BCCIಗೆ ಬಿಗ್ ಶಾಕ್ ಕೊಟ್ಟ ಕೋಲ್ಕತ್ತ ಪೊಲೀಸ್; ಟೀಂ ಇಂಡಿಯಾ ವೇಳಾಪಟ್ಟಿಯಲ್ಲಿ ದಿಢೀರ್ ಬದಲಾವಣೆ

author-image
Ganesh
Updated On
BCCIಗೆ ಬಿಗ್ ಶಾಕ್ ಕೊಟ್ಟ ಕೋಲ್ಕತ್ತ ಪೊಲೀಸ್; ಟೀಂ ಇಂಡಿಯಾ ವೇಳಾಪಟ್ಟಿಯಲ್ಲಿ ದಿಢೀರ್ ಬದಲಾವಣೆ
Advertisment
  • ಜನವರಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಕ್ರಿಕೆಟ್ ಸರಣಿ
  • ಮೊದಲ ಟಿ20 ಪಂದ್ಯ ಜನವರಿ 22 ರಂದು ಚೆನ್ನೈನಲ್ಲಿ ನಡೆಯಬೇಕಿತ್ತು
  • ಪಂದ್ಯದ ಸ್ಥಳ ದಿಢೀರ್ ಬದಲಾವಣೆ ಮಾಡಿದ ಬಿಸಿಸಿಐ

2025 ಜನವರಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು T20 ಮತ್ತು ಮೂರು ODI ಪಂದ್ಯಗಳ ಸರಣಿ ನಡೆಯಲಿದೆ. ಮೊದಲ ಟಿ20 ಪಂದ್ಯ ಜನವರಿ 22 ರಂದು ಚೆನ್ನೈನಲ್ಲಿ ನಡೆಯಬೇಕಿತ್ತು. ಇದೀಗ ಸರಣಿಯ ಮೊದಲ ಎರಡು ಪಂದ್ಯಗಳ ಸ್ಥಳಗಳನ್ನು ಬದಲಾಯಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ಕೋಲ್ಕತ್ತಾ ಪೊಲೀಸರ ಮನವಿ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ. ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಟಿ20 ಪಂದ್ಯವನ್ನೂ ಬೇರೆಡೆ ಮಾಡಲು ನಿರ್ಧರಿಸಲಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಕೋಲ್ಕತ್ತಾದಲ್ಲಿ ಮತ್ತು ಎರಡನೇ ಪಂದ್ಯ ಚೆನ್ನೈನಲ್ಲಿ ನಡೆಯಬೇಕಿತ್ತು.

ಇದನ್ನೂ ಓದಿ:ಖುಷಿಯಲ್ಲಿದ್ದ ಬೆನ್ನಲ್ಲೇ ದುಃಖ; ಪೃಥ್ವಿ ಷಾಗೆ ಮತ್ತೆ ಬಿಗ್ ಶಾಕ್.. ಈಗ ಏನಾಯ್ತು..

ಕೋಲ್ಕತ್ತಾ ಪೊಲೀಸರು ಬಂಗಾಳ ಕ್ರಿಕೆಟ್ ಸಂಸ್ಥೆಗೆ ಮನವಿ ಸಲ್ಲಿಸಿದ್ದರು. ಗಣರಾಜ್ಯೋತ್ಸವ ಗಮನದಲ್ಲಿಟ್ಟುಕೊಂಡು ಕೋಲ್ಕತ್ತಾ ಪೊಲೀಸರು ಸಿದ್ಧತೆಗಳನ್ನು ನಡೆಸಲಿದ್ದಾರೆ. ಮೊದಲ ಟಿ20 ಪಂದ್ಯ ಜನವರಿ 22 ರಂದು ನಡೆಯಲಿದೆ. ಈ ಪಂದ್ಯ ಚೆನ್ನೈ ಬದಲಿಗೆ ಕೋಲ್ಕತ್ತಾದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜನವರಿ 25ರಂದು ಕೋಲ್ಕತ್ತಾ ಬದಲು ಚೆನ್ನೈನಲ್ಲಿ ನಡೆಯಲಿದೆ.

ಹೊಸ ವೇಳಾಪಟ್ಟಿ

  • ಮೊದಲ ಟಿ20 ಪಂದ್ಯ ಜನವರಿ 22 ರಂದು ಕೋಲ್ಕತ್ತದಲ್ಲಿ
  • ಎರಡನೇ ಪಂದ್ಯ ಜನವರಿ 25ರಂದು ಚೆನ್ನೈನಲ್ಲಿ ನಡೆಯಲಿದೆ
  • ಮೂರನೇ ಟಿ20 ಪಂದ್ಯ ಜನವರಿ 28 ರಂದು ರಾಜ್‌ಕೋಟ್‌ನಲ್ಲಿ
  • ನಾಲ್ಕನೇ ಪಂದ್ಯ ಜನವರಿ 31 ರಂದು ಪುಣೆಯಲ್ಲಿ ನಡೆಯಲಿದೆ
  • ಐದನೇ ಪಂದ್ಯ ಫೆಬ್ರವರಿ 2 ರಂದು ಮುಂಬೈನಲ್ಲಿ ನಡೆಯಲಿದೆ
  • ಮೊದಲ ಪಂದ್ಯವು ಫೆಬ್ರವರಿ 6 ರಂದು ನಾಗ್ಪುರದಲ್ಲಿ ನಡೆಯಲಿದೆ
  • ಎರಡನೇ ಪಂದ್ಯ ಫೆಬ್ರವರಿ 9 ರಂದು ಕಟಕ್‌ನಲ್ಲಿ ನಡೆಯಲಿದೆ
  • ಮೂರನೇ ಪಂದ್ಯ ಫೆಬ್ರವರಿ 12 ರಂದು ಅಹಮದಾಬಾದ್‌ನಲ್ಲಿ

ಸೆಪ್ಟೆಂಬರ್ 19 ರಿಂದ ಭಾರತ ಮತ್ತು ಬಾಂಗ್ಲಾದೇಶ ನಡುವೆ ಟೆಸ್ಟ್ ಸರಣಿ ನಡೆಯಲಿದೆ. ಬಳಿಕ ಟಿ20 ಸರಣಿ ನಡೆಯಲಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯ ಧರ್ಮಶಾಲಾದಲ್ಲಿ ನಡೆಯಬೇಕಿತ್ತು. ಅದರ ಸ್ಥಳವನ್ನು ಬದಲಾಯಿಸಲಾಗಿದ್ದು, ಗ್ವಾಲಿಯರ್‌ನಲ್ಲಿ ನಡೆಯಲಿದೆ.

ಇದನ್ನೂ ಓದಿ:ಕೊನೆಗೂ ತಲೆ ಬಾಗಿದ ಕಿಂಗ್, ನಡೆಯಲಿಲ್ಲ ಕೊಹ್ಲಿ ಆಟ.. ಕಾಲಚಕ್ರ ತಿರುಗುವುದು ಅಂದ್ರೆ ಇದೇ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment