ಕೇವಲ ಒಂದು ರನ್​ ಅಂತರದಲ್ಲಿ 3 ವಿಕೆಟ್ ಪತನ.. ಮೊದಲ ಇನ್ನಿಂಗ್ಸ್​ ಟೈನಲ್ಲಿ ಅಂತ್ಯ..!

author-image
Ganesh
Updated On
ಕ್ರಿಕೆಟ್ ಕಾಶಿಯಲ್ಲಿ ಕನ್ನಡಿಗನ ಕ್ಲಾಸ್ ಆಟ.. ಭಾರತದಲ್ಲಿ ಬರೀ 1, ವಿದೇಶದಲ್ಲಿ 9 ಏನದು..?
Advertisment
  • ರಾಹುಲ್​-ಪಂತ್​ ಜೊತೆಯಾಟಕ್ಕೆ ಇಂಗ್ಲೆಂಡ್​ ಕಂಗಾಲು
  • ಲಾರ್ಡ್ಸ್​​ ಅಂಗಳದಲ್ಲಿ ಕನ್ನಡಿಗ ರಾಹುಲ್​ ಶತಕ
  • ಆಂಗ್ಲರನ್ನ ಕಾಡಿದ ಸರ್ ರವೀಂದ್ರ ಜಡೇಜಾ

ಇಂಡೋ-ಇಂಗ್ಲೆಂಡ್​ 3ನೇ ಟೆಸ್ಟ್​ ಪಂದ್ಯ ರೋಚಕ ತಿರುವು ಪಡೆದುಕೊಂಡಿದೆ. ನಿನ್ನೆಯ ಇಡೀ ದಿನ ನಡೆದಿದ್ದು ಒಂದು ಆಟವಾದ್ರೆ, ಕೊನೆಯ ಓವರ್​ನಲ್ಲಿ ನಡೆದ ಹೈಡ್ರಾಮಾದ್ದೇ ಮತ್ತೊಂದು ಆಟ. ಕ್ರಿಕೆಟ್​ ಕಾಶಿ ಲಾರ್ಡ್ಸ್​ನಲ್ಲಿ ನಿನ್ನೆ ದೊಡ್ಡ ಹೈಡ್ರಾಮಾ ನಡೀತು.

ಸೆಷನ್​-1: ರಾಹುಲ್​-ಪಂತ್​ ಜೊತೆಯಾಟಕ್ಕೆ ಇಂಗ್ಲೆಂಡ್​ ಕಂಗಾಲ್​

3 ವಿಕೆಟ್​​ ನಷ್ಟಕ್ಕೆ 145 ರನ್​ಗಳೊಂದಿಗೆ 3ನೇ ದಿನದಾಟ ಆರಂಭಿಸಿದ ಟೀಮ್​ ಇಂಡಿಯಾ, ಮೊದಲ ಸೆಷನ್​​ನಲ್ಲಿ ಸಾಲಿಡ್​​ ಬ್ಯಾಟಿಂಗ್​ ನಡೆಸಿತು. ಕೆ.ಎಲ್. ರಾಹುಲ್​, ರಿಷಭ್ ಪಂತ್​ ಇಬ್ಬರ ಜೊತೆಯಾಟಕ್ಕೆ ಇಂಗ್ಲೆಂಡ್​ ಬೌಲರ್​​ಗಳು ಬೆಸ್ತು ಬಿದ್ರು. 4 ವಿಕೆಟ್​​ಗೆ ರಾಹುಲ್-ರಿಷಭ್​ ಪಂತ್​ ಶತಕದ ಜೊತೆಯಾಟವಾಡಿದ್ರು.

ಇದನ್ನೂ ಓದಿ: ಬ್ಯಾಡ್ಮಿಂಟನ್ ಸ್ಟಾರ್ ಜ್ವಾಲಾ ಗುಟ್ಟಾ ಮಗಳ ನಾಮಕರಣ ಸಂಭ್ರಮ.. ಅಮೀರ್ ಖಾನ್ ಬಂದಿದ್ದಕ್ಕೆ ಭಾವುಕ!

ಇಂಜುರಿ ನೋವಿನ ನಡುವೆಯೂ ಹೋರಾಡಿದ 86 ಎಸೆತಗಳಲ್ಲಿ ರಿಷಭ್​ ಪಂತ್​ ಹಾಫ್​ ಸೆಂಚುರಿ ಸಿಡಿಸಿದ್ರು. ಅರ್ಧಶತಕ ಸಿಡಿಸಿದ ಇಂಗ್ಲೆಂಡ್​ ಬೌಲರ್​ಗಳನ್ನ ಮತ್ತಷ್ಟು ಕಾಡಿದ ಪಂತ್​, 8 ಬೌಂಡರಿ, 2 ಸಿಕ್ಸರ್​ ಸಿಡಿಸಿ ಮಿಂಚಿದ್ರು. 112 ಎಸೆತಗಳಲ್ಲಿ 74 ರನ್​ಗಳಿಸಿ ಶತಕದತ್ತ ಮುನ್ನುಗ್ತಾ ಇದ್ದ ಪಂತ್​, ದುರಾದೃಷ್ಟಕರ ರೀತಿಯಲ್ಲಿ ರನೌಟ್​ ಆದ್ರು.

ಪಂತ್​ ಪತನದೊಂದಿಗೆ 141 ರನ್​ಗಳ ಜೊತೆಯಾಟ ಬ್ರೇಕ್​ ಆಯ್ತು. ವಿಕೆಟ್​ ಪತನದ ಹೊರತಾಗಿ ಮೊದಲ ಸೆಷನ್​​ನಲ್ಲಿ ಟೀಮ್​ ಇಂಡಿಯಾ ಡಾಮಿನೇಟ್​ ಮಾಡ್ತು. ಸೆಷನ್​​​ ಅಂತ್ಯಕ್ಕೆ 4 ವಿಕೆಟ್​ ನಷ್ಟಕ್ಕೆ ಟೀಮ್​ ಇಂಡಿಯಾ 248 ರನ್​ಗಳಿಸಿತು.

ಸೆಷನ್​-2: ಲಾರ್ಡ್ಸ್​​ ಅಂಗಳದಲ್ಲಿ ಕನ್ನಡಿಗ ರಾಹುಲ್​ ಶತಕ

2ನೇ ಸೆಷನ್​ನ ಆರಂಭದಲ್ಲೇ ಕನ್ನಡಿಗ ಕೆ.ಎಲ್​ ರಾಹುಲ್​ ಲಾರ್ಡ್ಸ್​ ಅಂಗಳದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ರು. 176 ಎಸೆತಗಳಲ್ಲಿ ರಾಹುಲ್​ ಶತಕ ಪೂರೈಸಿದ್ರು. ಶತಕದ ಬೆನ್ನಲ್ಲೇ ರಾಹುಲ್​ ಔಟಾದ್ರು. ಆ ಬಳಿಕ ಜೊತೆಯಾದ ನಿತೀಶ್​ ಕುಮಾರ್​ ರೆಡ್ಡಿ-ರವೀಂದ್ರ ಜಡೇಜಾ ಇಂಗ್ಲೆಂಡ್​ ಬೌಲರ್​ಗಳನ್ನ ಮತ್ತಷ್ಟು ಕಾಡಿದ್ರು. ಟೀ ಬ್ರೇಕ್​ ವೇಳೆಗೆ 5 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ 316 ರನ್​ಗಳಿಸಿತು.

ಸೆಷನ್​-3: ಆಂಗ್ಲರನ್ನ ಕಾಡಿದ ರವೀಂದ್ರ ಜಡೇಜಾ

ತಾಳ್ಮೆಯ ಆಟದಿಂದ ಭರವಸೆ ಮೂಡಿಸಿದ್ದ ನಿತೀಶ್​ ಕುಮಾರ್​ ರೆಡ್ಡಿ 3ನೇ ಸೆಷನ್​ನ ಆರಂಭದಲ್ಲೇ ಔಟಾದ್ರು. 91 ಎಸೆತಗಳನ್ನ ಎದುರಿಸಿದ್ದ ನಿತೀಶ್​ ರೆಡ್ಡಿ 30 ರನ್​ಗಳಿಸಿ ಔಟಾದ್ರು. ಆಲ್​​ರೌಂಡರ್​ ರವಿಂದ್ರ ಜಡೇಜಾ ಕ್ರಿಕೆಟ್​ ಕಾಶಿಯಲ್ಲಿ ಆಕರ್ಷಕ ಇನ್ನಿಂಗ್ಸ್​ ಕಟ್ಟಿದ್ರು. ಹಾಫ್​ ಸೆಂಚುರಿ ತಂಡಕ್ಕೆ ಆಸರೆಯಾದ್ರು. 8 ಬೌಂಡರಿ, 1 ಸಿಕ್ಸರ್​​ ಸಹಿತ 131 ಎಸೆತಗಳಲ್ಲಿ 72 ರನ್​ಗಳಿಸಿದ್ದ ಜಡೇಜಾ, 114ನೇ ಓವರ್​ನಲ್ಲಿ ಕ್ರಿಸ್​​ವೋಕ್ಸ್​​ ಟ್ರ್ಯಾಪ್​ಗೆ​ ಬಿದ್ದು ಔಟಾದ್ರು.

ಇದನ್ನೂ ಓದಿ: 5 ವಿಕೆಟ್​​​ ಬೇಟೆಯಲ್ಲಿ ಬೂಮ್ರಾನೇ ನಂ- 1.. ಕ್ರಿಕೆಟ್​ ದಿಗ್ಗಜರನ್ನೇ ಹಿಂದಿಕ್ಕಿದ ಸ್ಟಾರ್ ಪೇಸರ್​!

ಜಡೇಜಾ ಪತನದೊಂದಿಗೆ ಟೀಮ್​ ಇಂಡಿಯಾ ಕುಸಿತ ಶುರುವಾಯ್ತು. ಆಕಾಶ್​ದೀಪ್​, ಜಸ್​​ಪ್ರಿತ್​ ಬೂಮ್ರಾ ಬಂದಷ್ಟೇ ವೇಗವಾಗಿ ನಿರ್ಗಮಿಸಿದ್ರು. ಬರೋಬ್ಬರಿ 76 ಎಸೆತಗಳನ್ನ ಎದುರಿಸಿದ ವಾಷಿಂಗ್ಟನ್​ ಸುಂದರ್​ 23 ರನ್​ಗಳ ಕಾಣಿಕೆ ನೀಡಿದ್ರು. ಅಂತಿಮವಾಗಿ 10 ವಿಕೆಟ್​ ನಷ್ಟಕ್ಕೆ 387 ರನ್​​ಗಳಿಸಿ ಟೀಮ್​ ಇಂಡಿಯಾ ಆಲೌಟ್​ ಆಯ್ತು. ಕೇವಲ 11 ರನ್​ಗಳ ಅಂತರದಲ್ಲಿ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡಿತು. ಟೀಂ ಇಂಡಿಯಾದ ಸ್ಕೋರ್​ 376 ರನ್​ಗಳಿದ್ದಾಗ ಜಡೇಜಾ ಔಟ್ ಆದರೆ, ಆಕಾಶ್ ದೀಪ್ 385 ರನ್​ಗಳಿದ್ದಾಗ ಔಟ್ ಆದರು. ತಂಡದ ಸ್ಕೋರ್ 387 ರನ್​ಗಳಿದ್ದಾಗ ಬುಮ್ರಾ ವಿಕೆಟ್ ಪತನವಾಯಿತು. ಬೆನ್ನಲ್ಲೇ ವಾಷಿಂಗ್ಟನ್ ಸುಂದರ್ ಕೂಡ ಔಟ್ ಆದರು.

ಇಂಗ್ಲೆಂಡ್​ 2ನೇ ಇನ್ನಿಂಗ್ಸ್​​ ಆರಂಭಿಸಿದ ಬಳಿಕ ಲಾರ್ಡ್ಸ್​​ ಅಂಗಳದಲ್ಲಿ ಹೈಡ್ರಾಮಾನೇ ನಡೀತು. ಜಾಕ್​ ಕ್ರಾವ್ಲಿ ಕುಂಟು ನೆಪ ನೀಡಿ ಟೈಮ್​ ವೇಸ್ಟ್​ ಮಾಡೋ ಯತ್ನ ಮಾಡಿದ್ರು. ಇದ್ರಿಂದ ಟೀಮ್​ ಇಂಡಿಯಾದ ಆಟಗಾರರು ಕೆರಳಿ ಸಿಂಹಗಳಾದ್ರು. ಟೀಮ್​ ಇಂಡಿಯಾ ಆಟಗಾರರು ಗರಂ ಆದ್ರೂ ಇಂಗ್ಲೆಂಡ್​ ಆಟಗಾರರ ವರ್ತನೆ ಬದಲಾಗಿಲಿಲ್ಲ. ಹೀಗಾಗಿ ಒಂದೇ ಓವರ್​ಗೆ ದಿನದಾಟ ಅಂತ್ಯವಾಯ್ತು. ಇಂಡಿಯನ್​ ಮಾತ್ರ ಕೆಂಡದಂತಾಗಿದೆ. ರೊಚ್ಚಿಗೆದ್ದಿರೋ ಇಂಡಿಯನ್​ ಟೀಮ್​​ ಫೀಲ್ಡ್​ನಲ್ಲಿ ಇಂದು ಖಡಕ್​ ಆನ್ಸರ್​ ಕೊಡೋಕೆ ಸಜ್ಜಾಗಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರೈಲಿನಲ್ಲಿ ಭಾರೀ ಅನಾಹುತ.. ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ಟ್ರೈನು.. VIDEO

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment