/newsfirstlive-kannada/media/post_attachments/wp-content/uploads/2025/06/IND-VS-ENG-1.jpg)
ಕ್ರಿಕೆಟ್​ ಲೋಕ ಕುತೂಹಲದಿಂದ ಕಾಯ್ದಿದ್ದ ಇಂಡೋ-ಇಂಗ್ಲೆಂಡ್​ ಪ್ರತಿಷ್ಟಿತ ಟೆಸ್ಟ್​ ಕದನಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿದೆ. ಲೀಡ್ಸ್​​ನಲ್ಲಿ ನಡೀತಿರೋ ಮೊದಲ ಟೆಸ್ಟ್​ ಕದನದಲ್ಲಿ ಟೀಮ್​ ಇಂಡಿಯಾದ ಆರ್ಭಟ ಜೋರಾಗಿ ನಡೆದಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ​ ಇಳಿದ ಯಂಗ್​ ಇಂಡಿಯಾ ಇಂಗ್ಲೆಂಡ್​ ಬೌಲರ್ಸ್​​ನ ಅಟ್ಟಾಡಿಸಿತು. ಇಂಡಿಯನ್​ ಟೈಗರ್​​ಗಳು ಘರ್ಜಿಸಿದ್ರೆ, ಇಂಗ್ಲೆಂಡ್​ ಲಯನ್ಸ್​​ ಗಪ್​ಚುಪ್​ ಆದ್ರು.
ಸೆಷನ್​-1: ಜೈಸ್ವಾಲ್​- ರಾಹುಲ್​​ ಬೊಂಬಾಟ್​ ಬ್ಯಾಟಿಂಗ್​
ಮೊದಲು ಬ್ಯಾಟಿಂಗ್​ ಇಳಿದ ಟೀಮ್​ ಇಂಡಿಯಾಗೆ ಸಾಲಿಡ್​ ಓಪನಿಂಗ್​ ಸಿಗ್ತು. ಯಶಸ್ವಿ ಜೈಸ್ವಾಲ್​, ಕೆ.ಎಲ್​ ರಾಹುಲ್​ ತಾಳ್ಮೆಯ ಆಟದಿಂದಲೇ ಇಂಗ್ಲೆಂಡ್​ ಬೌಲರ್​ಗಳನ್ನ ಕಾಡಿದ್ರು. ಎಚ್ಚರಿಕೆಯ ಆಟವಾಡಿದ ಈ ಜೋಡಿ ಮೊದಲ ವಿಕೆಟ್​ಗೆ 151 ಎಸೆತ ಎದುರಿಸಿ 91 ರನ್​ಗಳ ಜೊತೆಯಾಟವಾಡಿದ್ರು.
78 ಎಸೆತಗಳನ್ನ ಎದುರಿಸಿದ ಕನ್ನಡಿಗ ರಾಹುಲ್​ ಕ್ಲಾಸಿಕ್​ ಇನ್ನಿಂಗ್ಸ್​ ಕಟ್ಟಿದ್ರು. 7 ಆಕರ್ಷಕ ಬೌಂಡರಿಗಳನ್ನ ಬಾರಿಸಿ ಫ್ಯಾನ್ಸ್​ನ ರಂಜಿಸಿದ್ರು. ಅರ್ಧಶತಕದ ಹಾದಿಯಲ್ಲಿ ಎಡವಿದ್ರು. 42 ರನ್​ಗಳಿಸಿ ರಾಹುಲ್​ ಔಟಾದ್ರು. ಆ ಬಳಿಕ ಕಣಕ್ಕಿಳಿದ ಸಾಯಿ ಸುದರ್ಶನ್​ ಖಾತೆ ತೆರೆಯದೇ ನಿರ್ಗಮಿಸಿದ್ರು. ಮೊದಲ ಸೆಷನ್​ ಅಂತ್ಯಕ್ಕೆ 2 ವಿಕೆಟ್​​ ಕಳೆದುಕೊಂಡ ಟೀಮ್​ ಇಂಡಿಯಾ 92 ರನ್​ಗಳಿಸಿತು.
ಸೆಷನ್​ - 2: ಜೈಸ್ವಾಲ್​​ ಶತಕ, ಗಿಲ್​ ಅಬ್ಬರದ ಅರ್ಧಶತಕ
4ನೇ ವಿಕೆಟ್​ಗೆ ಜೊತೆಯಾದ ಯಶಸ್ವಿ ಜೈಸ್ವಾಲ್​ -ಶುಭ್​ಮನ್​ ಗಿಲ್​ ಅಂಗ್ಲರನ್ನ ಇನ್ನಷ್ಟು ಕಾಡಿದ್ರು. ಸಾಲಿಡ್​ ಆಟವನ್ನ ಮುಂದುವರೆಸಿದ 96 ಎಸೆತಕ್ಕೆ ಹಾಫ್​ ಸೆಂಚುರಿ ಪೂರೈಸಿದ್ರು. ಕ್ಯಾಪ್ಟನ್​ ಶುಭ್​ಮನ್​ ಗಿಲ್​ ಆರಂಭದಿಂದಲೇ ಅಟ್ಯಾಕಿಂಗ್​ ಆಟವಾಡಿದ್ರು. 56 ಎಸೆತಕ್ಕೆ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರು. ಅರ್ಧಶತಕದ ಗಡಿ ದಾಟಿದ ಬಳಿಕ ಜೈಸ್ವಾಲ್​ ಕೂಡ ಬಿರುಸಿನ ಆಟವಾಡಿದ್ರು. ಹಾಫ್​ ಸೆಂಚುರಿ ತಲುಪಲು 96 ಎಸೆತ ತೆಗೆದುಕೊಂಡ ಜೈಸ್ವಾಲ್​, ನಂತರದ 27 ಎಸೆತಗಳಲ್ಲಿ ಶತಕ ಪೂರೈಸಿದ್ರು.
2ನೇ ಸೆಷನ್​ನಲ್ಲಿ ಟೀಮ್​ ಇಂಡಿಯಾ ಸಂಪೂರ್ಣ ಮೇಲುಗೈ ಸಾಧಿಸಿತು. ವಿಕೆಟ್ ಕಬಳಿಸಲು ಹರಸಾಹಸ ಪಟ್ಟ ಇಂಗ್ಲೆಂಡ್​ ಬರಿಗೈಯಲ್ಲಿ ಡ್ರೆಸ್ಸಿಂಗ್​ ರೂಮ್​ಗೆ ಮರಳಿತು. ಟೀ ಬ್ರೇಕ್​ ವೇಳೆಗೆ 2 ವಿಕೆಟ್​ ನಷ್ಟಕ್ಕೆ 215 ರನ್​ಗಳಿಸಿತು.
ಸೆಷನ್​ - 3: ಶುಭ್​​ಮನ್​ ಶತಕ ವೈಭವ, ಪಂತ್​ ಫೆಂಟಾಸ್ಟಿಕ್​
3ನೇ ಸೆಷನ್​ನ ಆರಂಭದಲ್ಲೇ ಯಶಸ್ವಿ ಜೈಸ್ವಾಲ್​ ಔಟಾದ್ರು. ಆ ಬಳಿಕ ಕ್ರಿಸ್​ನಲ್ಲಿ ಜೊತೆಯಾದ ಕ್ಯಾಪ್ಟನ್​ -ವೈಸ್​ ಕ್ಯಾಪ್ಟನ್​ ಆಂಗ್ಲರಿಗೆ ಮತ್ತಷ್ಟು ಕಾಟ ಕೊಟ್ರು. ಕಾನ್ಫಿಡೆಂಟ್​ ಆಟವಾಡಿದ ಶುಭ್​ಮನ್​ ಗಿಲ್​ ನಾಯಕನಾಗಿ ಮೊದಲ ಟೆಸ್ಟ್​ನಲ್ಲೇ ಶತಕ ಸಿಡಿಸಿದ್ರು. ವೈಸ್ ಕ್ಯಾಪ್ಟನ್​ ರಿಷಭ್​ ಪಂತ್​ ಕಂಡೀಷನ್ಸ್​ ನೋಡಿಕೊಂಡು ಬ್ಯಾಟ್​ ಬೀಸಿದ್ರು. ಗುಡ್​ ಬಾಲ್​ಗಳನ್ನ ರೆಸ್ಪೆಕ್ಟ್​ ಮಾಡಿ, ಬ್ಯಾಡ್​ ಬಾಲ್​ಗಳನ್ನ ಥಳಿಸಿದ ಪಂತ್​ 1 ಸಿಕ್ಸರ್​​, 6 ಬಾಂಡರಿ ಬಾರಿಸಿ, ಟೆಸ್ಟ್​ ಕ್ರಿಕೆಟ್​ನಲ್ಲಿ 15ನೇ ಅರ್ಧಶತಕ ಸಿಡಿಸಿದ್ರು.
ಭರ್ಜರಿ ಬ್ಯಾಟಿಂಗ್​ ನಡೆಸಿದ ಭಾರತ ತಂಡ ಮೊದಲ ದಿನದ ಗೌರವಕ್ಕೆ ಪಾತ್ರವಾಯ್ತು. ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್​ ಕಳೆದುಕೊಂಡು ಟೀಮ್​ ಇಂಡಿಯಾ 351 ರನ್​ಗಳ ಬಿಗ್​ ಸ್ಕೋರ್​ ಕಲೆ ಹಾಕಿದೆ. 127 ರನ್​ಗಳೊಂದಿಗೆ ಗಿಲ್​, 57 ರನ್​ಗಳೊಂದಿಗೆ ಪಂತ್​ ಇಂದಿಗೆ ಕ್ರಿಸ್​ ಕಾಯ್ದುಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ