newsfirstkannada.com

ಆ 12 ಓವರ್​ಗಳಲ್ಲೇ ಬದಲಾಯ್ತು ಪಂದ್ಯದ ಗತಿ.. ಅಚ್ಚರಿಯ ರೀತಿಯಲ್ಲಿ ಆಂಗ್ಲರಿಗೆ ತಲೆಬಾಗಿದ ರೋಹಿತ್​ ಪಡೆ..!

Share :

Published January 29, 2024 at 9:16am

    ಇಂಡೋ-ಇಂಗ್ಲೆಂಡ್​ ಹೈದ್ರಾಬಾದ್​ ಟೆಸ್ಟ್​ ಪಂದ್ಯ

    ಮುಖಭಂಗ ಅನುಭವಿಸಿದ ರೋಹಿತ್​ ಪಡೆ

    231 ರನ್​ ಟಾರ್ಗೆಟ್​ ಬೆನ್ನತ್ತುವಲ್ಲಿ ವಿಫಲ

ಹೈದ್ರಾಬಾದ್​ ಟೆಸ್ಟ್​ನ ಮೊದಲ ಮೂರು ದಿನದಾಟದಲ್ಲಿ ಗೆದ್ದೆ ಬಿಟ್ವಿ ಅನ್ನೋ ಟೀಮ್​ ಇಂಡಿಯಾದ ಆತ್ಮವಿಶ್ವಾಸ 4ನೇ ದಿನದಾಟದಲ್ಲಿ ಠುಸ್​ ಪಟಾಕಿಯಾಯ್ತು. ಅಚ್ಚರಿಯ ರೀತಿಯಲ್ಲಿ ರೋಹಿತ್​ ಪಡೆ, ಆಂಗ್ಲರಿಗೆ ತಲೆಬಾಗಿದೆ.

ಹೈದ್ರಾಬಾದ್​ ಟೆಸ್ಟ್​ನ ಮೊದಲ ದಿನದಾದಿಂದಲೂ ಟೀಮ್​ ಇಂಡಿಯಾ ಪಾರಮ್ಯ ಸಾಧಿಸಿತ್ತು. ನಿನ್ನೆ ನಡೆದ 4ನೇ ದಿನದಾಟದ ಆರಂಭಕ್ಕೂ ಮುನ್ನ ಕೂಡ ಟೀಮ್​ ಇಂಡಿಯಾ ಸುಲಭಕ್ಕೆ ವಿಜಯ ಪತಾಕೆ ಹಾರಿಸುತ್ತೆ ಅನ್ನೋದು ಎಲ್ಲರ ಲೆಕ್ಕಾಚಾರವಾಗಿತ್ತು. ಅಖಾಡದಲ್ಲಿ ಆಗಿದ್ದೇ ಬೇರೆ..! ಗೆದ್ದು ಬೀಗೋ ಅಪಾರ ಆತ್ಮವಿಶ್ವಾಸದಲ್ಲಿದ್ದ ರೋಹಿತ್​ ಪಡೆ ಅನುಭವಿಸಿದ್ದು ಮುಖಭಂಗವನ್ನ!

420ಕ್ಕೆ ಇಂಗ್ಲೆಂಡ್​​ ಆಲೌಟ್​, ಭಾರತಕ್ಕೆ 231 ರನ್​ ಟಾರ್ಗೆಟ್​

​316 ರನ್​ಗಳೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಇಂಗ್ಲೆಂಡ್, ಸಾಲಿಡ್​ ಬ್ಯಾಟಿಂಗ್​ ನಡೆಸ್ತು. ಅದ್ಭುತ ಬ್ಯಾಟಿಂಗ್​ ಮುಂದುವರೆಸಿದ ಒಲಿ ಪೋಪ್​ ವೇಗವಾಗಿ ರನ್​ಗಳಿಸಿದ್ರೆ, ಟಾಮ್ ಹಾರ್ಟ್ಲೀ ಹಾಗೂ ರೆಹಾನ್ ಅಹ್ಮದ್​ ಉತ್ತಮ ಸಾಥ್ ನೀಡಿದರು. ದ್ವಿಶತಕದ ಅಂಚಿನಲ್ಲಿ ಪೋಪ್​​ ಎಡವಿದ್ರು. 196 ರನ್​ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ಇದ್ರೊಂದಿಗೆ ಇಂಗ್ಲೆಂಡ್​ ಆಟವೂ ಅಂತ್ಯವಾಯ್ತು.

29 ಓವರ್​​, 95 ರನ್​​, 3 ವಿಕೆಟ್​ ಡಮಾರ್​​..!

231 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಟೀಮ್​ ಇಂಡಿಯಾ ಆರಂಭದಲ್ಲೇ ಆಘಾತ ಎದುರಿಸಿತು. ಯಶಸ್ವಿ ಜೈಸ್ವಾಲ್​, ಶುಭ್​ಮನ್​ ಗಿಲ್​ ಹಾಗೂ ಕ್ಯಾಪ್ಟನ್​ ರೋಹಿತ್​ ಶರ್ಮಾ ಕೈ ಕೊಟ್ಟೇ ಬಿಟ್ರು. ಜೈಸ್ವಾಲ್​ 15 ರನ್​​ಗಳಿಸಿ ಔಟಾದ್ರೆ, ಗಿಲ್ ದೊಡ್ಡ​ ಸೊನ್ನೆ ಸುತ್ತಿದ್ರು. ರೋಹಿತ್​​ ಆಟ 39 ರನ್​ಗಳಿಗೆ ಅಂತ್ಯವಾಯ್ತು. 2ನೇ ಸೆಷನ್​ನಲ್ಲಿ 29 ಓವರ್​ ಆಡಿದ ಟೀಮ್​ ಇಂಡಿಯಾ 95 ರನ್​ಗಳಿಸಿ 3 ವಿಕೆಟ್​ ಕಳೆದುಕೊಳ್ತು. ಹಾಗಿದ್ರೂ, ಕೂಡ ಗೆಲುವು ಭಾರತದ್ದೇ ಅಂತಾ ಎಲ್ರೂ ನಂಬಿದ್ರು. ಆದ್ರೆ, ಟೀ ಬ್ರೇಕ್​​ ಆದ ಮೇಲೆ ಇಡೀ ಪಂದ್ಯಕ್ಕೆ ಟ್ವಿಸ್ಟ್​ ಸಿಕ್ಕಿದ್ದು..!

ಅಂತಿಮ ಸೆಷನ್​, ಮೊದಲ 12 ಓವರ್​, ಖೇಲ್​ ಖತಃ

ಟೀ ಬ್ರೇಕ್​ ನಂತರದ 12 ಓವರ್​​ಗಳಲ್ಲಿ ಪಂದ್ಯದ ಗತಿಯೇ ಬದಲಾಗಿ ಬಿಡ್ತು. ಗೆಲ್ಲೋ ಹಾಟ್​ ಫೇವರಿಟ್​ ಟೀಮ್​ ಇಂಡಿಯಾ ಸೋಲಿನ ಸುಳಿಗೆ ಸಿಲುಕಿದ್ರೆ, ಆಂಗ್ಲ ಪಡೆ ನಿರೀಕ್ಷಿಸದ ರೀತಿಯಲ್ಲಿ ಕಮ್​​ಬ್ಯಾಕ್​ ಮಾಡ್ತು. ಜೋ ರೂಟ್​, ಟಾಮ್​​ ಹಾರ್ಟ್ಲಿ ಭಾರತದ ಬ್ಯಾಟ್ಸ್​ಮನ್​ಗಳನ್ನ ಗಿರ್​​ಗಿಟ್ಲೆ ಆಡಿಸಿದ್ರು. ಬ್ಯಾಟಿಂಗ್​ ಕ್ರಮಾಂಕದಲ್ಲಿ ಬಡ್ತಿ ಪಡೆದು ಕಣಕ್ಕಿಳಿದ ಅಕ್ಷರ್​ ಪಟೇಲ್​​ 17 ರನ್​ಗಳಿಸಿ ನಿರ್ಗಮಿಸಿದ್ರೆ ರಾಹುಲ್,​ ಜೋ ರೂಟ್​ ಸ್ಪಿನ್​ ಬಲೆಗೆ ಬಿದ್ರು. ರವೀಂದ್ರ ಅನಾವಶ್ಯಕ ರನೌಟ್​ಗೆ ಬಲಿಯಾದ್ರೆ, ಶ್ರೇಯಸ್​ ಅಯ್ಯರ್​ ಆಟ 13 ರನ್​ಗಳಿಗೆ ಅಂತ್ಯವಾಯ್ತು. 12 ಓವರ್​​ಗಳಲ್ಲಿ ಅಂತರದಲ್ಲಿ ಟೀಮ್​ ಇಂಡಿಯಾ 4 ಪ್ರಮುಖ ವಿಕೆಟ್​ಗಳನ್ನ ಕಳೆದುಕೊಳ್ತು. ರೋಹಿತ್​ ಪಡೆ ಸೋಲಿಗೆ ಪ್ರಮುಖ ಕಾರಣ ಇದೇ.

ಅಶ್ವಿನ್-ಭರತ್​​ ವಿರೋಚಿತ ಹೋರಾಟ

ಟಾಪ್​ ಆರ್ಡರ್​, ಮಿಡಲ್​ ಆರ್ಡರ್​ ಬ್ಯಾಟರ್​​ಗಳು ಪೆವಿಲಿಯನ್​ ಸೇರಿದ್ರೆ, ಲೋವರ್​​ ಆರ್ಡರ್​ ಬ್ಯಾಟ್ಸ್​ಮನ್​ಗಳು ದಿಟ್ಟ ಹೋರಾಟ ನಡೆಸಿದ್ರು. 8ನೇ ವಿಕೆಟ್​ಗೆ ಜೊತೆಯಾದ ಭರತ್​, ಅಶ್ವಿನ್​ 57 ರನ್​ ಜೊತೆಯಾಟವಾಡಿದ್ರು. ಇವರಿಬ್ಬರ ಆಟ ಗೆಲುವಿನ ಕನಸನ್ನ ಮತ್ತೆ ಹುಟ್ಟಿಸಿತ್ತು. ಟಾಮ್​ ಹಾರ್ಟ್ಲಿ ಕನಸನ್ನ ನುಚ್ಚು ನೂರು ಮಾಡಿದ್ರು. ಆ ಬಳಿಕ ಜಸ್​ಪ್ರಿತ್​ ಬೂಮ್ರಾ, ಮೊಹಮ್ಮದ್​ ಸಿರಾಜ್​ ಹೋರಾಡಿದರಾದ್ರೂ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದ್ರು. 202 ರನ್​ಗಳಿಗೆ ಆಲೌಟ್​ ಆದ ಭಾರತ, 28 ರನ್​ಗಳ ಸೋಲುಂಡಿತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆ 12 ಓವರ್​ಗಳಲ್ಲೇ ಬದಲಾಯ್ತು ಪಂದ್ಯದ ಗತಿ.. ಅಚ್ಚರಿಯ ರೀತಿಯಲ್ಲಿ ಆಂಗ್ಲರಿಗೆ ತಲೆಬಾಗಿದ ರೋಹಿತ್​ ಪಡೆ..!

https://newsfirstlive.com/wp-content/uploads/2024/01/ASWIN.jpg

Load More