/newsfirstlive-kannada/media/post_attachments/wp-content/uploads/2025/01/IND-VS-ENG.jpg)
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ-20 ಸರಣಿಯ ಮೂರನೇ ಪಂದ್ಯವು ಗುಜರಾತ್​ನ ರಾಜ್​ಕೋಟ್​ನಲ್ಲಿ ನಡೆಯಲಿದೆ. ಈಗಾಗಲೇ ಎರಡು ಮ್ಯಾಚ್​​ಗಳನ್ನು ಗೆದ್ದಿರುವ ಭಾರತ ತಂಡ, 3ನೇ ಪಂದ್ಯವನ್ನ ಗೆಲ್ಲುವ ಮೂಲಕ ಟಿ-20 ಸರಣಿಯನ್ನು ಕೈವಶಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಸರಣಿ ರೋಚಕಘಟ್ಟ ತಲುಪುತ್ತಿದ್ದಂತೆಯೇ ಕ್ರಿಕೆಟ್ ಅಭಿಮಾನಿಗಳಿಗೆ ಜಿಯೋ ಸಿನಿಮಾ ಗುಡ್​ನ್ಯೂಸ್ ನೀಡಿದೆ.
ಇದನ್ನೂ ಓದಿ: ATM ಮೂಲಕ PF ಹಣ ಡ್ರಾ..! ಗ್ರಾಹಕರಿಗೆ ಭರ್ಜರಿ ಗುಡ್​ನ್ಯೂಸ್​..!
ನಾಳೆ ನಡೆಯಲಿರುವ ಪಂದ್ಯವನ್ನು ಅಭಿಮಾನಿಗಳು ಮನೆಯಲ್ಲೇ ಕುಳಿತು ವೀಕ್ಷಿಸಬಹುದು. ಇದಕ್ಕಾಗಿ ಸ್ಮಾರ್ಟ್‌ಫೋನ್‌ನಲ್ಲಿ ಜಿಯೋ ಸಿನಿಮಾ ಆಪ್ ಅಥವಾ ಹಾಟ್‌ಸ್ಟಾರ್ ಇರುವುದು ಅಗತ್ಯ. ಜಿಯೋ ಸಿನಿಮಾ ಮತ್ತು ಹಾಟ್‌ಸ್ಟಾರ್ ವಿಲೀನಗೊಂಡಿವೆ. ಅಭಿಮಾನಿಗಳು ಈ ಅಪ್ಲಿಕೇಶನ್‌ಗಳಲ್ಲಿ ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.
ಜಿಯೋ ಸಿನಿಮಾ ತನ್ನ ವೀಕ್ಷಕರಿಗೆ ಪಂದ್ಯವನ್ನು ಉಚಿತವಾಗಿ ತೋರಿಸಲು ನಿಗದಿತ ಸಮಯ ನೀಡುತ್ತದೆ. ಆದರೆ ಇದು ತಿಂಗಳಿಗೊಮ್ಮೆ ಮಾತ್ರ ಲಭ್ಯ. ನಂತರ ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಾಟ್‌ಸ್ಟಾರ್‌ನಲ್ಲಿಯೂ ನೋಡಬಹುದು. ಆದರೆ ಅಪ್ಲಿಕೇಶನ್‌ನ ಚಂದಾದಾರಿಕೆ ಪಡೆಯೋದು ಅಗತ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us