/newsfirstlive-kannada/media/post_attachments/wp-content/uploads/2025/07/Yashaswi-Jaiswal-and-Sai-sudarshan.jpg)
ಇಂಡೋ-ಇಂಗ್ಲೆಂಡ್​ ಮ್ಯಾಂಚೆಸ್ಟರ್​ ಟೆಸ್ಟ್​ ಪಂದ್ಯಗಳು ಮದಗಜಗಳು ಸಮಭಲದ ಹೋರಾಟ ನಡೆಸಿವೆ. ಆಂಗ್ಲ ಬೌಲರ್​​ಗಳ ದಾಳಿಗೆ ಇಂಡಿಯನ್​​ ಬ್ಯಾಟರ್ಸ್​​ ತಾಳ್ಮೆಯ ಆನ್ಸರ್​ ಕೊಟ್ರು. ಇಂಡಿಯನ್ ಟೈಗರ್ಸ್​ ದಿಟ್ಟ ಹೋರಾಟಕ್ಕೆ ಆಂಗ್ಲ ಪಡೆ ಮೊದಲ ದಿನವೇ ಕಂಗಾಲ್​ ಆಯ್ತು.
ಸೆಷನ್​ -1: ಟೀಮ್​ ಇಂಡಿಯಾ ತಾಳ್ಮೆಯ ಆಟಕ್ಕೆ ಕಂಗೆಟ್ಟ​ ಇಂಗ್ಲೆಂಡ್​
ಒಲ್ಡ್​​ ಟ್ರಾಫರ್ಡ್ಸ್​​ ಟೆಸ್ಟ್​ನಲ್ಲಿ ಟಾಸ್​​ ಸೋತು ಮೊದಲು ಬ್ಯಾಟಿಂಗ್​ಗೆ ಬಂದ ಟೀಮ್​ ಇಂಡಿಯಾ ಓಪನರ್ಸ್​​​​ ರಕ್ಷಣಾತ್ಮಕ ಆಟವಾಡಿದ್ರು. ಯಶಸ್ವಿ ಜೈಸ್ವಾಲ್​, ಕೆ.ಎಲ್​.ರಾಹುಲ್​ ತಾಳ್ಮೆಯ ಆಟಕ್ಕೆ ಇಂಗ್ಲೆಂಡ್​​ ಬೌಲರ್ಸ್​ ಕಂಗೆಟ್ಟು ಹೋದ್ರು. ಎಚ್ಚರಿಕೆಯಿಂದ ಆಂಗ್ಲ ಬೌಲರ್​​ಗಳನ್ನ ಡೀಲ್​ ಮಾಡಿದ ಈ ಜೋಡಿ ಭಾರತಕ್ಕೆ ಗುಡ್​ ಸ್ಟಾರ್ಟ್​ ನೀಡಿತು. ಮೊದಲ ಸೆಷನ್​ನಲ್ಲಿ ವಿಕೆಟ್​ ಕಬಳಿಸಲು ಪರದಾಡಿ ಆಂಗ್ಲ ಪಡೆ ಸುಸ್ತು ಹೊಡೆಯಿತು. ಟೀಮ್​ ಇಂಡಿಯಾ ವಿಕೆಟ್​ ನಷ್ಟವಿಲ್ಲದೇ 78 ರನ್​ಗಳಿಸಿತು.
ಸೆಷನ್​ -2: ಇಂಗ್ಲೆಂಡ್ ಬೌಲರ್​ಗಳ​​​ ಭರ್ಜರಿ ಕಮ್​ಬ್ಯಾಕ್​
2ನೇ ಸೆಷನ್​ನಲ್ಲೂ ಕೆ.ಎಲ್. ರಾಹುಲ್​​, ಯಶಸ್ವಿ ಜೈಸ್ವಾಲ್​ ಉತ್ತಮ ಆಟ ಮುಂದುವರೆಸಿದ್ರು. 96 ಎಸೆತಕ್ಕೆ ಜೈಸ್ವಾಲ್​ ಹಾಫ್​ ಸೆಂಚುರಿ ಸಿಡಿಸಿದ್ರು. ಅರ್ದಶತಕದ ಹಾದಿಯಲ್ಲಿ ಕೆ.ಎಲ್​ ರಾಹುಲ್​ ಎಡವಿದ್ರು. ಕ್ರಿಸ್​​ ವೋಕ್ಸ್​​ ಬೌಲಿಂಗ್​ನಲ್ಲಿ ಜಾಕ್​ ಕ್ರಾವ್ಲಿಗೆ ಕ್ಯಾಚ್​ ನೀಡಿ ನಿರ್ಗಮಿಸಿದ್ರು. ಇದ್ರ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್​​ ಕೂಡ ಪೆವಿಲಿಯನ್​ ಸೇರಿದ್ರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್​ ಕಾನ್ಫಿಡೆಂಡ್ ಆರಂಭ ಪಡೆದುಕೊಂಡ್ರೆ, ನಾಯಕ ಶುಭ್​ಮನ್​ ಗಿಲ್​ ತಡವರಿಸಿದ್ರು. ಸ್ಟ್ರಗಲ್​ ಮಾಡಿದ ಶುಭ್​ಮನ್​ ಗಿಲ್​ 12 ರನ್​ಗಳಿಸಿ ಆಟ ಅಂತ್ಯಗೊಳಿಸಿದ್ರು. 2ನೇ ಸೆಷನ್​ ವೇಳೆಗೆ 3 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ 149 ರನ್​​ಗಳಿಸಿತು.
ಸೆಷನ್​ -3: ಪಂತ್​ಗೆ ಇಂಜುರಿ, ಸುದರ್ಶನ್​ ಹಾಫ್​ ಸೆಂಚುರಿ
5ನೇ ವಿಕೆಟ್​ಗೆ ಕ್ರಿಸ್​ನಲ್ಲಿ ಜೊತೆಯಾದ ರಿಷಭ್​ ಪಂತ್​, ಸಾಯಿ ಸುದರ್ಶನ್​ ಸಾಲಿಡ್​​ ಜೊತೆಯಾಟವಾಡಿದ್ರು. ಸಾಯಿ ಸುದರ್ಶನ್​​ ಪರ್ಫೆಕ್ಟ್​ ಟೆಸ್ಟ್​ ಇನ್ನಿಂಗ್ಸ್​ ಕಟ್ಟಿದ್ರೆ, ಪಂತ್​ ತಮ್ಮ ಎಂದಿನ ಶೈಲಿಯಲ್ಲಿ ಅಬ್ಬರಿಸಿದ್ರು. 4ನೇ ವಿಕೆಟ್​​​ಗೆ ಈ ಜೋಡಿ 72 ರನ್​ಗಳ ಜೊತೆಯಾಟವಾಡಿತು. ಸಾಯಿ ಸುದರ್ಶನ್​ - ರಿಷಭ್​ ಪಂತ್​ ಜೋಡಿ ಹೊಸ ಭರವಸೆ ಮೂಡಿಸಿದ ಬೆನ್ನಲ್ಲೇ ಆಘಾತ ಎದುರಾಯ್ತು. 67.4ನೇ ಓವರ್​ನಲ್ಲಿ ಕ್ರಿಸ್ ವೋಕ್ಸ್​ ಎಸೆದ ಬಾಲು ಪಂತ್​ ಪಾದಕ್ಕೆ ಬಂದು ಬಡಿಯಿತು. ಬಾಲ್​ ಬಡಿದ ರಭಸಕ್ಕೆ ಪಂತ್​ ಕಾಲಿನಿಂದ ರಕ್ತ ಬಸಿಯಿತು. ಹೆಜ್ಜೆ ಇಡಲಾಗದಷ್ಟು ಕಾಲು ಊತ ಬಂದ ಕಾರಣ ಪಂತ್​ ಗಾಲ್ಫ್​​ ಕಾರ್ಟ್​​ನಲ್ಲಿ ಪೆವಿಲಿಯನ್​ಗೆ ವಾಪಾಸ್ಸಾದ್ರು.
ಇದನ್ನೂ ಓದಿ: ವಾಹನ ಚಾಲನೆಯಿಂದ ತೊಂದರೆ, ಕೈಗಾರಿಕಾ ಉದ್ಯಮಿಗಳಿಗೆ ಸಂತಸದ ದಿನ; ಭವಿಷ್ಯ ಈ ದಿನ
ಪಂತ್​ ನಿರ್ಗಮನದ ಬಳಿಕವೂ ತನ್ನ ಆಟ ಮುಂದುವರೆಸಿದ ಸಾಯಿ ಸುದರ್ಶನ್​ ಚೊಚ್ಚಲ ಟೆಸ್​​ ಅರ್ಧಶತಕ ಬಾರಿಸಿದ್ರು. 134 ಎಸೆತಗಳಲ್ಲಿ ಹಾಫ್​​ ಸೆಂಚುರಿ ಪೂರೈಸಿದ್ರು. ತಾಳ್ಮೆಯಿಂದ 151 ಎಸೆತಗಳನ್ನ ಎದುರಿಸಿದ ಸಾಯಿ ಸುದರ್ಶನ್​ 61 ರನ್​ಗಳಿಸಿ ಔಟಾದ್ರು. ಬಳಿಕ ಕ್ರಿಸ್​​ನಲ್ಲಿ ಜೊತೆಯಾಗಿರೋ ರವೀಂದ್ರ ಜಡೇಜಾ, ಶಾರ್ದೂಲ್​ ಠಾಕೂರ್​​ ಉತ್ತಮ ಆಟವಾಡ್ತಿದ್ದಾರೆ. ಮೊದಲ ದಿನದ ಅಂತ್ಯಕ್ಕೆ ಟೀಮ್​ ಇಂಡಿಯಾ 4 ವಿಕೆಟ್​ ನಷ್ಟಕ್ಕೆ 264 ರನ್​ಗಳಿಸಿದೆ. ಜಡೇಜಾ,ಶಾರ್ದೂಲ್​ ತಲಾ 19 ರನ್​ಗಳೊಂದಿಗೆ ಇಂದಿಗೆ ಕ್ರಿಸ್​ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ: ಮಹದಾಯಿ ಯೋಜನೆಗೆ ಗೋವಾ ಮತ್ತೆ ಅಡ್ಡಗಾಲು.. ಕೇಂದ್ರ ಸಚಿವರ ಹೆಸರೇಳಿ CM ಸಾವಂತ್ ತಗಾದೆ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ