ಆಂಗ್ಲರಿಗೆ ನಿತೀಶ್​ ರೆಡ್ಡಿ ಡಬಲ್​ ಶಾಕ್.. 3ನೇ ಟೆಸ್ಟ್​​ನ ಮೊದಲ ದಿನದ ಅಂತ್ಯಕ್ಕೆ ಆಗಿದ್ದೇ ಬೇರೆ..!

author-image
Ganesh
Updated On
ಆಂಗ್ಲರಿಗೆ ನಿತೀಶ್​ ರೆಡ್ಡಿ ಡಬಲ್​ ಶಾಕ್.. 3ನೇ ಟೆಸ್ಟ್​​ನ ಮೊದಲ ದಿನದ ಅಂತ್ಯಕ್ಕೆ ಆಗಿದ್ದೇ ಬೇರೆ..!
Advertisment
  • ಓಲಿ ಪೋಪ್​​- ಜೋ ರೂಟ್​​ ಶತಕದ ಜೊತೆಯಾಟ
  • ಕೊನೆಯ ಸೆಷನ್​ ಆರಂಭದಲ್ಲಿ ಆಂಗ್ಲರಿಗೆ ಶಾಕ್​
  • ರೂಟ್​​- ಸ್ಟೋಕ್ಸ್​ ಜಬರ್ದಸ್ತ್​​ ಜುಗಲ್​ಬಂದಿ

ಇಂಡೋ-ಇಂಗ್ಲೆಂಡ್​ 3ನೇ ಟೆಸ್ಟ್​ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೀತಿದೆ. ಲಾರ್ಡ್ಸ್​​ ಟೆಸ್ಟ್​ನಲ್ಲಿ ಗೆಲುವನ್ನ ಟಾರ್ಗೆಟ್​ ಮಾಡಿರುವ ಉಭಯ ತಂಡಗಳು ನೀನಾ? ನಾನಾ? ತೊಡೆತಟ್ಟಿವೆ. ಮೊದಲ ದಿನದಾಟದಲ್ಲೇ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿವೆ.

ಸೆಷನ್​-1: ಆಂಗ್ಲರಿಗೆ ಡಬಲ್​ ಶಾಕ್​ ಕೊಟ್ಟ ನಿತೀಶ್​ ರೆಡ್ಡಿ

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ಗಿಳಿದ ಇಂಗ್ಲೆಂಡ್​ ತಂಡ ಡಿಸೆಂಟ್​ ಆರಂಭ ಪಡೆದುಕೊಳ್ತು. ಜಾಕ್​ ಕ್ರಾವ್ಲಿ, ಬೆನ್​ ಡಕೆಟ್​ ಎಚ್ಚರಿಕೆಯ ಆರಂಭ ಒದಗಿಸಿದ್ರು. ಮೊದಲ ವಿಕೆಟ್​ಗೆ 43 ರನ್​ಗಳ ಜೊತೆಯಾಟವಾಡಿ ಬಿಗ್​ ಸ್ಕೋರ್​​ ಕಲೆ ಹಾಕೋ ಲೆಕ್ಕಾಚಾರದಲ್ಲಿದ್ರು. 14ನೇ ಓವರ್​ನಲ್ಲಿ ಬೌಲಿಂಗ್​ಗೆ ಬಂದ ನಿತೀಶ್​ ಕುಮಾರ್​​ ರೆಡ್ಡಿ ಡಬಲ್​ ಶಾಕ್​ ಕೊಟ್ರು. ಒಂದೇ ಓವರ್​ನಲ್ಲಿ ಬೆನ್​ ಡಕೆಟ್​, ಜಾಕ್​ ಕ್ರಾವ್ಲಿ ವಿಕೆಟ್​ ಎಗರಿಸಿದ್ರು.

ಇದನ್ನೂ ಓದಿ: ಕನ್ನಡಿಗರಿಗೆ ಒಲಿದ ಸ್ಥಾನ.. ಟೀಮ್ ಇಂಡಿಯಾದ ಪ್ಲೇಯಿಂಗ್- 11ಗೆ ಬುಮ್ರಾ ಎಂಟ್ರಿ!

publive-image

ಕ್ರಿಸ್​ನಲ್ಲಿ ಜೊತೆಯಾದ ಓಲಿ ಪೋಪ್​​, ಜೋ ರೂಟ್​ ದಿಢೀರ್​ ಕುಸಿತ ಕಂಡ ತಂಡಕ್ಕೆ ಆಸರೆಯಾದ್ರು. ತಾಳ್ಮೆಯ ಆಟವಾಡಿದ ಈ ಜೋಡಿ ನಿಧಾನವಾಗಿ ಇನ್ನಿಂಗ್ಸ್​ ಕಟ್ಟಿದರು. ಮೊದಲ ಸೆಷನ್​ ಅಂತ್ಯಕ್ಕೆ 2 ವಿಕೆಟ್​ ಕಳೆದುಕೊಂಡ ಇಂಗ್ಲೆಂಡ್​ 83 ರನ್​ಗಳಿಸಿತು.

ಸೆಷನ್​-2: ಪೋಪ್​​- ರೂಟ್​​ ಶತಕದ ಜೊತೆಯಾಟ

2ನೇ ಸೆಷನ್​​ನಲ್ಲಿ ಟೀಮ್​ ಇಂಡಿಯಾ ಬೌಲರ್​ಗಳು ಭರ್ಜರಿ ಬೌಲಿಂಗ್​​ ನಡೆಸಿದ್ರು. ಜೋ ರೂಟ್​​, ಓಲಿ ಪೋಪ್​ ಎಚ್ಚರಿಕೆಯ ಆಟವಾಡಿದ್ರು. ಅಗ್ರೆಸ್ಸಿವ್​ ಆಟ ಬಿಟ್ಟು ತಾಳ್ಮೆಯ ಆಟವಾಡಿದ್ರು. ಸಾಲಿಡ್​ ಆಟವಾಡಿದ ಜೋ ರೂಟ್​ 102 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ರು. 3ನೇ ವಿಕೆಟ್​ಗೆ ಪೋಪ್​ ಹಾಗೂ ರೂಟ್​ ಜೋಡಿ ಶತಕದ ಜೊತೆಯಾಟವಾಡಿತು. 2ನೇ ಸೆಷನ್​ನಲ್ಲಿ ವಿಕೆಟ್​ ಬಿಟ್ಟುಕೊಡದ ಇಂಗ್ಲೆಂಡ್​ 24 ಓವರ್​​ಗಳಲ್ಲಿ 70 ರನ್​ಗಳಿಸಿತು. ಒಟ್ಟಾರೆ ಅಂತಿಮವಾಗಿ ಟೀ ಬ್ರೇಕ್​ ವೇಳೆಗೆ ಇಂಗ್ಲೆಂಡ್​ 2 ವಿಕೆಟ್​ ನಷ್ಟಕ್ಕೆ 153 ರನ್​ಗಳಿಸಿತು.

ಇದನ್ನೂ ಓದಿ: ರಿಷಭ್​ ಪಂತ್​ಗೆ ಬಿಗ್ ಶಾಕ್.. ಬುಮ್ರಾ ಬೌಲಿಂಗ್​ನಲ್ಲಿ ಹೊರ ನಡೆದ ವಿಕೆಟ್​ ಕೀಪರ್​

publive-image

ಸೆಷನ್​-3: ರೂಟ್​​-ಸ್ಟೋಕ್ಸ್​ ಜಬರ್ದಸ್ತ್​​ ಜುಗಲ್​ಬಂದಿ

3ನೇ ಸೆಷನ್​ನ ಮೊದಲ ಎಸೆತದಲ್ಲೇ ಟೀಮ್​ ಇಂಡಿಯಾಗೆ ಸಕ್ಸಸ್​​ ಸಿಗ್ತು. ಒಲಿ ಪೋಪ್​ ಆಟಕ್ಕೆ ರವೀಂದ್ರ ಜಡೇಜಾ ಬ್ರೇಕ್​ ಹಾಕಿದ್ರು. 44 ರನ್​ಗಳಿಗೆ ಪೋಪ್​ ಆಟ ಅಂತ್ಯವಾಯ್ತು. ಬಳಿಕ ಕಣಕ್ಕಿಳಿದ ಹ್ಯಾರಿ ಬ್ರೂಕ್​ ಆಟ ಹೆಚ್ಚು ಹೊತ್ತು ನಡೀಲಿಲ್ಲ. 11 ರನ್​​ಗಳಿಸಿದ್ದ ಬ್ರೂಕ್,​ ಬೂಮ್ರಾ ಬೌಲಿಂಗ್​ನಲ್ಲಿ ಕ್ಲೀನ್​ಬೋಲ್ಡ್​ ಆಗಿ ನಿರ್ಗಮಿಸಿದ್ರು. ಕ್ರಿಸ್​ನಲ್ಲಿ ಜೊತೆಯಾದ ಜೋ ರೂಟ್​​, ಕ್ಯಾಪ್ಟನ್​ ಬೆನ್​ ಸ್ಟೋಕ್ಸ್​ ಸಾಲಿಡ್​ ಪಾರ್ಟನರ್​ಶಿಪ್​ ಬ್ಯುಲ್ಡ್​​ ಮಾಡಿದ್ರು. ತಾಳ್ಮೆಯ ಆಟದಿಂದಲೇ ಇಂಡಿಯನ್​​ ಬೌಲರ್​​ಗಳನ್ನ ಕಾಡಿದ ಜೋ ರೂಟ್​ ಕ್ರಿಕೆಟ್​ ಕಾಶಿಯಲ್ಲಿ ಸಾಲಿಡ್ ಇನ್ನಿಂಗ್ಸ್​ ಕಟ್ಟಿದ್ರು. 191 ಎಸೆತಗಳನ್ನ ಎದುರಿಸಿದ ರೂಟ್​​, ಆಕರ್ಷಕ 9 ಬೌಂಡರಿ ಸಹಿತ ಅಜೇಯ 99 ರನ್​ಗಳಿಸಿದ್ರು.

ಜೋ ರೂಟ್​ಗೆ ಸಾಥ್​ ನೀಡಿದ ಬೆನ್​ ಸ್ಟೋಕ್ಸ್​ ಬರೋಬ್ಬರಿ 102 ಎಸೆತಗಳನ್ನ ಎದುರಿಸಿದ್ದಾರೆ. 3 ಬೌಂಡರಿ ಬಾರಿಸಿದ ಬೆನ್​ಸ್ಟೋಕ್ಸ್​ 39 ರನ್​ಗಳಿಸಿದ್ದಾರೆ. ದಿನದಾಟದ ಅಂತ್ಯಕ್ಕೆ 4 ವಿಕೆಟ್​ ನಷ್ಟಕ್ಕೆ ಇಂಗ್ಲೆಂಡ್​ 251ಗಳಿಸಿದೆ. ಇಂದಿನ ದಿನದಾಟದ ಮೊದಲ ಸೆಷನ್​​ ಉಭಯ ತಂಡಗಳ ಪಾಲಿಗೆ ಮಹತ್ವದ್ದಾಗಿದ್ದು, ಇಂಗ್ಲೆಂಡ್​ 300ರ ಗಡಿಯೊಳಗೆ ಕಟ್ಟಿ ಹಾಕಿದ್ರೆ ಟೀಮ್​ ಇಂಡಿಯಾಗೆ ಅಡ್ವಾಂಟೇಜ್​ ಸಿಗಲಿದೆ.

ಇದನ್ನೂ ಓದಿ: ‘ಕ್ಯಾಪ್ಟನ್ ಕೂಲ್​’ ರಿಜಿಸ್ಟ್ರೇಷನ್​​ ಹಿಂದಿನ ಪ್ಲಾನ್​ ರಿವೀಲ್​.. ಧೋನಿ ಕ್ರಿಕೆಟ್​​ನಲ್ಲಿ ಅಲ್ಲ, ಬ್ಯುಸಿನೆಸ್​ನಲ್ಲೂ ಮಾಸ್ಟರ್!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment