/newsfirstlive-kannada/media/post_attachments/wp-content/uploads/2025/06/headingley.jpg)
ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಉಭಯ ತಂಡಗಳು ಶುಭಾರಂಭದ ಕನಸು ಕಾಣ್ತಿವೆ. ಶತಾಯಗತಾಯ ಟೀಮ್ ಇಂಡಿಯಾ ಮಣಿಸೋ ಕನಸು ಕಾಣ್ತಿರೋ ಇಂಗ್ಲೆಂಡ್ ಪಿಚ್ ತಂತ್ರದ ಮೊರೆ ಹೋಗಿದೆ. ಹೆಡಿಂಗ್ಲಿಯಲ್ಲಿ ಟೀಮ್ ಇಂಡಿಯಾಗೆ ಏನೆಲ್ಲಾ ಚಾಲೆಂಜಸ್ ಎದುರಾಗುತ್ತೆ ಅನ್ನೋ ವಿವರ ಇಲ್ಲಿದೆ.
ಟೀಮ್ ಇಂಡಿಯಾ ಮಣಿಸಲು ‘ಗ್ರೀನ್ ಪಿಚ್’ ರೆಡಿ
ಟೀಮ್ ಇಂಡಿಯಾದ ಎದುರಿನ ಮೊದಲ ಪಂದ್ಯ ಲೀಡ್ಸ್ನ ಹೆಡಿಂಗ್ಲಿಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್ಸ್ನ ಕಟ್ಟಿಹಾಕಲು ಇಂಗ್ಲೆಂಡ್, ಗ್ರೀನ್ ಪಿಚ್ನ ಸಜ್ಜುಗೊಳಿಸಿದೆ. ಮೊದಲ ದಿನ ಹೆಡಿಂಗ್ಲಿ ಪಿಚ್ ವೇಗಿಗಳ ಪಾಲಿಗೆ ಪಿಚ್ ಸ್ವರ್ಗ ಆಗೋದ್ರಲ್ಲಿ ಡೌಟೇ ಇಲ್ಲ. ದಿನ ಕಳೆದಂತೆ ಬ್ಯಾಟ್ಸ್ಮನ್ಗಳಿಗೆ ನೆರವಾಗಲಿದೆ. ವೇಗಿಗಳಿಗೆ ಸಹಕಾರಿಯಾಗುವ ಈ ಗ್ರೀನ್ ಪಿಚ್ನಲ್ಲಿ ಬೌಲರ್ಗಳಿಗೆ ಉತ್ತಮ ಸ್ವಿಂಗ್ ಹಾಗೂ ಬೌನ್ಸ್ ಸಿಗುತ್ತೆ. ಹೀಗಾಗಿ ಈ ಪಿಚ್ನಲ್ಲಿ ಬ್ಯಾಟ್ಸ್‌ಮನ್ಸ್, ಕ್ರಿಸ್ ಕಚ್ಚಿ ನಿಲ್ಲುವುದೇ ದೊಡ್ಡ ಸವಾಲಾಗಲಿದೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಬಲಿಷ್ಠ ಪ್ಲೇಯಿಂಗ್-11; ಆಯ್ಕೆಯ ಗೊಂದಲ ಇರೋದು ಎಲ್ಲಿ..?
ವೇಗಿಗಳಿಗೆ ಹೆಚ್ಚು ನೆರವು
ಉತ್ತರ ಇಂಗ್ಲೆಂಡ್‌ನಲ್ಲಿ ಈಗ ಬಿಸಿ ವಾತಾವರಣವಿದೆ. ಹೀಗಾಗಿ ಪಿಚ್ ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳಲಾಗಿದೆ. ಇದು ಹೇಗೆ ವರ್ತಿಸಲಿದೆ ಎನ್ನುವುದನ್ನ ಕಾದುನೋಡಬೇಕಿದೆ. ಆರಂಭಿಕ ಹಂತದಲ್ಲಿ ವೇಗಿಗಳಿಗೆ ಹೆಚ್ಚು ನೆರವಾಗಲಿದೆ. ಪಂದ್ಯ ಮುಂದುವರಿದಂತೆ ಬ್ಯಾಟರ್‌ಗಳಿಗೂ ಅನುಕೂಲವಾಗಲಿದೆ. ಹುಲ್ಲನ್ನ ಸ್ವಲ್ಪ ಟ್ರಿಮ್ ಮಾಡಲಾಗಿದೆ. ಮೊದಲ ಇನಿಂಗ್ಸ್ನಲ್ಲಿ 300 ರನ್ ಗಳಿಸಿದ್ರೆ ಉತ್ತಮ ಮೊತ್ತ ಆಗಿರಲಿದೆ- ರಿಚರ್ಡ್ ರಾಬಿನ್ಸನ್, ಕ್ಯುರೇಟರ್
ಟಫ್ ಫೈಟ್
ಹೆಡಿಂಗ್ಲಿಯಲ್ಲಿ ಟೀಮ್ ಇಂಡಿಯಾ ಸುಲಭಕ್ಕೆ ಸೋಲು ಒಪ್ಪಿಕೊಂಡಿಲ್ಲ. ಈ ವಿಚಾರವನ್ನು ಭಾರತ, ಇಂಗ್ಲೆಂಡ್ ನಡುವಿನ ಟ್ರ್ಯಾಕ್ ರೆಕಾರ್ಡ್ ಹೇಳ್ತಿದೆ. ಈ ಮೈದಾನದಲ್ಲಿ ಟೀಮ್ ಇಂಡಿಯಾ ಇದುವರೆಗೆ 7 ಟೆಸ್ಟ್ ಪಂದ್ಯಗಳನ್ನಾಡಿದ್ದು, 2 ಪಂದ್ಯ ಗೆದ್ದಿರುವ ಟೀಮ್ ಇಂಡಿಯಾ, 1 ಪಂದ್ಯ ಡ್ರಾ ಸಾಧಿಸಿದೆ. 4 ಪಂದ್ಯ ಸೋತಿದ್ರೂ ಟಫ್ ಫೈಟ್ ನೀಡಿದೆ. ಇಂದೂ ಬಲಿಷ್ಠ ಇಂಗ್ಲೆಂಡ್ಗೆ ಟಫ್ ಫೈಟ್ ಲೆಕ್ಕಾಚಾರದಲ್ಲಿದೆ.
ಬೌಲರ್ಸ್ ಚಿಂತಿಸಬೇಕಿಲ್ಲ
ವೇಗಿಗಳಿಗೆ ಹೆಚ್ಚು ನೆರವಾಗುವ ಈ ಪಿಚ್ನಲ್ಲಿ ಟೀಮ್ ಇಂಡಿಯಾ ಟೆನ್ಶನ್ ಪಡೆಬೇಕಿಲ್ಲ. ಯಾಕಂದ್ರೆ, ಅತಿಥೇಯ ಇಂಗ್ಲೆಂಡ್ ದಿಕ್ಕು ತಪ್ಪಿಸಬಲ್ಲ ಬೌಲರ್ಗಳು ನಮ್ಮಲ್ಲಿದ್ದಾರೆ. ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್ಗೆ ಇಂಗ್ಲೆಂಡ್ ಕಂಡೀಷನ್ಸ್ನಲ್ಲಿ ಎದುರಾಳಿಯ ಗರ್ವಭಂಗ ಮಾಡಬಲ್ಲ ತಾಕತ್ತಿದೆ. ವೇಗಿಗಳಿಗೆ ಸಹಕಾರಿಯಾಗುವ ಪಿಚ್ ಸಿಕ್ರೆ, ತವರಿನಲ್ಲೇ ನಾವೇ ಕಿಂಗ್ಸ್ ಎಂದು ಮರೆಯೋ ಜೋ ರೂಟ್, ಹ್ಯಾರಿ ಬ್ರೂಕ್ಸ್, ಬೆನ್ ಡೆಕೆಟ್, ಬೆನ್ ಸ್ಟೋಕ್ಸ್ಗೆ ಸ್ಟ್ರೋಕ್ ನೀಡೋದ್ರಲ್ಲಿ ಡೌಟೇ ಇಲ್ಲ.
ಇದನ್ನೂ ಓದಿ: RCB ಗೆದ್ದರೆ ಪತಿಗೆ ಇನ್ನೊಂದು ಮದುವೆ ಮಾಡಿಸ್ತೀನಿ ಎಂದಿದ್ದ ಪತ್ನಿಗೆ ಫಜೀತಿ; ಈಗ ಆಗಿದ್ದೇನು..?
ಬೌಲರ್ಸ್ಗಿಂತ ಬ್ಯಾಟರ್ಗಳಿಗೆ ಬಿಗ್ ಚಾಲೆಂಜ್
ಲೀಡ್ಸ್ನಲ್ಲಿ ಬೌಲರ್ಗಳಿಂತ ಬ್ಯಾಟ್ಸ್ಮನ್ಗಳಿಗೆ ಬಿಗ್ ಚಾಲೆಂಜ್ ಎದುರಾಗಲಿದೆ. ಸ್ವಿಂಗ್ ಹಾಗೂ ಬೌನ್ಸ್ನಿಂದ ಕೂಡಿರುವ ಈ ಪಿಚ್ನಲ್ಲಿ ಕ್ರೀಸ್ನಲ್ಲಿ ನೆಲೆಯೂರಿ ನಿಲ್ಲೋದು ಅಷ್ಟು ಸುಲಭದಲ್ಲ. ಈ ಹಿಂದೆ ಇದೇ ಪಿಚ್ನಲ್ಲಿ ಆಡಿದಾಗ ಕೆ.ಎಲ್.ರಾಹುಲ್, ರಿಷಭ್ ಪಂತ್, ರವೀಂದ್ರ ಜಡೇಜಾ ಒಂದಂಕಿ ರನ್ ದಾಟಲು ಪರದಾಡಿದ್ದಾರೆ. ಅನಾನುಭವಿಗಳನ್ನೇ ಹೊಂದಿರುವ ಟೀಮ್ ಇಂಡಿಯಾ ಹೆಡಿಂಗ್ಲಿಯ ಗ್ರೀನ್ ಟ್ರ್ಯಾಕ್ನಲ್ಲಿ ಸವಾಲು ಮೆಟ್ಟಿನಿಲ್ಲಬೇಕಿದೆ.
ಮರೆಯಾಗುತ್ತಾ ಕಹಿ ನೆನಪು?
ಗಿಲ್ ನಾಯಕತ್ವದ ಟೀಮ್ ಇಂಡಿಯಾ ಮೆಲ್ನೋಟಕ್ಕೆ ಸಖತ್ ಸ್ಟ್ರಾಂಗ್ ಇದೆ. ಕೆ.ಎಲ್.ರಾಹುಲ್, ರಿಷಭ್ ಪಂತ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಹೊರತು ಪಡಿಸಿದ್ರೆ ಮತ್ಯಾರಿಗೂ ಈ ಮೈದಾನದಲ್ಲಿ ಆಡಿದ ಅನುಭವವಿಲ್ಲ. ಕೊನೆಯದಾಗಿ ಆಡಿದ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 78 ರನ್ಗೆ ಟೀಮ್ ಇಂಡಿಯಾ ಆಲೌಟ್ ಆಗಿತ್ತು. ಇನ್ನಿಂಗ್ಸ್ ಹಾಗೂ 76 ರನ್ಗಳ ಸೋಲು ಕಂಡಿತ್ತು. ಇದೀಗ ಗಿಲ್ ಪಡೆ, ಹಳೆಯ ಕಹಿ ನೆನಪು ಮರೆಸುವ ಆಟವನ್ನಾಡಬೇಕಿದೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್.. ಜೂನ್ 20 ದ್ರಾವಿಡ್, ಗಂಗೂಲಿ, ಕೊಹ್ಲಿಗೆ ಮರೆಯಲಾಗದ ದಿನ..! ಏನದು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ