ಗಿಲ್, ಜೈಸ್ವಾಲ್ ಆಟಕ್ಕೆ ಬೌಲರ್ಸ್​ ಸುಸ್ತು.. ತಂಡಕ್ಕೆ ಆತ್ಮವಿಶ್ವಾಸ ತುಂಬಿದ ಜಡೇಜಾ.. ಹೇಗಿತ್ತು ನಿನ್ನೆಯ ಆಟ..?

author-image
Ganesh
Updated On
ಗಿಲ್, ಜೈಸ್ವಾಲ್ ಆಟಕ್ಕೆ ಬೌಲರ್ಸ್​ ಸುಸ್ತು.. ತಂಡಕ್ಕೆ ಆತ್ಮವಿಶ್ವಾಸ ತುಂಬಿದ ಜಡೇಜಾ.. ಹೇಗಿತ್ತು ನಿನ್ನೆಯ ಆಟ..?
Advertisment
  • ಇಂಡೋ-ಇಂಗ್ಲೆಂಡ್​​ 2ನೇ ಟೆಸ್ಟ್​ ಪಂದ್ಯ
  • ಮೊದಲ ದಿನ ಟೀಮ್​ ಇಂಡಿಯಾ ಅಬ್ಬರ
  • ಭಾರತದ ಆಟಕ್ಕೆ ಇಂಗ್ಲೆಂಡ್​ ಬೌಲರ್ಸ್​ ಸುಸ್ತು

ಎಡ್ಜ್​​ಬಾಸ್ಟನ್​ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾ ಸಾಲಿಡ್​​​ ಓಪನಿಂಗ್​ ಪಡೆದುಕೊಂಡಿದೆ. ಗಿಲ್​, ಯಶಸ್ವಿ ಜೈಸ್ವಾಲ್​ ಬೊಂಬಾಟ್​ ಬ್ಯಾಟಿಂಗ್​ ನೆರವಿನಿಂದ​ ಟೀಮ್​ ಇಂಡಿಯಾ ಬಿಗ್​ ಸ್ಕೋರ್​​ ಕಲೆಹಾಕಿದೆ. ಮೊದಲ ದಿನದಾಟದಲ್ಲಿ ಟೀಮ್​ ಇಂಡಿಯಾ ಬ್ಯಾಟಿಂಗ್​ ಹೇಗಿತ್ತು ಅನ್ನೋದ್ರ ವಿವರ ಇಲ್ಲಿದೆ.

ಸೆಷನ್​ -1: ಮುಂದುವರೆದ ಜೈಸ್ವಾಲ್​ ಯಶಸ್ವಿ ಓಟ

ಟಾಸ್​​​ ಸೋತು ಮೊದಲು ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾಗೆ ಒಳ್ಳೆ ಆರಂಭ ಸಿಗಲ್ಲ. ಸ್ಟಾರ್ಟಿಂಗ್​ನಿಂದಲೂ ಸ್ಟ್ರಗಲ್​ ಮಾಡಿದ ಕೆ.ಎಲ್​.ರಾಹುಲ್​ ಜಸ್ಟ್​ 2 ರನ್​ಗಳಿಸಿ ನಿರ್ಗಮಿಸಿದ್ರು. ಇನ್ನೋರ್ವ ಓಪನರ್​ ಯಶಸ್ವಿ ಜೈಸ್ವಾಲ್​ ಆಂಗ್ಲರ ನಾಡಲ್ಲಿ ಯಶಸ್ವಿನ ಓಟ ಮುಂದುವರೆಸಿದ್ರು. ಅಗ್ರೆಸ್ಸಿವ್​ ಆಟವಾಡಿದ ಜೈಸ್ವಾಲ್​, ಇಂಗ್ಲೆಂಡ್​ ಬೌಲರ್​ಗಳನ್ನ ದಂಡಿಸಿದ್ರು. ಜಸ್ಟ್​​ 53 ಎಸೆತಗಳಲ್ಲಿ ಜೈಸ್ವಾಲ್​ ಹಾಫ್​​ ಸೆಂಚುರಿ ಪೂರೈಸಿದ್ರು.

ಇದನ್ನೂ ಓದಿ: ಮೊದಲ ದಿನವೇ ಟೀಮ್​ ಇಂಡಿಯಾ ಅಬ್ಬರ.. ಶತಕ ಸಿಡಿಸಿ ಮಿಂಚಿದ ಶುಭ್​ಮನ್​ ಗಿಲ್​

3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕನ್ನಡಿಗ ಕರುಣ್​ ನಾಯರ್​ ಜೈಸ್ವಾಲ್​ಗೆ ಕೆಲ ಕಾಲ ಸಾಥ್​ ನೀಡಿದರು. 50 ಎಸೆತಗಳನ್ನ ಎದುರಿಸಿದ ಕರುಣ್​ ನಾಯರ್​​ 5 ಬೌಂಡರಿ ಸಹಿತ 31 ರನ್​ಗಳಿಸಿದ್ರು. ಇವರಿಬ್ಬರ ಜೊತೆಯಾಟ ಬ್ರೆಂಡನ್​ ಕರ್ಸ್​ ಬ್ರೇಕ್​ ಹಾಕಿದ್ರು. ಮೊದಲ ಸೆಷನ್​ ಅಂತ್ಯಕ್ಕೆ 2 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ 98 ರನ್​ಗಳಿಸಿತು.

ಸೆಷನ್​ -2: ಶುಭ್​ಮನ್​ - ಜೈಸ್ವಾಲ್ ಜಬರ್ದಸ್ತ್​​ ​ಜುಗಲ್​​ಬಂದಿ

ಲಂಚ್​ ಬ್ರೇಕ್​ನ ಬಳಿಕ ಯಶಸ್ವಿ ಜೈಸ್ವಾಲ್​, ಕ್ಯಾಪ್ಟನ್​ ಶುಭ್​ಮನ್ ಗಿಲ್​​ ಇಂಗ್ಲೆಂಡ್​ ಬೌಲರ್​ಗಳ ಬೆವರಿಳಿಸಿದರು. ಜೈಸ್ವಾಲ್​ ಅಬ್ಬರದ ಆಟ ಮುಂದುವರೆಸಿದ್ರೆ, ಗಿಲ್​ ತಾಳ್ಮೆಯ ಆಟದಿಂದಲೇ ಕಾಡಿದ್ರು. 3ನೇ ವಿಕೆಟ್​ಗೆ ಗಿಲ್​​-ಜೈಸ್ವಾಲ್​ 66 ರನ್​ಗಳ ಜೊತೆಯಾಟವಾಡಿದ್ರು. ಜೈಸ್ವಾಲ್​ ಶತಕದ ಅಂಚಿನಲ್ಲಿ ಎಡವಿದ್ರು. 107 ಎಸೆತ ಎದುರಿಸಿದ ಜೈಸ್ವಾಲ್​ 13 ಬೌಂಡರಿ ಸಹಿತ 87 ರನ್​ಗಳಿಸಿ ಔಟಾದ್ರು. 2ನೇ ಸೆಷನ್​ ಅಂತ್ಯಕ್ಕೆ 3 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ 182 ರನ್​ಗಳಿಸಿತು.

ಸೆಷನ್​ -3: ಎಡ್ಜ್​​ಬಾಸ್ಟನ್​ನಲ್ಲಿ ಗಿಲ್​ ಶತಕ ವೈಭವ

ಟೀ ಬ್ರೇಕ್​ನ ಬಳಿಕ ಟೀಮ್​ ಇಂಡಿಯಾ ದಿಢೀರ್​ ಕುಸಿತ ಕಂಡಿತು. ರಿಷಭ್​ ಪಂತ್​ ಬಿಗ್​ ಸ್ಕೋರ್​ ಕಲೆ ಹಾಕುವಲ್ಲಿ ಫೇಲ್​ ಆದ್ರು. 25 ರನ್​ಗಳಿಸಿ ರಿಷಭ್​ ಪಂತ್​ ಔಟಾದ್ರು. ಬಳಿಕ ಬ್ಯಾಟಿಂಗ್​ಗೆ ಬಂದ ನಿತೀಶ್​ ಕುಮಾರ್​ ರೆಡ್ಡಿ ಜಸ್ಟ್​ 1 ರನ್​ಗೆ ಸುಸ್ತಾದ್ರು. ಸಾಲಿಡ್​​ ಆಟ ಮುಂದುವರೆಸಿದ ಗಿಲ್ ಅರ್ಧಶತಕ ಪೂರೈಸಿದ್ರು.

ಅರ್ಧಶತಕದ ಬಳಿಕವೂ ಶುಭ್​ಮನ್ ಗಿಲ್​ ಆಟ ಬದಲಾಗಲಿಲ್ಲ. ತಾಳ್ಮೆಯ ಆಟದಿಂದಲೇ ಆಂಗ್ಲರ ದಾಳಿಯನ್ನ ಹಿಮ್ಮೆಟ್ಟಿಸಿದ ಶುಭ್​ಮನ್​ ಶತಕ ಸಿಡಿಸಿ ಮಿಂಚಿದ್ರು. 199 ಎಸೆತಗಳಲ್ಲಿ ಶುಭ್​ಮನ್​ ಗಿಲ್​ ಸೆಂಚುರಿ ಪೂರೈಸಿದ್ರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ರವೀಂದ್ರ ಜಡೇಜಾ, ಕಾನ್ಪಿಡೆಂಟ್ ಆಟವಾಡ್ತಿದ್ರು. ಶುಭ್​ಮನ್​ ಗಿಲ್​ ಜೊತೆ ಸೇರಿದ ರವೀಂದ್ರ ಜಡೇಜಾ 99 ರನ್​ಗಳ ಜೊತೆಯಾಟವಾಡಿದ್ದಾರೆ. ದಿನದ ಅಂತ್ಯಕ್ಕೆ ಟೀಮ್​ ಇಂಡಿಯಾ 5 ವಿಕೆಟ್​​ ನಷ್ಟಕ್ಕೆ 310 ರನ್​ಗಳಿಸಿದೆ. 114 ರನ್​ಗಳೊಂದಿಗೆ ಶುಭ್​ಮನ್​ ಗಿಲ್​, 41 ರನ್​ಗಳೊಂದಿಗೆ ರವೀಂದ್ರ ಜಡೇಜಾ ಇಂದಿಗೆ ಕ್ರಿಸ್​ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ: ಯೋಗ ಗುರು ವಚನಾನಂದ ಸ್ವಾಮೀಜಿ ಪೂರ್ವಾಶ್ರಮದ ಸಹೋದರ ಅಶೋಕ್ ರಸ್ತೆ ಅಪಘಾತದಲ್ಲಿ ನಿಧನ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment