/newsfirstlive-kannada/media/post_attachments/wp-content/uploads/2025/07/JAISWAL-2.jpg)
ಇಂಡೋ-ಇಂಗ್ಲೆಂಡ್​​​ 2ನೇ ಟೆಸ್ಟ್​ ಕದನ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ. ಬರ್ಮಿಂಗ್​ಹ್ಯಾಮ್​​ನ ಎಡ್ಜ್​​ಬಾಸ್ಟನ್​ ಅಂಗಳದಲ್ಲಿ ನಡೆಯೋ ಕದನಕ್ಕೆ ಟೀಮ್​ ಇಂಡಿಯಾ ಭರ್ಜರಿ ಸಮರಾಭ್ಯಾಸ ನಡೆಸಿ ಸಜ್ಜಾಗಿದೆ. ಲೀಡ್ಸ್​​ನಲ್ಲಿ ಸೋಲುಂಡ ಟೀಮ್​ ಇಂಡಿಯಾ ಎಡ್ಜ್​ಬಾಸ್ಟನ್​ನಲ್ಲಿ ಪುಟಿದೇಳೋ ಲೆಕ್ಕಾಚಾರದಲ್ಲಿದೆ. ಗೆಲುವಿಗೆ ರಣತಂತ್ರಗಳ ಜೊತೆಗೆ ಕೆಲ ಬದಲಾವಣೆಗಳೊಂದಿಗೆ ಅಖಾಡಕ್ಕಿಳಿಯಲಿದೆ.
ಲೀಡ್ಸ್​​ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟ ನೋಡಿ, ವಿಶ್ವವೇ ದಂಗಾಗಿದ್ದು ಸುಳ್ಳಲ್ಲ. ಫೀಲ್ಡ್​​ನಲ್ಲಿ ಆಡಿದ ಆಟ ಇವರೇನು ಫ್ರೊಫೇಷನಲ್ ಕ್ರಿಕೆಟರ್ಸಾ..? ಇಲ್ಲ ಗಲ್ಲಿ ಕ್ರಿಕೆಟರ್ಸಾ.? ಅನ್ನೋ ಅನುಮಾನ ಹುಟ್ಟುವಂತಿತ್ತು. ಹಂಗಿತ್ತು ನೋಡಿ ಟೀಮ್​ ಇಂಡಿಯಾದ ಫೀಲ್ಡಿಂಗ್​ ಪರದಾಟ.
ಇದನ್ನೂ ಓದಿ: RCB ಸ್ಟಾರ್ ದಯಾಳ್ ಜೊತೆಗಿನ ವಿಡಿಯೋ ಕರೆಯ ಸ್ಕ್ರೀನ್​ಶಾಟ್ ಹಂಚಿಕೊಂಡ ಸಂತ್ರಸ್ತೆ.. ಚಾಟ್ ಕೂಡ ವೈರಲ್
ಮೊದಲ ಇನ್ನಿಂಗ್ಸ್​​ನಲ್ಲಿ ಬರೋಬ್ಬರಿ 5 ಕ್ಯಾಚ್​, ಸೆಕೆಂಡ್​​​ ಇನ್ನಿಂಗ್ಸ್​ನಲ್ಲಿ ಒಂದು ಕ್ಯಾಚ್​. ಒಟ್ಟು 6 ಕ್ಯಾಚ್​ ಡ್ರಾಪ್​ ಮಾಡಿದ್ರು. ಕೈಗೆ ಬಂದ ಕ್ಯಾಚ್​​ಗಳನ್ನೇ ಕೈ ಚೆಲ್ಲಿದಾಗ ಹಾಫ್​ ಚಾನ್ಸ್​ಗಳನ್ನ ಕನ್ವರ್ಟ್​​ ಮಾಡಬೇಕಿತ್ತು ಅನ್ನೋ ನಿರೀಕ್ಷೆ ಮಾಡೋದು ತಪ್ಪೇ ಬಿಡಿ. ಅಂತಿಮವಾಗಿ ಅಟ್ಟರ್​​ ಫ್ಲಾಪ್​ ಫೀಲ್ಡಿಂಗ್​ಗೆ​ ಬೆಲೆ ತೆತ್ತ ಟೀಮ್​ ಇಂಡಿಯಾ ಸೋಲಿಗೆ ಶರಣಾಯ್ತು.
ಲೀಡ್ಸ್​​ ಟೆಸ್ಟ್​ನಲ್ಲಿ ಕ್ಯಾಚ್​ ಡ್ರಾಪ್​
ಲೀಡ್ಸ್​​ ಟೆಸ್ಟ್​​ನಲ್ಲಿ ಯಶಸ್ವಿ ಜೈಸ್ವಾಲ್​ ಬರೋಬ್ಬರಿ 5 ಕ್ಯಾಚ್​​ಗಳನ್ನ ಡ್ರಾಪ್​ ಮಾಡಿದ್ರು. ರಿಷಭ್​ ಪಂತ್​ ಹಾಗೂ ರವೀಂದ್ರ ಜಡೇಜಾ ತಲಾ 1 ಕ್ಯಾಚ್​ ಕೈ ಚೆಲ್ಲಿದ್ರು.
ಲೀಡ್ಸ್​ ಟೆಸ್ಟ್​​ನಲ್ಲಿ ಅಟ್ಟರ್​​ಫ್ಲಾಪ್​​ ಫೀಲ್ಡಿಂಗ್​
ಮೊದಲ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಫೀಲ್ಡಿಂಗ್​ನಲ್ಲಿ​ ಅತ್ಯಂತ ಹೀನಾಯ ಪರ್ಫಾಮೆನ್ಸ್​ ನೀಡಿದ್ರು. ಒಂದಲ್ಲ.. ಎರಡಲ್ಲ.. ಬರೋಬ್ಬರಿ 4 ಕ್ಯಾಚ್​​​​​ಗಳನ್ನ ಕೈ ಚೆಲ್ಲಿದ್ರು. 4ರ ಪೈಕಿ 2 ಕ್ಯಾಚ್​ ಹಿಡಿದಿದ್ರೂ ಟೀಮ್​ ಇಂಡಿಯಾಗೆ ಗೆಲ್ಲೋ ಚಾನ್ಸ್​ ತುಂಬಾ ಇತ್ತು. ಜೈಸ್ವಾಲ್​ ಇಂಗ್ಲೆಂಡ್​ ಪಾಲಿಗೆ ದಾನ ಶೂರ ಕರ್ಣನಾದ್ರು. ಮೊದಲ ಟೆಸ್ಟ್​ನಲ್ಲಿ ಜೈಸ್ವಾಲ್​ ನಂಬಿ ಕೆಟ್ಟ ಟೀಮ್​ ಇಂಡಿಯಾ, 2ನೇ ಪಂದ್ಯಕ್ಕೂ ಮುನ್ನ ಬುದ್ದಿ ಕಲಿತಂತಿದೆ.
ಸ್ಲಿಪ್​​ನಿಂದ ಯಶಸ್ವಿ ಜೈಸ್ವಾಲ್​ ಶಿಫ್ಟ್​​
ಇಂದಿನಿಂದ ಆರಂಭವಾಗೋ 2ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಕ್ಯಾಚ್​​ ಡ್ರಾಪ್​ ಮಾಡಿ ದುಬಾರಿಯಾದ ಯಶಸ್ವಿ ಜೈಸ್ವಾಲ್​ನ ಸ್ಲಿಪ್​​ನಿಂದ ಶಿಫ್ಟ್​ ಮಾಡಲಾಗಿದೆ. ಇಂದಿನ ಪಂದ್ಯದಲ್ಲಿ ಶಾರ್ಟ್​​​ ಲೆಗ್​ ಹಾಗೂ ಸಿಲ್ಲಿ ಪಾಯಿಂಟ್​​ನಲ್ಲಿ ಫೀಲ್ಡಿಂಗ್​ ಮಾಡುವಂತೆ ಜೈಸ್ವಾಲ್​ಗೆ ಸೂಚನೆ ನೀಡಲಾಗಿದೆ. ಅಂದ್ಹಾಗೆ, ಜೈಸ್ವಾಲ್​ನ ಶಿಫ್ಟ್​ ಮಾಡೋಕೆ ಮೊದಲ ಟೆಸ್ಟ್​ನ ​ಕಳಪೆ ಫೀಲ್ಡಿಂಗ್​ ಮಾತ್ರ ಕಾರಣವಲ್ಲ. 2024ರ ಆರಂಭದಿಂಲೂ ಜೈಸ್ವಾಲ್​​​​ದ್ದು ಇದೇ ಕಥೆ.
ಇದನ್ನೂ ಓದಿ: ಧೋನಿ, ಕೊಹ್ಲಿ ಬಳಿ ಆಗದಿದ್ದು ಗಿಲ್ ಮಾಡ್ತಾರಾ? 58 ವರ್ಷದ ಇತಿಹಾಸ ಅಳಿಸಲು ಯಂಗ್ ಇಂಡಿಯಾ ರೆಡಿ..!
2024ರ ನಂತರ ಜೈಸ್ವಾಲ್​ ರೆಕಾರ್ಡ್​
2024ರ ನಂತರ ಯಶಸ್ವಿ ಜೈಸ್ವಾಲ್​​ ಒಟ್ಟು 18 ಕ್ಯಾಚ್​​ಗಳನ್ನ ಹಿಡಿದಿದ್ದಾರೆ. 7 ಕ್ಯಾಚ್​​​ಗಳನ್ನ ಡ್ರಾಪ್​ ಮಾಡಿದ್ದಾರೆ. ಜೈಸ್ವಾಲ್​ ಕ್ಯಾಚಿಂಗ್​ ಎಫಿಶಿಯನ್ಸಿ ಶೇಕಡಾ 72 ಆಗಿದೆ. ಇಂದಿನ ಟೆಸ್ಟ್​ಗೂ ಮುನ್ನ ಎಡ್ಜ್​​ಬಾಸ್ಟನ್​ನಲ್ಲಿ ಟೀಮ್​ ಇಂಡಿಯಾದ ವಿಶೇಷ ಅಭ್ಯಾಸ ನಡೆದಿದೆ. ಮುಖ್ಯವಾಗಿ ಫೀಲ್ಡಿಂಗ್​ ಮೇಲೆ ಹೆಚ್ಚು ಗಮನವಹಿಸಲಾಗಿದೆ. ಫೀಲ್ಡಿಂಗ್​ ಕೋಚ್​​ ಟಿ. ದಿಲೀಪ್ ಗಂಟೆಗೂ ಅಧಿಕ ಕಾಲ ಸ್ಲಿಪ್​ ಫೀಲ್ಡರ್​ಗಳ ಜೊತೆಗೆ ಫೀಲ್ಡಿಂಗ್​ ಡ್ರಿಲ್​ ನಡೆಸಿದ್ದಾರೆ. ಮ್ಯಾನೇಜ್​ಮೆಂಟ್ ಫೀಲ್ಡಿಂಗ್​ ಸೆಟ್​​​ ಅಪ್​ ಅನ್ನೇ ಬದಲಿಸಿದೆ. ಜೈಸ್ವಾಲ್​ ಸ್ಥಾನದಲ್ಲಿ ನಿತೀಶ್​ ಕುಮಾರ್​​ ರೆಡ್ಡಿಯನ್ನ ಕಾಣಿಸಿಕೊಂಡಿದ್ದಾರೆ.
ಸ್ಲಿಪ್​ ಫೀಲ್ಡರ್ಸ್​​ ಯಾರು.?
ಕರುಣ್​ ನಾಯರ್​​, ಕೆ.ಎಲ್​ ರಾಹುಲ್​, ಶುಭ್​ಮನ್​ ಗಿಲ್​​ ಕ್ರಮವಾಗಿ 1, 2, 3ನೇ ಸ್ಲಿಪ್​ನಲ್ಲಿ ಫೀಲ್ಡಿಂಗ್​ ಮಾಡಲಿದ್ದಾರೆ. ನಿತೀಶ್​ ರೆಡ್ಡಿ ಹಾಗೂ ಸಾಯಿ ಸುದರ್ಶನ್​ಗೆ 4ನೇ ಸ್ಲಿಪ್​ ಮತ್ತು ಗಲ್ಲಿಯಲ್ಲಿ ಫೀಲ್ಡಿಂಗ್​ ಮಾಡಲಿದ್ದಾರೆ.
ಒಟ್ಟಿನಲ್ಲಿ ಒಂದಂತೂ ಸ್ಪಷ್ಟ. ಮೊದಲ ಟೆಸ್ಟ್​​ನಲ್ಲಿ ಆದ ತಪ್ಪಿನಿಂದ ಟೀಮ್​ ಮ್ಯಾನೇಜ್​​ಮೆಂಟ್​​ ಪಾಠ ಕಲಿತಿದೆ. ಹೀಗಾಗಿಯೇ ಕಳಪೆ ಫೀಲ್ಡಿಂಗ್​ ಮೇಲೆ ಸಾಕಷ್ಟು ವರ್ಕೌಟ್ ಮಾಡಿದೆ. ಫೀಲ್ಡಿಂಗ್​ ಪೊಸಿಶನ್​ನಲ್ಲೂ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆ ತಂಡಕ್ಕೆ ಪ್ಲಸ್​ ಆಗೋದ್ರಲ್ಲಿ ಡೌಟೇ ಇಲ್ಲ.
ಇದನ್ನೂ ಓದಿ: ಇಂಗ್ಲೆಂಡ್​ ಪ್ರವಾಸದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಮೇಜರ್​ ಸರ್ಜರಿ.. ಏನೇನು ಆಗಲಿದೆ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ