18 ತಿಂಗಳಿಂದ ನೋವಲ್ಲೇ ನರಳಾಟ.. ತಂಡಕ್ಕಾಗಿ ಜೀವ ಸವೆಸಿದ ಬೂಮ್ರಾ..!

author-image
Ganesh
Updated On
ಅವಕಾಶ ಸಿಕ್ರೂ ಆಡದ ಯುವ ಆಟಗಾರರು​​; ಟೀಮ್​ ಇಂಡಿಯಾಗೆ ಕಾಡ್ತಿದೆ ಆ ಒಂದು ಚಿಂತೆ..!
Advertisment
  • 2ನೇ ಟೆಸ್ಟ್​​​ ಪಂದ್ಯಕ್ಕೆ ಬೂಮ್ರಾ ಅಲಭ್ಯತೆ ಸಾಧ್ಯತೆ
  • ಜಸ್​ಪ್ರಿತ್​​ ಬೂಮ್ರಾ ಮೇಲೆ ಡಿಪೆಂಡ್​ ಆಗಿದ್ಯಾ..?
  • ಡೆಬ್ಯೂ ಮಾಡಿ 7 ವರ್ಷ, ಆಡಿರೋದು 46 ಪಂದ್ಯ

2ನೇ ಟೆಸ್ಟ್​​​ ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾಗೆ ಹಿನ್ನಡೆಯ ಭೀತಿ ಎದುರಾಗಿದೆ. ಮ್ಯಾಚ್​ ವಿನ್ನರ್​​​ ಜಸ್​​​ಪ್ರಿತ್​ ಬೂಮ್ರಾ ಪಂದ್ಯದಿಂದ ಹೊರಗುಳಿಯೋ ಸಾಧ್ಯತೆ ದಟ್ಟವಾಗಿದೆ. ಬೂಮ್ರಾ ಇಲ್ಲದ ಟೀಮ್​ ಇಂಡಿಯಾ ಪರಿಸ್ಥಿತಿ ಯುದ್ಧಕ್ಕೂ ಮುನ್ನವೇ ಶಸ್ತ್ರತ್ಯಾಗ ಮಾಡಿದಂತಾಗಿದೆ. ಬೂಮ್ರಾ ಮೇಲೆ ಟೀಮ್​ ಇಂಡಿಯಾ ಓವರ್​​ ಡಿಪೆಂಡ್​​​ ಆಗಿದ್ಯಾ ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡಿದೆ.

ಇವತ್ತು ಬೂಮ್ರಾ ಆಡಲಿಲ್ಲ ಅಂದ್ರೆ ಟೀಮ್​ ಇಂಡಿಯಾ ನಿಜಕ್ಕೂ ಸಂಕಷ್ಟಕ್ಕೆ ಸಿಲುಕಲಿದೆ. ಯಾಕಂದ್ರೆ, ಬೂಮ್ರಾ ಮೇಲೆಯೇ ಟೀಮ್​ ಇಂಡಿಯಾ ​​ಡಿಪೆಂಡ್​ ಆಗಿರೋದು. ಸೇನಾ ರಾಷ್ಟಗಳಲ್ಲಿ ಬೂಮ್ರಾ ಇಲ್ಲ ಅಂದ್ರೆ ಟೀಮ್​ ಇಂಡಿಯಾದ ಆಟನೇ ನಡೆಯಲ್ಲ. ತಂಡಕ್ಕಾಗಿ ಬೂಮ್ರಾ ಅಷ್ಟರಮಟ್ಟಿಗೆ ಏಕಾಂಗಿಯಾಗಿ ಹೋರಾಡಿದ್ದಾರೆ. ಈ ಸ್ಟ್ಯಾಟ್ಸ್​ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.!

ಇದನ್ನೂ ಓದಿ: ಟೀಂ ಇಂಡಿಯಾಗೆ ಇಂದಿನಿಂದ ಅಗ್ನಿ ಪರೀಕ್ಷೆ; ಶಾರ್ದೂಲ್ ಔಟ್​.. ಬದಲಿ ಆಟಗಾರ ಯಾರು..?

publive-image

2020ರ ಬಳಿಕ SENA ರಾಷ್ಟ್ರಗಳಲ್ಲಿ ಬೂಮ್ರಾ

2020ರ ಬಳಿಕ ಸೇನಾ ರಾಷ್ಟ್ರಗಳಲ್ಲಿ ಬೂಮ್ರಾ ಬರೋಬ್ಬರಿ 751.2 ಓವರ್​ ಬೌಲಿಂಗ್​ ಮಾಡಿದ್ದಾರೆ. 20.95ರ ಸರಾಸರಿ ಹೊಂದಿದ್ದು 101 ವಿಕೆಟ್ಸ್​ ಉರುಳಿಸಿದ್ದಾರೆ. ಇವತ್ತು ಬೂಮ್ರಾ ಮಹತ್ವದ ಪಂದ್ಯದಿಂದ ಹೊರಗುಳಿಯೋ ನಿರ್ಧಾರ ಮಾಡಿದ್ದಾರೆ ಅಂದ್ರೆ ಅದಕ್ಕೆ ಕಾರಣ ಟೀಮ್​ ಮ್ಯಾನೇಜ್​ಮೆಂಟ್​. ಬೂಮ್ರಾ ವರ್ಕ್​​ಲೋಡ್​​ನ ಆರಂಭದಿಂದಲೇ ಮ್ಯಾನೇಜ್​ ಮಾಡಿದ್ರೆ, ಈ ಪರಿಸ್ಥಿತಿ ಬರ್ತಾ ಇರಲಿಲ್ಲ. ಬೂಮ್ರಾ ತಂಡಕ್ಕಾಗಿ ಜೀವವನ್ನೇ ಸವೆಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಈ ಹಿಂದಿನ ಬಾರ್ಡರ್​​-ಗವಾಸ್ಕರ್​ ಸರಣಿ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​. ಇಡೀ ಸರಣಿಯಲ್ಲಿ ತಂಡಕ್ಕಾಗಿ ಬೂಮ್ರಾ ಏಕಾಂಗಿಯಾಗಿ ಹೋರಾಡಿದ್ರು. ಎಷ್ಟರ ಮಟ್ಟಿಗೆ ಅಂದ್ರೆ ಇಂಜುರಿ ತುತ್ತಾಗುವಷ್ಟು ಬೂಮ್ರಾ ಬೌಲಿಂಗ್​ ಮಾಡಿದ್ರು. ಆಸ್ಟ್ರೇಲಿಯಾ ಮಾತ್ರವಲ್ಲ.. SENA ದೇಶಗಳಿಗೆ ಪ್ರವಾಸಕ್ಕೆ ಹೋದ್ರೆ ಸಾಕು ಬೂಮ್ರಾನ ಹಿಂಡಿ ಹಿಪ್ಪೆ ಮಾಡಿ ಬಿಡ್ತಾರೆ.

ಮಿತಿ ಮೀರಿದ ವರ್ಕ್​​​ಲೋಡ್​​.. ಇಂಜುರಿ ಕಾಟ

2020ರ ಬಳಿಕ 751.2 ಓವರ್ಸ್​ ಅಂದ್ರೆ ಬರೋಬ್ಬರಿ 4,508 ಎಸೆತಗಳನ್ನ ಸೇನಾ ರಾಷ್ಟ್ರಗಳಲ್ಲಿ ಬೂಮ್ರಾ ಹಾಕಿದ್ದಾರೆ. ಅಂದ್ರೆ, ಇಡೀ ಟೀಮ್​ ಇಂಡಿಯಾ ಹಾಕಿದ ಒಟ್ಟು ಓವರ್​​ಗಳ ಪೈಕಿ ಶೇಕಡಾ 25.16 ಓವರ್​ನ ಜಸ್​​ಪ್ರಿತ್​​ ಬೂಮ್ರಾ ಒಬ್ರೆ ಹಾಕಿದ್ದಾರೆ. ಬೂಮ್ರಾ ಬಿಟ್ರೆ ಮೊಹಮ್ಮದ್​ ಸಿರಾಜ್​ ಶೇಕಡಾ 22.38 ಓವರ್​​ನ ಬೌಲಿಂಗ್​ ಮಾಡಿದ್ದಾರೆ. ಉಳಿದೆಲ್ಲಾ ಬೌಲರ್​​ಗಳು ಸೇರಿ ಉಳಿದ ಶೇಕಡಾ 53% ಓವರ್​​ ಓವರ್​ ಹಾಕಿದ್ದಾರೆ.

ಇದನ್ನೂ ಓದಿ: ಮೊಹ್ಮದ್ ಶಮಿಗೆ ಹೈಕೋರ್ಟ್​ನಲ್ಲಿ ಹಿನ್ನಡೆ.. ಪತ್ನಿ, ಮಗಳಿಗೆ ಜೀವನಾಂಶದ ಒಟ್ಟು ಮೊತ್ತ ಕೇಳಿ ದಂಗು..!

publive-image

ಕಳೆದ 18 ತಿಂಗಳಿಂದ ನೋವಲ್ಲೇ ನರಳಾಟ

2024ರಿಂದ ಬೂಮ್ರಾ ಮೇಲೆ ಮತ್ತಷ್ಟು ಭಾರ ಬಿದ್ದಿದೆ. 2024ರ ಆರಂಭದಿಂದ ಈವರೆಗೆ ಭಾರತೀಯ ವೇಗಿಗಳು 1,112 ಓವರ್​​ ಬೌಲಿಂಗ್​ ಮಾಡಿದ್ದಾರೆ. ಈ ಪೈಕಿ ಇಬ್ಬರು ವೇಗಿಗಳು ಮಾತ್ರ 150ಕ್ಕೂ ಹೆಚ್ಚು ಓವರ್​ ಬೌಲಿಂಗ್​ ಮಾಡಿರೋದು. ಬೂಮ್ರಾ 410.4 ಓವರ್​ ಬೌಲಿಂಗ್​ ಮಾಡಿದ್ರೆ, ಸಿರಾಜ್​ 355.3 ಓವರ್​ ಹಾಕಿದ್ದಾರೆ. ಕಳೆದೊಂದು ವರ್ಷದಿಂದ ವಿಶ್ವದ ಯಾವೊಬ್ಬ ವೇಗಿ ಕೂಡ ಬೂಮ್ರಾ ಹಾಕಿದಷ್ಟು ಓವರ್ಸ್​ ಹಾಕಿಲ್ಲ. ಹೀಗೆ ಸತತ ಬೌಲಿಂಗ್​ ಮಾಡಿದ ಪರಿಣಾಮವೇ ಕಳೆದ ಜನವರಿಯಲ್ಲಿ ಮತ್ತೆ ಬ್ಯಾಕ್​ ಇಂಜುರಿಗೆ ತುತ್ತಾಗಿದ್ದು. ಈಗ ರೆಸ್ಟ್​ ಮಾಡ್ತಿರೋದು.

ಡೆಬ್ಯೂ ಮಾಡಿ 7 ವರ್ಷ.. ಆಡಿರೋದು 46 ಪಂದ್ಯ

ಬೂಮ್ರಾ ಟೆಸ್ಟ್​ಗೆ ಡೆಬ್ಯೂ ಮಾಡಿದ್ದು 2018ರಲ್ಲಿ. ಅಂದ್ರೆ 7 ವರ್ಷಗಳಾಯ್ತು. ಅಂದಿನಿಂದ ಈವರೆಗೆ ಬೂಮ್ರಾ ಆಡಿರೋದು ಕೇವಲ 46 ಟೆಸ್ಟ್​​ಗಳನ್ನ ಮಾತ್ರ. ಈ ಅವಧಿಯಲ್ಲಿ ಮಿಸ್​​ ಮಾಡ್ಕೊಂಡಿದ್ದು ಬರೋಬ್ಬರಿ 26 ಟೆಸ್ಟ್​ ಪಂದ್ಯಗಳನ್ನ. ಇಂಜುರಿ, ವರ್ಕ್​ಲೋಡ್​ ಮ್ಯಾನೇಜ್​ಮೆಂಟ್​ ಇದಕ್ಕೆ ಕಾರಣ.

ಆಡಿದ ಪಂದ್ಯ 46

ಟೆಸ್ಟ್​ ಕ್ರಿಕೆಟ್​​ನಲ್ಲಿ ಈವರೆಗೆ 46 ಪಂದ್ಯಗಳನ್ನ ಬೂಮ್ರಾ ಆಡಿದ್ದಾರೆ. ಈ ಪೈಕಿ 26 ಟೆಸ್ಟ್​ಗಳನ್ನ ತಪ್ಪಿಸಿಕೊಂಡಿದ್ದಾರೆ. ತವರಿನಲ್ಲಿ 18 ಪಂದ್ಯಗಳಿಂದ ದೂರ ಉಳಿದಿರೋ ಬೂಮ್ರಾ, ವಿದೇಶದಲ್ಲಿ 07 ಪಂದ್ಯಗಳನ್ನ ಆಡಿಲ್ಲ. ತಟಸ್ಥ ಸ್ಥಳದಲ್ಲಿ ನಡೆದಿದ್ದ ಒಂದು ಟೆಸ್ಟ್​ ಅನ್ನೂ ಬೂಮ್ರಾ ಮಿಸ್​ ಮಾಡಿಕೊಂಡಿದ್ದಾರೆ.

ಇದೀಗ ಇಂಗ್ಲೆಂಡ್​ ಎದುರಿನ ಸರಣಿಯಲ್ಲೂ ಅಷ್ಟೇ. 3 ಟೆಸ್ಟ್​ಗಳಲ್ಲಿ ಮಾತ್ರ ಬೂಮ್ರಾ ಆಡಲಿದ್ದಾರೆ. ಮೊದಲ ಟೆಸ್ಟ್​ ಆಡಿ ಇದೀಗ 2ನೇ ಟೆಸ್ಟ್​ನಿಂದ ಹಿಂದೆ ಸರಿಯೋ ನಿರ್ಧಾರ ಮಾಡಿದ್ದಾರೆ. ಬೂಮ್ರಾ ಅಲಭ್ಯರಾದ್ರೆ, ಟೀಮ್​ ಇಂಡಿಯಾಗೆ ದೊಡ್ಡ ಹಿನ್ನಡೆಯಾಗೋದ್ರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: ಭಾರೀ ಸಂಚಲನ ಮೂಡಿಸಿದ ಲಾಕಪ್ ಡೆತ್​ ಕೇಸ್​.. ದೇಹದ ಮೇಲೆ 44 ಗಾಯ, ಕಾರದ ಪುಡಿ ಎರಚಿ ಚಿತ್ರಹಿಂಸೆ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment