/newsfirstlive-kannada/media/post_attachments/wp-content/uploads/2025/07/Gill-12.jpg)
ಎಡ್ಜ್ಬಾಸ್ಟನ್ನಲ್ಲಿ ಗೆದ್ದ ಟೀಮ್ ಇಂಡಿಯಾ ಈಗ ಲಾರ್ಡ್ಸ್‌ನಲ್ಲಿ ವಿಜಯ ಪತಾಕೆ ಹಾರಿಸುವ ತವಕದಲ್ಲಿದೆ. ಐತಿಹಾಸಿಕ ಲಾರ್ಡ್ಸ್‌ನಲ್ಲಿ ಗೆಲುವು ನಿಜಕ್ಕೂ ಅಷ್ಟು ಸುಲಭದಲ್ಲ. ಇಲ್ಲಿ ಗೆಲ್ಲಬೇಕಾದ್ರೆ ಪ್ರಮುಖವಾಗಿ ಈ ಸವಾಲುಗಳನ್ನು ಗೆಲ್ಲಬೇಕಿದೆ.
ಲೀಡ್ಸ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಸೋಲು
ನಂಬರ್ 1: ಲಾರ್ಡ್ಸ್‌ನಲ್ಲಿ ಬ್ಯಾಟ್ಸ್ಮನ್ಸ್ಗೆ ಅಗ್ನಿಪರೀಕ್ಷೆ : ಮೊದಲ ಎರಡು ಟೆಸ್ಟ್ಗಳಲ್ಲಿ ಟೀಮ್ ಇಂಡಿಯಾದ ಬ್ಯಾಟರ್ಸ್ ರನ್ ಹೊಳೆಯನ್ನೇ ಹರಿಸಿದ್ದಾರೆ. ಆದ್ರೀಗ ಇಂಡಿಯನ್ ಬ್ಯಾಟರ್ಗಳಿಗೆ ರನ್ ಗಳಿಸುವುದು ನಿಜಕ್ಕೂ ಚಾಲೆಂಜ್ ಆಗಿ ಇರಲಿದೆ. ಇದಕ್ಕೆ ಕಾರಣ ಲಾರ್ಡ್ಸ್ ಪಿಚ್ ಪೇಸರ್ಗಳ ಸ್ವರ್ಗವಾಗಿದೆ. ಪೇಸ್, ಸ್ವಿಂಗ್, ಬೌನ್ಸ್ ಸಿಗಲಿದೆ. ಇಲ್ಲಿ ಬ್ಯಾಟರ್ಗಳು ತಾಳ್ಮೆಯ ಆಟವಾಡಬೇಕಿದೆ.
ಇದನ್ನೂ ಓದಿ: ಸಂಜುಗಾಗಿ ಕ್ಯಾಪ್ಟನ್ನನ್ನೇ ಬಿಟ್ಟುಕೊಡಲು ಮುಂದಾದ CSK.. ಗಾಯಕ್ವಾಡ್ ಯಾಕೆ ಬೇಡವಾದ್ರು ಗೊತ್ತಾ..?
ಲಾರ್ಡ್ಸ್‌ನಲ್ಲಿ ಮೊದಲ 2 ಇನ್ನಿಂಗ್ಸ್ ಸ್ಕೋರ್ ಕಡಿಮೆ ಇದೆ. ಆದ್ದರಿಂದ ಇದು ಬೌಲರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಬಹುದು. ಇದು ಬ್ಯಾಟರ್ಗಳಿಗೆ ಚಾಲೆಂಜ್ ಆಗಿರುತ್ತದೆ. ಹೀಗಾಗಿ ನಾನು ಮೈಂಡ್ಸೆಟ್ ಇಂಪಾರ್ಟೆಂಟ್ ಎಂದು ಭಾವಿಸುತ್ತೇನೆ. ವಿಕೆಟ್ ಮೇಲೆ ಸಮಯ ಕಳೆಯಬೇಕು. ಸಮಯ ಕಳೆದಷ್ಟು ವಿಕೆಟ್ ಅಡ್ಜೆಸ್ಟ್ ಆಗುತ್ತೆ. ಅದು ಮುಖ್ಯವೆಂದು ಹೇಳುತ್ತೇನೆ ಎಂದು ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಹೇಳಿದ್ದಾರೆ.
ನಂಬರ್ 2: ಬೇರೆ ಪಿಚ್ಗಳಂತೆ ಅಲ್ಲ..
ಲಾರ್ಡ್ಸ್ ಪಿಚ್ ಎಲ್ಲ ಪಿಚ್ಗಳಂತೆ ಅಲ್ಲ. ಇತರೆ ಗ್ರೌಂಡ್ಗಳ ಪಿಚ್ ಪ್ಲಾಟ್ ಇರುತ್ತೆ. ಆ ಪಿಚ್ಗಳಿಗೆ ಹೋಲಿಕೆ ಮಾಡಿದ್ರೆ, ಲಾರ್ಡ್ಸ್ ಪಿಚ್ ಸ್ಲೋಪ್ ಇದೆ. ಇದು ಬೌಲರ್‌ಗಳಿಗೆ ಡಿಫರೆಂಟ್ ವೇರಿಯೇಷನ್ ಕ್ರಿಯೇಟ್ ಮಾಡುತ್ತೆ. ಪೆವಿಲಿಯನ್ ಎಂಡ್ನಿಂದ ಬೌಲ್ ಮಾಡಿದ್ರೆ. ಎಕ್ಸ್ ಟ್ರಾ ಮೂಮೆಂಟ್ ಇರುತ್ತೆ. ನರ್ಸರಿ ಎಂಡ್ನಿಂದ ಬೌಲಿಂಗ್ ಮಾಡಿದ್ರೆ, ಔಟ್ ಸ್ವಿಂಗ್ ಆಗುತ್ತೆ. ಹೀಗಾಗಿ ಎಚ್ಚರ ತಪ್ಪಿದ್ರೆ, ಬ್ಯಾಟರ್ ಪೆವಿಲಿಯನ್ ಸೇರುವುದು ಕನ್ಫರ್ಮ್.
ಇದನ್ನೂ ಓದಿ: ಕ್ರಿಕೆಟ್ ಕಾಶಿಯಲ್ಲಿ ಇವತ್ತಿನಿಂದ ಬಿಗ್ ಫೈಟ್! ಲಾರ್ಡ್ಸ್ ಪಿಚ್ ತುಂಬಾನೇ ಡಿಫರೆಂಟ್, ಯಾರಿಗೆ ಫೇವರ್..
ನೋಡಿ ನಾನು ಹೇಳಿದಂತೆ ಮೈಂಡ್ಸೆಟ್ ಮೇಲೆ ನಿಂತಿದೆ. ಲಾರ್ಡ್ಸ್ ಪಿಚ್ ಸ್ಲೋಪ್ ಇರುವುದು ಅರ್ಥಮಾಡಿಕೊಳ್ಳುವುದಿಲ್ಲ. ಸ್ಲೋಪ್ ಇರುವುದರಿಂದ ಸ್ವಲ್ಪ ವ್ಯತ್ಯಾಸವಾಗುತ್ತದೆ. ಚೆಂಡು ಸೀಮ್ ಆದ ನಂತರ ಬದಲಾವಣೆಗಳಾಗುತ್ತವೆ. ಪರಿಸ್ಥಿತಿಗೆ ತಕ್ಕಂತೆ ಆಡಬೇಕು ಎಂದು ಬ್ಯಾಟಿಂಗ್ ಕೋಚ್ ಹೇಳಿದ್ದಾರೆ.
ನಂಬರ್ 3: ಜೈಸ್ವಾಲ್, ಶುಭ್ಮನ್ ಗಿಲ್ಗೆ ರಿಯಲ್ ಟೆಸ್ಟ್
ಟೀಮ್ ಇಂಡಿಯಾ ಬ್ಯಾಟರ್ಗಳ ಮುಂದಿರುವ ಬಿಗ್ ಚಾಲೆಂಜ್, ಈ ಕಂಡೀಷನ್ಸ್ನಲ್ಲಿ ಆಡುವುದಾಗಿದೆ. ಈ ಸ್ಲೋಪ್ ಕಂಡೀಷನ್ಸ್ನಲ್ಲಿ ಆಡಿದ ಅನುಭವ ಕೇವಲ ಮೂವರು ಬ್ಯಾಟರ್ಗಳಿಗೆ ಮಾತ್ರವೇ ಇದೆ. ಕೆ.ಎಲ್.ರಾಹುಲ್, ರಿಷಭ್ ಪಂತ್, ಜಡೇಜಾ ಬಿಟ್ರೆ, ಉಳಿದ್ಯಾರು ಈ ಕಂಡೀಷನ್ಸ್ನಲ್ಲಿ ಆಡಿಯೇ ಇಲ್ಲ. ಪ್ರಮುಖವಾಗಿ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ನಿತಿಶ್ ರೆಡ್ಡಿ, ಸುಂದರ್ ಲಾರ್ಡ್ಸ್‌ನಲ್ಲಿ ಆಡ್ತಿರುವುದು ಫಸ್ಟ್ ಟೆಸ್ಟ್. ಹೀಗಾಗಿ ಇವರು ಈ ಕಂಡೀಷನ್ಸ್ಗೆ ಅಡ್ಜೆಸ್ಟ್ ಆಗೋದೇ ಬಿಗ್ ಚಾಲೆಂಜ್.
ಇದನ್ನೂ ಓದಿ: ಕನ್ನಡಿಗ ಪ್ರಸಿದ್ಧ್ಗೆ ಕೊಕ್, ಆ ಸ್ಥಾನಕ್ಕೆ ಬಲಿಷ್ಠ ಪ್ಲೇಯರ್..! ಹೇಗಿರುತ್ತೆ ಟೀಂ ಇಂಡಿಯಾ ಪ್ಲೇಯಿಂಗ್-11
ನಂಬರ್ 4: ಈ ತ್ರಿಮೂರ್ತಿ ಬ್ಯಾಟರ್ಗಳಿಗೆ ಹಾಕಬೇಕು ಬ್ರೇಕ್
ಟೀಮ್ ಇಂಡಿಯಾ ಬ್ಯಾಟರ್ಗಳಿಗೆ ಸವಾಲಾಗಿರುವ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಬ್ಯಾಟರ್ಗಳು ಸಹ ಕಾಡ್ತಾರೆ. ಪ್ರಮುಖವಾಗಿ ಲಾರ್ಡ್ಸ್ ಲೆಜೆಂಡ್ ಜೋ ರೂಟ್. ಐತಿಹಾಸಿಕ ಲಾರ್ಡ್ಸ್‌ನಲ್ಲಿ 2022 ರನ್ ಕಲೆಹಾಕಿರುವ ರೂಟ್, 7 ಶತಕ ಸಿಡಿಸಿದ್ದಾರೆ. 54ರ ಬ್ಯಾಟಿಂಗ್ ಆವರೇಜ್ ಹೊಂದಿದ್ದಾರೆ. ರೂಟ್ ಅಲ್ದೇ ಬೆನ್ ಸ್ಟೋಕ್ಸ್, ಜ್ಯಾಕ್ ಕ್ರಾವ್ಲಿ ಲಾರ್ಡ್ಸ್‌ನಲ್ಲಿ ಸಕ್ಸಸ್ ಕಂಡಿದ್ದಾರೆ. ಹೀಗಾಗಿ ಮೊದಲ ಎರಡು ಟೆಸ್ಟ್ನಲ್ಲಿ ಕಟ್ಟಿಹಾಕಿದಂತೆಯೇ ಇವರನ್ನು ಕಟ್ಟಿಹಾಕುವುದು ಇಂಡಿಯನ್ ಬೌಲಿಂಗ್ ಅಟ್ಯಾಕ್ ಮುಂದಿದೆ.
ನಂಬರ್ 5: ಜೋಫ್ರಾ ಆರ್ಚರ್ ಎದುರು ಬೇಕು ಪ್ರಾಪರ್ ಪ್ಲಾನ್
ಲೀಡ್ಸ್ ಹಾಗೂ ಬರ್ಮಿಗ್ಹ್ಯಾಮ್ನಲ್ಲಿ ಇಂಗ್ಲೆಂಡ್ ಬೌಲಿಂಗ್ ಅಟ್ಯಾಕ್, ಸಪ್ಪೆಯಾಗಿತ್ತು. ಲಾರ್ಡ್ಸ್ ಟೆಸ್ಟ್ನಲ್ಲಿ ಇಂಗ್ಲೆಂಡ್ ಬೌಲಿಂಗ್ನ ಕಡೆಗಣಿಸುವಂತೆಯೇ ಇಲ್ಲ. ಮೊದಲೇ ಪೇಸರ್ಗಳಿಗೆ ಪೂರಕವಾಗಿರುವ ಈ ಪಿಚ್ನಲ್ಲಿ ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಜೋಫ್ರಾ ಆರ್ಚರ್ ಆಡ್ತಿದ್ದಾರೆ. 4 ವರ್ಷಗಳ ಬಳಿಕ ಕಮ್ಬ್ಯಾಕ್ ಮಾಡಿರುವ ಜೋಫ್ರಾ, ಎದುರು ಎಚ್ಚರಿಕೆಯ ಆಟವಾಡಬೇಕಿದೆ. ಇಲ್ಲ ಎಡೆಮುರಿ ಕಟ್ಟಬೇಕಾಗುವುದು ಕನ್ಫರ್ಮ್. ಸ್ಲಿಪ್ನಲ್ಲಿ ಕ್ಯಾಚ್ ಕೈಚೆಲ್ಲುತ್ತಿರುವ ಟೀಮ್ ಇಂಡಿಯಾ, ಲಾರ್ಡ್ಸ್‌ನಲ್ಲಿ ಮತ್ತಷ್ಟು ಶಾರ್ಪ್ ಅಂಡ್ ಆ್ಯಕ್ಟೀವ್ ಆಗಬೇಕಿದೆ. ಇಲ್ಲ ಐತಿಹಾಸಿಕ ಲಾರ್ಡ್ಸ್‌ನಲ್ಲಿ ಗೆಲ್ಲೋದು ಕಷ್ಟ ಕಷ್ಟ.
ಇದನ್ನೂ ಓದಿ: ಬೆಂಗಳೂರು ಭಾಗದಲ್ಲಿ ಕೈಕೊಟ್ಟ ಮಳೆ! ರಾಜ್ಯದ 6 ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ