆಟಗಾರರು..!
Advertisment
  • ಟೀಮ್ ಇಂಡಿಯಾ ಸಾರಥಿಗೆ ಬದಲಾವಣೆಯ ಮನಸಿಲ್ಲ
  • ಚೆಪಾಕ್​ನಲ್ಲೂ ಎದುರಾಳಿಗಳ ಮೇಲೆ ಸ್ಪಿನ್ ಅಸ್ತ್ರ
  • ಇಂಡಿಯನ್ ಕಂಡೀಷನ್ಸ್​ಗೆ ಬೆಚ್ಚಿಬಿದ್ದ T20 ಸ್ಪೆಷಲಿಸ್ಟ್ಸ್​

ಮೊದಲ T20 ಪಂದ್ಯ ಗೆದ್ದ ಟೀಮ್ ಇಂಡಿಯಾ ಇಂದು 2ನೇ ಪಂದ್ಯ ಗೆಲ್ಲೋಕೆ ಭರ್ಜರಿ ತಯಾರಿ ನಡೆಸಿಕೊಂಡಿದೆ. ಚೆನ್ನೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ, ಗೆಲುವಿನ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಕೊಲ್ಕತ್ತಾದಲ್ಲಿ ಹೀನಾಯ ಸೋಲು ಅನುಭವಿಸಿರುವ ಇಂಗ್ಲೆಂಡ್, ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಇಂಗ್ಲೆಂಡ್ ಪೆವಿಲಿಯನ್ ಪರೇಡ್..!

ಚೆಪಾಕ್​​ನಲ್ಲಿ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್,​​​​ ಮತ್ತೆ ಮುಖಾಮುಖಿಯಾಗಲಿವೆ. ವರ್ಲ್ಡ್​ ನಂಬರ್ ವನ್ ಟಿ-20 ಟೀಮ್ ವರ್ಸಸ್, ಬೆಸ್ಟ್ ಟಿ-20 ಟೀಮ್ ಕದನ ನೋಡಲು ಇಡೀ ದೇಶವೇ ಕಾಯ್ತಿದೆ. ವೀಕೆಂಡ್​​ನಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಕಿಕ್ ನೀಡಲು T20 ಸ್ಟಾರ್ಸ್​ ರೆಡಿಯಾಗಿದ್ದಾರೆ.

ಇದನ್ನೂ ಓದಿ: ಟ್ರಂಪ್ ಬಂದ ಬೆನ್ನಲ್ಲೇ ಭಾರತಕ್ಕೆ ದೊಡ್ಡ ಸಕ್ಸಸ್.. ಉಗ್ರ ರಾಣಾನ ಹಸ್ತಾಂತರಿಸಲು ಅಮೆರಿಕ ಗ್ರೀನ್ ಸಿಗ್ನಲ್..!

ಟೀಮ್ ಇಂಡಿಯಾಗೆ ಬದಲಾವಣೆಯ ಮನಸಿಲ್ಲ

ಕೊಲ್ಕತ್ತಾ ಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾ ಎಲ್ಲಾ ಬಾಕ್ಸ್​ಗಳನ್ನ ಟಿಕ್ ಮಾಡಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್​ನಲ್ಲಿ, ಅದ್ಭುತ ಪ್ರದರ್ಶನ ನೀಡಿದೆ. ಹಾಗಾಗಿ ಇಂದಿನ ಪಂದ್ಯಕ್ಕೆ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಯಂಗ್ ಇಂಡಿಯಾದ ಬಲಿಷ್ಟ ಬ್ಯಾಟಿಂಗ್​ ಲೈನ್​ಅಪ್​​​​ ತಂಡದ ಬಲ ಹೆಚ್ಚಿಸಿದೆ.

ಎದುರಾಳಿಗಳ ಮೇಲೆ ಸ್ಪಿನ್ ಅಸ್ತ್ರ

ಈಡನ್​ ಗಾರ್ಡನ್ಸ್​ನಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ಸ್​, ಎಕ್ಸಲೆಂಟ್ ಬೌಲಿಂಗ್​ ಮಾಡಿದ್ರು. ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಮತ್ತು ರವಿ ಬಿಷ್ನೋಯ್, ಆಂಗ್ಲರನ್ನ ಕಟ್ಟಿಹಾಕಲು ಯಶಸ್ವಿಯಾದ್ರು. ಇದೇ ಸ್ಪಿನ್ ಅಸ್ತ್ರವನ್ನ ನಾಯಕ ಸೂರ್ಯಕುಮಾರ್ ಯಾದವ್, ಚೆಪಾಕ್​ನಲ್ಲೂ ಮುಂದುವರೆಸಲಿದ್ದಾರೆ.

ಇದನ್ನೂ ಓದಿ: ಸ್ಟಾರ್​ ಆಟಗಾರನಿಗೆ ಬಿಗ್​ ಶಾಕ್​​; ವಿರಾಟ್​ ಕೊಹ್ಲಿ ಆಪ್ತನಿಗೆ KKR ಕ್ಯಾಪ್ಟನ್ಸಿ

2ನೇ ವೇಗಿಯ ಚಿಂತೆ ನಾಯಕನಿಗೆ ಕಾಡ್ತಿದೆ

ಎಡಗೈ ವೇಗಿ ಆರ್ಷ್​ದೀಪ್ ಸಿಂಗ್​​​​​​​​​​​​, ಪವರ್-​ಪ್ಲೇನಲ್ಲಿ ಸಖತ್ ಎಫೆಕ್ಟೀವ್ ಬೌಲರ್. ಆರಂಭದಲ್ಲೇ ಎದುರಾಳಿಗಳನ್ನು ಕಟ್ಟಿಹಾಕೋ ಆರ್ಷ್​ದೀಪ್​ಗೆ ಸಾಥ್ ನೀಡೋ ಬೌಲರ್ ಬೇಕು. ಒಂದು ವೇಳೆ ಹೊಸ ಬಾಲ್​ನಲ್ಲಿ ಆರ್ಷ್​ದೀಪ್​​ಗೆ ಒಳ್ಳೆ ಪಾರ್ಟ್ನರ್ ಸಿಕ್ಕಿದ್ರೆ ಇಂಡಿಯಾ ಬೌಲಿಂಗ್ ಅಟ್ಯಾಕ್ ನೆಕ್ಸ್ಟ್​​ ಲೆವೆಲ್​​ನಲ್ಲಿರಲಿದೆ.

ಬೆಚ್ಚಿಬಿದ್ದ ಇಂಗ್ಲೆಂಡ್ T20 ಸ್ಪೆಷಲಿಸ್ಟ್ಸ್​

ಫಿಲ್ ಸಾಲ್ಟ್​, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್ ಸ್ಟೋನ್, ಜೇಕಬ್ ಬೆತಲ್ ಮತ್ತು ಜಾಮಿ ಓವರ್​ಟನ್​​ರಂತಹ ಟಿ-20 ಸ್ಪೆಷಲಿಸ್ಟ್ ಬ್ಯಾಟರ್ಸ್​​ ಮೊದಲ ಪಂದ್ಯದಲ್ಲೇ ಬಾಲ ಮುದುರಿಕೊಂಡಿದ್ದಾರೆ. ಇಂಡಿಯನ್ ಕಂಡಿಷನ್ಸ್​ಗೆ ಬೆಚ್ಚಿಬಿದ್ದಂತೆ ಕಾಣ್ತಿರುವ ಆಂಗ್ಲರು ಚೆಪಾಕ್​​​ನಲ್ಲೂ ಒದ್ದಾಡೋದು ಖಚಿತ.

ಅಗ್ರೆಸಿವ್ ಆಟ ಬಿಡಲ್ಲ..!

ಮೊದಲ ಟಿ-20 ಪಂದ್ಯ ಸೋತ ಬೆನ್ನಲೇ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಸೋಲಿನಿಂದ ನಾವು ಕಂಗೆಟ್ಟಿಲ್ಲ. ಮುಂದಿನ ಪಂದ್ಯಗಳಲ್ಲಿ ನಾವು ಎಂದಿನಂತೆ ನಮ್ಮ ಅಗ್ರೆಸಿವ್ ಬ್ರ್ಯಾಂಡ್ ಆಫ್ ಕ್ರಿಕೆಟ್ ಆಡ್ತೀವಿ ಅಂತ ಹೇಳಿದ್ದಾರೆ. ಆ ಮೂಲಕ ಟೀಮ್ ಇಂಡಿಯಾಕ್ಕೆ ಸೋಲಿನ ಸೇಡು ತೀರಿಸಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ರೈಲ್ವೆ ಸ್ಟೇಷನ್, ಒಂದೇ ಬಾರಿ 44 ರೈಲುಗಳು ನಿಲ್ಲುತ್ತವೆ! ಎಲ್ಲಿದೆ ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment