/newsfirstlive-kannada/media/post_attachments/wp-content/uploads/2025/06/Team-India-3.jpg)
ಇಂಡೋ-ಇಂಗ್ಲೆಂಡ್ 4ನೇ ಟೆಸ್ಟ್ ಕದನ ಶುರುವಾಗಿದೆ. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಪರ್ಡ್ ಅಂಗಳದಲ್ಲಿ ಟಾಸ್ ಪ್ರಕ್ರಿಯೆ ಮುಗಿದಿದ್ದು, ಗಿಲ್ ಪಡೆ ಟಾಸ್ ಸೋತಿದ್ದು ಮೊದಲು ಬ್ಯಾಟಿಂಗ್ ಮಾಡಲಿದೆ.
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಸೋತ ಟೀಮ್ ಇಂಡಿಯಾ, ಇದೀಗ 4ನೇ ಟೆಸ್ಟ್ನಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಈ ಟೆಸ್ಟ್ ಗೆದ್ರೆ ಮಾತ್ರ ಸರಣಿ ಜೀವಂತವಾಗಿರಲಿದೆ. ಮಸ್ಟ್ ವಿನ್ ಗೇಮ್ಗೂ ಮುನ್ನ ದುರಾದೃಷ್ಟ ಟೀಮ್ ಇಂಡಿಯಾ ಬೆನ್ನುಬಿದ್ದಿದೆ. ಆಟಗಾರರ ಇಂಜುರಿ ಪ್ಲೇಯಿಂಗ್ ಇಲೆವೆನ್ನಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿದೆ.
ಹೇಗಿದೆ ಪ್ಲೇಯಿಂಗ್-11..?
ಇವತ್ತಿನ ಪ್ಲೇಯಿಂಗ್ 11ರಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ನಿರೀಕ್ಷೆಯಂತೆ ಅನ್ಶುಲ್ ಕಾಂಬೋಜ್ಗೆ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಅವಕಾಶ ಮಾಡಿಕೊಡ್ತಿದ್ದು, ಟೆಸ್ಟ್ ಕ್ರಿಕೆಟ್ಗೆ ಡೆಬ್ಯು ಮಾಡ್ತಿದ್ದಾರೆ. ಆಕಾಶ್ ದೀಪ್ ಬದಲಿಗೆ ಕಾಂಬೋಜ್ ಆಡ್ತಿದ್ದಾರೆ. ಇನ್ನುಳಿದಂತೆ ಕನ್ನಡಿಗ ಕರುಣ್ ನಾಯರ್ ಹಾಗೂ ಪ್ರಸಿದ್ಧ್ ಕೃಷ್ಣಗೆ ಕೊಕ್ ನೀಡಲಾಗಿದೆ. ಜೊತೆಗೆ ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ನಲ್ಲಿ ಶಾರ್ದುಲ್ ಠಾಕೂರ್ ಕಣಕ್ಕಿಳಿಯುತ್ತಿದ್ದಾರೆ.
ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಸಾಯಿ ಸುದರ್ಶನ್, ಶುಬ್ಮನ್ ಗಿಲ್, ರಿಷಬ್ ಪಂತ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಮೊಹ್ಮದ್ ಸಿರಾಜ್, ಜಸ್ಪ್ರಿತಾ ಬುಮ್ರಾ, ಅನ್ಶುಲ್ ಕಾಂಬೋಜ್ ಪ್ಲೇಯಿಂಗ್1-11ನಲ್ಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ