ಕೊಹ್ಲಿ-ರೋಹಿತ್​ ಇಲ್ಲ.. ಇವರ ಜವಾಬ್ದಾರಿಯನ್ನ ಈ ಮೂರು ಸ್ಟಾರ್ ಹೊರಲೇಬೇಕು..!

author-image
Ganesh
Updated On
ಕೊಹ್ಲಿ-ರೋಹಿತ್​ ಇಲ್ಲ.. ಇವರ ಜವಾಬ್ದಾರಿಯನ್ನ ಈ ಮೂರು ಸ್ಟಾರ್ ಹೊರಲೇಬೇಕು..!
Advertisment
  • ಲೀಡ್ಸ್​ನಲ್ಲಿ ಭಾರತ- ಇಂಗ್ಲೆಂಡ್​ ಮೊದಲ ಟೆಸ್ಟ್​ ಕದನ
  • ಶುಭಾರಂಭದ ನಿರೀಕ್ಷೆಯಲ್ಲಿ ಕ್ಯಾಪ್ಟನ್​ ಶುಭ್​ಮನ್​..!
  • 3ನೇ ಕ್ರಮಾಂಕಕ್ಕೆ ಸಾಯಿ, 4ನೇ ಸ್ಲಾಟ್​​ನ​ಲ್ಲಿ ಗಿಲ್​..!

ಇಂಡೋ-ಇಂಗ್ಲೆಂಡ್​ ಟೆಸ್ಟ್​ ಕದನ ಆರಂಭಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಇಂದಿನಿಂದ ಲೀಡ್ಸ್​​ನಲ್ಲಿ ಮೊದಲ ಟೆಸ್ಟ್​ ಫೈಟ್​ ಆರಂಭವಾಗಲಿದ್ದು, ಅಖಾಡಕ್ಕಿಳಿಯಲು ಟೀಮ್​ ಇಂಡಿಯಾ ತುದಿಗಾಲಲ್ಲಿ ನಿಂತಿದೆ.

ಶುಭಾರಂಭದ ನಿರೀಕ್ಷೆಯಲ್ಲಿ ಹೊಸ ಕ್ಯಾಪ್ಟನ್​

ನೂತನ ಕ್ಯಾಪ್ಟನ್​ ಶುಭ್​ಮನ್​ ಗಿಲ್​ ಲೀಡ್ಸ್​​ ಟೆಸ್ಟ್​​ನೊಂದಿಗೆ ಮೊದಲ ಬಾರಿ ಟೀಮ್​ ಇಂಡಿಯಾವನ್ನ ಲೀಡ್​ ಮಾಡಲು ಸಜ್ಜಾಗಿದ್ದಾರೆ. ಗೇಮ್​ಪ್ಲಾನ್​, ಸ್ಟ್ರಾಟರ್ಜಿಗಳೊಂದಿಗೆ ಫಸ್ಟ್​ ಟೆಸ್ಟ್​ಗೆ ಸಜ್ಜಾಗಿರೋ ಶುಭ್​ಮನ್ ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ. ತವರಿನಲ್ಲಿ ನ್ಯೂಜಿಲೆಂಡ್​ ಎದುರು ವೈಟ್​ವಾಷ್​​ ಮುಖಭಂಗ, ಆಸ್ಟ್ರೇಲಿಯಾದಲ್ಲಿ ಹೀನಾಯ ಸೋಲು ಕಂಡ ಬಳಿಕ ನಾಯಕನ ಪಟ್ಟವೇರಿರುವ ಶುಭ್​ಮನ್​ ಮುಂದೆ ಕಹಿ ನೆನಪನ್ನ ಅಳಿಸಿಹಾಕೋ ಸವಾಲಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದ ಓಪನರ್​ ಯಾರಾಗ್ತಾರೆ, ಕನ್ನಡಿಗನಿಗೆ ಸಿಗುತ್ತಾ ಚಾನ್ಸ್​​​​..? ರೇಸ್​ನಲ್ಲಿ ಯಂಗ್ ಬ್ಯಾಟರ್ಸ್!

publive-image

ಯಾರ ಹೆಗಲಿಗೆ ಜವಾಬ್ದಾರಿ..?

ಟೀಮ್​ ಇಂಡಿಯಾದ ಬ್ಯಾಟಿಂಗ್​ ಸೂಪರ್​ ಸ್ಟಾರ್ಸ್​ ಆಗಿದ್ದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಟೆಸ್ಟ್​ಗೆ ಗುಡ್​ ಬೈ ಹೇಳಿದ್ದಾರೆ. ಈ ಅನುಭವಿಗಳ ಅಲಭ್ಯತೆಯಲ್ಲಿ ಟೀಮ್​ ಇಂಡಿಯಾದ ಮೊದಲ ಪ್ರವಾಸ ಇದು. ಯುವ ಆಟಗಾರರೇ ತುಂಬಿರುವ ತಂಡದಲ್ಲಿ ಕೆಲ ಸೀನಿಯರ್​ಗಳಿದ್ದು, ತಂಡವನ್ನ ಲೀಡ್​ ಮಾಡೋ ಜವಾಬ್ಧಾರಿಯನ್ನ ತೆಗೆದುಕೊಳ್ಳಬೇಕಿದೆ. ಕೆ.ಎಲ್​ ರಾಹುಲ್​, ಜಸ್​​ಪ್ರಿತ್​ ಬೂಮ್ರಾ, ರವೀಂದ್ರ ಜಡೇಜಾ ಯುವ ನಾಯಕನಿಗೆ ಹೆಗಲಾಗೋದ್ರ ಜೊತೆಗೆ ಯುವ ಆಟಗಾರರನ್ನ ಗೈಡ್​ ಮಾಡಬೇಕಿದೆ.

ಆರಂಭಿಕರಾಗಿ ಜೈಸ್ವಾಲ್​-ರಾಹುಲ್​ ಕಣಕ್ಕೆ..

ಡೈನಾಮಿಕ್​ ಓಪನರ್​ ಯಶಸ್ವಿ ಜೈಸ್ವಾಲ್​ ಓಪನರ್​ ಆಗಿ ಕಣಕ್ಕಿಳಿಯೋದು ಕನ್​​ಫರ್ಮ್​.! ಜೈಸ್ವಾಲ್​ ಜೊತೆಗಾರನಾಗಿ ಅನುಭವಿ ಕೆ.ಎಲ್​ ರಾಹುಲ್​ ಇನ್ನಿಂಗ್ಸ್​ ಓಪನ್​ ಮಾಡಲಿದ್ದಾರೆ. ಅಭ್ಯಾಸ ಪಂದ್ಯಗಳಲ್ಲಿ ಈಗಾಗಲೇ ಓಪನರ್​ ಆಗಿ ರಾಹುಲ್​ ಶೈನ್​ ಆಗಿದ್ದು, ಆತ್ಮವಿಶ್ವಾಸ ಮೂಡಿಸಿದೆ. ಇಷ್ಟು ದಿನ 3ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸ್ತಾ ಇದ್ದ ಕ್ಯಾಪ್ಟನ್​ ಶುಭ್​ಮನ್​ ಗಿಲ್​, 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಸಾಯಿ ಸುದರ್ಶನ್​ ಡೆಬ್ಯೂ ಮಾಡೋ ಸಾಧ್ಯತೆ ದಟ್ಟವಾಗಿದ್ದು, ತಮಿಳುನಾಡು ಬ್ಯಾಟರ್​​ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

ಇದನ್ನೂ ಓದಿ: ಲೀಡ್ಸ್​​ಗೆ ಹೋದ್ರೆ ಕೊಹ್ಲಿ ದಂಪತಿ ಈ ರೆಸ್ಟೋರೆಂಟ್​ಗೆ ವಿಸಿಟ್​ ಮಾಡೇ ಮಾಡ್ತಾರೆ.. ಕಾರಣವೇನು?

publive-image

ಕನ್ನಡಿಗ ಕರುಣ್​ ನಾಯರ್​ ಕಮ್​​​ಬ್ಯಾಕ್

ಗಿಲ್​ ನಂತರದ ಸ್ಲಾಟ್​ ಅಂದ್ರೆ 5ನೇ ಕ್ರಮಾಂಕದಲ್ಲಿ ರಿಷಭ್​ ಪಂತ್​ ಆಡೋದು ಈಗಾಗಲೇ ಕನ್​ಫರ್ಮ್​ ಆಗಿದೆ. ಸ್ವತಃ ಪಂತ್​ ಈ ಸುದ್ದಿಯನ್ನ ಅಧಿಕೃತಗೊಳಿದಿದ್ದಾರೆ. ಕನ್ನಡಿಗ ಕರುಣ್​ ನಾಯರ್ ಕನಸು ನನಸಾಗೋ ಕ್ಷಣ ಬಂದಿದೆ. ಸುದೀರ್ಘ ಅಂತರದ ಬಳಿಕ ಕರುಣ್​ ನಾಯರ್​ ವೈಟ್​ ಜೆರ್ಸಿ ತೊಟ್ಟು ಮಿಂಚಲಿದ್ದಾರೆ. ರೆಡ್​ ಹಾಟ್​ ಫಾರ್ಮ್​ನಲ್ಲಿರೋ ಕನ್ನಡಿಗ 6ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲಿದ್ದಾರೆ.

ಆಲ್​​ರೌಂಡರ್​​ ಕೋಟಾದಲ್ಲಿ ಯಾರಿಗೆ ಚಾನ್ಸ್​.?

ಆಲ್​​ರೌಂಡರ್​​ ಕೋಟಾದಲ್ಲಿ ಟೀಮ್​ ಸೆಲೆಕ್ಷನ್ ಸದ್ಯ ಮ್ಯಾನೇಜ್​ಮೆಂಟ್​ಗೆ ಗೊಂದಲ ಮೂಡಿಸಿದೆ. ಸ್ಪಿನ್​ ಆಲ್​​ರೌಂಡರ್​ ರವೀಂದ್ರ ಜಡೇಜಾ, ಕುಲ್​​ದೀಪ್​ ಯಾದವ್​ ಇಬ್ಬರಲ್ಲಿ ಯಾರನ್ನ ಆಡಿದಬೇಕು ಅನ್ನೋ ಪ್ರಶ್ನೆಯಿದೆ. ಇನ್ನು ಪೇಸ್​ ಆಲ್​​ರೌಂಡರ್​ಗಳಾದ ಶಾರ್ದೂಲ್​ ಠಾಕೂರ್​, ನಿತೀಶ್​ ರೆಡ್ಡಿ ನಡುವೆಯೂ ಸ್ಥಾನಕ್ಕಾಗಿ ಫೈಟ್​ ಏರ್ಪಟ್ಟಿದೆ. ಆಲ್​​ರೌಂಡರ್​ಗಳ ಆಯ್ಕೆಯಲ್ಲಿ ಈಗಲೂ ಗೊಂದಲವಿದೆ.

ಇದನ್ನೂ ಓದಿ: Israel-Iran War: ಯುದ್ಧಭೂಮಿಗೆ ಟ್ರಂಪ್​ ಎಂಟ್ರಿ ಗೊಂದಲ.. ಅಮೆರಿಕಗೆ ರಷ್ಯಾ, ಕೋರಿಯಾ ಎಚ್ಚರಿಕೆ..

publive-image

ವೇಗದ ವಿಭಾಗ ಫುಲ್​ ಪವರ್​ಫುಲ್​..!

ಜಸ್​ಪ್ರಿತ್​ ಬೂಮ್ರಾ ಸಾರಥ್ಯದ ವೇಗದ ವಿಭಾಗ ಸಖತ್​ ಪವರ್​ಫುಲ್​ ಆಗಿದೆ. ಬೂಮ್ರಾ ಜೊತೆಗೆ ಸಿಡಿಗುಂಡು ಸಿರಾಜ್​​ ಚೆಂಡು ಹಂಚಿಕೊಳ್ಳಲಿದ್ದಾರೆ. 3ನೇ ವೇಗಿಯ ಸ್ಥಾನಕ್ಕೆ ಪೈಪೋಟಿಯಿದೆ. ಕನ್ನಡಿಗ ಪ್ರಸಿದ್ಧ್​​ ಕೃಷ್ಣ, ಎಡಗೈ ವೇಗಿ ಆರ್ಷ್​​ದೀಪ್ ಸಿಂಗ್​ ಇಬ್ಬರಲ್ಲಿ ಯಾರನ್ನ ಆಡಿಸೋದು ಅನ್ನೋ ಪ್ರಶ್ನೆಗೆ ಕ್ಲೀಯರ್​ ಉತ್ತರ ಸಿಕ್ಕಿಲ್ಲ.

ಆಂಗ್ಲರನ್ನ ಮಣಿಸಲು ಟೀಮ್​ ಇಂಡಿಯಾ ಪರ್ಫೆಕ್ಟ್​ ಪ್ಲೇಯಿಂಗ್​ ಇಲೆವೆನ್​ ನೊಂದಿಗೆ ರೆಡಿಯಾಗಿದೆ. ಎದುರಾಳಿ ಇಂಗ್ಲೆಂಡ್​ ಟೀಮ್​ ಕೂಡ ಸಖತ್​ ಬಲಿಷ್ಠವಾಗಿದೆ. ಹೋಮ್​​ಕಂಡಿಷನ್ಸ್​ನ ಅಡ್ವಾಂಟೇಜ್​ ಕೂಡ ತಂಡಕ್ಕಿದೆ. ಹೀಗಾಗಿ ಯಂಗ್​ ಇಂಡಿಯಾಗೆ ಇಂಗ್ಲೆಂಡ್​ ತಂಡದಿಂದ ಟಫ್​ ಫೈಟ್​ ಎದುರಾಗಲಿದೆ. ಇದನ್ನ ಗಿಲ್​ ಪಡೆ ಹೇಗೆ ಹ್ಯಾಂಡಲ್​ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ: ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ರಾಷ್ಟ್ರದ ಜಾಗ ಬಹಿರಂಗ.. ಕೋರ್ಟ್​ನಲ್ಲಿ ಶಿಷ್ಯರಿಂದ ಅಸಲಿ ಸತ್ಯ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment