/newsfirstlive-kannada/media/post_attachments/wp-content/uploads/2025/06/PRASIDH-KRISHNA-4.jpg)
ಶುಭ್ಮನ್ ಗಿಲ್ ಪಡೆಯ ಶುಭಾರಂಭದ ಕನಸು ನುಚ್ಚು ನೂರಾಯ್ತು. ಇಂಗ್ಲೆಂಡ್ ಆಟಗಾರರ ಅಬ್ಬರದ ಆಟದ ಮುಂದೆ ಉತ್ತರವಿಲ್ಲದಾದ ಟೀಮ್ ಇಂಡಿಯಾ ಲೀಡ್ಸ್ನಲ್ಲಿ ಮುಗ್ಗರಿಸಿತು. 5ನೇ ದಿನದಾಟದಲ್ಲಿ ದಾಖಲೆಯ ರನ್ ಚೇಸ್ ಮಾಡಿದ ಇಂಗ್ಲೆಂಡ್ ಸರಣಿಯಲ್ಲಿ ಮುನ್ನಡೆ ಸಾಧಿಸಿತು.
ಸೆಷನ್-1: ಇಂಗ್ಲೆಂಡ್ ಆರಂಭಿಕರ ಬೊಂಬಾಟ್ ಆಟ
ವಿಕೆಟ್ ನಷ್ಟವಿಲ್ಲದೇ 21 ರನ್ಗಳೊಂದಿಗೆ ಕೊನೆಯ ದಿನದಾಟದಲ್ಲಿ ಚೇಸಿಂಗ್ಗಿಳಿದ ಇಂಗ್ಲೆಂಡ್ ಬ್ಯಾಟರ್ಸ್ ಬೊಂಬಾಟ್ ಬ್ಯಾಟಿಂಗ್ ನಡೆಸಿದ್ರು. ಬೆನ್ ಡಕೆಟ್ ಅಗ್ರೆಸ್ಸಿವ್ ಬ್ಯಾಟಿಂಗ್ ನಡೆಸಿದ್ರೆ, ಜಾಕ್ ಕ್ರಾವ್ಲಿ ಕೂಲ್ ಅಂಡ್ ಕಾಮ್ ಆಟದಿಂದಲೇ ಕಾಡಿದ್ರು. 66 ಎಸೆತಕ್ಕೆ ಬೆನ್ ಡಕೆಟ್ ಹಾಫ್ ಸೆಂಚುರಿ ಸಿಡಿಸಿದ್ರು.
ಇದನ್ನೂ ಓದಿ: ರಿಂಕು ಸಿಂಗ್, ಸಂಸದೆ ಪ್ರಿಯಾ ಸರೋಜ್ ಮದುವೆ ದಿನ ಮುಂದೂಡಿಕೆ.. ಕಾರಣವೇನು?
ಇಂಗ್ಲೆಂಡ್ ಆರಂಭಿಕರ ಆಟಕ್ಕೆ ಬ್ರೇಕ್ ಹಾಕಲಾಗದೆ ಇಂಡಿಯನ್ ಬೌಲರ್ಸ್ ಪರದಾಡಿದ್ರು. ಡಾಮಿನೇಟಿಂಗ್ ಪರ್ಫಾಮೆನ್ಸ್ ನೀಡಿದ ಈ ಜೋಡಿ ಮೊದಲ ಸೆಷನ್ನಲ್ಲಿ 117 ರನ್ಗಳಿಸಿತು.
ಸೆಷನ್- 2: ಜಾಕ್ ಕ್ರಾವ್ಲಿ ಅರ್ಧಶತಕ, ಬೆನ್ ಡಕೆಟ್ ಶತಕ
ಲಂಚ್ ಬ್ರೇಕ್ನ ಬಳಿಕ ಈ ಜೋಡಿ ಮತ್ತಷ್ಟು ಕಾನ್ಫಿಡೆಂಟ್ ಆಟವಾಡಿತು. ಜಾಕ್ ಕ್ವಾವ್ಲಿ ಹಾಫ್ ಸೆಂಚುರಿ ಪೂರೈಸಿದ್ರೆ, ಯಶಸ್ವಿ ಜೈಸ್ವಾಲ್ ಮಾಡಿದ ಕ್ಯಾಚ್ ಡ್ರಾಪ್ನ ಲಾಭ ಪಡೆದ ಬೆನ್ ಡಕೆಟ್ ಬೊಂಬಾಟ್ ಶತಕ ಸಿಡಿಸಿ ಸಂಭ್ರಮಿಸಿದ್ರು. ಕೇವಲ 121 ಎಸೆತಕ್ಕೆ ಬೆನ್ ಡಕೆಟ್ ಶತಕ ಪೂರೈಸಿದ್ರು.
ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್; ಗಿಲ್ ಪಡೆಗೆ ಸೋಲು.. ಡಕೆಟ್ ಸೆಂಚುರಿ, ಕೊನೆ ದಿನದಲ್ಲಿ ಇಂಗ್ಲೆಂಡ್ಗೆ ಲಕ್!
ಅಂತಿಮವಾಗಿ 188 ರನ್ಗಳ ಜೊತೆಯಾಟಕ್ಕೆ ಕನ್ನಡಿಗ ಪ್ರಸಿದ್ಧ ಕೃಷ್ಣ ಬ್ರೇಕ್ ಹಾಕಿದ್ರು. ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸಿ ಕನ್ನಡಿಗ ಮಿಂಚಿದ್ರು, 65 ರನ್ಗಳಿಸಿದ್ದ ಜಾಕ್ ಕ್ರಾವ್ಲಿ ಹಾಗೂ ಬಳಿಕ ಕಣಕ್ಕಿಳಿದ ಒಲಿ ಪೋಪ್ ವಿಕೆಟ್ನ ಪ್ರಸಿದ್ಧ್ ಕಬಳಿಸಿದ್ರು. 55ನೇ ಓವರ್ನಲ್ಲಿ ದಾಳಿಗಿಳಿದ ಶಾರ್ದೂಲ್ ಠಾಕೂರ್ ಒಂದೇ ಓವರ್ನಲ್ಲಿ ಮತ್ತೆರೆಡು ವಿಕೆಟ್ ಉರುಳಿಸಿದ್ರು. 149 ರನ್ಗಳಿಸಿದ್ದ ಬೆನ್ ಡಕೆಟ್ಗೆ ಪೆವಿಲಿಯನ್ ದಾರಿ ತೋರಿಸಿದ ಶಾರ್ದೂಲ್, ಮರು ಎಸೆತದಲ್ಲೇ ಹ್ಯಾರಿ ಬ್ರೂಕ್ ವಿಕೆಟ್ ಉರುಳಿಸಿದ್ರು.
ಸೆಷನ್ - 3: ಇಂಗ್ಲೆಂಡ್ಗೆ ದಾಖಲೆಯ ಗೆಲುವು
3ನೇ ಸೆಷನ್ನಲ್ಲೂ ಇಂಗ್ಲೆಂಡ್ ತಂಡದ್ದೇ ದರ್ಬಾರ್ ನಡೀತು. ಜೋ ರೂಟ್ - ಬೆನ್ ಸ್ಟೋಕ್ಸ್ ಉತ್ತಮ ಬ್ಯಾಟಿಂಗ್ ನಡೆಸಿದ್ರು. 4 ಬೌಂಡರಿ ಬಾರಿಸಿದ ಸ್ಟೋಕ್ಸ್ 51 ಎಸೆತಗಳಿಂದ 33 ರನ್ಗಳಿಸಿದ್ರು. ಸಲೀಸಾಗಿ ರನ್ಗಳಿಸ್ತಿದ್ದ ಸ್ಟೋಕ್ಸ್ ಆಟಕ್ಕೆ ಜಡೇಜಾ 68ನೇ ಓವರ್ನಲ್ಲಿ ಬ್ರೇಕ್ ಹಾಕಿದ್ರು. ಪ್ರಯೋಜನ ಆಗಲಿಲ್ಲ. ಆ ಬಳಿಕ ಕಣಕ್ಕಿಳಿದ ಜೇಮಿ ಸ್ಮಿತ್ ಮತ್ತಷ್ಟು ಅಬ್ಬರದ ಆಟವಾಡಿದ್ರು.
ಸೀನಿಯರ್ ಆಟಗಾರನಾಗಿ ಜವಾಬ್ದಾರಿಯುತ ಆಟವಾಡಿದ ಜೋ ರೂಟ್ ಇಂಡಿಯನ್ ಬೌಲರ್ಗಳನ್ನ ಕಾಡಿದ್ರು. 84 ಎಸೆತ ಎದುರಿಸಿದ ರೂಟ್ 6 ಆಕರ್ಷಕ ಬೌಂಡರಿ ಸಹಿತ ಅರ್ಧಶತಕ ಸಿಡಿಸಿದ್ರು. ವಿಕೆಟ್ ಕೀಪರ್ ಬ್ಯಾಟರ್ ಜೇಮಿ ಸ್ಮಿತ್ ಅಟ್ಯಾಕಿಂಗ್ ಆಟವಾಡಿದ್ರು. 4 ಬೌಂಡರಿ, 2 ಸಿಕ್ಸರ್ ಸಿಡಿಸಿದ ಸ್ಮಿತ್ ಅಜೇಯ 44 ರನ್ಗಳಿಸಿದ್ರು. 82ನೇ ಓವರ್ ಕೊನೆಯ ಎಸೆತವನ್ನ ಸಿಕ್ಸರ್ ಸಿಡಿಸಿ ಇಂಗ್ಲೆಂಡ್ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ದಾಖಲೆಯ ರನ್ ಚೇಸ್ ಮಾಡಿದ ಇಂಗ್ಲೆಂಡ್ ತಂಡ 5 ವಿಕೆಟ್ ಗೆಲುವು ಸಾಧಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿತು.
ಇದನ್ನೂ ಓದಿ: ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ ನಿಧನ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ