Advertisment

ಟೀಂ ಇಂಡಿಯಾದ ಮೂವರು ಸ್ಟಾರ್​ಗಳಿಗೆ ಕೊಕ್; ನಾಳೆ ಬಲಿಷ್ಠ ತಂಡ ಕಣಕ್ಕೆ..!

author-image
Ganesh
Updated On
ಟೀಮ್​ ಇಂಡಿಯಾಗೆ ಬಿಗ್​ ಶಾಕ್​​; ಇಂದು ನಿವೃತ್ತಿ ಘೋಷಿಸಲಿರೋ ಮೂವರು ಸ್ಟಾರ್​ ಕ್ರಿಕೆಟರ್ಸ್​ ಇವ್ರು!
Advertisment
  • ನಾಳೆ ಇಂಗ್ಲೆಂಡ್ ವಿರುದ್ಧ ಕೊನೆಯ ODI ಪಂದ್ಯ
  • ಏಕದಿನ ಸರಣಿ ಗೆದ್ದುಕೊಂಡಿರುವ ಭಾರತ ತಂಡ
  • ನಾಳೆಯ ಪಂದ್ಯದಲ್ಲಿ ಯಾರಿಗೆಲ್ಲ ಚಾನ್ಸ್ ಸಿಗಲಿದೆ?

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 2-0 ಅಂತರದಿಂದ ಗೆದ್ದುಕೊಂಡಿದೆ. ಫೆಬ್ರವರಿ 12 ರಂದು ನಾಳೆ ಅಹಮದಾಬಾದ್‌ನಲ್ಲಿ ಕೊನೆ ಏಕದಿನ ಪಂದ್ಯ ನಡೆಯಲಿದೆ.

Advertisment

ಎರಡೂ ಏಕದಿನ ಪಂದ್ಯಗಳಲ್ಲಿ ಭಾರತ 249 ಮತ್ತು 305 ರನ್‌ಗಳ ಗುರಿಯನ್ನು ಬೆನ್ನಟ್ಟಿತ್ತು. ಮೂರನೇ ಏಕದಿನ ಪಂದ್ಯವನ್ನೂ ಗೆಲ್ಲುವ ವಿಶ್ವಾಸದಲ್ಲಿ ಭಾರತ ತಂಡ ಇದೆ. ಆ ಮೂಲಕ ಚಾಂಪಿಯನ್ಸ್​ ಟ್ರೋಫಿಗೆ ಸ್ಟ್ರಾಂಗ್ ಆಗಿ ಎಂಟ್ರಿ ನೀಡುವ ಹುಮ್ಮಸ್ಸಿನಲ್ಲಿ ಟೀಂ ಇಂಡಿಯಾ ಇದೆ. ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19ರಿಂದ ಆರಂಭವಾಗಲಿದೆ. ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮೂರು ಬದಲಾವಣೆಯೊಂದಿಗೆ ಕಣಕ್ಕೆ ಇಳಿಯಲಿದೆ.

ಇದನ್ನೂ ಓದಿ: ಕಿಂಗ್ ಕೊಹ್ಲಿಯೇ ಆರ್‌ಸಿಬಿ ನಾಯಕ.. ಸುಳಿವು ಬಿಟ್ಟುಕೊಟ್ಟ ಧೋನಿ ಆಪ್ತ..!

ಮೊದಲ ಏಕದಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಪ್ಲೇಯಿಂಗ್-11ನಲ್ಲಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಸ್ಥಾನ ಪಡೆದುಕೊಂಡರು. ನಾಗ್ಪುರ ಏಕದಿನ ಪಂದ್ಯಕ್ಕೆ ಕುಲ್ದೀಪ್ ಯಾದವ್ ಪುನರಾಗಮನ ನಿರೀಕ್ಷೆ ಇದೆ. ಮೂರನೇ ಏಕದಿನ ಪಂದ್ಯದಲ್ಲಿ ಕುಲ್ದೀಪ್‌ಗೆ ಆಡುವ ಅವಕಾಶ ನಿರೀಕ್ಷೆಯಿದೆ.

Advertisment

ಅರ್ಷದೀಪ್ ಬದಲಿಗೆ ಹರ್ಷಿತ್ ರಾಣಾಗೆ ಅವಕಾಶ ನೀಡಲಾಗಿತ್ತು. ಹರ್ಷಿತ್ ರಾಣಾ ಚಾಂಪಿಯನ್ಸ್ ಟ್ರೋಫಿಯ ಭಾಗವಾಗಿಲ್ಲ. ಹೀಗಾಗಿ ಮೂರನೇ ಏಕದಿನ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ. ಪಂತ್‌ಗೆ ಇದುವರೆಗೆ ಆಡುವ ಅವಕಾಶ ಸಿಕ್ಕಿಲ್ಲ. ಕೆ.ಎಲ್.ರಾಹುಲ್ ಬದಲಿಗೆ ಪಂತ್ ಆಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ಅಚ್ಚರಿ ನಿರ್ಧಾರಕ್ಕೆ ಬಂದ ಬಿಸಿಸಿಐ.. ಕಿಂಗ್ ಕೊಹ್ಲಿಗೆ ಮತ್ತೊಮ್ಮೆ ಕ್ಯಾಪ್ಟನ್ಸಿ ಪಟ್ಟ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment